Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ತಪ್ಪು ಹುಡುಗಿಯೊಂದಿಗೆ ಡೇಟಿಂಗ್‌ನ ಹತ್ತು ಲಕ್ಷಣಗಳು
ಸಂಬಂಧ ಅನ್ನುವುದು ಜೀವಮಾನದ ಬದ್ಧತೆ. ಇದು ಜೀವನ ಸಂಗಾತಿಯ ವಿಷಯಕ್ಕೆ ಬಂದರೆ ಆಗ ಅದು ತುಂಬಾ ಪ್ರಾಮುಖ್ಯವಾಗಿರುತ್ತದೆ. ನೀವು ಸರಿಯಾದ ವ್ಯಕ್ತಿಯೊಂದಿಗೆ ಇದ್ದೀರಿ ಎಂದು ದೃಢಪಡಿಸಿಕೊಳ್ಳುವುದು ತುಂಬಾ ಮುಖ್ಯ.
ನಿಮ್ಮನ್ನು ಅರ್ಥ ಮಾಡಿಕೊಳ್ಳುವ, ಪ್ರೀತಿಸುವ, ಕಾಳಜಿ ವಹಿಸುವ ಸಂಗಾತಿ ಜತೆಗಿನ ಸಂಬಂಧವು ದೀರ್ಘಕಾಲ ಬಾಳುತ್ತದೆ ಮತ್ತು ಜೀವಮಾನವಿಡಿ ನಿಮ್ಮನ್ನು ಸಂತೋಷ ಹಾಗೂ ಸಂತೃಪ್ತಿಯಿಂದ ಇಡುತ್ತದೆ.
ನಿಮ್ಮ ಪತ್ನಿಯಾಗಲು ಯೋಗ್ಯವಿರುವ ಹುಡುಗಿಯೊಂದಿಗೆ ನೀವು ಡೇಟಿಂಗ್ ನಡೆಸುತ್ತಿದ್ದೀರಾ ಎಂದು ತಿಳಿಯುವುದು ಹೇಗೆ? ಪರಿಪೂರ್ಣ ಎನ್ನುವುದು ದೊಡ್ಡ ಪ್ರಶ್ನೆ. ಇದನ್ನು ಪ್ರಾಯೋಗಿಕ ಉಪಯುಕ್ತ ಉತ್ತರದ ಮೂಲಕ ಇದನ್ನು ಬಗೆಹರಿಸಬಹುದು.
ನಿಮ್ಮ ಸಂಬಂಧದ ಬಗ್ಗೆ ಆಳವಾದ ಅಧ್ಯಯನ, ಎಲ್ಲಾ ರೀತಿಯ ಆಕರ್ಷಣೆ ಮತ್ತು ನಿರಾಶೆಯಿಂದ ದೂರ ಉಳಿದು ನೀವು ಸಮಸ್ಯೆ ಬಗೆಹರಿಸಬಹುದು. ಏಕಾಂಗಿಯಾಗಿರುವುದು ಕೆಟ್ಟ ಅನುಭವ. ಆದರೆ ತಪ್ಪು ಸಂಬಂಧದಲ್ಲಿರುವುದು ನರಕಕ್ಕಿಂತಲೂ ಕೆಟ್ಟದು. ಈ ಕೆಳಗಿನ ಸಾಮಾನ್ಯ ಲಕ್ಷಣಗಳು ನೀವು ತಪ್ಪು ಹುಡುಗಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದೀರಿ ಎನ್ನುವುದನ್ನು ಪರಿಗಣಿಸಬಹುದು.
ನಿಮ್ಮ ಸಂಗಾತಿಗೆ ಹೇಳಲೇಬಾರದ 9 ವಿಷಯಗಳು!

ಅಧಿಕ ಸ್ವಾಮ್ಯಸೂಚಕ
ಸಂಬಂಧದಲ್ಲಿ ಸ್ವಾಮ್ಯಸೂಚಕವಾಗಿರುವುದು ಸ್ವಾಭಾವಿಕವಾಗಿ ಇರುವಂತಹದ್ದು ಮತ್ತು ಪ್ರತೀ ಪುರುಷ ಕೂಡ ತನ್ನ ಹೃದಯದಾಳದಲ್ಲಿ ಇದನ್ನು ಆನಂದಿಸುತ್ತಾನೆ. ಆದರೆ ನಿಮ್ಮ ಹುಡುಗಿ ಅಧಿಕ ಸ್ವಾಮ್ಯಸೂಚಕವಾಗಿದ್ದರೆ ಆಗ ನೀವು ತಪ್ಪು ಹುಡುಗಿಯೊಂದಿಗೆ ಸಂಬಂಧ ಬೆಳೆಸುತ್ತಿದ್ದೀರಿ ಎಂದರ್ಥ.

ನೀವಾಗಿಯೇ ಇರುವಂತಿಲ್ಲ
ಕೆಲವೊಂದು ಸಂದರ್ಭಗಳಲ್ಲಿ ನೀವು ಮಹಿಳೆಯ ನಿರೀಕ್ಷೆ ಮತ್ತು ಬೇಡಿಕೆಗೆ ಅನುಗುಣವಾಗಿ ಮಾಸ್ಕ್ ಕೂಡ ಧರಿಸಬೇಕಾಗುತ್ತದೆ. ತುಂಬಾ ಎಚ್ಚರಿಕೆಯಿಂದ ಇರಿ! ಯಾಕೆಂದರೆ ಇದು ತಪ್ಪು ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವುದರ ಲಕ್ಷಣವಾಗಿದೆ.

ನೀವು ಕ್ಷಮಾಪಣೆ ಹುಡುಕುತ್ತೀರಿ
ನೀವು ತಪ್ಪು ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವುದಕ್ಕೆ ಮುಖ್ಯ ಲಕ್ಷಣವೆಂದರೆ ನಿಮ್ಮ ನಡವಳಿಕೆ. ನೀವು ಒಮ್ಮೆ ಹಿಂತಿರುಗಿ ನೋಡಿ ಮತ್ತು ಆಕೆ ಒಳ್ಳೆಯ ಹುಡುಗಿಯೆಂದು ನಿಮಗೆ ಮನವರಿಕೆ ಮಾಡಲು ಎಷ್ಟು ಸಲ ಕ್ಷಮಾಪನೆಗೆ ಪ್ರಯತ್ನಿಸಿದ್ದೀರಿ ಎಂದು ತಿಳಿಯಿರಿ.

ನಿಮ್ಮ ಕುಟುಂಬದಲ್ಲಿ ಆಸಕ್ತಿ ವಹಿಸದೆ ಇರುವುದು
ನಿಮ್ಮ ಕುಟುಂಬದ ವಿವರದಲ್ಲಿ ಹುಡುಗಿ ಯಾವುದೇ ರೀತಿಯ ಆಸಕ್ತಿ ವಹಿಸದಿದ್ದರೆ ಆಕೆ ನಿಮ್ಮ ಕುಟುಂಬಕ್ಕೆ ಒಳ್ಳೆಯ ಆಯ್ಕೆಯಲ್ಲ. ನೀವು ತಪ್ಪಾದ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎಂದು ತಿಳಿಯಲು ಇದು ಒಳ್ಳೆಯ ಚಿಹ್ನೆ.

ಸ್ನೇಹಿತರೊಂದಿಗೆ ಹೆಚ್ಚು ಆರಾಮದಾಯಕ
ನೀವು ಆಕೆಯೊಂದಿಗೆ ಸಮಯ ಕಳೆಯುವುದನ್ನು ತಪ್ಪಿಸಲು ಏನಾದರೂ ಕಾರಣ ಹೇಳುತ್ತೀದ್ದೀರಾ? ನಿಮ್ಮ ಹುಡುಗಿಗಿಂತ ಹೆಚ್ಚು ನಿಮ್ಮ ಸ್ನೇಹಿತರೊಂದಿಗೆ ಆರಾಮದಾಯಕವಾಗಿದ್ದರೆ ನೀವು ತಪ್ಪು ಹುಡುಗಿಯನ್ನು ಡೇಟಿಂಗ್ ಮಾಡುತ್ತಿದ್ದೀರೆಂಬ ಲಕ್ಷಣವಿದು.

ಬಿಲ್ ನಿಮ್ಮದು
ಹೋಟೆಲ್ ಅಥವಾ ಬೇರೆ ಎಲ್ಲಿಯಾದರೂ ಹೋದಾಗ ಬಿಲ್ ಪಾವತಿಸುವುದು ಪುರುಷನ ಸ್ವೀಕಾರಾರ್ಹ ಹಕ್ಕು. ಆದರೆ ನೀವು ಎಷ್ಟು ಹಣ ವ್ಯಯಿಸುತ್ತಿದ್ದೀರಿ ಎಂದು ಹುಡುಗಿ ತಿಳಿಯುವ ಗೋಜಿಗೆ ಹೋಗದಿದ್ದರೆ ನೀವು ತಪ್ಪು ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವುದನ್ನು ಯೋಜಿಸಲು ಇದು ಸರಿಯಾದ ಸಮಯ.

ಗಂಭೀರ ಚರ್ಚೆ ಕಡೆಗಣಿಸುತ್ತೀರಿ
ನಿಮ್ಮ ಸಂಗಾತಿ ಆಕೆಯ ಡ್ರೆಸ್, ರೋಸ್ ಲಿಪ್ ಸ್ಟಿಕ್ ಅಥವಾ ಕೂದಲಿನ ಹೊಸ ವಿನ್ಯಾಸದ ಬಗ್ಗೆ ಮೆಚ್ಚುಗೆ ಕೇಳಲು ಮಾತ್ರ ಆಕೆಗೆ ಆಸಕ್ತಿಯಿದ್ದರೆ ನಿಮ್ಮ ಜೀವನ ಹಂಚಿಕೊಳ್ಳಲು ಆಕೆ ಸರಿಯಾದ ಹುಡುಗಿಯಾ ಎಂದು ಪ್ರಶ್ನಿಸಿಕೊಳ್ಳಿ.

ಆಕೆಯ ಅಧಿಕಾರ
ಹುಡುಗಿ ಆಕೆಯ ಸೂಚನೆ ಮತ್ತು ಆಜ್ಞೆಯಂತೆ ನಿಮ್ಮನ್ನು ಕಟ್ಟಿಹಾಕಲು ಪ್ರಯತ್ನಿಸಿದರೆ ನಿಮಗೆ ಚಿಂತಿಸಲು ಸಮಯವೇ ಸಿಗದು ಮತ್ತು ನೀವು ಪ್ರೀತಿಸುತ್ತಾ ಇರುತ್ತೀರಿ. ಹುಡುಗಿ ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸಿದರೆ ಆಗ ನೀವು ತಪ್ಪಾದ ಹುಡುಗಿಯನ್ನು ಡೇಟಿಂಗ್ ಮಾಡುತ್ತಿದ್ದೀರಿ ಎನ್ನುವುದರ ಲಕ್ಷಣವಿದು.

ಒಂದಕ್ಕಿಂತ ಹೆಚ್ಚು ಮಾಜಿಗಳು
ನೀವು ಪ್ರೀತಿಸುತ್ತಿರುವ ಹುಡುಗಿಗೆ ಒಂದಕ್ಕಿಂತ ಹೆಚ್ಚಿನ ಮಾಜಿ ಪ್ರೇಮಿಗಳಿದ್ದಾರೆ ಎಂದು ನಿಮಗೆ ತಿಳಿದರೆ ಈ ಪಟ್ಟಿಗೆ ನೀವು ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚು. ಆಕೆ ನಿಮ್ಮೊಂದಿನ ಸಂಬಂಧದ ಬಗ್ಗೆ ಗಂಭೀರವಾಗಿಲ್ಲವೆಂದಾದರೆ ತಪ್ಪು ಹುಡುಗಿಯೊಂದಿಗೆ ನೀವು ಡೇಟಿಂಗ್ ಮಾಡುತ್ತಿದ್ದೀರಿ ಎಂದರ್ಥ.



Click it and Unblock the Notifications
