Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಿನ ಸ್ಥಾನಪಲ್ಲಟ ನಿಮ್ಮ ಸಂಬಂಧದಲ್ಲಿ ಬದಲಾವಣೆಗೆ ಕಾರಣವಾಗುತ್ತೆ..! ಯಾರಿಗೆಲ್ಲಾ ಗೊತ್ತಾ?
ನವೆಂಬರ್‌ನಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಪಲ್ಲಟ ಆಗುವುದರಿಂದ ಹಲವು ರಾಶಿಗಳಲ್ಲಿ ಹತ್ತಾರು ರೀತಿಯ ಪರಿಣಾಮ ಬೀರುವುದನ್ನು ನೋಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಗ್ರಹವು ನವೆಂಬರ್ 28 ರಂದು ಮಧ್ಯಾಹ್ನ 1:10 ಕ್ಕೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಿದೆ. ಸೂರ್ಯ ವೃಶ್ಚಿಕ ರಾಶಿಗೆ ಚಲಿಸುತ್ತಿದ್ದಾನೆ. ಇದು ಎಲ್ಲಾ ಗ್ರಹಗಳ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗೆ ಗುರುವಿನ ಸ್ಥಾನಪಲ್ಲಟವು ಯಾವೆಲ್ಲಾ ರಾಶಿಯ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಗುರು ಸಂಚಾರವು ಹಲವು ರಾಶಿಯವರಲ್ಲಿನ ಸಂಬಂಧಗಳ ನಡುವೆ ಹಲವು ರೀತಿಯ ಪರಿಣಾಮಕ್ಕೆ ಕಾರಣವಾಗಲಿದೆ. ಹಾಗಾದ್ರೆ ಯಾವ ರಾಶಿಯವರಲ್ಲಿ ಸಂಬಂಧಗಳ ಹಾಳಾಗಲು ಇದು ಕಾರಣವಾಗಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಗುರು ಪಲ್ಲಟದಿಂದಾಗಿ ಯಾವೆಲ್ಲಾ ರಾಶಿಯ ಮಂದಿ ತಮ್ಮ ಸಂಬಂಧದಲ್ಲಿ ಏರುಪೇರು ನೋಡಹುದು ಎಂಬುದನ್ನು ತಿಳಿದುಕೊಳ್ಳಿ.

ಕರ್ಕಾಟಕ
ಗುರು ಸಂಚಾರವು ಕರ್ಕಾಟಕ ರಾಶಿಯವರ ಸಂಬಂಧದಲ್ಲಿ ಏರುಪೇರಿಗೆ ಕಾರಣವಾಗಲಿದೆ. ನಿಮ್ಮ ವೈಯಕ್ತಿಕ ಜೀವನದ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಇದು ವಿಶೇಷವಾಗಿ ನಿಮ್ಮ ಕುಟುಂಬಸ್ಥರೊಂದಿಗೆ ಅನ್ಯೋನ್ಯತೆ ಹಾಳಾಗಲು ಕಾರಣವಾಗಬಹುದು. ನಿಮ್ಮ ಪ್ರಣಯ ಜೀವನದಲ್ಲಿ ಇದು ಕೆಟ್ಟದಾಗಿ ಪರಿಣಾಮಕ್ಕೆ ಕಾರಣವಾಗಲಿದೆ. ನಿಮ್ಮ ದಾಂಪತ್ಯ ಸಂಬಂಧದಲ್ಲಿ ಯಾವುದಾದರು ಸಮಸ್ಯೆ ಇದ್ದರೆ ಅದು ಬಗೆಹರಿಯುವ ಬದಲು ಮತ್ತಷ್ಟು ಜಠಿಲ ಸಮಸ್ಯೆಯಾಗಿ ಕಾಡಬಹುದು. ಕೆಲವು ಪ್ರಶ್ನೆಗಳು ನಿಮ್ಮ ಸಂಬಂಧದಲ್ಲಿ ಉದ್ಭವಿಸಬಹುದು. ನೀವು ಪ್ರೇಮ ಸಂಬಂಧದಲ್ಲಿದ್ದರೂ ವೈಮನಸ್ಸು, ಜಗಳ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕನ್ಯಾ ರಾಶಿ
ನವೆಂಬರ್ 22 ರಂದು ಮಕರ ಸಂಕ್ರಾಂತಿಯಲ್ಲಿ ಶುಕ್ರನು ಮೀನ ರಾಶಿಗೆ ಚಲಿಸುತ್ತಾನೆ. ಆದ್ರೆ ಗುರು ಸಂಚಾರದ ಪರಿಣಾಮದಿಂದಾಗಿ ಕನ್ಯಾರಾಶಿಯ ಜನರಲ್ಲಿ ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಸುತ್ತಲಿನ ಸಂಬಂಧಗಳಲ್ಲಿ ವೈಮನಸ್ಸು ಮೂಡಬಹುದು. ಆದ್ರೆ ಕೆಲವರಿಂದ ನಿಮ್ಮ ಸಂಬಂಧದಲ್ಲಿ ಲಾಭವಾಗುವ ನಿರೀಕ್ಷೆಯೂ ಇದೆ. ಪ್ರೀತಿ ಪಾತ್ರರಲ್ಲಿ ನಿಮ್ಮ ಮಾತುಕತೆ ಸೌಮ್ಯವಾಗಿರಲಿ. ಏಕೆಂದರೆ ನಿಮ್ಮ ಸಂಬಂಧಗಳು ಹಾಳಾಗಲು ನಿಮ್ಮ ಮಾತುಗಳು ಕಾರಣವಾಗಬಹುದು. ಹೀಗಾಗಿ ಎಚ್ಚರಿಕೆಯ ಮಾತುಗಳನ್ನಾಡುವುದು ಮುಖ್ಯ.
ಕುಂಭ ರಾಶಿ
ಸಂಬಂಧಗಳ ಜೊತೆಯಲ್ಲಿ ನಿಮ್ಮ ಯೋಚನೆಗಳು ದೃಢವಾಗಿರುವುದಿಲ್ಲ. ನಿಮ್ಮ ದಾಂಪತ್ಯದಲ್ಲಿ ಒಂದಿಷ್ಟು ಸಮಸ್ಯೆ ಕಾಡಬಹುದು. ಹೃದಯ ಸಂಬಂಧಿ ಸಮಸ್ಯೆ ಹೆಚ್ಚಬಹುದು. ತರ್ಕವಿಲ್ಲದೆ ಸಂಬಂಧದಲ್ಲಿ ವಾದ ಮಾಡುವ ಸಂದರ್ಭ ಎದುರಾಗಬಹುದು. ನಿಮ್ಮ ಭಾವನೆಗಳಿಗೆ ಪ್ರೀತಿ ಪಾತ್ರರಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಹುದು. ಸತಿ ಪತಿಯಲ್ಲಿ ಹೊಂದಾಣಿಕೆ ದೂರಾಗಬಹುದು. ಇಬ್ಬರ ನಡುವಿನ ಒಂದಿಷ್ಟು ಪ್ರಶ್ನೆಗಳು ಬಗೆಹರಿಯದೆ ಹಾಗೆಯೇ ಉಳಿಯಲಿವೆ. ಇದು ವೈಮನಸ್ಸಿಗೆ ಕಾರಣವಾಗಲಿದೆ. ಹೀಗಾಗಿ ಮನೆಯಲ್ಲಿ ನೀವು ತಿಳಿದು ಮತ್ತೊಮ್ಮೆ ಯೋಚಿಸಿ ಮಾತನಾಡುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯವರಲ್ಲಿ ಈ ಸಮಯ ಅಷ್ಟೊಂದು ಒಳ್ಳೆಯ ದಿನಗಳ ಎದುರು ನೋಡುವುದಿಲ್ಲ. ದಾಂಪತ್ಯದಲ್ಲಿ ಒಂದಿಷ್ಟು ಕಲಹಗಳು, ವೈಮನಸ್ಸು ಉಂಟಾಗುವ ಸನ್ನಿವೇಶಗಳು ಎದುರಾಗಬಹುದು. ಆದ್ರೆ ಎಚ್ಚರಿಕೆಯಿಂದ ಈ ಸಂದರ್ಭವನ್ನು ದೂರ ಮಾಡಬಹುದು. ಹಾಗೆ ನಿಮ್ಮ ಸುತ್ತಲಿನ ಸಂಬಂಧಗಳು ಹಾಳಾಗದಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.



Click it and Unblock the Notifications











