Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಜಿ ಪ್ರೇಯಸಿಗೆ ಕರೆ ಮಾಡಲು ಕೆಲ ಕಾರಣಗಳು
ಸಂಬಂಧವು ಹಲವಾರು ರೀತಿಯಿಂದ ಅಂತ್ಯಗೊಳ್ಳಬಹುದು, ಕೆಲವು ಸಂತಸದಿಂದ ಕೊನೆಗೊಂಡರೆ ಮತ್ತು ಕೆಲವು ದುಃಖದಲ್ಲಿ ಸಮಾಪ್ತಿಯಾಗಬಹುದು. ಕೆಲವೊಮ್ಮೆ ಸಂಬಂಧ ಅಂತ್ಯಕಂಡರೂ ಆಕೆಗಾಗಿ ನಿಮ್ಮ ಭಾವನೆ ಮಾತ್ರ ಹಾಗೆ ಉಳಿಯಬಹುದು. ನೀವು ಆಕೆಯೊಂದಿಗೆ ಸಂಬಂಧ ಕಡಿದ ಕೆಲವು ಸಮಯದ ಬಳಿಕ ಆಕೆಗೆ ಕರೆ ಮಾಡಬಹುದು. ನಿಮ್ಮ ಭಾವನೆಗಳು ಪ್ರಾಮಾಣಿಕವಾಗಿರದಿದ್ದರೆ ಮಾಜಿ ಪ್ರೇಯಸಿಗೆ ಕರೆ ಮಾಡಲು ಇದು ಕೇವಲ ಕಾರಣವಾಗಬಹುದು. ಮಾಜಿ ಪ್ರೇಯಸಿಗೆ ಕರೆ ಮಾಡುವುದರಿಂದ ಆಕೆಯ ಮುಂದೆ ನೀವು ದುರ್ಬಲ, ನಿರಾಶ ಎಂದು ಆಕೆಗೆ ಕೆಟ್ಟ ಸಂದೇಶ ನೀಡಬಾರದು.
ಸಂಬಂಧ ಮುರಿದು ಹೋಗುವುದರಿಂದ ಇಬ್ಬರ ಮೇಲೂ ಅದು ಪರಿಣಾಮ ಬೀರುತ್ತದೆ. ನಿಮ್ಮ ಮಾಜಿ ಪ್ರೇಯಸಿಗೆ ಕರೆ ಮಾಡುವುದರಿಂದ ನಿಮ್ಮ ನೋವು ಕಡಿಮೆಯಾಗಬಹುದು. ಸಂಬಂಧವು ಒಳ್ಳೆಯ ರೀತಿ ಮುರಿದುಬಿದ್ದರೆ ಆಗ ಇದಕ್ಕೆ ಅವಕಾಶವಿರುತ್ತದೆ. ಯಾವುದೇ ಕಾರಣಕ್ಕಾದರೂ ನೀವು ಮಾಜಿ ಪ್ರೇಯಸಿಗೆ ಕರೆ ಮಾಡಲು ಬಯಸುವುದಾದರೆ ಆಗ ನೀವು ಆಕೆಯ ಮುಂದೆ ದುರ್ಬಲರಾಗಬಾರದು. ಮತ್ತೆ ನೀವಿಬ್ಬರು ಒಂದಾಗುವುದರಲ್ಲಿ ಮತ್ತು ನಿಮ್ಮಿಬ್ಬರ ಸಂಬಂಧ ಮತ್ತೆ ಮುಂದುವರಿಸಲು ಬಯಸಿದರೆ ಅದರಿಂದ ಯಾವುದೇ ಹಾನಿಯಿಲ್ಲ. ಸಂಬಂಧವು ಮತ್ತೆ ಬೆಸೆಯಲು ಸಂವಹನ ತುಂಬಾ ಮುಖ್ಯ.
ನಿಮ್ಮ ಮಾಜಿ ಪ್ರೇಯಸಿಗೆ ಕರೆ ಮಾಡಿ ಮನ್ನಿಸುವುದು ಸರಳ ಮತ್ತು ಯೋಜನಾತ್ಮಕವಾಗಿರಲಿ. ನಿಮ್ಮ ಕರೆಯ ಉದ್ದೇಶದ ಮೇಲೆ ಇದು ಅವಲಂಬಿಸಿರುತ್ತದೆ. ನೀವು ಸಂಬಂಧವನ್ನು ಮುಂದುವರಿಸಲು ಬಯಸುವುದಾದರೆ ಆಗ ನೀವು ಆಕೆಯ ಮನೆಯವರ ಆರೋಗ್ಯ ಅಥವಾ ವೃತ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಳಬಹುದು.

1. ಅಭಿನಂದಿಸಿ
ನಿಮ್ಮ ಮಾಜಿ ಪ್ರೇಯಸಿಗೆ ಕರೆ ಮಾಡಲು ಒಂದು ಅತ್ಯುತ್ತಮ ಕಾರಣವೆಂದರೆ ಅದು ಆಕೆಯನ್ನು ಅಭಿನಂದಿಸುವುದು. ಆಕೆಯ ಹುಟ್ಟುಹಬ್ಬ, ಹೊಸ ಕೆಲಸ ಅಥವಾ ಭಡ್ತಿ ಇತ್ಯಾದಿಯಾಗಿರಬಹುದು. ಇದು ತುಂಬಾ ಮುಗ್ದ ಅಭಿನಂದನೆಯಾಗಿರಬೇಕು, ಮತ್ತೆ ನಿಮ್ಮಿಬ್ಬರ ಮಧ್ಯೆ ಜಗಳವಾಗಬಾರದು.
2. ಮನೆಯವರ ಆರೋಗ್ಯ
ಸಂಬಂಧದಲ್ಲಿರುವಾಗ ಆಕೆ ನಿಮ್ಮನ್ನು ಸಂಬಂಧಿಕರು ಮತ್ತು ಆಕೆಯ ಹೆತ್ತವರಿಗೆ ಪರಿಚಯಿಸಿರಬಹುದು. ಆಕೆಯ ಸಂಬಂಧಿಕರು ಯಾರಾದರೂ ಅನಾರೋಗ್ಯದಿಂದ ಇದ್ದಾರೆ ಎಂದು ನಿಮಗೆ ತಿಳಿದರೆ, ಆಗ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸುವುದು ಒಳ್ಳೆಯ ಕಾರಣವಾಗಬಹುದು.
3. ನಿಮ್ಮ ಶುಭ ಸುದ್ದಿ ಹೇಳಿ
ನೀವು ಏನಾದರೂ ವಿಶೇಷವಾಗಿರುವುದನ್ನು ಮಾಡಿದ್ದರೆ ಅಥವಾ ಆಕೆಗೆ ಇದರ ಬಗ್ಗೆ ತಿಳಿಸುವುದು ಅಗತ್ಯವೆಂದು ನಿಮಗನಿಸಿದರೆ ಈ ಅವಕಾಶ ಕಳಕೊಳ್ಳಬೇಡಿ. ಇದರಿಂದ ಈಗಲೂ ನೀವು ಆಕೆಯನ್ನು ಸ್ನೇಹಿತೆಯಾಗಿ ಮತ್ತು ನಿಮ್ಮ ಯಶಸ್ಸಿನ ವೇಳೆ ಆಕೆಯ ನೆನಪು ಮಾಡಿಕೊಳ್ಳುತ್ತೀರಿ ಎಂದು ಆಕೆಗನಿಸುತ್ತದೆ.
4. ಮಾಹಿತಿ
ನಿಮ್ಮ ಮಾಜಿ ಪ್ರೇಯಸಿ ತಿಳಿದಿರುವ ಯಾವುದಾದರೂ ವಿಷಯವನ್ನು ಕೇಳಲು ಆಕೆಗೆ ಕರೆ ಮಾಡಿ. ಇದು ನಿಮ್ಮ ಮಾಜಿ ಪ್ರೇಯಸಿಗೆ ಕರೆ ಮಾಡಲು ಒಳ್ಳೆಯ ಕಾರಣವಾಗಬಹುದು ಮತ್ತು ಆಕೆ ತನಗೆ ತಿಳಿದಿರುವ ಮಾಹಿತಿ ನೀಡಬಹುದು. ಇದರಿಂದ ಆಕೆ ನಿಮ್ಮೊಂದಿಗೆ ಸಾಮಾನ್ಯವಾಗಿ ಮಾತನಾಡಬಹುದು.
5. ನೆರವು
ನಿಮ್ಮಿಬ್ಬರ ಸಂಬಂಧ ಎಷ್ಟೇ ಕೆಟ್ಟದಾಗಿ ಕೊನೆಗೊಂಡಿದ್ದರೂ ನಿಮಗೆ ನೆರವು ಬೇಕಿದ್ದಾಗ ಮಾಜಿ ಪ್ರೇಯಸಿಗೆ ಕರೆ ಮಾಡಿ, ಈ ಕಾರಣದಿಂದ ಆಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿ ನೆರವು ನೀಡಬಹುದು. ಹಣದ ಕೊರತೆ ಅಥವಾ ತಡರಾತ್ರಿ ಬಾರ್ ನಲ್ಲಿ ವಾಲೆಟ್ ಕಳಕೊಳ್ಳುವುದು ಆಕೆಗೆ ಕರೆ ಮಾಡಲು ಸಕಾರಣ.
6. ರಾಜಿಗಾಗಿ ಕರೆಮಾಡಿ
ನೀವು ಮತ್ತೆ ಆಕೆಯೊಂದಿಗೆ ಇರಲು ಬಯಸುವುದಾದರೆ ಮತ್ತು ನಿಮ್ಮ ಸಂಬಂಧವನ್ನು ಪುನರಾರಂಭಿಸಲು ಮತ್ತೊಮ್ಮೆ ಪ್ರಯತ್ನಿಸಲು ಬಯಸುವುದಾದರೆ ಆಗ ನೇರವಾಗಿ ಹೇಳಿ ಮತ್ತು ರಾಜಿ ಮಾಡಿಕೊಳ್ಳಲು ಆಕೆಗೆ ಕರೆ ಮಾಡಿ. ಇದರಿಂದ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನೀವೊಮ್ಮೆ ಪ್ರಯತ್ನ ಪಡಬಹುದು.
7. ತಪ್ಪಾಗಿ ಕರೆ ಮಾಡಿರುವುದು
ಈ ಕಾರಣ ಆಕೆಗೆ ಕರೆ ಮಾಡಿದಾಗ ತಪ್ಪಾಗಿ ಕರೆ ಮಾಡಿರುವುದಾಗಿ ಹೇಳಿ. ಅದೇ ಹೆಸರಿನ ಅಥವಾ ಬೇರೆ ಯಾವುದೇ ರೀತಿಯಿಂದ ತಪ್ಪಾಗಿ ಕರೆ ಮಾಡಿರುವುದಾಗಿ ಹೇಳಿ ಮತ್ತು ಆಕೆಗೆ ಮನವರಿಕೆ ಮಾಡಿಕೊಡಿ. ಹೆಚ್ಚಿನ ಸಲ ಹೀಗೆ ಮಾಡಿದರೆ ಸಂಭಾಷಣೆ ನಡೆಯದು ಮತ್ತು ಇದು ತಪ್ಪು ಭಾವನೆ ಮೂಡಿಸಬಹುದು.



Click it and Unblock the Notifications
