Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಪತಿ ನಿಮ್ಮಿಂದ ಗುಟ್ಟು ಮುಚ್ಚಿಡುತ್ತಿದ್ದಾರಾ? ತಿಳಿಯೋದು ಹೇಗೆ?
ಮದುವೆಯು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು, ಪ್ರೀತಿಸಲು ಮತ್ತು ಅರ್ಥಮಾಡಿಕೊಳ್ಳಲು ಮತ್ತು ಒಟ್ಟಿಗೆ ಬದುಕಲು ಬಯಸುವ ಎರಡು ಜೀವಗಳ ಒಂದು ಸುಮದುರ ಸಂಬಂಧವಾಗಿದೆ. ವ್ಯಕ್ತಿಗಳ ಬದುಕಲ್ಲಿ ಎದುರಾಗುವ ಒಂದು ಪ್ರಮುಖ ಘಟ್ಟವಾಗಿರುತ್ತದೆ. ನಾವು ಈ ಮದುವೆಯ ಬಳಿಕ ಒಂದಿಷ್ಟು ವಿಚಾರಗಳ ಮೇಲೆ ಗಮನವಿಟ್ಟರೆ ಜೀವನ ತುಂಬಾನೆ ಸಂತೋಷದಾಯಕವಾಗಿ ಕಳೆದು ಹೋಗುತ್ತದೆ.
ಆದರೆ ಮದುವೆಯ ಬಳಿಕ ಕೆಲವರ ಜೀವನದಲ್ಲಿ ಹಲವು ಬಾರಿ ವೈಮನಸ್ಸು, ಗಲಾಟೆ, ವಿರಸದಂತಹ ಸ್ಥಿತಿಗೂ ಎದುರಾಗಬೇಕಾಗುತ್ತದೆ. ಇದಕ್ಕೆ ಹತ್ತು ಹಲವು ಕಾರಣಗಳಿರಬಹುದು. ಇಂತಹ ವಿಷಯಗಳನ್ನು ಮರೆಮಾಚುವುದು ಆರಂಭದಲ್ಲಿ ಸಮಸ್ಯೆಯಾಗದಿದ್ದರೂ ನಂತರ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವೈವಾಹಿಕ ಜೀವನವನ್ನು ಮುಂದುವರಿಸಲು ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳಬೇಕಾದ ಮೊದಲ ವಿಷಯ. ಅಪ್ರಾಮಾಣಿಕ ಜೊತೆಗಾರ ನಿಮ್ಮ ಜೀವನದಲ್ಲಿ ಕಹಿ ಘಟನೆಗಳಿಗೆ ಸಾಕ್ಷಿಯಾಗಬಹುದು.

ಪುರುಷರು ಮಹಿಳೆಯರಿಂದ ಮರೆಮಾಡುವ ಕೆಲವು ವಿಷಯಗಳನ್ನು ಮತ್ತು ಅವುಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡೋಣ.
ಹೊಸ ಹೊಸ ಹವ್ಯಾಸ
ಮದುವೆಯ ಬಳಿಕ ಹೊಸ ಅಭ್ಯಾಸಗಳ ಬೆಳೆಸಿಕೊಳ್ಳಲು ಮುಂದಾಗುತ್ತಾನೆ. ಆದರೆ ಇದು ಯಾರಿಗೂ ತಿಳಿಯದಂತೆ ಗೌಪ್ಯವಾಗಿಡಲು ಮುಂದಾಗುತ್ತಾನೆ. ಸಾಮಾನ್ಯವಾಗಿ, ನಿಮ್ಮ ಸಂಗಾತಿಯು ನಿಮ್ಮಿಂದ ಏನನ್ನಾದರು ಮರೆಮಾಡಲು ಬಯಸಿದರೆ, ಅವರು ಆಗಾಗ್ಗೆ ಹೊಸ ಹವ್ಯಾಸಗಳನ್ನು ಕಂಡುಕೊಳ್ಳುತ್ತಾರೆ. ಅವರು ನಿಮ್ಮ ಜೀವನದಿಂದ ನಿಮ್ಮನ್ನು ಮೋಸ ಮಾಡುತ್ತಿದ್ದಾರೆ ಎಂಬುದರ ಸಂಕೇತವಾಗಿದೆ. ಅವರು ಹೆಚ್ಚು ಕಾಲ ಮನೆಯಿಂದ ಹೊರಗೆ ಕಳೆಯಲು ಇಷ್ಟಪಡುತ್ತಿರುತ್ತಾರೆ, ಆದರೆ ಈ ವಿಚಾರ ತನ್ನ ಮಡದಿಯಿಂದ ಮುಚ್ಚಿಡಲು ಆತ ಪ್ರಯತ್ನಿಸುತ್ತಿರುತ್ತಾನೆ.
ಹಣಕಾಸಿನ ವಿಚಾರ
ಮದುವೆಯಾದ ಬಳಿಕ ಹೊಸತರಲ್ಲಿ ಪತಿ ಆತನ ಕೆಲವು ಹಣಕಾಸಿನ ವಿಚಾರಗಳನ್ನು ಅತ್ಯಂತ ಗೌಪ್ಯವಾಗಿಡಲು ಮುಂದಾಗುತ್ತಾನೆ. ಏಕೆಂದರೆ ಈ ವಿಚಾರ ಪತ್ನಿಗೆ ಈಗಲೇ ತಿಳಿಸಬೇಕು ಎಂಬ ವಿಚಾರ ಆತನಿಗೆ ಇಷ್ಟವಿರುವುದಿಲ್ಲ. ಅಲ್ಲದೆ ಈ ವಿಚಾರ ಆಕೆಯಿಂದ ಮರೆಯಾದಷ್ಟು ಒಳ್ಳೆಯದು ಎಂದು ಆತ ಬಯಸುತ್ತಾನೆ.
ಮೊಬೈಲ್ ಬಳಕೆ ವೇಳೆ ಎಚ್ಚರಿಕೆ ವಹಿಸೋದು
ಆತ ನಿಮ್ಮಿಂದ ಏನನ್ನಾದರು ಮುಚ್ಚಿಡುತ್ತಿದ್ದರೆ ಆತ ಮೊಬೈಲ್ ಕರೆಗಳು ಬಂದಾಗ ಇಲ್ಲವೆ ಸಂದೇಶಗಳು ಬಂದಾಗ ಗೊಂದಲಕ್ಕೆ ಒಳಗಾದಂತೆ ಕಂಡುಬರುತ್ತಾನೆ. ಜೊತೆಗೆ ಪತ್ನಿಯಿಂದ ಆತನ ಮೊಬೈಲ್ ದೂರದಲ್ಲೇ ಇಡುವುದು. ಯಾವುದೇ ವಿಚಾರವಿದ್ದರೂ ಯಾರು ಇಲ್ಲದಾಗ ಮೊಬೈಲ್ ಬಳಸುವುದು ನೋಡಬಹುದು. ಹೀಗಿದ್ದಾಗ ಆತ ನಿಮ್ಮಿಂದ ಯಾವುದಾದರು ವಿಚಾರ ಮುಚ್ಚಿಡುತ್ತಿರಬಹುದು.
ನಿಮಗೆ ಸಮಯ ಕೊಡದಿರುವುದು
ಆತ ನಿಮ್ಮಿಂದ ಏನನ್ನಾದರು ಮುಚ್ಚಿಡುತ್ತಿದ್ದಾರೆ ಎಂಬ ಅನುಮಾನ ಕಾಡಲು ಆತ ನಿಮಗೆ ಸಮಯ ಕೊಡದಿರುವುದು ಸಹ ಕಾರಣವಾಗಿತ್ತದೆ. ಆತ ನಿಮ್ಮಿಂದ ಏನಾದರು ಮುಚ್ಚಿಟ್ಟರೆ ನಿಮ್ಮ ಬಳಿ ಹೆಚ್ಚು ಸಮಯ ಕಳೆಯುವುದಿಲ್ಲ. ಆದಷ್ಟು ನಿಮ್ಮಿಂದ ದೂರವೇ ಉಳಿದುಬಿಡುತ್ತಾರೆ. ಈ ರೀತಿಯ ವರ್ತನೆ ಇದ್ದರೆ ಆತ ನಿಮ್ಮಿಂದ ಏನೋ ಮುಚ್ಚಿಡುತ್ತಿದ್ದಾರೆ ಎಂದರ್ಥ.
ಸುಖಾ ಸುಮ್ಮನೆ ಕೋಪಗೊಳ್ಳುವುದು
ಆತ ನಿಮ್ಮಿಂದ ಏನಾದರು ಮುಚ್ಚಿಡುತ್ತಿದ್ದರೆ ಆತ ನಿಮ್ಮ ಮೇಲೆ ಯಾವುದೇ ಕಾರಣ ಇಲ್ಲದಿದ್ದರೂ ಕೋಪಗೊಳ್ಳಬಹುದು. ಏಕೆಂದರೆ ಕೆಲವೊಮ್ಮೆ ಗೌಪ್ಯವಾಗಿಟ್ಟ ವಿಚಾರಗಳು ಆತನ ಕೋಪಕ್ಕೆ ಕಾರಣವಾಗಿರುತ್ತದೆ. ಈ ಕೋಪ ನಿಮ್ಮ ಮೇಲೆ ತೋರಿಸುತ್ತಿರಬಹುದು.
ಖರ್ಚು ಹೆಚ್ಚಾಗಿದ್ದರೆ
ಆತ ಹೆಚ್ಚು ಖರ್ಚು ಮಾಡುತ್ತಿದ್ದು, ಯಾವಾಗಲು ಹಣಕ್ಕಾಗಿ ಬೇರೆ ಬೇರೆ ಕೆಲಸ, ಇಲ್ಲವೆ ಸಾಲ ಮಾಡುತ್ತಿದ್ದರೆ ಆತ ನಿಮ್ಮಿಂದ ಏನೋ ವಿಚಾರ ಮುಚ್ಚಿಟ್ಟಿರಬಹುದು ಎಂದರ್ಥ.



Click it and Unblock the Notifications
