Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಜವಾಬ್ದಾರಿಯ ಜಂಜಾಟದಲ್ಲಿ ಪ್ರೀತಿಪಾತ್ರರನ್ನು ಕಾಳಜಿ ಮಾಡೋದನ್ನೇ ಮರೆತಿದ್ದೀರಾ?
ಪ್ರೀತಿ ಹಾಗೂ ಜವಾಬ್ದಾರಿ. ಇವು ಎರಡು ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ. ಪ್ರೀತಿಸಿದವರಿಗಾಗಿ ಜವಾಬ್ದಾರಿಯನ್ನು ಬಿಟ್ಟು ಕೊಡೋದಕ್ಕೆ ಆಗೋದಿಲ್ಲ. ಅದೇ ರೀತಿ ಜವಾಬ್ದಾರಿಗಾಗಿ ಪ್ರೀತಿಯನ್ನು ಬಿಟ್ಟು ಕೊಡೋದಕ್ಕೆ ಸಾಧ್ಯವಿಲ್ಲ. ಎರಡನ್ನೂ ಸರಿದೂಗಿಸಿಕೊಂಡು ಹೋಗೋದು ತುಂಬಾನೇ ಮುಖ್ಯವಾಗುತ್ತದೆ.
ಜವಾಬ್ದಾರಿಗಳೇ ಬೆನ್ನು ಹತ್ತಿರೋ ಸಮಯದಲ್ಲಿ ಪ್ರೀತಿಸಿದವರ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ಸಲ ಜವಾಬ್ದಾರಿಯ ಜಂಜಾಟದಲ್ಲಿ ನಮಗೆ ಯಾವುದೂ ನೆನಪಾಗೋದೇ ಇಲ್ಲ. ಜವಾಬ್ದಾರಿ ಇರೋ ಸಂದರ್ಭದಲ್ಲೂ ಪ್ರೀತಿ ಪಾತ್ರರ ಕಾಳಜಿ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.

1. ಏನೇ ಕಷ್ಟ ಬಂದರೂ ಇಬ್ಬರೂ ಒಟ್ಟಾಗಿ ಎದುರಿಸಿ
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಅವರದ್ದೇ ಆದ ಜವಾಬ್ದಾರಿ ಇದ್ದೇ ಇರುತ್ತದೆ. ಹಾಗಂತ ಪ್ರೀತಿಸುವವರನ್ನು ಮರೆತು ಬದುಕೋದಕ್ಕೆ ಆಗೋದಿಲ್ಲ. ಜವಾಬ್ದಾರಿಗಳು ಬಂದಾಗ ಒಬ್ಬರೇ ನಿರ್ವಹಿಸುವ ಬದಲು ಇಬ್ಬರೂ ಕೂಡ ಒಟ್ಟಾಗಿ ಹೆಗಲು ಕೊಡಿ. ಆಗ ಕೊಂಚ ನಿರಾಳ ಅನಿಸುತ್ತದೆ. ಸಮಸ್ಯೆ ಅಥವಾ ಜಬಾಬ್ದಾರಿಗಳನ್ನು ಇಬ್ಬರೂ ಕೂತು ಮಾತನಾಡಿ ಬಗೆಹರಿಸಿಕೊಂಡರೆ ನಿಮ್ಮ ನಡುವಿನ ಬಾಂಧವ್ಯ, ಪ್ರೀತಿ ಕೂಡ ಹೆಚ್ಚಾಗುತ್ತದೆ.
2. ಕಟುವಾಗಿ ನಡೆದುಕೊಳ್ಳಬೇಡಿ
ಕೆಲವೊಂದು ಸಲ ಜವಾಬ್ದಾರಿಗಳು ನಮ್ಮ ಹೆಗಲ ಮೇಲೇರಿದಾಗ ನಾವು ಏನು ಮಾಡುತ್ತಿದ್ದೇವೆ ಅನ್ನೋ ಸಣ್ಣ ಅರಿವು ಕೂಡ ಇರೋದಿಲ್ಲ. ಮಾತು ಮಾತಿಗೂ ಸಂಗಾತಿ ಮೇಲೆ ಸಿಡುಕುತ್ತೇವೆ. ಅವರನ್ನು ಬೈಯುತ್ತೇವೆ, ಕೆಲವೊಂದು ಸಲ ಹೊಡೆದು ಬಿಡುತ್ತೇವೆ. ಒಂದು ವೇಳೆ ಆತುರದಲ್ಲಿ ನಿಮ್ಮಿಂದ ಇಂತಹ ತಪ್ಪಾಗಿದ್ದರೆ ಸಂಗಾತಿಯ ಬಳಿ ಕ್ಷಮೆ ಕೇಳೋದನ್ನು ಮರೀಬೇಡಿ. ನೀವು ಯಾವ ಪರಿಸ್ಥಿತಿಯಲ್ಲಿ ಈ ರೀತಿ ಮಾಡಿದ್ರಿ ಅನ್ನೋದನ್ನು ವಿವರಿಸಿ ಹೇಳಿ. ಜೊತೆಗೆ ಮುಂದೆಂದೂ ಅಂತಹ ತಪ್ಪಾಗದಂತೆ ನೋಡಿಕೊಳ್ಳೋದಾಗಿ ಹೇಳಿ.
3. ತಪ್ಪು-ಸರಿಗಳನ್ನು ಗುರುತಿಸಿ
ಈ ಜಗತ್ತಿನಲ್ಲಿ ತಪ್ಪು ಮಾಡದೇ ಇರೋ ವ್ಯಕ್ತಿ ಇರೋದಕ್ಕೆ ಸಾಧ್ಯವೇ ಇಲ್ಲ. ತಲೆಯಲ್ಲಿ ನೂರಾರು ಆಲೋಚನೆಗಳು ಇದ್ದಾಗ ನಾವು ಏನು ಮಾಡುತ್ತಿದ್ದೀವಿ ಅನ್ನೋದ್ರ ಅರಿವು ಕೂಡ ನಮಗೆ ಇರೋದಿಲ್ಲ. ಹೀಗಾಗಿ ನಿಮ್ಮ ಸಂಗಾತಿ ಸರಿ ಇದ್ದರೂ ಕೂಡ ಅವರು ತಪ್ಪು ಮಾಡುತ್ತಿದ್ದರೆ ಅಂತಾನೇ ನಿಮಗೆ ಅನ್ನಿಸುತ್ತೆ. ಈ ವಿಚಾರವಾಗಿ ನೀವು ಮನೆಯಲ್ಲಿ ಜಗಳ ಆಡುತ್ತೀರಿ. ಆಗ ನಿಮ್ಮಬ್ಬರ ಮಧ್ಯೆ ಪ್ರೀತಿ ಕಡಿಮೆ ಆಗುತ್ತದೆ. ಹೀಗಾಗಿ ಒಂದು ಕ್ಷಣ ಕೂತು ಆಲೋಚಿಸಿ ಸರಿ ಯಾವುದು? ತಪ್ಪು ಯಾವುದು? ಅನ್ನೋದನ್ನು ಗುರುತಿಸಿ.
4. ವ್ಯಾಯಾಮ, ಯೋಗ ಮಾಡಿ
ಮನುಷ್ಯನಿಗೆ ಜವಾಬ್ದಾರಿ ಹೆಚ್ಚಾದಾಗ ಮನಸ್ಸು ನಿಯಂತ್ರಣದಲ್ಲಿ ಇರೋದಿಲ್ಲ. ಜೀವನವೇ ಬೇಡ ಅನ್ನಿಸಬಹುದು. ಪ್ರೀತಿಸಿದವರನ್ನು ದೂರ ಮಾಡೋದಕ್ಕೆ ನಿರ್ಧರಿಸುತ್ತೇವೆ. ಹೀಗಾಗಿ ನಿಮ್ಮ ಮನಸ್ಸನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ನಿಮ್ಮನ್ನು ನೀವು ವ್ಯಾಯಾಮ, ಯೋಗ, ಧಾನ್ಯದಲ್ಲಿ ತೊಡಗಿಸಿಕೊಳ್ಳಿ. ನಿತ್ಯ ಈ ರೀತಿ ಅಭ್ಯಾಸ ಮಾಡಿದರೆ ನಿಮ್ಮ ಮನಸ್ಸು ನಿಮ್ಮ ನಿಯಂತ್ರಣಕ್ಕೆ ಬರುತ್ತದೆ.
5. ಸಂಗಾತಿಯ ಜೊತೆಗೆ ಸಂವಹನ ನಡೆಸಿ
ಕೆಲ ಗಂಡಸರು ತಮಗಾಗೋ ಕಷ್ಟ, ಹೆಗಲ ಮೇಲಿರುವ ಜವಾಬ್ದಾರಿಯ ಬಗ್ಗೆ ಸಂಗಾತಿಯ ಬಳಿ ಹಂಚಿಕೊಳ್ಳದೇ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಿರುತ್ತಾರೆ. ಇದರಿಂದ ಅವರಲ್ಲಿ ಒತ್ತಡ ಹೆಚ್ಚಾಗುತ್ತೆ. ಹಾಗೂ ತಮ್ಮ ಪ್ರೀತಿ ಪಾತ್ರರನ್ನು ಕಾಳಜಿಯಿಂದ ನೋಡಿಕೊಳ್ಳೋದಕ್ಕೂ ಆಗೋದಿಲ್ಲ. ಹೀಗಾಗಿ ನೀವು ಸಂಗಾತಿಯಲ್ಲಿ ಮುಕ್ತವಾಗಿ ಸಂವಹನ ನಡೆಸುವುದು ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಪರಿಸ್ಥಿಯನ್ನು ಖಂಡಿತ ಅವರು ಅರ್ಥ ಮಾಡಿಕೊಂಡು ನಿಮಗೆ ಹೆಗಲಾಗುತ್ತಾರೆ.
6. ಗಂಡ-ಹೆಂಡತಿ ಸಮನಾಗಿ ಖರ್ಚುಗಳನ್ನು ಹಂಚಿಕೊಳ್ಳಬೇಕು
ಮನುಷ್ಯನನ್ನು ಆರ್ಥಿಕ ಜವಾಬ್ದಾರಿಗಳೇ ಹೆಚ್ಚಾಗಿ ಕಾಡುವುದು. ಕೆಲವೊಂದು ಸಲ ಗಂಡ ಒಬ್ಬನಿಂದ ಮನೆಯನ್ನು ನಿಭಾಯಿಸೋದು ಕಷ್ಟ. ಆಗ ಹೆಂಡತಿ ಕೆಲಸಕ್ಕೆ ಹೋಗೋದ್ರ ಮುಖಾಂತರ ಗಂಡನ ಕಷ್ಟಕ್ಕೆ ಹೆಗಲಾಗಬಹುದು. ಒಂದು ವೇಳೆ ಹೆಂಡತಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಸಣ್ಣ-ಪುಟ್ಟ ಉದ್ಯಮಗಳನ್ನು ಮಾಡಬಹುದು. ಟೈಲರಿಂಗ್, ಹಪ್ಪಳ-ಸಂಡಿಗೆ, ಚಕ್ಕಲಿ ಮಾಡುವುದು ಇತ್ಯಾದಿ. ಈ ಮೂಲಕವೂ ಗಂಡನ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಾಯ ಮಾಡಬಹುದು.
ಸಂಗಾತಿಯ ಮೇಲೆ ನಮಗೆ ಅತಿಯಾದ ಪ್ರೀತಿ, ಕಾಳಜಿ ಇದ್ದರೂ ಕೂಡ ಜವಾಬ್ದಾರಿಗಳು ಎಲ್ಲವನ್ನೂ ದೂರಕ್ಕೆ ಸರಿಸಿ ಬಿಡುತ್ತೆ. ಖಂಡಿತ ಈ ಮೇಲಿನ ಸಂಗತಿಗಳು ನಿಮ್ಮ ಸಮಸ್ಯೆಗಳೆಲ್ಲಾ ಬಗೆ ಹರಿದು ದಂಪತಿಗಳ ಮಧ್ಯೆ ಪ್ರೀತಿ ಹೆಚ್ಚಾಗೋದಕ್ಕೆ ನೆರವಾಗುತ್ತದೆ.



Click it and Unblock the Notifications

