ಬ್ರೇಕ್‌ಅಪ್‌ ನಂತರ ಈ ಜೀವನ ಪಾಠಗಳನ್ನು ಕಲಿಯುತ್ತೀರಿ!

ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುತ್ತಾರೆ. ನಮ್ಮ ಜೀನವದಲ್ಲಿ ಆಗುವ ಎಲ್ಲಾ ಘಟನೆಗಳು ಓಂದೋ ಖುಷಿ ಕೊಡುತ್ತದೆ ಇಲ್ಲವಾದಲ್ಲಿ ಜೀವನ ಪಾಠ ಕೊಡುತ್ತದೆ. ಕೆಲವು ಕಹಿ ಘಟನೆಗಳು ನಾವು ಯಾವ ತಪ್ಪು ಮಾಡಿದ್ದೇವೆ ಎಂಬುದನ್ನು ನಮಗೆ ತಿಳಿಸಿಕೊಟ್ಟು ಮುಂದಿನ ಬಾರಿ ಇದೇ ರೀತಿಯ ತಪ್ಪು ಮಾಡದಂತೆ ನಮ್ಮನ್ನು ತಡೆಯುತ್ತದೆ.

ಬ್ರೇಕ್ ಅಪ್ ಎಂದಾಕ್ಷಣ ಯಾರೋ ಒಬ್ಬರು ತಪ್ಪು ಮಾಡಿದ್ದರು ಎಂದಲ್ಲ. ಇದು ಕೇವಲ ಎರಡು ವ್ಯಕ್ತಿಗಳ ನಡುವಿನ ಹೊಂದಾಣಿಕೆಯಲ್ಲಿನ ವ್ಯತ್ಯಾಸ. ಯಾವುದೇ ಸಂಬಂಧವಿರಲಿ ಮೊದ ಮೊದಲಿಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಸಮಯ ಹೋದಂತೆ ಹೊಂದಾಣಿಕೆ ಕಷ್ಟವಾಗುತ್ತಾ ಹೋಗುತ್ತದೆ. ಈಗ ಎಲ್ಲರೂ ತಮ್ಮ ಜೀವನ ಸಂಗಾತಿಯ ಆಯ್ಕೆಯನ್ನು ತಾವೇ ಮಾಡಿಕೊಳ್ಳುತ್ತಾರೆ.

Important Life Lessons I’ve Learnt After A Break Up

ಆದರೆ ಈ ಆಯ್ಕೆ ಮೊದಲ ಸಂಬಂಧದಲ್ಲೇ ಸರಿ ಹೋಗಬೇಕೆಂದಿಲ್ಲ. ಮೊದಲಿಗೆ ಇಷ್ಟವಾದ ವ್ಯಕ್ತಿ ಸಮಯ ಹೋದಂತೆ ಇಷ್ಟವಾಗದೇ ಇರಬಹುದು ಅಥವಾ ಮೊದಲ ಸಂಬಂಧವೇ ಶಾಶ್ವತವಾಗಿಯೂ ಇರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಬಹಳ ದಿನಗಳಿಂದ ಕೇವಲ ಪರಿಚಯ ಇರುವ ವ್ಯಕ್ತಿಯೇ ಕೊನೆಗೆ ನಮ್ಮ ಜೀವನದಲ್ಲಿ ಬರಬಹುದು.

ಯಾವುದೇ ಸಂಬಧದಲ್ಲಿ ಹೊಂದಾಣಿಕೆಯ ಸಮಸ್ಯೆಗಳು ಸಹಜ. ಇದು ಒಂದೆರಡು ಬಾರಿ ಆದರೆ ಸರಿ. ನಿಯಮಿತವಾಗಿ ಇದೇ ತರಹದ ಸನ್ನೆವೇಶಗಳು ಎದುರಾದಲ್ಲಿ ಆಗ ಆ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದಕ್ಕಿಂತ ಕಡಿದುಕೊಳ್ಳುವುದೇ ಉತ್ತಮ. ಈಗಿನ ಸಮಾಜದಲ್ಲಿ ಸಂಬಂಧಗಳನ್ನು ಮುರಿಯುವುದು ಅಥವಾ ಬ್ರೇಕ್ ಅಪ್ ಸಾಮಾನ್ಯವಾಗಿದೆ.

ಇದರ ಬಗ್ಗೆ ಇತರರು ಅಷ್ಟೊಂದು ತಲೆಕೆಡಿಸಿಕೊಳ್ಳದೇ ಇದ್ದರೂ ಬ್ರೇಕ್ ಅಪ್ ಆಗಿರುವ ವ್ಯಕ್ತಿಗಳ ಆ ಸಮಯದ ಮನಸ್ಥಿತಿ ಅವರಿಗಷ್ಟೇ ಗೊತ್ತು. ಒಂದು ಸಮಯದಲ್ಲಿ ಬಹಳ ನೋವಾದರೂ ಇದರಿಂದ ನಾವು ಗಟ್ಟಿ ಆಗುತ್ತೇವೆ. ಅವುಗಳಲ್ಲಿ ಕೆಲವು ಪ್ರಮುಖ ಪಾಠಗಳು ಇಲ್ಲಿವೆ.

ಇದು ಬೇರಯವರನ್ನು ತಿಳಿಯುವುದಲ್ಲ, ನಮ್ಮ ಬಗ್ಗೆ ನಮಗೆ ಅರಿವು ಮೂಡಿಸುವ ಪ್ರಕ್ರಿಯೆ
'ಬ್ರೇಕ್ ಅಪ್ ಆದೆ ಆಗ ನನಗೆ ಅವರ ಬಗ್ಗೆ ಗೊತ್ತಾಯಿತು' ಎಂಬ ಮಾತು ಮೇಲ್ನೋಟಕ್ಕೆ ಸರಿ ಅನ್ನಿಸಬಹುದು ಆದರೆ ಅದು ನಿಜವಲ್ಲ. ಬ್ರೇಕ್ ಅಪ್ ನಮ್ಮಲಿರುವ ಅಭದ್ರತೆಗಳನ್ನು ನಮಗೆ ತಿಳಿಸಿ ಕೊಡುತ್ತದೆ. ನಮ್ಮನ್ನು ನಾವು ತಿಳಿಯಲು ಇದು ಸಹಾಯ ಮಾಡಬಹುದು. ಮಾಡಿದ ತಪ್ಪನ್ನು ತಿದ್ದಿಕೊಂಡು ನಮ್ಮ ವೈಯಕ್ತಿಕ ಬೆಳವಣಿಗೆಗೆ ಬಹಳ ಸಹಕಾರಿಯಾಗಬಹುದು.

ಹೃದಯಕ್ಕೆ ನೋವಾಗಬಹುದು ಆದರೆ ಆತ್ಮ ಪರಿವರ್ತನೆಯಾಗುತ್ತದೆ
ನಮ್ಮ ಬದುಕಿನಲ್ಲಿ ನಾವು ಎದುರಿಸುವ ಯಾವುದೇ ಒಂದು ವೈಫಲ್ಯದಂತೆ ಬ್ರೇಕ್ ಅಪ್ ಕೂಡ. ಆ ಕ್ಷಣಕ್ಕೆ ಹೃದಯ ಚೂರಾಗಬಹುದು ಆದರೆ ಅಂತಹ ಸನ್ನಿವೇಶ ಮುಂದಿನ ಬಾರಿ ಬಾರದಂತೆ ಅಥವಾ ಬಂದರೂ ಸಮರ್ಥವಾಗಿ ಎದುರಿಸುವಂತೆ ಮಾಡಲು ಇದು ನೆರವಾಗಬಹುದು.

ಕಾರಣ ಇಲ್ಲದೇ ನಡೆಯುವುದಿಲ್ಲ
ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಕಾರಣವಿದ್ದೇ ನಡೆದಿರುತ್ತದೆ. ಆ ಸನ್ನಿವೇಶದಲ್ಲಿ ಅದು ನಮ್ಮ ಗಮನಕ್ಕೆ ಬಾರದೇ ಇದ್ದರೂ ಜೀವನದ ಮುಂದೊಂದು ದಿನ ಆವತ್ತು ಹಾಗಾದ್ದಕ್ಕೆ ಇವತ್ತು ನಾನಿಲ್ಲಿದ್ದೇನೆ ಎಂಬ ಮಾತು ಬಂದೇ ಬರುತ್ತದೆ. ಯಾವುದೇ ಒಂದು ಜಾಗದಿಂದ ಹೂರಟಾಗ ಬೇಜಾರಾಗುವುದು ಸಹಜ ಆದರೆ ಅಲ್ಲಿಂದ ಹೊರಟಾಗಲೇ ನಾವು ಮುಂದಿನ ನಿಲ್ದಾಣಕ್ಕೆ ಹೋಗುವುದು ಸಾಧ್ಯ.

ಅದೇ ವಿಷಯದ ಬಗ್ಗೆ ದೀರ್ಘಕಾಲ ಯೋಚಿಸುವುದು ಅಥವಾ ಚಿಂತಿಸುವುದು ಮೂರ್ಖತನವಾಗಿದೆ
ಬೇಕ್ ಅಪ್ ಆದ ಒಂದೆರಡು ದಿನ ಅದೇ ಯೋಚನೆಯಲ್ಲಿ ಮುಳುಗಿದ್ದರೆ ಅದನ್ನು ಮನುಷ್ಯ ಸಾಮಾನ್ಯ ಎನ್ನಬಹುದು. ಆದರೆ ತಿಂಗಳಾದ ಮೇಲೂ ನಮ್ಮ ಮನಸ್ಸಿನಿಂದ ಅದು ಮಾಸಿ ಹೋಗಿಲ್ಲ ಎಂದಾದರೆ ಅದು ಸರಿಯಲ್ಲ. ನಿಮ್ಮ ಪ್ರತಿ ಕ್ಷಣದ ಯೋಚನೆಗಳೂ ನಿಮ್ಮ ಭವಿಷ್ಯದ ಹೂಡಿಕೆಯಾಗಿದೆ. ಸರಿಯಾಗಿ ಹೂಡಿಕೆ ಮಾಡದಿದ್ದಲ್ಲಿ ನಷ್ಟ ಕಟ್ಟಿಟ್ಟ ಬುಟ್ಟಿ.

ಅವರೇನೆಂದು ಮೊದಲ ಮಾತುಗಳಲ್ಲೇ ತಿಳಿದುಕೊಳ್ಳಿ
ಅವರು ಹಾಗೆ ಅವರು ಹೀಗೆ ಅವರು ಮಾಡಿದ್ದೆಲ್ಲಾ ಸರಿ ಎಂಬ ಖಯಾಲಿ ಒಂದು ಸಂಬಂಧದಲ್ಲಿದ್ದಾಗ ಸಹಜ. ಮೊದ ಮೊದಲು ನಮಗೆ ಬೇಜಾರಾಗುವಂತೆ ಅವರು ಆಡುವ ಮಾತುಗಳನ್ನು ನಾವು ಅಲಕ್ಷಿಸುತ್ತಾ ಹೋಗಿರಬಹುದು. ಮುಂದೆ ಎಂದಾದರೂ ಬಹಳ ದೊಡ್ಡ ಮಟ್ಟಿನ ಜಗಳವಾಗಿ ದುಃಖದಲ್ಲಿದ್ದಾಗ ಎಲ್ಲವೂ ನೆನಪಾಗಬಹುದು. ಇದು ನಮ್ಮ ಮುಂದಿನ ಜೀವನಕ್ಕೆ ನೆರವಾಗುತ್ತದೆ. ಮುಂದೆ ಯಾರೇ ನಮ್ಮ ಬಗ್ಗೆ ಇಂತಹ ಮಾತನ್ನಾಡಿದ್ದರೂ ಮೊದಲ ಬಾರಿಗೆ ನಾವು ಎಚ್ಚೆತ್ತುಕೊಳ್ಳುತ್ತೇವೆ,

ನಾವು ಪ್ರೀತಿಯಲ್ಲಿ ಇರಲೇ ಇಲ್ಲ
ಎಲ್ಲರಿಗೂ ಜೊತೆ ಇದೆ ನನಗಿಲ್ಲ. ಒಬ್ಬಂಟಿ ಇರುವುದಕ್ಕೆ ಆಗುವುದಿಲ್ಲ. ಅವನು / ಅವಳನ್ನು ಎಲ್ಲರೂ ಇಷ್ಟಪಡುತ್ತಾರೆ ಎಂದು ಆರಂಭವಾದ ಪ್ರೀತಿ ಅಥವಾ ಆಕರ್ಷಣೆ ಶಾಶ್ವತವಲ್ಲ. ನಿಜವಾಗಿ ನೋಡಹೋದರೆ ಅಲ್ಲಿ ಪ್ರೀತಿಯೇ ಇರಲಿಲ್ಲ. ಯಾರಾದರೂ ಜೊತೆ ಇರಲಿ ಎಂದು ಯಾರನ್ನೋ ಆರಿಸಿರುತ್ತೇವೆ.

ಪ್ರೀತಿಯ ಹೊರಗೂ ಒಂದು ಪ್ರಪಂಚ ಇದೆ
ಪ್ರೀತಿಯಲ್ಲಿದ್ದಾಗ ನಮಗೆ ನಮ್ಮವರು ಯಾರು ಎಂದು ತಿಳಿಯುವುದಕ್ಕೇ ಆಗುವುದಿಲ್ಲ. ನಮ್ಮ ಬಗ್ಗೆ ಕಾಳಜಿ ಇರುವವರ ಇತರರ ಮಾತುಗಳನ್ನು ನಿರ್ಲಕ್ಷಿಸುತ್ತೇವೆ. ಆದರೆ ಆ ಸಂಬಂಧದಿಂದ ಹೊರಬಂದಾಗಲೇ ನಮ್ಮವರು ಯಾರು ಎಂದು ನಮಗೆ ತಿಳಿಯುವುದು.

ಮೊದಲಿನ ಪ್ರೀತಿಯನ್ನು ಕ್ಷಮಿಸಿ ಆದರೆ ಅವರ ಬಳಿ ಹಿಂದೆ ಹೋಗಬೇಡಿ
ನಿಮ್ಮ ಹಳೆಯ ಸಂಗಾತಿ ತಪ್ಪೇ ಮಾಡಿದ್ದರೂ ಅದನ್ನು ಕ್ಷಮಿಸಲು ಕಲಿಯಿರಿ. ಸಂಬಂಧದಿಂದ ಹೊರಗೆ ಬಂದ ಮೇಲೂ ಅದೇ ದ್ವೇಶದಲ್ಲಿ ಇರಬೇಡಿ. ಇದೇ ದ್ವೇಶ ನಿಮ್ಮನ್ನು ಯಾರೋ ಹೊಂದಾಣಿಕೆ ಇಲ್ಲದ ವ್ಯಕ್ತಿಯ ಜೊತೆಗೆ ಹೊಸ ಸಂಬಂಧ ಬೆಳೆಸಲು ಕಾರಣವಾಗಬಹುದು. ಅದೇ ರೀತಿ ಮುಂದೆ ಯಾವುದೋ ಒಂದು ಸಂಬಂಧ ಸಿಕ್ಕಿ ಅಲ್ಲೂ ಬ್ರೇಕ್ ಅಪ್ ಆದರೆ ಮರಳಿ ಹಳೆಯ ಸಂಗಾತಿಯ ಬಳಿಯೂ ವಾಪಸ್ಸಾಗಬೇಡಿ.

ಒಂದೇ ತಪ್ಪನ್ನು ಮರಳಿ ಮಾಡಬೇಡಿ
ಮಾಡಿರುವ ತಪ್ಪಿನಿಂದ ಪಾಠ ಕಲಿಯಿರಿ. ನಾನು ಯಾವ ತಪ್ಪು ಮಾಡಿದ್ದೇ ಯಾಕೆ ಹೀಗಾಯ್ತು ನಾನು ಹೆಚ್ಚಾಗಿ ನಂಬಿ ಬಿಟ್ಟೆನೆ ಅಥವಾ ಕಮಿಟ್ ಆಗುವಾಗ ಅವಸರ ಮಾಡಿದ್ದೆನೇ ಎಂಬ ಅವಲೋಕನ ಮಾಡಿ ಹಾಗೂ ಎಂದಿಗೂ ಅದೇ ತಪ್ಪನ್ನು ಮರುಕಳಿಸಬೇಡಿ.

English summary

Important Life Lessons I’ve Learnt After A Break Up

These are the Important Life Lessons I’ve Learnt After A Break Up.
Story first published: Saturday, May 20, 2023, 15:00 [IST]
X
Desktop Bottom Promotion