Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗಿಯರು ಯಾಕೆ ಮೊದಲು ಪ್ರೀತಿಯನ್ನು ಹೇಳಿಕೊಳ್ಳೋದಿಲ್ಲ!
ನಮಗೆ ಯಾರ ಮೇಲೆ ಪ್ರೀತಿಯಾಗುತ್ತೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಆ ಪ್ರೀತಿ ಯಶಸ್ವಿಯಾಗಬೇಕಂದ್ರೆ ಪ್ರೀತಿಯನ್ನು ಹೇಳಿಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಪ್ರೀತಿ ಅಥವಾ ಮನಸ್ಸಿನ ಮಾತನ್ನು ಹೇಳಿಕೊಳ್ಳುವ ವಿಚಾರಕ್ಕೆ ಬಂದಾಗ ಹುಡುಗರೇ ಮುಂದಿರುತ್ತಾರೆ.

ಹೆಚ್ಚಿನ ಹುಡುಗಿಯರು ತಮ್ಮ ಮನಸ್ಸಿನಲ್ಲಿ ಹುಡುಗನ ಬಗ್ಗೆ ಅಪಾರವಾದ ಪ್ರೀತಿ ಇದ್ದರೂ ಕೂಡ ಅದನ್ನು ಹೇಳಿಕೊಳ್ಳುವ ಮನಸ್ಸು ಮಾಡೋದಿಲ್ಲ. ಯಾಕಂದ್ರೆ ಇದರ ಹಿಂದೆ ಒಂದು ಕಾರಣವಿದೆ. ಅಷ್ಟಕ್ಕೂ ಹುಡುಗಿಯರು ಯಾಕೆ ಮೊದಲು ತಮ್ಮ ಪ್ರೀತಿಯನ್ನು ಹೇಳಿಕೊಳ್ಳೋದಿಲ್ಲ ಅನ್ನೋದನ್ನು ತಿಳಿಯೋಣ.
1. ಹುಡುಗರೇ ಮೊದಲು ಪ್ರೀತಿ ಹೇಳಿಕೊಳ್ಳಲಿ ಎಂದು ಬಯಸುತ್ತಾರೆ!
ಹುಡುಗಿಯರ ಮನಸ್ಸಿನಲ್ಲಿ ಹುಡುಗರ ಬಗ್ಗೆ ಮನಸ್ಸಿನಲ್ಲಿ ಅಪಾರವಾದ ಪ್ರೀತಿ ಇದ್ದರೂ ಕೂಡ ಅದನ್ನು ಹೇಳಿಕೊಳ್ಳುವ ಮನಸ್ಸು ಮಾಡೋದಿಲ್ಲ. ಹುಡುಗರೇ ಮೊದಲೇ ಹೇಳಲಿ ಎಂದು ಬಯಸುತ್ತಾರೆ. ಮನಸ್ಸಿನ ಮಾತನ್ನು ಹೇಳಿಕೊಂಡರೆ ಅವರು ಒಪ್ಪಿಕೊಳ್ಳುತ್ತಾರೆಯೋ ಎನ್ನುವ ಭಯ ಇರುತ್ತದೆ. ಹೀಗಾಗಿ ಹುಡುಗರೇ ಮೊದಲು ಪ್ರೀತಿಯನ್ನು ಹೇಳಲಿ ಎಂದು ಬಯಸುತ್ತಾರೆ.
2. ಸಾಂಸ್ಕೃತಿಕ ನಿಬಂಧನೆಗಳು
ಭಾರತೀಯ ಸಂಸ್ಕೃತಿಯಲ್ಲಿ ಕೆಲವೊಂದು ಪದ್ಧತಿಗಳನ್ನು ಆಚರಣೆ ಮಾಡಲಾಗುತ್ತದೆ. ಹೀಗಾಗಿ ಕೆಲವೊಂದು ನಿಬಂಧನೆಗಳಿಗೆ ಕಟ್ಟು ಬಿದ್ದು ಹುಡುಗಿಯರು ಮೊದಲು ತಮ್ಮ ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಹಿಂಜರಿಯುತ್ತಾರೆ. ಹೀಗಾಗಿ ಹುಡುಗರೇ ಹೇಳಲಿ ಎಂದು ಕಾಯುತ್ತಿರುತ್ತಾರೆ.
3. ಬೇರೆಯವರು ಏನು ಅಂದುಕೊಳ್ಳುತ್ತಾರೆ ಎನ್ನುವ ಭಯ!
ಹೆಚ್ಚಿನ ಸಂದರ್ಭಗಳಲ್ಲಿ ಹುಡುಗರೇ ತಮ್ಮ ಪ್ರೀತಿಯನ್ನು ಹೇಳಿಕೊಳ್ಳೋದ್ರಿಂದ ಒಂದು ವೇಳೆ ಮೊದಲು ಹುಡುಗಿ ತನ್ನ ಪ್ರೀತಿಯನ್ನು ಹೇಳಿಕೊಂಡರೆ ಈ ಸಮಾಜ ಏನು ಅಂದುಕೊಳ್ಳುತ್ತಾರೆ ಎನ್ನುವ ಭಯ ಕಾಡುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಜನ ಆಕೆಯ ನಡೆತೆಯ ಬಗ್ಗೆ ಮಾತನಾಡುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಹುಡುಗಿಯರು ಮೊದಲು ಪ್ರೀತಿ ಹೇಳಿಕೊಳ್ಳೋದಕ್ಕೆ ಹಿಂಜರಿಯುತ್ತಾರೆ.
4. ತಿರಸ್ಕಾರದ ಭಯ!
ನಾವು ಪ್ರೀತಿಯಲ್ಲಿ ಇದ್ದಾಗ ಅದರ ಅನುಭವ ತುಂಬಾನೇ ಚೆನ್ನಾಗಿ ಇರುತ್ತದೆ. ಆದರೆ ಆ ಪ್ರೀತಿ ಯಶಸ್ವಿಯಾಗಬೇಕಂದ್ರೆ ನಾವು ಪ್ರೀತಿಸುವವರ ಬಳಿ ಅದನ್ನು ಹೇಳಿಕೊಳ್ಳಬೇಕು. ಕೆಲವೊಂದು ಸಂದರ್ಭಗಳಲ್ಲಿ ಏನಾಗುತ್ತೆ ಅಂದ್ರೆ ನಾವು ಇಷ್ಟ ಪಟ್ಟ ಹುಡುಗನಿಗೆ ನಮ್ಮ ಮೇಲೆ ಆಸಕ್ತಿ ಇಲ್ಲದೇ ಹೋದರೆ ಅವರು ಆ ಪ್ರೀತಿಯನ್ನು ತಿರಸ್ಕರಿಸುವ ಸಾಧ್ಯತೆಗಳಿದೆ. ಹೀಗಾಗಿ ಹೆಚ್ಚಿನ ಹುಡುಗಿಯರಿಗೆ ಹುಡುಗರು ತಮ್ಮ ಪ್ರೀತಿಯನ್ನು ಎಲ್ಲಿ ತಿರಸ್ಕರಿಸಿ ಬಿಡುತ್ತಾರೆಯೋ ಎನ್ನುವ ಭಯ ಇರುತ್ತದೆ.
5. ಉತ್ತಮ ಹುಡುಗನಿಗಾಗಿ ಹುಡುಕಾಡುತ್ತಿರುತ್ತಾರೆ!
ಸಾಮಾನ್ಯವಾಗಿ ಹುಡುಗಿಯರು ಹುಡುಗರ ವಿಚಾರದಲ್ಲಿ ತುಂಬಾನೇ ಚ್ಯೂಸಿಯಾಗಿರ್ತಾರೆ. ತಮಗೆ ತಕ್ಕುದಾದ ಹುಡುಗನಿಗಾಗಿ ಹುಡುಕಾಡುತ್ತಿರುತ್ತಾರೆ. ತನ್ನ ಗುಣ-ನಡತೆಗೆ ಹೋಲುವ ಒರ್ವ ಅತ್ಯುತ್ತಮ ಹುಡುಗನ ಹುಡಕಾಟದಲ್ಲಿ ಇರುತ್ತಾರೆ. ಹೀಗಾಗಿ ಒಬ್ಬ ಹುಡುಗ ಒಳ್ಳೆಯವನಾ ಅನ್ನೋದನ್ನು ನಿರ್ಧರಿಸೋದಕ್ಕೆ ಹುಡುಗಿಯರು ಕಾಲಾವಕಾಶ ತೆಗೆದುಕೊಳ್ಳುತ್ತಾರೆ.
6. ತನ್ನ ಮೇಲೆ ಬೆರಳು ತೋರುಸುತ್ತಾರೆ ಎನ್ನುವ ಭಯ ಕಾಡುತ್ತದೆ!
ಪ್ರೀತಿ ಎಂದ ಮೇಲೆ ಅಲ್ಲಿ ಜಗಳಗಳು ಆಗೋದು ಸಾಮಾನ್ಯ. ಹೀಗಾಗಿ ಜಗಳಗಳಾದ ಸಂದರ್ಭದಲ್ಲಿ ಎಲ್ಲಿ ಹುಡುಗರು ತಮ್ಮತ್ತ ಬೆರಳು ಮಾಡಿ ತೋರಿಸುತ್ತಾರೆಯೋ ಎನ್ನುವ ಭಯ ಕಾಡುತ್ತದೆ. ನೀನೇ ಮೊದಲು ಪ್ರೀತಿಯನ್ನು ಹೇಳಿಕೊಂಡು ಇದೀಗ ಜಗಳವಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾರೆ ಎನ್ನುವ ಭಯ ಇರುತ್ತದೆ.
ಈ ಎಲ್ಲಾ ಕಾರಣಗಳಿಗಾಗಿ ಹುಡುಗಿಯರು ಮೊದಲು ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಭಯ ಪಡ್ತಾರೆ.



Click it and Unblock the Notifications
