Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ನೀವು ಪ್ರೇಮ ಪಾಶಕ್ಕೆ ಸಿಲುಕಿದ್ದೀರಾ? ಇಲ್ಲಿವೆ 10 ಸಂಕೇತಗಳು
ಪ್ರೀತಿ ಎಂಬ ಮಾತು ಕೇಳಿದರೆ ಸಾಕು ಸುಮಾರು ಜನರ ಎದೆಯಲ್ಲಿ ಏನೋ ಒಂಥರಾ,,, ಆಗುತ್ತದೆ. ಅದು ಬರೀ ಎದೆಯಲ್ಲಿಯೇ ಅಲ್ಲದೆ ದೇಹದ ಇತರೆಡೆಗಳಲ್ಲಿಯೂ ಅನುಭವಕ್ಕೆ ಬರಬಹುದು. ಅವರ ಇಡೀ ದೇಹವೆ ಚಿಟ್ಟೆಯಷ್ಟು ಹಗುರಾಗಿ ಗಾಳಿಯಲ್ಲಿ ತೇಲಾಡುವ ಅನುಭವವನ್ನು ಅವರು ಪಡೆಯುತ್ತಿರುತ್ತಾರೆ. ಈ ಅನುಭವವನ್ನು ಪ್ರತಿಯೊಬ್ಬರು ತಮ್ಮ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಪಡೆದಿರುತ್ತಾರೆ.
ಇದು ಈ ಮುಂದಿನ ಜೀವನದಲ್ಲಿ ನೀವು ಅನುಭವಿಸಿದ ಕ್ರಷ್ ರೀತಿಯಲ್ಲದೆ, ಬೇರೆಯದೇನೋ ರೀತಿಯಲ್ಲಿ ಕಾಣಿಸುತ್ತದೆ. ಇದೊಂದು ಅನುಪಮವಾದ ಮತ್ತು ವಿವರಿಸಲಾಗದ ಅನನ್ಯ ಅನುಭವ. ಈ ಅವಧಿಯಲ್ಲಿ ನಿಮಗೆ ಏನು ಆಗುತ್ತದೊ ಅದನ್ನು ವಿವರಿಸಲು ನಿಮ್ಮಿಂದಲೂ ಸಹ ಸಾಧ್ಯವಾಗುವುದಿಲ್ಲ. ಹೀಗೆ ಪ್ರೀತಿಯಲ್ಲಿ ನೀವು ಮುಳುಗಿ ತೇಲುತ್ತಿದ್ದೀರಿ ಎಂಬ ಮಾತನ್ನು ಪುಷ್ಟೀಕರಿಸುವ ಹಲವಾರು ಸಂಕೇತಗಳು, ಸೂಚನೆಗಳು ನಿಮಗೆ ದೊರೆಯುತ್ತವೆ. ಈ ಅಂಕಣದಲ್ಲಿ ಅಂತಹ 10 ಸೂಚನೆಗಳ ಕುರಿತಾಗಿ ನಾವು ನಿಮಗೆ ವಿವರಿಸುತ್ತಿದ್ದೇವೆ. ಅದರಲ್ಲು ನಿಮ್ಮ ವರ್ತನೆಯಲ್ಲಾಗುವ ಬದಲಾವಣೆಗಳನ್ನು ನಾವಿಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ.
ಪ್ರೀತಿಯ ಭಾವನೆಯು ಎಲ್ಲಾ ಭಾವನೆಗಳಿಗಿಂತ ಮಿಗಿಲು. ನೀವು ಪ್ರೀತಿಯಲ್ಲಿ ಮುಳುಗಿರುವಿರಿ ಎಂಬುದನ್ನು ನಾವು ಹುಡುಕುವಾಗ, ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿಯು ಸಾಮಾನ್ಯವಾಗಿ ತೋರ್ಪಡಿಸುವ ವರ್ತನೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇನ್ನೇಕೆ ತಡ ನೀವು ಪ್ರೀತಿ ಮಾಡುತ್ತಿದ್ದೀರೇ, ಎಂಬ ಕುರಿತಾಗಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಮುಂದೆ ಓದಿ...
ಅಪ್ಪಿ ತಪ್ಪಿಯೂ ಹೆಂಡತಿ ಬಳಿ ಆಡಬಾರದ ಮಾತುಗಳಿವು!

ನೀವು ಅವರ ಬಗ್ಗೆ ಆಲೋಚನೆ ಮಾಡುವುದನ್ನು ನಿಲ್ಲಿಸಲು ಅಸಾಧ್ಯ
ಇದು ಪ್ರೀತಿಯಲ್ಲಿ ಬಿದ್ದದ್ದಕ್ಕೆ ಸಿಗುವ ಮೊದಲ ಸೂಚನೆ. ನಿಮ್ಮ ಆಲೋಚನೆ, ಹಗಲು ಕನಸು ಎಲ್ಲವೂ ಅವರ ಸುತ್ತಲೇ ತಿರುಗುತ್ತಿದ್ದರೆ ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದರ್ಥ. ಈ ಭಾವನೆ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ನೀವು ಹಿಂದೆ ಅನುಭವಿಸಿದ ಎಲ್ಲಾ ಕ್ರಷ್‍ಗಳನ್ನು ಮೀರಿ ಈ ಭಾವನೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ಅದೇ ಪ್ರೀತಿಯ ವಿಶ್ವರೂಪ ದರ್ಶನ.

ಅದ್ಭುತವಾದ ಕೆಮಿಸ್ಟ್ರಿ
ನಾವು ಪ್ರೀತಿಸುವವರ ನಡುವೆ ಒಂದು ಅದ್ಭುತವಾದ ಕೆಮಿಸ್ಟ್ರಿ ಇರುವುದು ನಿಮ್ಮ ಗಮನಕ್ಕೆ ಬರುತ್ತದೆ. ಇಬ್ಬರೂ ಒಂದೇ ಬಾರಿಗೆ ನೆನೆಸಿಕೊಳ್ಳುವುದು, ನೆನೆದಾಗ ಫೋನ್ ಬರುವುದು, ಹೀಗೆ ಸುಮಾರು ವಿಚಾರಗಳು ಪ್ರೀತಿಯಲ್ಲಿ ಸಹಜವಾಗಿ ನಡೆಯುತ್ತಿರುತ್ತವೆ. ಇದರಿಂದಾಗಿ ನೀವು ಅವರನ್ನು ಮತ್ತಷ್ಟು ಪ್ರೀತಿಸಲು ತೊಡಗುವಿರಿ. ಅದೇ ಸಮಯಕ್ಕೆ ನಾವು ಪ್ರೀತಿಸುವವರ ಬಗ್ಗೆ ಕಡಿಮೆ ತಿಳಿದುಕೊಂಡಿರುತ್ತೇವೆ ಎಂಬುದನ್ನು ಮರೆಯಬಾರದು. ಒಮ್ಮೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಲು ಆರಂಭಿಸಿದರೆ ಅವರ ಎಲ್ಲಾ ಓರೆ ಕೋರೆಗಳು ನಮಗೆ ಕಾಣಿಸುವುದೇ ಇಲ್ಲ.

ನಿಮಗೆ ಮತ್ತೊಬ್ಬ ಗಂಡು-ಹೆಣ್ಣು ಆಕರ್ಷಣಿಯವಾಗಿ ಕಾಣುವುದೇ ಇಲ್ಲ
ನಿಮ್ಮ ಪ್ರೀತಿಗೆ ಪಾತ್ರರಾದ ವ್ಯಕ್ತಿಯ ಹೊರತಾಗಿ ಇತರರು ನಿಮಗೆ ಆಕರ್ಷಣೆಯಾಗಿ ಕಾಣುವುದೇ ಇಲ್ಲ. ನಿಮಗೆ ಅವರು ದಿನೇ ದಿನೇ ಅವರತ್ತ ನಿಮ್ಮಯ ಆಕರ್ಷಣೆ ಹೆಚ್ಚುತ್ತಲೇ ಇರುತ್ತದೆ. ನಿಮಗೆ ಅವರು ನಿಮಗಾಗಿ ದೇವರು ಸೃಷ್ಟಿಸಿದ ದೇವತೆಯಂತಹ ಅಥವಾ ಗಂಧರ್ವನಂತಹ ವ್ಯಕ್ತಿಯಾಗಿ ಕಾಣುತ್ತಾರೆ.

ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ
ನಿಜ ಪ್ರೀತಿಯಲ್ಲಿ ಬಿದ್ದರೆ ಮುಗಿಯಿತು, ಮಾತು ಮರೆತು ಹೋಗುತ್ತೆ, ಕೇಳ ಬೇಕಾದುದು ಗಂಟಲಿನಲ್ಲಿಯೇ ಕರಗಿ ಹೋಗುತ್ತದೆ. ಅವರು ಪಕ್ಕದಲ್ಲಿರುವಾಗ ನೀವು ಉದ್ವೇಗಗೊಳ್ಳುತ್ತೀರಿ. ಏನಾದರು ಸರಿ ಅವರ ಸುತ್ತ-ಮುತ್ತ ನೀವು ಓಡಾಡುತ್ತ ಇರಲು ಇಷ್ಟಪಡುವಿರಿ.

ಅವರ ಪ್ರತಿಕ್ರಿಯೆಗಾಗಿ ನೀವು ಕಾಯುತ್ತಾ ಕೂರುತ್ತೀರಿ
ನಿಮ್ಮ ಫೋನ್ ಅನ್ನು ಪದೇ ಪದೇ ನೀವು ನೋಡುತ್ತೀರಿ, ಅವರಿಂದ ಒಂದು ಕರೆ ಅಥವಾ ಸಂದೇಶ ಬಂದಿದೆಯೇ ಎಂದು. ಈ ಸಮಯದಲ್ಲಿ ನಿಮ್ಮ ತಾಳ್ಮೆ ಎಲ್ಲೋ ಕಳೆದು ಹೋಗಿರುತ್ತದೆ. ಆಗ ಅವರು ನಿಮಗೆ ಪ್ರತಿಕ್ರಿಯಿಸಿದರೆ ನೀವು ಲಾಟರಿಯಲ್ಲಿ ಗೆದ್ದಷ್ಟೇ ಸಂತೋಷಪಡುತ್ತೀರಿ. ಆಗ ನೀವು ನಿಮ್ಮ ತಾಳ್ಮೆಗೆ ನೀವೇ ಬೆನ್ನು ತಟ್ಟಿಕೊಳ್ಳುವಿರಿ.

ಅವರನ್ನು ಮೆಚ್ಚಿಸಲು ನೀವು ಏನು ಬೇಕಾದರು ಮಾಡುತ್ತೀರಿ
ನಿಮ್ಮ ಆಸಕ್ತಿ ಮತ್ತು ಅಭಿರುಚಿಗಳ ಜೊತೆಗೆ ನೀವು ರಾಜಿ ಮಾಡಿಕೊಂಡು ಬಿಡುತ್ತೀರಿ. ಅದರ ಬದಲಿಗೆ ನೀವು ಅವರಿಗಾಗಿ ಏನು ಬೇಕಾದರು ಮಾಡಲು ತಯಾರಾಗಿ ಬಿಡುತ್ತೀರಿ. ಇದು ನೀವು ಪ್ರೀತಿಯಲ್ಲಿ ಮುಳುಗಿದ್ದೀರಿ ಎಂಬುದಕ್ಕೆ ಇರುವ ಬಲವಾದ ಸಾಕ್ಷಿಯಾಗಿರುತ್ತದೆ.

ನಿಮ್ಮ ಆಧ್ಯತೆಗಳು ಬದಲಾಗುತ್ತವೆ
ಅವರು ನಿಮ್ಮ ಮೂಲಭೂತ ಆಧ್ಯತೆಯಾಗುವ ಕಾರಣದಿಂದ ನಿಮ್ಮ ಇತರ ಆಧ್ಯತೆಗಳು ಬದಲಾಗುತ್ತ ಹೋಗುತ್ತವೆ.

ಭವಿಷ್ಯ
ನೀವು ಮುಂದಿನ ಭವಿಷ್ಯವನ್ನು ಆಲೋಚಿಸುವಾಗ ಪ್ರತಿ ದೃಶ್ಯದಲ್ಲಿಯೂ ಅವರನ್ನು ಊಹಿಸಿಕೊಳ್ಳಲು ಆರಂಭಿಸುತ್ತೀರಿ. ಅವರಿಲ್ಲದ ಭವಿಷ್ಯವು ನಿಮ್ಮ ದೃಷ್ಟಿಯಲ್ಲಿ ಭವಿಷ್ಯವೇ ಅಲ್ಲ. ಅವರಿಲ್ಲದ ಜೀವನವನ್ನು ನೀವು ಕಲ್ಪಿಸಿಕೊಳ್ಳಲು ಸಹ ಇಷ್ಟಪಡದಿದ್ದರೆ ಸಾಕಲ್ಲವೆ ಅವರನ್ನು ನೀವು ಎಷ್ಟು ಪ್ರೀತಿಸುವಿರಿ ಎಂದು.

ಅವರ ಅಭಿಪ್ರಾಯವು ಅತ್ಯುತ್ತಮವಾಗಿರುತ್ತದೆ.
ಯಾರ ಅಭಿಪ್ರಾಯವನ್ನು ನಾವು ಪರಿಗಣಿಸುವ ಮೊದಲು ಮೀನ-ಮೇಷ ಎಣಿಸುತ್ತೇವೆ. ಆದರೆ ನಾವು ಪ್ರೀತಿಸಿದ ವ್ಯಕ್ತಿಯು ನೀಡುವ ಅಭಿಪ್ರಾಯದ ಮುಂದೆ ಇತರರ ಅಭಿಪ್ರಾಯ ನಗಣ್ಯವಾಗುತ್ತದೆ. ಅವರ ಅಭಿಪ್ರಾಯಕ್ಕೆ ನಾವು ಮಣೆ ಹಾಕುತ್ತೇವೆ. ಏಕೆಂದರೆ ಇವರ ಅಭಿಪ್ರಾಯ ನಮಗೆ ಅಷ್ಟು ಹಿಡಿಸುತ್ತದೆ.

ಸುಮ್ ಸುಮ್‍ನೆ ನಗುತಿರಿ
ಇದು ನೀವು ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂಬುದಕ್ಕೆ ಸಿಗುವ ಸ್ಪಷ್ಟ ಸೂಚನೆಗಳಲ್ಲಿ ಒಂದು. ನಿಮ್ಮೊಳಗೆ ಏನೋ ಆನಂದ, ಏನೋ ಉಲ್ಲಾಸ, ಉತ್ಸಾಹ ಎಲ್ಲವೂ ಕೂಡಿ ಆಗುತ್ತಿರುತ್ತದೆ. ಆಗ ಅದನ್ನು ತಡೆಯಲಾಗದೆ ನೀವು ಆಗಾಗ ನಗುತ್ತ ಇರುತ್ತೀರಿ.

ನಿಮ್ಮಲ್ಲಿ ಸುಮ್ಮನೆ ಅಸೂಯೆ ಮೂಡುತ್ತದೆ
ನೀವು ಪ್ರೀತಿಸುವ ವ್ಯಕ್ತಿಯು ಬೇರೆ ಹುಡುಗ ಅಥವಾ ಹುಡುಗಿ ಜೊತೆಗೆ ಮಾತನಾಡುತ್ತಿದ್ದರೆ, ನಿಮ್ಮಲ್ಲಿ ಹೇಳಿಕೊಳ್ಳಲಾಗದ ಅಭದ್ರತೆಯು ಕಾಡುತ್ತದೆ. ಆಗ ನೀವು ವಿಲಕ್ಷಣವಾಗಿ ಆಡಲು ಆರಂಭಿಸುವಿರಿ. ನಿಮ್ಮ ಮೇಲಿನ ಹತೋಟಿಯನ್ನೇ ನೀವು ಕಳೆದುಕೊಂಡ ಹಾಗೆ ವರ್ತಿಸಲು ಆರಂಭಿಸುವಿರಿ.

ಸರಿಯಾಗಿ ನಿದ್ದೆ ಬಾರದಿರುವುದು...
ಹೌದು ಇದು ಪ್ರೀತಿಯ ಸೈಡ್ ಎಫೆಕ್ಟ್, ಹೌದು ಏಕೆಂದರೆ ಅವರು ನಿಮ್ಮ ಮನಸ್ಸಿನಿಂದ ಮರೆಯಾಗಲು ಆಗುವುದಿಲ್ಲ, ಮತ್ತು ನಿಮಗೆ ನಿದ್ದೆ ಮಾಡಲಾಗುವುದಿಲ್ಲ.



Click it and Unblock the Notifications











