Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
International Men's Day: ಈ ರೀತಿಯ ಪುರುಷನಿಂದ ಹೆಣ್ಣಿಗೆ ಎಂದಿಗೂ ಮೋಸ ಆಗಲ್ಲ
ನವೆಂಬರ್ 19ನ್ನು ಅಂತರರಾಷ್ಟ್ರೀಯ ಪುರುಷ ದಿನವನ್ನಾಗಿ ಆಚರಿಸಲಾಗುವುದು. ಎಲ್ಲಾ ಪುರುಷರಿಗೆ ಪುರುಷರ ದಿನದ ಶುಭಾಶಯಗಳು.
ಪುರುಷರು ಭಾವನೆಗಳನ್ನು ವ್ಯಕ್ತಪಡಿಸುವುದು ತುಂಬಾ ಕಡಿಮೆ, ಏಕೆಂದರೆ ಸಮಾಜವೇ ಅವರನ್ನು ಹಾಗೆ ಮಾಡಿರುತ್ತದೆ. ಪುರುಷ ಅಳಬಾರದು, ಗಾಂಭಿರ್ಯವಾಗಿರಬೇಕು, ತುಂಬಾ ನಗಬಾರದು ಹೀಗೆ ಹೇಳುವುದರಿಂದ ಅವರು ಕೆಲವೊಮ್ಮೆ ತಮ್ಮ ಭಾವನೆಗಳನ್ನು ವ್ಯಕ್ತಪಡಸಿಲು ಹಿಂದೇಟು ಹಾಕುತ್ತಾರೆ. ಪುರುಷರ ಭಾವನೆಗಳನ್ನು ಅವರ ಮಾತಿಗಿಂತ ಅವರ ವರ್ತನೆಯಲ್ಲಿ ತಿಳಿಯಬಹುದು.
ಒಬ್ಬ ಹೆಣ್ಣಿಗೆ ಅವನು ನನಗೆ ಎಮೋಷನಲ್ ಆಗಿ ಕನೆಕ್ಟ್ ಆಗಿದ್ದಾನಾ, ಇಲ್ಲವಾ ಎಂದು ಅವನ ವರ್ತನೆ ನೋಡಿ ತಿಳಿಯಬಹುದು. ಒಬ್ಬ ಪುರುಷ ನಿಜವಾಗಲೂ ನಮ್ಮನ್ನು ತುಂಬಾ ಇಷ್ಟಪಡುತ್ತಿದ್ದರೆ ಅವನು ಬಾಯಿ ಬಿಟ್ಟು ಹೇಳದಿದ್ದರೂ ಅವನ ಈ ವರ್ತನೆಗಳಿಂದಲೇ ತಿಳಿಯಬಹುದು ನೋಡಿ:

1. ಅವನು ಅವನ ಬೆಸ್ಟ್ ನೀಡಲು ಪ್ರಯತ್ನಿಸುತ್ತಾನೆ
ಅವನಿಗೆ ಒಬ್ಬಳನ್ನು ಇಷ್ಟವಾದರೆ ಅವಳಿಗಾಗಿ ಏನನ್ನೂ ಬೇಕಾದರೂ ಸಿದ್ಧ, ಅವಳಿಗಾಗಿ ತಗನಗೆ ಎಷ್ಟೇ ಕಷ್ಟವಾಗಲಿ ಅವಳ ಇಷ್ಟವನ್ನು ನೆರವೇರಿಸಲು ಪ್ರಯತ್ನಿಸುತ್ತಾನೆ. ನಿಮ್ಮ ಸಹಾಯಕ್ಕೆ ಸದಾ ನಿಲ್ಲುತ್ತಾನೆ.
2. ನಿಮಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾನೆ
ಪ್ರತಿಯೊಂದು ವಿಚಾರದಲ್ಲಿ ನಿಮಗೆ ಪ್ರಾಮುಖ್ಯತೆ ನೀಡುವುದನ್ನು ಕಾಣಬಹುದು. ನೀವು ಹೇಳಿದ ಚಿಕ್ಕ ವಿಷಯವನ್ನು ಕೂಡ ನೆನಪಿನಲ್ಲಿ ಇಟ್ಟು ಮಾಡುತ್ತಾನೆ, ನಿಮ್ಮ ಮಾತುಗಳನ್ನು ಕೇಳುತ್ತಾನೆ, ನಿಮ್ಮ ಜೊತೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಾನೆ.
3. ನಿಮಗೆ ಕಷ್ಟ ಅಂತ ಬಂದಾಗ ಮೊದಲು ಸಹಾಯಕ್ಕೆ ನಿಲ್ಲುತ್ತಾನೆ
ನಿಮ್ಮ ಸುಖದಲ್ಲಿ ಮಾತ್ರವಲ್ಲ ಕಷ್ಟದಲ್ಲಿಯೂ ಸ್ಪಂದಿಸುತ್ತಾನೆ, ನಿಮ್ಮ ಕಷ್ಟವನ್ನು ಅವನ ಕಷ್ಟ ಅಂತ ತೆಗೆದುಕೊಂಡು ನಿಮಗೆ ಸಹಾಯ ಮಾಡುತ್ತಾನೆ, ನಿಮ್ಮ ಕಷ್ಟಕ್ಕೆ ತಾನು ಹೆಗಲು ಕೊಡುತ್ತಾನೆ.
4. ಭವಿಷ್ಯದ ಪ್ಲ್ಯಾನ್ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾನೆ
ಅವನಿಗೆ ನೀವು ತುಂಬಾ ಇಷ್ಟವಾಗಿದ್ದರೆ ಭವಿಷ್ಯದ ಪ್ಲ್ಯಾನ್ ಅನ್ನು ನಿಮ್ಮೊಂದಿಗೆ ಮಾಡುತ್ತಾನೆ, ನಿಮ್ಮಿಬ್ಬರ ಭವಿಷ್ಯದ ಬಗ್ಗೆ ಮಾತನಾಡುತ್ತಾನೆ, ಏಕೆಂದರೆ ಅವನ ಬದುಕಿನಲ್ಲಿ ನಿಮಗೆ ಅಷ್ಟೊಂದು ಪ್ರಾಮುಖ್ಯತೆ ಇರುತ್ತದೆ.
5. ಆತನ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾನೆ
ಅವನು ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದರೆ ನಿಮ್ಮಿಂದ ಏನನ್ನೂ ಬಚ್ಚಿಡುವುದಿಲ್ಲ, ನಿಮ್ಮ ಬಳಿ ಎಲ್ಲವನ್ನೂ ಹೇಳಿಕೊಡುತ್ತಾನೆ. ತನ್ನ ಕುಟುಂಬದ ಬಗ್ಗೆ, ತನ್ನ ಆಸೆಗಳ ಬಗ್ಗೆ ಹೀಗೆ ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾನೆ.
6. ನಿಮ್ಮ ಯಶಸ್ಸು ನೋಡಿ ಸಂತೋಷ ಪಡುತ್ತಾನೆ
ನಿಮ್ಮ ಸಾಧನೆಗೆ ಬೆಂಬಲ ನೀಡುವುದರ ಜೊತೆಗೆ ನಿಮ್ಮ ಸಾಧನೆಯನ್ನು ಅವನ ಸಾಧನೆ ಎಂಬಂತೆ ಸೆಲೆಬ್ರೇಟ್ ಮಾಡುತ್ತಾನೆ. ನಿಮ್ಮ ಯಶಸ್ಸು ಅವನಿಗೆ ತುಂಬಾನೇ ಹೆಮ್ಮೆ ಪಡುತ್ತಾನೆ.
7. ನಿಮಗೆ ಮೋಸ ಮಾಡಲು ಎಂದಿಗೂ ಬಯಸುವುದಿಲ್ಲ
ಒಬ್ಬ ಪುರುಷ ಮಹಿಳೆಗೆ ನಿಜವಾಗಲೂ ಭಾವನಾತ್ಮಕವಾಗಿ ಇಷ್ಟಪಡಲಾರಂಭಿಸಿದರೆ ಅವನು ಎಂದಿಗೂ ನಿಮ್ಮನ್ನು ಬಿಟ್ಟು ದೂರ ಹೋಗಲು ಇಷ್ಟಪಡುವುದಿಲ್ಲ, ಯಾವುದೇ ಕಾರಣಕ್ಕೂ ಅವನು ನಿಮಗೆ ಮೋಸ ಮಾಡುವುದಿಲ್ಲ.
ಆದ್ದರಿಂದ ಇಂಥ ಗುಣಗಳಿರುವ ಪುರುಷ ನಿಮ್ಮ ಬದುಕಿನಲ್ಲಿದ್ದರೆ ನೀವು ಖಂಡಿತ ಖುಷಿಯಾಗಿರುತ್ತೀರಿ.
ಪುರುಷರ ಬಗ್ಗೆ ಇರುವ ತಪ್ಪು ಕಲ್ಪನೆಗಳು
ಪುರುಷರು ಸೌಂದರ್ಯ ನೋಡಿ ಮಹಿಳೆಯನ್ನು ಇಷ್ಟಪಡುತ್ತಾನೆ
ಎಲ್ಲಾ ಸಿನಿಮಾದಲ್ಲಿಯೂ ಹೀಗೆಯೇ ಬಿಂಬಿಸುತ್ತಾರೆ, ಪುರುಷ ಸೌಂದರ್ಯವನ್ನು ಇಷ್ಟಪಡುತ್ತಾನೆ ಅದಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಬಾಂಧವ್ಯ ಸುಂದರವಾಗಿರಬೇಕೆಂದು ಬಯಸುತ್ತಾನೆ. ಓಬ್ಬ ಪುರುಷನನ್ನು ಸೌಂದರ್ಯದಿಂದ ಗೆಲ್ಲಲು ಸಾಧ್ಯವಿಲ್ಲ, ಗುಣದಿಂದ ಮಾತ್ರ ಅವನ ಮನಸ್ಸು ಗೆಲ್ಲಬಹುದು. ಸೌಂದರ್ಯ ಅವನನ್ನು ದೈಹಿಕವಾಗಿ ಆಕರ್ಷಿಸಬಹುದು, ಅದರೆ ಮಹಿಳೆ ತನ್ನ ಗುಣದಿಂದ ಮಾತ್ರ ಆತ ತನ್ನನ್ನು ತುಂಬಾನೇ ಪ್ರಿತಿಸುವಂತೆ ಮಾಡಲು ಸಾಧ್ಯ.
ಪುರುಷನ ಮನಸ್ಸು ಬೇಗನೆ ಕರಗುವುದಿಲ್ಲ
ಇದು ತಪ್ಪು ಕಲ್ಪನೆ, ಭಾವನಾತ್ಮಕವಾಗಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಮೃದು ಸ್ವಭಾವದವರಾಗಿರುತ್ತಾರೆ. ಅವನಲ್ಲಿನ ಭಾವನೆಗಳನ್ನು ಅವನು ಮನಸ್ಸಿನಲ್ಲಿಯೇ ಅದುಮಿಡಲು ಹೆಚ್ಚು ಪ್ರಯತ್ನಿಸುತ್ತಾನೆ, ಆದರೆ ನೀವು ಅವನನ್ನು ಅರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದು ಅವನಿಗೆ ತಿಳಿದಾಗ ಅವನು ಪ್ರತಿಯೊಂದು ಭಾವನೆಗಳನ್ನು ನಿಮ್ಮ ಮುಂದೆ ವ್ಯಕ್ತಪಡಿಸುತ್ತಾನೆ, ಆವಾಗ ಅವನ ಮನಸ್ಸು ಎಷ್ಟು ಮೃದು ಎಂಬುವುದು ತಿಳಿಯುತ್ತದೆ.



Click it and Unblock the Notifications