ಹುಡುಗಿಯರು ನಿಮ್ಮಿಂದ ಏಕೆ ದೂರ ಸರಿಯುತ್ತಾರೆ ಗೊತ್ತೇ?

ನಾವು ಸಾಮಾನ್ಯವಾಗಿ ಹೆಂಗಸರನ್ನು ತ್ಯಜಿಸುವ ಗಂಡಸರ ಬಗ್ಗೆ ಆಲೋಚಿಸುತ್ತೇವೆ. ಇದಕ್ಕೆ ಕಾರಣವು ತುಂಬಾ ಸರಳವಾಗಿ ನಮಗೆ ಕಂಡು ಬರುತ್ತದೆ. ಆದರೆ ಒಂದು ಹೆಣ್ಣು ಗಂಡನ್ನು ತ್ಯಜಿಸಿದರೆ ಮಾತ್ರ ಅದು ನಮಗೆ ಅಚ್ಚರಿಯಾಗಿ, ಕುತೂಹಲ ಕೆರಳಿಸುವ ವಿಚಾರವಾಗಿ ಕಾಣುತ್ತದೆ. ಏಕೆಂದರೆ ಇದು ಏಕೆ ಆಯಿತು ಎಂದು ಮಾತ್ರ ನಮ್ಮಲ್ಲಿ ನಿಖರವಾದ ಉತ್ತರವಿರುವುದಿಲ್ಲ ಅದಕ್ಕಾಗಿ. ಏಕೆಂದರೆ ಗಂಡಸನ್ನು ಒಂದು ಹೆಣ್ಣು ನಾನಾ ಕಾರಣಗಳ ಸಲುವಾಗಿ ತ್ಯಜಿಸುತ್ತಾಳೆ. ಆದರೆ ಸಾಮಾನ್ಯವಾಗಿ ಹೆಂಗಸು ಗಂಭೀರವಾದ ವಿಚಾರಗಳಿಗಾಗಿ ಗಂಡಸನ್ನು ತ್ಯಜಿಸುವುದಿಲ್ಲ.

ಉದಾಹರಣೆಗೆ ನೀವು ನಿಮ್ಮ ಗರ್ಲ್ ಫ್ರೆಂಡ್‍ಗೆ ಮೋಸ ಮಾಡಿದರೆ ಆಕೆ ನಿಮ್ಮಿಂದ ತಕ್ಷಣ ದೂರ ಸರಿಯುವುದಿಲ್ಲ. ಆದರೆ ನೀವು ಆಕೆಯ ಬದಲಿಗೆ ನಿಮ್ಮ ತಾಯಿಯ ಹಿಂದೆ ಹೋಗಿ ನಿಂತರೆ, ತಕ್ಷಣ ನಿಮ್ಮನ್ನು ಆಕೆ ದೂರ ತಳ್ಳುತ್ತಾಳೆ. ಆದರೆ ಹೆಂಗಸು ನಿಮ್ಮನ್ನು ಏಕೆ ದೂರ ತಳ್ಳುತ್ತಾಳೆ ಎಂಬುದು ನಿಮ್ಮಲ್ಲಿ ಗೊಂದಲವನ್ನು ಮೂಡಿಸಬಹುದು. ಹುಡುಗಿಯರು ನಿಮ್ಮಿಂದ ಏಕೆ ದೂರ ಸರಿದರು ಎಂಬುದನ್ನು ಮಾತ್ರ ಎಂದಿಗು ಕಂಡು ಹಿಡಿಯಲು ಸಾಧ್ಯವಿಲ್ಲ.

ಕೆಲವು ಹೆಂಗಸರು ಸದಾ ಬೈಯ್ಯುವ ಮತ್ತು ಹೊಡೆಯುವ ಗಂಡನ ಜೊತೆಗೆ ಸುಮಾರು ವರ್ಷ ಸಂಸಾರ ಮಾಡುತ್ತಾರೆ. ಆದರೆ ಕೆಲವರು ಒಬ್ಬ ಒಳ್ಳೆಯ ಗಂಡನನ್ನು ಕೇವಲ ಬೋರ್ ಆದ ಕಾರಣಕ್ಕೆ ಬಿಟ್ಟು ಬಿಡುತ್ತಾರೆ. ಆದರೆ ಇದು ಏಕೆ ಎಂದು ಮಾತ್ರ ವಿವರಿಸಲು ಅಸಾಧ್ಯ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಹೆಂಗಸರ ಈ ವರ್ತನೆಯ ಹಿಂದೆ ಅಡಗಿರುವ ಸತ್ಯಗಳು ನಿಮ್ಮ ಕಣ್ಣಿಗೆ ಗೋಚರಿಸುತ್ತವೆ. ಇಲ್ಲಿ ನಾವು ನಿಮಗಾಗಿ ಹೆಂಗಸು ಗಂಡಸನ್ನು ತ್ಯಜಿಸಲು ಇರುವ ಕೆಲವು ಕಾರಣಗಳನ್ನು ನೀಡಿದ್ದೇವೆ ಓದಿಕೊಳ್ಳಿ.

ಮಹಿಳೆಯರು ಮಿಲನವನ್ನು ಬಯಸದಿರಲು ಇರುವ 9 ಕಾರಣಗಳು

ನೀವು ಹೆಚ್ಚಿಗೆ ಸಂಪಾದಿಸುತ್ತಿರುವುದಿಲ್ಲ

ನೀವು ಹೆಚ್ಚಿಗೆ ಸಂಪಾದಿಸುತ್ತಿರುವುದಿಲ್ಲ

ನಿಜ ಕೈ-ಕಾಲು ನೆಟ್ಟಗಿದ್ದು, ಎಲ್ಲವು ಸರಿಯಾಗಿದ್ದರೂ ತನ್ನನ್ನು ಸಾಕುವಷ್ಟಾದರು ಕನಿಷ್ಠ ಹಣವನ್ನು ಸಂಪಾದಿಸದಿರುವ ಗಂಡಸನ್ನು ಹೆಂಗಸು ತ್ಯಜಿಸುತ್ತಾಳೆ. ಇಲ್ಲಿ "ಕನಿಷ್ಠ" ಎಂಬ ಮಾತು ಆಯಾ ಹೆಂಗಸಿನ ಭಾವನೆಯನುಸಾರ ನಿಗದಿಗೊಳ್ಳುತ್ತದೆ ಎಂಬುದು ನೆನಪಿರಲಿ.

ನೀವು ಇನ್ನು ಪ್ರಬುದ್ಧರಾಗಿಲ್ಲದಿದ್ದರೆ

ನೀವು ಇನ್ನು ಪ್ರಬುದ್ಧರಾಗಿಲ್ಲದಿದ್ದರೆ

ಇದು ಸಾಮಾನ್ಯವಾದ ಒಂದು ನೀತಿ. ಗಂಡಸು ತನ್ನ ಹೆಂಡತಿಯಲ್ಲಿ ತನ್ನ ತಾಯಿಯನ್ನು ಹುಡುಕುವಂತೆ, ಹೆಂಗಸು ತನ್ನ ತಂದೆಯನ್ನು ಗಂಡನಲ್ಲಿ ಹುಡುಕುತ್ತಾಳೆ. ಆಗಾಗಿ ಅಪ್ರಬುದ್ಧನಂತೆ ವರ್ತಿಸುವ ಗಂಡನನ್ನು ಹೆಣ್ಣು ಇಷ್ಟಪಡುವುದಿಲ್ಲ. ಯಾವಾಗಲೋ ಒಮ್ಮೆ ನೀವು ಹೀಗೆ ಆಡಿದರೆ ಆಕೆ ಸಹಿಸಿಕೊಳ್ಳುತ್ತಾಳೆ. ಆದರೆ ನಿಮ್ಮದು ಯಾವಾಗಲು ಇದೇ ಪ್ರವೃತ್ತಿ ಎಂದರೆ ಅದನ್ನು ಆಕೆ ಸಹಿಸಿಕೊಳ್ಳಲು ಇಷ್ಟಪಡುವುದಿಲ್ಲ. ಸರಾಸಗಾಟಾಗಿ ನಿಮ್ಮನ್ನು ಆಕೆ ದೂರ ತಳ್ಳುತ್ತಾಳೆ.

ನೀವು ಆಕೆಯ ವೃತ್ತಿಯನ್ನು ಪ್ರೋತ್ಸಾಹಿಸದಿದ್ದಾಗ

ನೀವು ಆಕೆಯ ವೃತ್ತಿಯನ್ನು ಪ್ರೋತ್ಸಾಹಿಸದಿದ್ದಾಗ

ಮೊಟ್ಟ ಮೊದಲನೆಯದಾಗಿ "ಸಂಬಳವನ್ನು ಕೇಳಬೇಡಿ" ಎಂಬ ನೀತಿ ಕೇವಲ ಗಂಡಸರಿಗೆ ಮಾತ್ರ ಅನ್ವಯಿಸುತ್ತಿತ್ತು. ಆದರೆ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಂಗಸರಿಗು ಸಹ ಈ ನೀತಿ ಅನ್ವಯಿಸುತ್ತದೆ. ಆಕೆಯ ವೃತ್ತಿಯನ್ನು ನೀವು ಪ್ರೋತ್ಸಾಹಿಸದೆ ಇದ್ದಲ್ಲಿ, ಆಕೆಯು ನಿಮ್ಮನ್ನು ಕಡೆಗಣಿಸುವುದರಲ್ಲಿ ಸಂಶಯವೇ ಇಲ್ಲ.

ನೀವು ಆಕೆಯನ್ನು ಅವಲಂಬಿಸಿದರೆ

ನೀವು ಆಕೆಯನ್ನು ಅವಲಂಬಿಸಿದರೆ

ನಿಮಗೆ ಇದು ನಿಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಕ್ರಿಯೆಯಾಗಿರಬಹುದು. ಆದರೆ ಪ್ರತಿಯೊಂದಕ್ಕು ನೀವು ಆಕೆಯನ್ನು ಅವಲಂಬಿಸಿ, ಅದನ್ನೆ ನಿಮ್ಮ ಬಂಡವಾಳವನ್ನಾಗಿಸಿಕೊಂಡು ಆಕೆಯನ್ನು ನಿಮ್ಮ ಕೈಗೊಂಬೆಯಂತೆ ಮಾಡಿಕೊಳ್ಳಲು ಬಯಸಿದರೆ, ಆಗ ಭಯದಿಂದ ಆಕೆ ನಿಮ್ಮಿಂದ ದೂರ ಸರಿಯಬಹುದು.

ನೀವು ಈ ಪ್ರಶ್ನೆಯನ್ನು ತುಂಬಾ ಬೇಗ ಕೇಳಿದಿರಿ

ನೀವು ಈ ಪ್ರಶ್ನೆಯನ್ನು ತುಂಬಾ ಬೇಗ ಕೇಳಿದಿರಿ

ನಿಮಗೆ ನಿಮ್ಮ ಹುಡುಗಿ ತುಂಬಾ ಇಷ್ಟವಾಗಿ ನಾವಿಬ್ಬರು ಮದುವೆಯಾಗೋಣ ಎಂದು ಕೇಳಿ ಬಿಟ್ಟಿರಬಹುದು. ಯಾವಾಗ ನಿಮ್ಮ ಪ್ರಸ್ತಾಪವು ಆಕೆಯ ಕುತ್ತಿಗೆಗೆ ಬರುವುದೋ, ಅಥವಾ ಆಕೆಗೆ ನಿಮ್ಮೊಂದಿಗಿನ ಸಂಬಂಧವು ಅಸೌಖ್ಯವಾಗಿ ತೋರುವುದೋ, ಆಗ ಆಕೆ ನಿಮ್ಮಿಂದ ದೂರ ನಡೆಯುತ್ತಾಳೆ.

ನೆಲೆ ನಿಲ್ಲಲು ನೀವು ತೋರುವ ನಿರಾಸಕ್ತಿ

ನೆಲೆ ನಿಲ್ಲಲು ನೀವು ತೋರುವ ನಿರಾಸಕ್ತಿ

ಆಕೆಯನ್ನು ಮದುವೆಯಾಗಿ ನೆಲೆ ನಿಲ್ಲಲು ನೀವು ತೋರುವ ನಿರಾಸಕ್ತಿಯು ಆಕೆಯನ್ನು ಕೆರಳಿಸುತ್ತದೆ. ಭವಿಷ್ಯವಿಲ್ಲದ ಸಂಬಂಧದಲ್ಲಿ ಹೆಂಗಸರು ನಂಬಿಕೆ ಇರಿಸುವುದಿಲ್ಲ. ಅದು ಅವರಿಗೆ ಅಭದ್ರತೆಯನ್ನು ಒದಗಿಸುತ್ತದೆ. ಇಂತಹ ಒಂದು ಸಂಬಂಧದಿಂದ ಅವರು ದೂರ ಸರಿಯುವುದರಲ್ಲಿ ಸಂಶಯವೇ ಇಲ್ಲ.

ಅವರಿಗೆ ಕುಟುಂಬ ಬೇಕು, ನಿಮಗೆ ಬೇಡ

ಅವರಿಗೆ ಕುಟುಂಬ ಬೇಕು, ನಿಮಗೆ ಬೇಡ

ಹೆಂಗಸರಿಗೆ ಗಂಡ, ಮನೆ, ಮಕ್ಕಳು ಬೇಕು. ಒಂದು ವೇಳೆ ನೀವು ಮಕ್ಕಳ ವಿಚಾರವಾಗಿ ತಲೆ ಅಲ್ಲಾಡಿಸಿದರೆ, ಅದರಿಂದ ಅವರಿಗೆ ನೋವಾಗುತ್ತದೆ. ಆಗ ವಿಧಿಯಿಲ್ಲದೆ ಅವರು ನಿಮ್ಮನ್ನು ದೂರ ತಳ್ಳುತ್ತಾರೆ. ಈ ವಿಚಾರವಾಗಿ ಅವರು ಯಾವುದೇ ರಾಜಿಗೆ ಸಿದ್ಧರಾಗಿರುವುದಿಲ್ಲ.

ಬಹುಶಃ ನಿಮ್ಮ ತಾಯಿಯ ಬಗ್ಗೆ ಆಕೆ ಮುನಿಸಿರುತ್ತದೆ

ಬಹುಶಃ ನಿಮ್ಮ ತಾಯಿಯ ಬಗ್ಗೆ ಆಕೆ ಮುನಿಸಿರುತ್ತದೆ

ಹೆಣ್ಣಿಗೆ ಗೊತ್ತು ಒಬ್ಬ ಗಂಡಸು ಆತನನ್ನು ಸಾಕಿ ಬೆಳೆಸಿದ ತಾಯಿಯಂತೆಯೇ ಇರುತ್ತಾನೆ ಎಂದು. ನಿಮ್ಮ ತಾಯಿಯ ಜೊತೆಗೆ ಆಕೆ ಮುನಿಸಿದ್ದರೆ, ಅದನ್ನು ಆಕೆ ಅದನ್ನು ನೇರವಾಗಿ ತೀರಿಸಿಕೊಳ್ಳಲು ನೋಡುತ್ತಾಳೆ. ಇದು ಸಾಧ್ಯವಾಗದಿದ್ದಾಗ ಅದಕ್ಕೆ ನೀವೇ ಬಲಿಪಶು. ಆಗ ಆಕೆ ನಿಮ್ಮಿಂದ ದೂರ ಸರಿಯುತ್ತಾಳೆ.

ಆಕೆ ಕೆಲಸದ ನಿಮಿತ್ತ ದೂರ ಹೋಗುತ್ತಿರುತ್ತಾಳೆ

ಆಕೆ ಕೆಲಸದ ನಿಮಿತ್ತ ದೂರ ಹೋಗುತ್ತಿರುತ್ತಾಳೆ

ಕೆಲಸ ಮಾಡುವ ನಿಮ್ಮ ಹುಡುಗಿಗೆ ಬೇರೆ ಜಾಗದಲ್ಲಿ ಕೆಲಸ ಸಿಗುತ್ತದೆ. ಒಂದು ವೇಳೆ ಆಕೆ ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದಲ್ಲಿ ಆಕೆ ನಿಮ್ಮನ್ನು ತನ್ನ ಜೊತೆಯಲ್ಲಿಯೇ ಬರಲು ಕೇಳುತ್ತಾಳೆ. ಮತ್ತು ಅದೇ ಸ್ಥಳದಲ್ಲಿ ನಿಮಗೆ ಸರಿಹೊಂದುವ ಕೆಲಸವನ್ನು ಹುಡುಕಿಕೊಳ್ಳಲು ಕೇಳಬಹುದು. ಆದರೆ ನೀವು ಆ ಮಾತಿಗೆ ಬೆಲೆ ಕೊಡದೆ ಕದಲದೆ ಇದ್ದಲ್ಲಿ, ಆಕೆ ನಿಮ್ಮಿಂದ ದೂರ ಹೋಗಬಹುದು.

ನೀವು ಆಕೆಗೆ ಬೋರ್ ಆದಾಗ

ನೀವು ಆಕೆಗೆ ಬೋರ್ ಆದಾಗ

ಹೆಂಗಸರು ಒಳ್ಳೆಯ ಗಂಡಸರ ಬಗೆಗೆ ಸುಲಭವಾಗಿ ಬೇಸರಗೊಳ್ಳುತ್ತಾರೆ. ಆದ್ದರಿಂದಲೇ ಹೇಳುವುದು ಒಳ್ಳೆಯವರಿಗೆ ಇದು ಕಾಲವಲ್ಲ. ನೀವು ತುಂಬಾ ಒಳ್ಳೆಯವರಾಗಿದ್ದರೆ, ನಿಮ್ಮ ಹುಡುಗಿ ನಿಮ್ಮನ್ನು ಬೇಗ ಪಕ್ಕಕ್ಕೆ ಸರಿಸುತ್ತಾರೆ.

Story first published: Tuesday, September 2, 2014, 16:28 [IST]
X
Desktop Bottom Promotion