Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ಕಾಮಿಡಿ ಸ್ಟಾರ್ ಪ್ರಿಯಾಂಕರ ಭಾವಿ ಪತಿ ಈ ಕಾರಣಕ್ಕೆ ಪ್ರತಿಯೊಬ್ಬ ಪ್ರೇಮಿಗಳಿಗೂ ಆದರ್ಶ
ಕನ್ನಡ ಕಿರುತೆರೆ ಪ್ರಪಂಚಕ್ಕೆ ಪ್ರಿಯಾಂಕ ಕಾಮತ್ ಮುಖ ತುಂಬಾನೇ ಚಿರಪರಿಚಿತ, ಕಾಮಿಡಿ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಇವರು ಆಗಾಗ ರೀಲ್ಸ್ ಮೂಲಕ ಕೂಡ ಗಮನ ಸೆಳೆಯುತ್ತಿರುತ್ತಾರೆ. ಅಮಿತ್ ಎಂಬ ಯುವಕನ ಜೊತೆ ಎಂಗೇಜ್‌ಮೆಂಟ್ ಕೂಡ ಆಗಿದೆ, ಆದರೆ ಇವರಿಬ್ಬರ ಪ್ರೀತಿಯಿದೆಯಲ್ಲ ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಅವರು ಒಂದು ಕಡೆ ಬರೆಯುತ್ತಾರೆ ನಾನು ಗೋಲ್ಡ್‌ನ ಹುಡುಕಾಟದಲ್ಲಿದ್ದೆ, ಆದರೆ ನನಗೆ ಡೈಮೆಂಡ್ ಸಿಕ್ಕಿದೆ... ಜೋಡಿಯೆಂದರೆ ಹೀಗಿರಬೇಕು ಎನ್ನುವಂತಿದೆ ಈ ಜೋಡಿ, ಇವರ ಬಾಂಧವ್ಯ ಎಷ್ಟು ಗಟ್ಟಿ ಎಂಬುವುದಕ್ಕೆ ಇವರ ಜೀವನದಲ್ಲಿ ನಡೆದ ಕರಾಳ ಘಟನೆಗಳೇ ಸಾಕ್ಷಿ....

ಬದುಕಿಗೆ ಕತ್ತಲೆ ಅಪ್ಪಳಿಸಿದಾಗ
ಪ್ರಿಯಾಂಕ ಕಾಮತ್ ಬದುಕಿನಲ್ಲಿ ಎಲ್ಲವೂ ಚೆನ್ನಾಗೊತ್ತು, ವೃತ್ತಿ ಬದುಕಿನಲ್ಲಿ ಗುರುತಿಸಿಕೊಂಡಿದ್ದರು, ಬಾಳ ಸಂಗಾತಿಯಾಗಿ ಅಮಿತ್ ಲೈಫ್‌ಗೆ ಎಂಟ್ರಿ ಕೊಟ್ಟಿದ್ದರು, ಆವಾಗ ಅವರ ಬದುಕಿನಲ್ಲಿ ಆರೋಗ್ಯ ಸಮಸ್ಯೆ ವಿಲನ್ ಆಗಿ ಎಂಟ್ರಿಕೊಟ್ಟಿತ್ತು, ತಮ್ಮ ಬದುಕಿನಲ್ಲಿ ನಡೆದ ಆ ಘಟನೆಯ ಕುರಿತು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.
ಅವರೇ ಬರೆದಿರುವಂತೆ ಹೇಳುವುದಾದರೆ 'ಎಲ್ಲವೂ ನನ್ನ ಬದುಕಿನಲ್ಲಿ ಚೆನ್ನಾಗಿತ್ತು. ವೃತ್ತಿ ಹಾಗೂ ವೈಯಕ್ತಿಕ ಬದುಕು ಅದ್ಭುತವಾಗಿತ್ತು, ಆದರೆ ನನ್ನೆಲ್ಲಾ ಆಸೆ, ಭರವಸೆ ಕಸಿದುಕೊಳ್ಳುವಂತೆ ಆ ಒಂದು ಕಾಯಿಲೆ ಬಂತು, ನನಗೆ ಡಿಸ್ಕ್ ಬಲ್ಜ್ ಸಮಸ್ಯೆ ಇರುವುದು ಪತ್ತೆಯಾಯಿತು. ಆವಾಗ ಸರ್ಜರಿ ಮಾಡುವಂತೆ ವೈದ್ಯರು (micro discectomy)ಸೂಚಿಸಿದರು. ನನ್ನ ಕುಟುಂಬ ಹಾಗೂ ನನ್ನ ಭಾವಿ ಪತಿ ಮುಂದೆ ನನ್ನ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದೆ, ಆದರೆ ತಂದೆ ಎದುರಿಗೆ ಬಂದಾಗ ಸಹಿಸಲು ಸಾಧ್ಯವಾಗಿಲ್ಲ, ಜೋರಾಗಿ ಅತ್ತು ಬಿಟ್ಟೆ, ನನ್ನ ಬದುಕು ಎತ್ತ ಸಾಗುತ್ತಿದೆ ಎಂದು ಒಂದೂ ನನಗೆ ಗೊತ್ತಾಗಲಿಲ್ಲ, ನನ್ನ ನಿಶ್ಚಿತಾರ್ಥದ ದಿನ ಕೂಡ ಗೊತ್ತಾಗಿತ್ತು. ಆದರೆ ಈ ಸಮಸ್ಯೆಯಿಂದಾಗಿ ನನ್ನ ವೈಯಕ್ತಿಕ ಬದುಕು, ನನ್ನ ವೃತ್ತಿ ಬದುಕು ಏನಾಗುತ್ತದೆ ಎಂದು ಒಂದೂ ಗೊತ್ತಾಗಲಿಲ್ಲ, ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ನೋವು ಅನುಭವಿಸಿದೆ, ಆದರೆ ನನ್ನ ಬೆಂಬಲಕ್ಕೆ ನನ್ನ ಮನೆಯವರು ಹಾಗೂ ಭಾವಿ ಪತಿ ನಿಂತರು, ನನಗೆ ಧೈರ್ಯ ತುಂಬಿದರು.
ಬಿಟ್ಟು ಹೋಗಿ ಅಂದರೂ ಹೋಗಲಿಲ್ಲ ಅಮಿತ್...
ಮೊದಲ ಸರ್ಜರಿ ಬಳಿಕ ಎಲ್ಲವೂ ಸರಿಯಾಗುತ್ತೆ ಅಂತ ಅಂದ್ಕೊಂಡಿದ್ದೆ, ಆದರೆ ಮತ್ತೆ ನನಗೆ ಕಾಲುಗಳಲ್ಲಿ ನೋವು ಪ್ರಾರಂಭವಾಯಿತು, ನೋವು ಸಹಿಸಲು ಸಾಧ್ಯವಾಗದೆ ಜೋರಾಗಿ ಕಿರುಚುತ್ತಿದ್ದೆ (ಸಾಮಾನ್ಯವಾಗಿ ಅಳುವಳು ನಾನಲ್ಲ) ಹೆವಿ ಡೋಸ್ ಔಷಧಗಳು, ನೋವು ನಿವಾರಕಗಳನ್ನು ನುಂಗುತ್ತಿದ್ದೆ, ನನ್ನ ನೋವು ವೈದ್ಯರಿಗೆ ಅರ್ಥವಾಗಲಿಲ್ಲ, ಆದರೆ ನನ್ನ ತಾಯಿಗೆ ಅರ್ಥವಾಯಿತು, ನಂತರ ಡಾ. ವಿದ್ಯಾಧರನ್‌ನ ಭೇಟಿಯಾದೆವು, ಡಿಸ್ಕ್‌ನಲ್ಲಿ ಇನ್‌ಫೆಕ್ಷನ್ ಆಗಿದೆ ಕೂಡಲೇ ಸರ್ಜರಿ ಮಾಡಬೇಕು ಎಂದರು, ಡಿಸ್ಕ್ ತೆಗೆದು ಸ್ಕ್ರೂ, ರಾಡ್‌ಗಳನ್ನು ಹಾಕಲಾಯಿತು, ನನ್ನ ತಾಯಿ , ಅಮಿತ್ ನನ್ನ ಜೊತೆಗೆ ನಿಂತು ಧೈರ್ಯ ತುಂಬಿದರು.
ಈ ಸಮಯದಲ್ಲಿ ನನ್ನ ಜೊತೆಯಾಗಿ ನಿಂತು ಅಮಿತ್ ಧೈರ್ಯ ತುಂಬಿದರು, ನಾನು ಅಮಿತ್ ಬಳಿ ನನ್ನ ಬಿಟ್ಟು ಬೇರೆ ಮದುವೆಯಾಗಿ ಎಂದು ಕೂಡ ಹೇಳಿದ್ದೆ, ಅವರು ನನಗೆ ಇದುವರೆ ಐ ಲವ್ ಯೂ ಅಂತ ಹೇಳಲಿಲ್ಲ ಆದರೆ ಅವರ ಪ್ರೀತಿ ನನ್ನನ್ನು ನೋಡಿಕೊಳ್ಳುವ ರೀತಿಯಲ್ಲಿ ಕಾಣುತ್ತಿತ್ತು. ಬೆಡ್‌ನಲ್ಲಿಯೇ ಮಲಗಿದ್ದ ನನ್ನ ಸಂಪೂರ್ಣ ಆರೈಕೆ ಮಾಡಿದ್ದಾರೆ, ಇಂದು ನಾನು ಬದುಕಿನಲ್ಲಿ ಮರಳಿ ಬಂದಿದ್ದೇನೆ ಎಂದರೆ ಅದಕ್ಕೆ ನನ್ನ ಮನೆಯವರು ಹಾಗೂ ಅಮಿತ್ ಕಾರಣ ಎಂದು ಹೇಳುತ್ತಾರೆ. ಆ ಕ್ಷಣದಲ್ಲಿ ಪ್ರಿಯಾಂಕ ಮತ್ತೆ ಮೊದಲಿನಂತಾಗುತ್ತಾರೆ ಎಂಬ ಯಾವ ಭರವಸೆಯೂ ಇರಲಿಲ್ಲ, ಆದರೆ ಇವಳನ್ನು ನಾನೆಂದಿಗೂ, ಯಾವ ಕಾರಣಕ್ಕೂ ಬಿಟ್ಟು ಹೋಗಲ್ಲ ಎಂದು ಮನಸ್ಸು ಮಾಡಿದ ಅಮಿತ್ ಅವರ ಪ್ರತಿಯೊಂದು ನೋವಿನಲ್ಲಿ ಜೊತೆಯಾಗಿ ನಿಂತು ಪ್ರಿಯಾಂಕ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಅಮಿತ್ ಆಸ್ಪತ್ರೆ ಬೆಡ್‌ನಲ್ಲಿರುವ ಪ್ರಿಯಾಂಕರ ಪಾದಗಳನ್ನು ಮುಟ್ಟುತ್ತಾ ಆರೈಕೆ ಮಾಡುವ ರೀತಿ ಮನಮುಟ್ಟುವಂತಿದೆ.
ತಮ್ಮ ಹುಟ್ಟುಹಬ್ಬದ ವೀಡಿಯೋ ಶೇರ್ ಮಾಡಿ ನಮ್ಮಿಬ್ಬರ ಕರಾಳ ದಿನಗಳು ಮುಗಿದಿದೆ, ಈಗ ಸಂತೋಷ ಕ್ಷಣಗಳಿವು ಎಂದು ಬರೆದುಕೊಂಡಿದ್ದಾರೆ.
ಪ್ರೀತಿಯೆಂದರೆ ಬರೀ ಆಕರ್ಷಣೆಯಲ್ಲ, ನಾವು ಇಷ್ಟಪಟ್ಟವರೂ ಎಂಥದ್ದೇ ಸ್ಥಿತಿಯಲ್ಲಿ ಇರಲಿ ಅವರ ಜೊತೆ ನಿಲ್ಲಬೇಕು ಅದುವೇ ನಿಜವಾದ ಪ್ರೀತಿ, ಈ ನಿಟ್ಟಿನಲ್ಲಿ ಅಮಿತ್ ಜೆಮ್ ಆಫ್ ದಿ ಪರ್ಸನ್ ಎಂದರೆ ತಪ್ಪಾಗಲಾರದು... ಈ ಜೋಡಿ ಇನ್ನುಂದೆಯಾದರೂ ಯಾವುದೇ ಕಷ್ಟ ಅನುಭವಿಸದೆ ಖುಷಿ-ಖುಷಿಯಾಗಿರಲಿ ಎಂದು ಪ್ರಿಯಾಂಕ ಕಾಮತ್ ಫ್ಯಾನ್ಸ್, ಹಿತೈಷಿಗಳು ಹಾರೈಸುತ್ತಿದ್ದಾರೆ.
ಪ್ರೀತಿ ಅಂದರೆ ಹೀಗಿರಬೇಕು ಎಂಬುವುದಕ್ಕೆ ರೋಲ್ ಮಾಡೆಲ್ ಆಗಿದ್ದಾರೆ ಈ ಜೋಡಿ....



Click it and Unblock the Notifications