Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರಿಲೇಶನ್‌ಶಿಪ್‌ನಲ್ಲಿ ಇರೋರಿಗಿಂತ ಸಿಂಗಲ್ ಆಗಿರೋರು ಖುಷಿಯಾಗಿರೋದ್ಯಾಕೆ?
ಇತ್ತೀಚಿನ ಕಾಲದಲ್ಲಿ ಹೆಚ್ಚಿನ ಜನ ರಿಲೇಶನ್‌ಶಿಪ್‌ನಲ್ಲಿ ಇರ್ತಾರೆ. ಇನ್ನೂ ಕೆಲವರು ನಮಗ್ಯಾರು ಸಿಕ್ಕಿಲ್ವಲ್ಲಪ್ಪಾ ಅಂತ ನೊಂದುಕೊಳ್ಳುತ್ತಾರೆ. ಅದ್ರಲ್ಲಂತೂ ಕೆಲವು ಹುಡುಗರಿಗಂತೂ ಹುಡುಗಿರ ಬಳಿ ಮಾತನಾಡೋದಕ್ಕೆ ಒಂದು ರೀತಿ ಭಯ. ಹೀಗಾಗಿ ಅವರು ಸಿಂಗಲ್ ಆಗಿಯೇ ಉಳಿಯುತ್ತಾನೆ.
ಹೌದು, ಕೆಲ ಹುಡುಗ-ಹುಡುಗಿಯರಿಗೆ ರಿಲೇಶನ್‌ಶಿಪ್ ಅಂದ್ರೇನೇ ಆಗೋದಿಲ್ಲ. ಅಂಥವರು ಸಿಂಗಲ್ ಆಗಿ ಬದುಕೋದಕ್ಕೆ ಇಷ್ಟ ಪಡುತ್ತಾರೆ. ಹಾಗಾದ್ರೆ ಸಿಂಗಲ್ ಆಗಿ ಇರೋರು ನೊಂದುಕೊಳ್ತಿದ್ದೀರಾ? ಸಿಂಗಲ್ ಆಗಿ ಇದ್ದೀನಿ ಅನ್ನೋ ಕಾರಣಕ್ಕೆ ಬೇಸರ ಪಟ್ಟುಕೊಳ್ಳೋದೇ ಬೇಡ. ಯಾಕಂದ್ರೆ ಪಾರ್ಟರ್ ಇಲ್ಲದೇ ಸಿಂಗಲ್ ಆಗಿದ್ರೆ ಏನೆಲ್ಲಾ ಪ್ರಯೋಜನಗಳಿದೆ ಅನ್ನೋದನ್ನ ಹೇಳ್ತೀವಿ.

1. ಸ್ವತಂತ್ರವಾಗಿರಬಹುದು
ನಿಮಗೆ ಪಾರ್ಟರ್ ಇಲ್ಲದೇ ನೀವು ಸಿಂಗಲ್ ಆಗಿದ್ರೆ ತುಂಬಾನೇ ಒಳ್ಳೆಯದು. ಯಾಕಂದ್ರೆ ನೀವು ಸ್ವತಂತ್ರವಾಗಿರುತ್ತೀರಿ. ನಿಮ್ಮ ಯಾವುದೇ ನಿರ್ಧಾರಗಳನ್ನು ಪ್ರಶ್ನಿಸುವವರು ಇರೋದಿಲ್ಲ. ಅಥವಾ ಯಾರ ಮಾತನ್ನು ಕೇಳುವ ಅವಶ್ಯಕತೆನೂ ಇರೋದಿಲ್ಲ. ಸ್ವತಂತ್ರವಾಗಿರಬಹುದು.
2. ಬೇಕಾದಾಗ ಪಾರ್ಟಿ ಮಾಡಬಹುದು
ನೀವು ರಿಲೇಶನ್‌ಶಿಪ್‌ನಲ್ಲಿದ್ದರೆ ಖಂಡಿತ ಕುಡಿಯೋದಕ್ಕೆ, ಪಾರ್ಟಿ ಮಾಡೋದಕ್ಕೆ ಎಲ್ಲದಕ್ಕೂ ನಿಮ್ಮ ಸಂಗಾತಿ ನಿರ್ಬಂಧ ಹೇರುತ್ತಾರೆ. ಆದ್ರೆ ಸಿಂಗಲ್ ಆಗಿದ್ದಾಗ ನಿಮ್ಮನ್ನು ಕೇಳೋರು ಯಾರು ಇರೋದಿಲ್ಲ. ಬೇಕಾದಾಗ ನಿಮ್ಮ ಸ್ನೇಹಿತರ ಜೊತೆಗೆ ಹೊರಗಡೆ ಹೋಗಿ ಪಾರ್ಟಿ ಮಾಡಬಹುದು.
3. ಜಗಳ, ಮನಸ್ಥಾಪ ಇರೋದಿಲ್ಲ
ರಿಲೇಶನ್‌ಶಿಪ್‌ನಲ್ಲಿರೋ ಜೋಡಿಗಳನ್ನು ನಾವು ನೋಡಿರ್ತೀವಿ. ದಿನಾ ಬೆಳಗಾದ್ರೆ ಸಾಕು ಜಗಳ, ಮನಸ್ಥಾಪ. ಒಂದಲ್ಲ ಒಂದು ವಿಚಾರಕ್ಕೆ ಒಬ್ಬರ ಮೇಲೊಬ್ಬರು ಸಿಟ್ಟು ಮಾಡಿಕೊಳ್ಳೋದು, ಜಗಳ ಆಡೋದು ಸಾಮಾನ್ಯವಾಗಿ ಇದ್ದೇ ಇರುತ್ತೆ. ಕೆಲವೊದು ಸಲ ಈ ಜಗಳಗಳು ಮಿತಿ ಮೀರಿ ಮನಶಾಂತಿಯೇ ಇಲ್ಲದಂತಾಗುತ್ತದೆ. ಸಿಂಗಲ್ ಆಗಿದ್ರೆ ಇದ್ಯಾವ ತಲೆ ನೋವು ಕೂಡ ಇರೋದಿಲ್ಲ.
4. ಬಟ್ಟೆ ಹಾಕಿಕೊಳ್ಳುವ ವಿಚಾರದಲ್ಲಿ ನಿರ್ಬಂಧವಿರೋದಿಲ್ಲ
ನೀವು ರಿಲೇಶನ್‌ಶಿಪ್‌ನಲ್ಲಿ ಇದ್ದಾಗ ಖಂಡಿತ ನಿಮ್ಮ ಸಂಗಾತಿ ಇಂತಹದ್ದೇ ಬಟ್ಟೆ ತೊಡಬೇಕೆಂದು ನಿರ್ಬಂಧವನ್ನು ಹೇರುತ್ತಾರೆ. ನಿಮಗಿಷ್ಟದ ಬಟ್ಟೆಗಳನ್ನು ಹಾಕೋದಕ್ಕೆ ಅವರು ಸಮ್ಮತಿ ಸೂಚಿಸೋದಿಲ್ಲ. ಕೆಲವೊಂದು ಸಲ ಇದರಿಂದ ನಿಮಗೆ ಬೇಜಾರಾಗಿದ್ದು ಇದೆ. ಆದರೆ ಸಿಂಗಲ್ ಆಗಿದ್ರೆ ಈ ಸಮಸ್ಯೆನೇ ಇಲ್ಲ. ನಿಮ್ಮ ಬಟ್ಟೆ ನಿಮ್ಮ ಆಯ್ಕೆಯಾಗಿರುತ್ತದೆ.
5. ನಿಮ್ಮ ಸಮಯವನ್ನು ನೀವಂದುಕೊಂಡಂತೆ ಕಳೆಯಬಹುದು
ಸಿಂಗಲ್ ಆಗಿದ್ರೆ ನಿಮಗೆ ಲಭ್ಯವಾಗಿರೋ ಪೂರ್ತಿ ಸಮಯಕ್ಕೆ ನೀವೆ ಬಾಸ್. ಆ ಸಮಯದಲ್ಲಿ ನಿಮಗಿಷ್ಟ ಬಂದ ಚಟುವಟಿಕೆಗಳನ್ನು ನೀವು ಮಾಡಬಹುದು. ನಿರ್ಬಂಧಿಸುವವರು ಇರೋದಿಲ್ಲ. ನಿಮಗಾಗಿ ಬೇಕಾದ ಸಮಯವನ್ನು ನೀವು ಕಳೆಯಬಹುದು. ರಿಲೇಶನ್‌ಶಿಪ್‌ನಲ್ಲಿದ್ದರೆ ನೀವು ಮಾಡೋ ಪ್ರತಿಯೊಂದು ಕೆಲಸಕ್ಕೂ ನಿಮ್ಮ ಸಂಗಾತಿಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
6. ನೀವು ಯಾರ ಮೇಲೆಯೂ ನಿರೀಕ್ಷೆ ಇಟ್ಟುಕೊಳ್ಳಬೇಕಾಗಿಲ್ಲ
ರಿಲೇಶನ್‌ಶಿಪ್‌ನಲ್ಲಿ ಇದ್ದಾಗ ನಿಮ್ಮ ಮೇಲೆ ನಿಮ್ಮ ಸಂಗಾತಿ ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ ಅದನ್ನು ನೀವು ಪೂರೈಸಲೇಬೇಕಾಗುತ್ತದೆ. ಅಥವಾ ನಿಮ್ಮ ಸಂಗಾತಿ ಮೇಲೆ ನೀವು ಕೆಲವೊಂದು ನಿರೀಕ್ಷೆ ಇಟ್ಟುಕೊಂಡಿರುತ್ತೀರಿ. ಆಗ ಅವರು ಅದನ್ನು ಪೂರೈಸದಿದ್ದರೆ ನಿಮಗೆ ನೋವು, ಹತಾಶೆ, ದುಃಖ ಉಂಟಾಗುತ್ತದೆ. ಒಂದು ವೇಳೆ ನೀವು ಸಿಂಗಲ್ ಆಗಿದ್ರೆ ನೀವು ಬೇರೆಯವರ ಮೇಲೆ ನಿರೀಕ್ಷೆ ಇಡಬೇಕಾಗಿಲ್ಲ, ಬೇರೆಯವರು ನಿಮ್ಮ ಮೇಲೆ ನಿರೀಕ್ಷೆ ಇಡುವ ಅವಶ್ಯಕತೆ ಇರೋದಿಲ್ಲ.
7. ನಿಮ್ಮ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬಹುದು
ನೀವು ಒಂಟಿಯಾಗಿದ್ದಾಗ ನಿಮ್ಮ ಬಗ್ಗೆ ನೀವು ಹೆಚ್ಚಾಗಿ ಅರ್ಥ ಮಾಡಿಕೊಳ್ಳಬಹುದು. ನೀವೇನಾದರೂ ತಪ್ಪು ಕೆಲಸಗಳನ್ನು ಮಾಡಿದ್ರೆ ಅಂತಹ ತಪ್ಪನ್ನು ಯಾಕೆ ಮಾಡಿದೆ? ಮುಂದೆ ಆ ತಪ್ಪನ್ನು ಮಾಡದಿರಲು ಏನು ಮಾಡಬೇಕು ಅನ್ನೋದನ್ನು ಅರಿತುಕೊಳ್ಳಬಹುದು. ನಿಮ್ಮ ಬಗ್ಗೆ ಆಳವಾಗಿ ಆಲೋಚನೆ ಮಾಡಲು ಸಮಯಾವಕಾಶ ದೊರೆಯುತ್ತದೆ. ರಿಲೇಶನ್‌ಶಿಪ್‌ನಲ್ಲಿದ್ದಾಗ ನಿಮ್ಮವರ ಬಗ್ಗೆ ಯೋಚಿಸೋದ್ರಲ್ಲೇ ಸಮಯ ಕಳೆದು ಹೋಗುತ್ತದೆ.
8. ಟ್ರಿಪ್‌ಗೆ ಹೋಗಬಹುದು
ತುಂಬಾ ಜನ ಒಂಟಿಯಾಗಿ ಪ್ರಯಾಣ ಮಾಡೋದಕ್ಕೆ ಇಷ್ಟಪಡುತ್ತಾರೆ. ಈ ರೀತಿ ಒಂಟಿಯಾಗಿ ಪ್ರಯಾಣ ಮಾಡಿದಾಗ ಮನಸ್ಸಿಗೆ ಏನೋ ಒಂಥರ ಹಾಯ್ ಅನ್ನಿಸುತ್ತದೆ. ನೆಮ್ಮದಿ ದೊರೆಯುತ್ತದೆ. ನೀವು ರಿಲೇಶನ್‌ಶಿಪ್‌ನಲ್ಲಿ ಇದ್ದರೆ ಈ ರೀತಿ ಒಬ್ಬರೆ ಟ್ರಿಪ್ ಹೋಗೋದಕ್ಕೆ ಸಾಧ್ಯವಿಲ್ಲ. ಸಿಂಗಲ್ ಆಗಿದ್ದಾಗ ಮಾತ್ರ ಸೊಲೋ ಟ್ರಿಪ್ ಮಾಡಬಹುದು.
9. ನಿಮ್ಮ ಹಣದ ಮೇಲಿನ ಸಂಪೂರ್ಣ ಅಧಿಕಾರ ನಿಮ್ಮಲಿರುತ್ತದೆ
ನಾವು ದುಡಿದ ಹಣ ಮೇಲೆ ನಮ್ಮ ಪೋಷಕರು ಅಧಿಕಾರ ಚಲಾಯಿಸೋದಿಲ್ಲ. ಆದರೆ ಕೆಲವೊಂದು ಸಲ ನಮ್ಮ ಪ್ರಿಯತಮ ಅಥವಾ ಪ್ರೇಯಸ್ಸಿ ನಿಮ್ಮ ದುಡ್ಡಿಗೆ ಲೆಕ್ಕ ಕೇಳುತ್ತಾರೆ. ಬಂದ ಸಂಭಳವನ್ನೆಲ್ಲಾ ಏನು ಮಾಡಿದೆ? ಎಷ್ಟು ಖರ್ಚಾಯ್ತು ಅನ್ನೋ ಸಾವಿರಾರು ಪ್ರಶ್ನೆಗಳಿಗೆ ಉತ್ತರಿಸಲು ನೀವು ಸಿದ್ಧರಾಗಿರಬೇಕು. ಆದರೆ ಸಿಂಗಲ್ ಆಗಿದ್ದಾಗ ಈ ತಲೆ ನೋವು ಇರಲ್ಲ ನಿಮ್ಮ ಹಣದ ಮೇಲೆ ನಿಮಗೆ ಸಂಪೂರ್ಣ ಅಧಿಕಾರ ಇರುತ್ತದೆ. ಈ ಬಗ್ಗೆ ಯಾರೂ ನಿಮ್ಮನ್ನು ಪ್ರಶ್ನೆ ಮಾಡೋದಿಲ್ಲ.
ಸಿಂಗಲ್ ಆಗಿದ್ರೆ ಈ ವಿಚಾರಗಳಲ್ಲಿ ನಾವು ಸ್ವತಂತ್ರರಾಗಿರಬಹುದು. ಆದರೆ ಅತಿಯಾದ ಸ್ವತಂತ್ರವು ಒಳ್ಳೆಯದಲ್ಲ ಇದು ನಮ್ಮ ಭವಿಷ್ಯಕ್ಕೆ ಅಪಾಯ ತಂದೊಡ್ಡಬಹುದು. ನಮ್ಮನ್ನು ಕೇಳುವವರು ಅಂತ ಇದ್ದಾಗ ಕೊಂಚ ಯೋಚನೆ ಮಾಡಿ ಹೆಜ್ಜೆ ಇಡುತ್ತೇವೆ.



Click it and Unblock the Notifications



