ಭಾವನಾತ್ಮಕವಾಗಿ ಕುಗ್ಗಿದ ಸಂಗಾತಿಗೆ ಆಸರೆಯಾಗಿ

By Hemanth P

ಆರೋಗ್ಯಕರ ಮದುವೆಗೆ ಮೂಲತತ್ವವೆಂದರೆ ಬೆಂಬಲ ನೀಡುವ ಸಂಗಾತಿ. ನಿಮ್ಮ ಮೂಡ್ ಮತ್ತು ಕಠಿಣ ಪರಿಸ್ಥಿತಿಯಲ್ಲೂ ನಿಮ್ಮ ಬೆಂಬಲಕ್ಕೆ ನಿಲ್ಲುವ ಸಂಗಾತಿಯಿದ್ದರೆ ಆಗ ನಿಮ್ಮ ಮದುವೆಗೊಂದು ಅರ್ಥಬರುತ್ತದೆ. ಒಳ್ಳೆಯ ಕುಟುಂಬಕ್ಕೂ ಇದು ಅನಿವಾರ್ಯ. ಪ್ರತಿಯೊಬ್ಬರ ಜೀವನದಲ್ಲೂ ಯಾವುದಾದರೂ ಕಾರಣಕ್ಕೂ ನಿರುತ್ಸಾಹ ಮತ್ತು ಅಸಮಾಧಾನ ಇದ್ದೇ ಇರುತ್ತದೆ. ಅತ್ಯಂತ ವ್ಯಸ್ತ ಆಧುನಿಕ ಜೀವನದಿಂದ ನಮಗೆ ನಮ್ಮ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಾಧ್ಯವಾಗದಿರಬಹುದು. ಇದರಿಂದ ಕೆಲವು ದಿನಗಳಲ್ಲೇ ನಾವು ಕಳಕೊಂಡವರಂತೆ ಭಾವಿಸುತ್ತೇವೆ. ಕೆಲಸ ಮಾಡುವ ವ್ಯಕ್ತಿಗಳಲ್ಲಿ ವೃತ್ತಿ ಸಂಬಂಧಿತ ಒತ್ತಡಗಳು ಸಾಮಾನ್ಯವಾಗಿ ಕಾಣಸಿಗುತ್ತದೆ.

ನಿಮ್ಮ ಸಂಗಾತಿ ಕೆಲಸದಿಂದ ಬಂದಾಗ ತುಂಬಾ ದಣಿದಿದ್ದಾರೆಂದು ನಿಮಗನಿಸಿದರೆ ಆಗ ಅವರಿಗೆ ಒಂದು ಕಪ್ ಕಾಪಿ ಕೊಟ್ಟು ಆರಾಮವಾಗಿರಲು ಹೇಳಿ. ಅವರು ತುಂಬಾ ನಿರಾಶರಾಗಿದ್ದರೆ ಮತ್ತು ಬಳಲಿದ್ದರೆ ನೀವು ಎಚ್ಚರಿಕೆ ವಹಿಸಬೇಕು. ನಿಮ್ಮ ಸಂಗಾತಿಗೆ ಬೇಕಾಗುವ ಭಾವನಾತ್ಮಕ ಬೆಂಬಲವನ್ನು ನೀವು ನೀಡಬೇಕಾಗುತ್ತದೆ. ಅವರ ಕಷ್ಟ ಸಮಯದಲ್ಲಿ ನೀವು ಬೆಂಬಲ ನೀಡಿ, ತನ್ನ ಸಂಗಾತಿಯಿಂದ ಅವರು ಇದನ್ನೇ ಬಯಸುತ್ತಾರೆ. ಭಾವನಾತ್ಮಕ ಸಂಗಾತಿಯ ಸಂಬಂಧ ತುಂಬಾ ಮುಖ್ಯ. ಇದರ ಬಗ್ಗೆ ಎಚ್ಚರಿಕೆ ಅಗತ್ಯ.

ಭಾವನಾತ್ಮಕವಾಗಿ ನಿಮ್ಮ ಸಂಗಾತಿಯ ಮೂಡ್ ಮತ್ತು ಆತ್ಮವಿಶ್ವಾಸವನ್ನು ಬದಲಾಯಿಸಲು ಪ್ರಯತ್ನಿಸಬಹುದು. ಅವರ ಸಂಕಷ್ಟದ ಸಮಯದಲ್ಲಿ ನೀವು ಇದನ್ನು ಮಾಡಲು ಯಶಸ್ವಿಯಾದರೆ ನೀವು ಖಂಡಿತವಾಗಿಯೂ ಅವರ ಅಮೂಲ್ಯ ಪತ್ನಿಯಾಗಲಿದ್ದೀರಿ. ಕುಗ್ಗಿ ಹೋಗಿರುವ ನಿಮ್ಮ ಸಂಗಾತಿಯನ್ನು ಬೆಂಬಲಿಸಲು ಕೆಲವೊಂದು ವಿಧಾನಗಳು

ಮಾತನಾಡಿ

ಮಾತನಾಡಿ

ನಿಮ್ಮ ಸಂಗಾತಿ ಅಸಮಾಧಾನಗೊಂಡಿದ್ದರೆ ಮೊದಲು ನೀವು ಮಾಡಬೇಕಾದರೆ ಕೆಲಸವೆಂದರೆ ಅವರೊಂದಿಗೆ ಮಾತನಾಡಿ. ಅವರ ಸಮಸ್ಯೆ ಬಗ್ಗೆ ಕೇಳಿ ಮತ್ತು ನೀವು ಅವರಿಗೆ ಹೇಗೆ ನೆರವಾಗಬಲ್ಲಿರಿ ಎಂದು ಹೇಳಿ. ನಿಮ್ಮ ಸಂಗಾತಿಗೆ ತನ್ನದೇ ಆದ ನಿರೀಕ್ಷೆಗಳಿರಬಹುದು. ಅವರಿಗೆ ನಿಮ್ಮದೇ ಆದ ವಿಶೇಷ ಹಾದಿಯಿಂದ ನೆರವಾಗಬೇಕೆಂದು ಬಯಸಬಹುದು. ನಿಮ್ಮಿಂದ ಯಾವ ರೀತಿಯ ನೆರವು ಬಯಸುತ್ತಿದ್ದಾರೆಂದು ಕೇಳಿ. ಕೆಲವು ಸಲ ನೀವು ಅವರಿಗೆ ನೆರವಾಗಲು ಬಯಸಬಹುದು. ಅವರು ಇದನ್ನು ಗೊಂದಲವೆಂದು ಭಾವಿಸಬಹುದು, ಅವರ ಬೇಡಿಕೆಗಳ ಬಗ್ಗೆ ಕೇಳಿ. ಇದು ಭಾವನಾತ್ಮಕ ಸಂಗಾತಿಗಳ ಸಂಬಂಧಕ್ಕೆ ಅತೀ ಮುಖ್ಯ.

ನಿಮ್ಮ ಪ್ರೀತಿ ತೋರಿಸಿ

ನಿಮ್ಮ ಪ್ರೀತಿ ತೋರಿಸಿ

ಭಾವನಾತ್ಮಕ ಸಂಗಾತಿಗಳ ಸಂಬಂಧವನ್ನು ಪ್ರೀತಿಯಿಂದ ಅಳೆಯಬಹುದು. ನಿಮ್ಮ ಸಂಗಾತಿಗೆ ಯಾವಾಗಲೂ ಮಾತಿನ ಬೆಂಬಲ ಬೇಕಾಗಿರಲಿಕ್ಕಿಲ್ಲ. ಕೆಲವೊಂದು ಸಲ ಒಂದು ಅಪ್ಪುಗೆ ಅಥವಾ ಇತರ ಕೆಲವು ಆಕರ್ಷಣೆ ಮೂಡಿಸುವಂತಹ ನಡವಳಿಕೆಗಳು ಅವರನ್ನು ಒತ್ತಡದಿಂದ ಹೊರಬರುವಂತೆ ಮಾಡಬಹುದು. ನಿಮ್ಮ ಸಂಗಾತಿ ಈ ರೀತಿಯ ಬೆಂಬಲ ಬಯಸುತ್ತಿದ್ದರೆ ಆಗ ಒಂದು ಅಪ್ಪುಗೆ ಅದ್ಭುತ ಮಾಡಬಹುದು ಮತ್ತು ಅವರೊಂದಿಗೆ ಯಾವಾಗಲೂ ನೀವು ಬೆಂಬಲಕ್ಕಿದ್ದೀರಿ ಎನ್ನುವುದನ್ನು ಇದು ಹೇಳುತ್ತದೆ. ಇದನ್ನು ಪ್ರಯತ್ನಿಸಿ. ಭಾವನಾತ್ಮಕ ಸಂಗಾತಿ ಸಂಬಂಧವು ಈ ರೀತಿಯಲ್ಲಿ ವಿಶೇಷವಾಗಿ ಕೆಲಸ ಮಾಡಬಹುದು.

ಒಂದು ಯೋಜನೆ ಮಾಡಿ

ಒಂದು ಯೋಜನೆ ಮಾಡಿ

ನಿಮ್ಮ ಸಂಗಾತಿಯ ಮೂಡ್ ನ್ನು ಬದಲಾಯಿಸಿ ಅವರನ್ನು ಆರಾಮವಾಗಿರುವಂತೆ ಮಾಡಲು ಒಂದು ಯೋಜನೆ ಹಾಕುವುದು ತುಂಬಾ ಮುಖ್ಯ. ಒಂದು ಪ್ರವಾಸ ಅಥವಾ ಸುಂದರ ಸ್ಥಳಗಳಿಗೆ ಸಣ್ಣ ಟೂರ್ ಗೆ ಹೋಗಿ. ಇದು ಅವರು ಆರಾಮವಾಗಿರಲು ಮತ್ತು ಭಾವನಾತ್ಮಕ ಸಂಗಾತಿಗಳ ಸಂಬಂಧ ಉತ್ತಮಪಡಿಸಲು ನೆರವಾಗುತ್ತದೆ. ಅವರು ನಿಮ್ಮ ಯೋಜನೆಗೆ ಒಪ್ಪಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಸಂಗಾತಿ ಪ್ರವಾಸದ ಆರ್ಥಿಕ ವ್ಯವಸ್ಥೆ ಬಗ್ಗೆ ಚಿಂತಿಸಬಹುದು. ಆದರೆ ಇದು ಅಷ್ಟು ಖರ್ಚಿನ ಪ್ರವಾಸವಾಗದು ಎಂದು ತಿಳಿಸಿ.

ಧನಾತ್ಮಕವಾಗಿರುವಂತೆ ವರ್ತಿಸಿ

ಧನಾತ್ಮಕವಾಗಿರುವಂತೆ ವರ್ತಿಸಿ

ಭರವಸೆಯ ಆಶಾಕಿರಣ ಮೂಡಿಸುವುದು ನಿಮ್ಮ ಸಂಗಾತಿಗೆ ಬೆಂಬಲ ನೀಡಲು ಅತ್ಯುತ್ತಮ ಮಾರ್ಗ. ಪರಿಸ್ಥಿತಿಯ ಬಗ್ಗೆ ಧನಾತ್ಮಕವಾಗಿ ಹೇಳಿ ಮತ್ತು ಆಗುತ್ತಿರುವುದೆಲ್ಲವೂ ಒಳ್ಳೆಯದಕ್ಕೆ ಎಂದು ಹೇಳಿ. ಇದು ಸ್ವಲ್ಪ ಕಷ್ಟ ಕಾಲ ಮತ್ತು ಮುಂದೆ ಎಲ್ಲವೂ ಸರಿಯಾಗಲಿದೆ ಎಂದು ಅವರಿಗೆ ಹೇಳಿ. ಇದು ಭಾವನಾತ್ಮಕ ಸಂಗಾತಿಗಳ ಸಂಬಂಧ ಬಲಪಡಿಸುತ್ತದೆ. ಭಾವನಾತ್ಮಕ ಸಂಗಾತಿಗಳ ಸಂಬಂಧದಲ್ಲಿ ಈ ಕೆಮೆಸ್ಟ್ರಿ ಒಳ್ಳೆಯ ರೀತಿಯಿಂದ ಕೆಲಸ ಮಾಡುತ್ತದೆ.

ಒಳ್ಳೆಯ ಸಂಗಾತಿ

ಒಳ್ಳೆಯ ಸಂಗಾತಿ

ಒಳ್ಳೆಯ ಸಂಗಾತಿ ಪರಸ್ಪರರ ಜೀವನದಲ್ಲಿ ಏನೇ ಆದರೂ ತಮ್ಮ ಸಂಗಾತಿಯ ಬೆಂಬಲಕ್ಕೆ ನಿಲ್ಲುತ್ತಾರೆ. ಇದು ಯಶಸ್ವಿ ಮದುವೆಗೆ ತುಂಬಾ ಮುಖ್ಯ. ಜೀವನದ ಒಳ್ಳೆಯ ಮತ್ತು ಕೆಟ್ಟ ಸಮಯದ ಹೊರತಾಗಿಯೂ ಕೊನೆಯಲ್ಲಿ ಉಳಿಯುವುದು ಪ್ರೀತಿ. ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದು ಒಂದು ಪರ್ಯಾಯವಾಗಬಹುದು. ಆದರೆ ಸಂಗಾತಿಗಳು ಪರಸ್ಪರರನ್ನು ಅರ್ಥ ಮಾಡಿಕೊಂಡು ಉತ್ತಮವಾಗಿ ಜೀವನ ನಡೆಸಬೇಕು. ಸಂಗಾತಿಯ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡಿ ಮತ್ತು ಇದು ಭಾವನಾತ್ಮಕ ಸಂಗಾತಿಗಳ ಸಂಬಂಧದಲ್ಲಿ ಅತೀ ಮುಖ್ಯ.

Story first published: Friday, December 6, 2013, 20:04 [IST]
X
Desktop Bottom Promotion