Latest Updates
-
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ
ಎರಡನೇ ಭೇಟಿಯಲ್ಲೇ ಆಕೆಯನ್ನು ಹೀಗೆ ಆಕರ್ಷಿಸಿ
ಒಬ್ಬರನ್ನು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೊದಲು ಇಬ್ಬರಲ್ಲೂ ಹಲವಾರು ಗೊಂದಲಗಳಿರುತ್ತವೆ ಸಾಕಷ್ಟು ಪ್ರಶ್ನೆಗಳಿರುತ್ತವೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವುದರ ಬಗ್ಗೆ ಹವಣಿಕೆಗಳಿರುತ್ತವೆ. ಆದ್ದರಿಂದ ಒಬ್ಬರನ್ನೊಬ್ಬರು ಭೇಟಿ ಮಾಡಿ ಪರಸ್ವರ ನೋಡುವುದು ಮಾತನಾಡುವುದು ಅತ್ಯಂತ ಅಗತ್ಯ.
ಮೊದಲ ಬಾರಿ ಭೇಟಿ ಮಾಡಿದಾಗ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕೇವಲ ಕೆಲವು ಮಾತುಗಳನ್ನಾಡಬಹುದಷ್ಟೇ. ಆದ್ದರಿಂದ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಇನ್ನೊಮ್ಮೆ ಭೇಟಿ ಮಾಡಲೇಬೇಕು. ತನಗೆ ಜೊತೆಯಾಗಿ ಬರುವ ಸಂಗಾತಿ ಎಲ್ಲಾ ವಿಷಯದಲ್ಲೂ ತನಗೆ ಸರಿಯಾಗಿ ಹೊಂದಿಕೆಯಾಗಬಲ್ಲಳೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತುಸು ಆಳವಾಗಿಯೇ ಅವರನ್ನು ಅರಿಯುವ ಪ್ರಯತ್ನ ಮಾಡಬೇಕಾಗುತ್ತದೆ. ಮೊದಲ ಭೇಟಿಯಲ್ಲೇ ನಿಮಗೆ ಅವರು ಇಷ್ಟವಾಗಿದ್ದರೆ, ನೀವು ಅವರನ್ನು ಆಕರ್ಷಿಸಲು ಮೊದಲು ಪ್ರಯತ್ನಿಸಬೇಕು. ಮೊದಲನೇ ಭೇಟಿಗಿಂತ ಎರಡನೇ ಭೇಟಿ ನಿಮ್ಮ ಈ ಬಾಂಧವ್ಯ ಮುಂದುವರೆಯುವುದೋ ಅಥವಾ ಇಲ್ಲಿಗೇ ಮುಗಿಯುವುದೋ ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ಎರಡನೇ ಭೇಟಿ ನಿಮ್ಮ ಸಂಗಾತಿಯಾಗಿ ಬರುವಳಲ್ಲಿ ನಿಮ್ಮ ಬಗ್ಗೆ ಉತ್ತಮ ಭಾವನೆಯನ್ನು ಮೂಡಿಸಲು ಸಹಾಯಕವಾಗಲಿ.

ಎರಡನೇ ಭೇಟಿಯ ಹೊತ್ತಿಗೆ ನಿಮ್ಮ ಸಂಗಾತಿ ನಿಮ್ಮ ಬಗ್ಗೆ, ನಿಮ್ಮ ಸ್ವಭಾವ ಹಾಗೂ ವೈಯುಕ್ತಿಕ ಆಸಕ್ತಿಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಬಯಸುತ್ತಾರೆ. ಎರಡನೆಯ ಭೇಟಿ ಯಶಸ್ವಿಯಾಗಿದ್ದರೆ ಅದು ನಿಮ್ಮ ಮುಂದಿನ ಭವಿಷ್ಯವನ್ನೂ ಸಹ ನಿರ್ಧರಿಸಬಲ್ಲದು. ಆದ್ದರಿಂದ ನೀವು ಮುಂದಿನ ದಿನಗಳ ಬಗ್ಗೆ ಹೆಚ್ಚು ಆಲೋಚಿಸುವ ಅಗತ್ಯವಿರುವುದಿಲ್ಲ. ಮೊದಲನೆಯ ಭೇಟಿಯಲ್ಲಿರುವ ಗೊಂದಲಗಳೂ ನಿಮ್ಮಿಂದ ದೂರಾಗಬಹುದು.
ಅವಳನ್ನು ಆಕರ್ಷಿಸಲು ನೀವು ಹೆಚ್ಚು ಪ್ರಾಮಾಣಿಕ ಮತ್ತು ಸತ್ಯವಂತರಾಗಿರುವುದು ಅಗತ್ಯ. ಯಾವುದೇ ಮಹಿಳೆಗೆ ಇಷ್ಟವಾಗುವುದು ಗಂಡಸರ ಪ್ರಾಮಾಣಿಕ ಗುಣ ಮಾತ್ರ. ನಿಮ್ಮ ಸ್ವಭಾವ ಗಾಂಭೀರ್ಯದಿಂದ ಕೂಡಿದ್ದರೆ ಆಕೆಯನ್ನು ಭೇಟಿ ಮಾಡುವ ಸಂದರ್ಭದಲ್ಲಿ ಸ್ವಲ್ಪ ಹಾಸ್ಯ ಮನೋಭಾವವನ್ನೂ ಬೆಳೆಸಿಕೊಳ್ಳಿ. ಈ ಪ್ರವೃತ್ತಿ ನಿಮ್ಮಿಬ್ಬರ ನಡುವಿನ ಮೌನವನ್ನು ಮುರಿದು ಮುಂದಿನ ಮಾತುಕತೆಗಳಿಗೆ ಅನುವು ಮಾಡಿಕೊಡುತ್ತದೆ.
ನಿಮ್ಮ ಬಾಳ ಸಂಗಾತಿಯಾಗಿ ಬರುವ ಹುಡುಗಿಯನ್ನು ಮೆಚ್ಚಿಸಲು ಹತ್ತು ಸಲಹೆಗಳನ್ನು ಇಲ್ಲಿ ಹೇಳಲಾಗಿದೆ.
ಎರಡನೇ ಭೇಟಿಗೆ ನಿಮ್ಮ ಉಡುಪು ಶಿಸ್ತಿನಿಂದಿರಲಿ: ಸರಿಯಾದ ಉಡುಪು ಧರಿಸುವುದು ನಿಮ್ಮ ಭೇಟಿಯನ್ನು ಇನ್ನಷ್ಟು ಸುಂದರಗೊಳಿಸಬಹುದು. ಅತ್ಯಂತ ಶಿಸ್ತಿನಿಂದ ಹಾಗೂ ಸುಂದರ ವ್ಯಕ್ತಿತ್ವವನ್ನು ಅವರ ಮುಂದೆ ತೋರಿಸುವುದು ಅತ್ಯಗತ್ಯ. ನಿಮ್ಮ ಎರಡನೆಯ ಭೇಟಿಯ ಸಂದರ್ಭದಲ್ಲಿ ಅವರು ನಿಮ್ಮನ್ನು ಇನ್ನಷ್ಟು ನಂಬಿರುತ್ತಾರೆ. ಆದ್ದರಿಂದ ನಿಮ್ಮ ಕೈ ಅಡುಗೆ ರುಚಿಯನ್ನು ಆಕೆಗೂ ತೋರಿಸಲು ಮನೆಗೆ ಊಟಕ್ಕೆ ಅವರನ್ನು ಆಮಂತ್ರಿಸುವುದು ಒಳ್ಳೆಯದು.
ನಿಮ್ಮನ್ನು ಎರಡನೇ ಬಾರಿಗೆ ಭೇಟಿಯಾಗುವ ಹೊತ್ತಿಗೆ ಆಕೆ ನಿಮ್ಮೊಂದಿಗೆ ಹೊಂದಿಕೊಳ್ಳುವ ಭರವಸೆಯನ್ನು ಮೂಡಿಸಿ. ಅತಿಯಾಗಿ ಹಾಸ್ಯವನ್ನೂ ಮಾಡದೆ ಅತಿ ಗಾಂಭೀರ್ಯತೆಯನ್ನೂ ತೋರಿಸದೇ ಇರುವುದು ಒಳಿತು. ಅವರ ವೈಯುಕ್ತಿಕ ವಿಷಯದ ಬಗ್ಗೆ ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳಿ ಒಮ್ಮೆಲೆ ಅವರ ಭಾವನೆಗಳ ಮೇಲೆ ದಾಳಿ ಮಾಡದಿರಿ. ನೀವು ಅತಿಯಾಗಿ ಮುಂದುವರೆಯುತ್ತಿರುವುದು ಅವರಿಗೆ ಇಷ್ಟವಾಗದೇ ಹೋಗಬಹುದು.
ಸಂಭಾವಿತ / ಜಂಟಲ್ ಮೆನ್ ಆಗಿರಿ. ಯಾವುದೇ ವಿಷಯದಲ್ಲಿ ಅತಿಯಾದ ವೇಗ ಬೇಡ: ಆಕೆಯ ಜೊತೆ ಒಮ್ಮೆಲೆ ದೈಹಿಕವಾಗಿ ಹತ್ತಿರವಾಗಲು ಬಯಸಬೇಡಿ. ಅವರು ನಿಮ್ಮೊಂದಿಗೆ ಹೊಂದಿಕೊಂಡು ನಿಮ್ಮ ಸಾಮಿಪ್ಯ ಅವರಿಗೆ ಇಷ್ಟ ಎಂದಾದರೆ ಮಾತ್ರ ಮುಂದುವರಿಯಿರಿ.
ಎರಡನೇ ಭೇಟಿಗೆ ಉಡುಗೊರೆಗಳನ್ನು ನೀಡಿ: ಅವಳನ್ನು ಆಕರ್ಷಿಸುವಂತಹ ಅವಳಿಗೆ ಇಷ್ಟವಾಗುವಂತಹ ಯಾವುದಾದರೂ ವಸ್ತುವನ್ನು ಎರಡನೇ ಭೇಟಿಗೆ ಉಡುಗೊರೆಯಾಗಿ ನೀಡಿ. ಇದರಿಂದ ಅವರಿಗೆ ನಿಮ್ಮ ಮೇಲೆ ಒಳ್ಳೆಯ ಭಾವನೆ ಉಂಟಾಗಬಹುದು. ಹೂವುಗಳನ್ನು ನೀಡುವುದು ಅತ್ಯಂತ ಉತ್ತಮ ಉಡುಗೊರೆ.
ಮೊದಲ ಚುಂಬನ ಮಧುರ ಎನ್ನುವಂತೆ ಅವಳು ನಿಮ್ಮೊಂದಿಗೆ ಸನಿಹದಲ್ಲಿದ್ದರೆ, ನಿಮ್ಮ ಉಪಸ್ಥಿತಿ ಅವಳಿಗೆ ಸಂತೋಷವನ್ನು ನೀಡುವುದಾದರೆ ನೀವು ಅವಳನ್ನು ಚುಂಬಿಸಬಹುದು. ಪ್ರಥಮ ಚುಂಚನ ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸಬಹುದು.
ನಿಮ್ಮಿಬ್ಬರ ಕಣ್ಣುಗಳ ಮಿಲನ ನಿಮ್ಮ ಸ್ನೇಹವನ್ನು ಹೆಚ್ಚಿಸುತ್ತದೆ. ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ, ಅವಳ ಮೇಲೆ ನಿಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಿ. ಇದರಿಂದ ಅವಳಿಗೂ ನಿಮ್ಮ ಮೇಲೆ ಭರವಸೆ ಮೂಡುತ್ತದೆ.
ನಿಮಗೆ ಅವಕಾಶ ಸಿಕ್ಕಾಗ ಆಕೆಯನ್ನು ಹೊಗಳಿ. ಅವಳ ಸೌಂದರ್ಯದ ಕುರಿತು ಅಥವಾ ಆಕೆಯ ಗುಣದ ಕುರಿತು ಒಳ್ಳೆಯ ಮಾತುಗಳನ್ನಾಡಿ. ಆದರೆ ಈ ಹೊಗಳಿಕೆ ಹಾಸ್ಯವಾಗಿರದೇ ಅವರ ಬಗ್ಗೆ ಇರುವ ಸತ್ಯದ ಮಾತುಗಳಾಗಿರಲಿ. ಇದರಿಂದ ನಿಮ್ಮ ಪ್ರಾಮಾಣಿಕತೆಗೆ ಆಕೆಯ ಮನ ಸೋಲಬಹುದು!
ನಿಮ್ಮ ಬಗ್ಗೆ ಪ್ರಾಮಾಣಿಕತೆ ಅಗತ್ಯ: ನಿಮ್ಮ ಸ್ವಭಾವದ ಬಗೆಗೆ ಯಾವುದೇ ಮುಚ್ಚುಮರೆ ಬೇಡ. ನಿಮ್ಮ ವೃತ್ತಿ, ಬದುಕಿನ ಬಗ್ಗೆ ಅವರಿಗೆ ಸುಳ್ಳನ್ನು ಹೇಳದೇ ಸತ್ಯವನ್ನೇ ಹೇಳಿ. ಅವಳನ್ನು ಆಕರ್ಷಿಸಲು ಪ್ರಾಮಾಣಿಕತೆಗಿಂತ ಉತ್ತಮವಾದ ಮಾರ್ಗ ಬೇರೊಂದಿಲ್ಲ! ಎರಡನೇ ಭೇಟಿಯ ಕೊನೆಯಲ್ಲಿ ಅವರ ಬಗ್ಗೆ ನಿಮಗೆ ಇರುವ ಭಾವನೆಗಳನ್ನು ಸ್ವಷ್ಟಪಡಿಸಿ. ಅವರ ಮೇಲಿರುವ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ನೀವೆ ಮೊದಲಿಗರಾದರೆ ಅದೇ ಆಕೆಗೆ ಸಂತೋಷದ ವಿಷಯವಾಗಿರುತ್ತದೆ. ಈಕೆಂದರೆ ಮಹಿಳೆಯರು ಬಯಸುವುದು ಇದನ್ನೇ!
ನಿಮ್ಮ ಉತ್ತಮ ನಡತೆ, ಮಾತು ವ್ಯಕ್ತಿತ್ವ ನಿಮ್ಮ ಸಂಗಾತಿಯಾಗುವವಳೊಂದಿಗಿನ ಭೇಟಿಯನ್ನು ಯಶಸ್ವಿಯನ್ನಾಗಿಸಲಿ.



Click it and Unblock the Notifications











