Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಸಂಗಾತಿಯಲ್ಲಿ ಈ ಬದಲಾವಣೆ ಕಂಡು ಬಂದರೆ ನಿಮ್ಮಿಂದಾಗಿ ಅವರಿಗೆ ಉಸಿರು ಕಟ್ಟುತ್ತಿದೆ ಎಂದರ್ಥ
ಪ್ರೀತಿಯೆಂದರೆ ಅದೊಂದು ಚಂದದ ಭಾವನೆ. ಎಲ್ಲೋ ಬೆಳೆದ ಎರಡು ಜೀವಗಳು ಒಂದಾಗಿ ಜೀವನ ಕಳೆಯುವುದು ಭವಿಷ್ಯದ ಬಗ್ಗೆ ಕನಸು ಕಾಣುವುದು ಇವೆಲ್ಲವನ್ನು ಅನುಭವಿಸಿದವರಿಗೆ ಮಾತ್ರ ಅದರ ಭಾವನೆ ಅರ್ಥವಾಗುತ್ತದೆ. ಆದರೆ ಪ್ರೀತಿ ಎಂದರೆ ಕೇವಲ ಇಷ್ಟೇ ಅಲ್ಲ. ಇಲ್ಲಿ ಜಗಳಗಳಿವೆ, ಮನಸ್ತಾಪಗಳಿವೆ , ಕೋಪವಿದೆ ಒಟ್ಟಿನಲ್ಲಿ ಎಲ್ಲಾ ಭಾವನೆಗಳ ಸಮ್ಮಿಶ್ರಣವಿದೆ.
ಕೆಲವೊಮ್ಮೆ ನಾವು ಪ್ರೀತಿಸುವ ಭರದಲ್ಲಿ ಸಂಗಾತಿಗೆ ಕೊಂಚವು ಉಸಿರಾಡಲು ಆಗದಷ್ಟರ ಮಟ್ಟಿಗೆ ಅವರನ್ನ ಬಿಗಿಯಾಗಿ ಇಟ್ಟುಕೊಳ್ಳಲು ಯತ್ನಿಸುತ್ತೇವೆ. ಎಲ್ಲಿ ನನ್ನ ಕೈ ತಪ್ಪಿ ಹೋಗುತ್ತಾರೆಯೋ ಎಂಬ ಹಿಂಜರಿಕೆಯಿಂದ ಅವರಿಗೆ ಸ್ವಾತಂತ್ರ್ಯವನ್ನೇ ನಾವು ನೀಡುವುದಿಲ್ಲ.

ಪ್ರೀತಿಯಲ್ಲಿ ಇಬ್ಬರು ಜೊತೆಯಲ್ಲಿ ಬಾಳಬೇಕು ಒಬ್ಬರಿಗೊಬ್ಬರು ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಬೇಕು ಇದೆಲ್ಲವೂ ನಿಜ. ಆದರೆ ಪ್ರೀತಿಸುತ್ತಿದ್ದೇವೆ ಎಂಬ ಒಂದೇ ಕಾರಣಕ್ಕೆ ಒಬ್ಬರಿಗೊಬ್ಬರು ಸ್ವಲ್ಪವೂ ಅಂತರ ಕೊಡದಂತೆ ಉಸಿರುಗಟ್ಟಿಸಿ ಬದುಕುವುದು ಕೂಡ ಒಳ್ಳೆಯದಲ್ಲ. ನೀವು ನಿಮ್ಮ ಸಂಗಾತಿಯೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದೀರಿ..?
ಅವರ ಜೀವನವನ್ನು ಬದುಕಲು ಅವರಿಗೆ ಬಿಡುತ್ತಿದ್ದೀರೇ..? ಎಂದು ಕೇಳಿದರೆ ಉತ್ತರ ನೀಡಲು ನಿಮಗೆ ಸಾಧ್ಯವಾಗದೇ ಇರಬಹುದು. ಆದರೆ ನಿಮ್ಮ ಸಂಗಾತಿಯಲ್ಲಿ ಈ ಕೆಳಗಿನ ಲಕ್ಷಣಗಳನ್ನು ನೀವು ಗಮನಿಸಿದ್ದರೆ ಖಂಡಿತವಾಗಿಯೂ ನಿಮ್ಮ ಪ್ರೀತಿಯ ದಾರವನ್ನು ಕೊಂಚ ಸಡಿಲಿಸುವ ಅಗತ್ಯವಿದೆ ಎಂದೇ ಲೆಕ್ಕ.
ನಿಮ್ಮ ಜೊತೆ ಫೋನ್ಕಾಲ್ಗಳಲ್ಲಿ ಕಾಲ ಕಳೆಯುವುದು ಈಗೀಗ ಕಮ್ಮಿಯಾಗಿದೆಯೇ..? : ಪ್ರೀತಿಯ ಆರಂಭದಲ್ಲಿ ಗಂಟೆಗಟ್ಟಲೇ ಫೋನ್ಕಾಲ್ನಲ್ಲಿ ಇರುವುದು ಸರ್ವೇ ಸಾಮಾನ್ಯ. ಅದರೆ ಈಗೀಗ ನಿಮ್ಮ ಸಂಗಾತಿ ಫೋನ್ನಲ್ಲಿ ಹೆಚ್ಚುಕಾಲ ನಿಮ್ಮ ಜೊತೆ ಮಾತನಾಡುತ್ತಿಲ್ಲವೇ..? ಗಂಟಲಿನಿಂದ ಮೇಲಿನ ಮಾತುಗಳು ಮಾತ್ರ ಬರುತ್ತಿದ್ದೆಯೇ..? ಅಂದರೆ ನಿಮ್ಮ ಸಂಗಾತಿ ನಿಮ್ಮ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು.
ನಿಮ್ಮ ಅಭಿಪ್ರಾಯಗಳನ್ನು ಕೇಳದೇ ಇರುವುದು : ಯಾವುದೇ ಹೊಸ ಕೆಲಸಗಳಿಗೆ ಮುಂದಡಿಯಿಡುವಾಗ ಪ್ರೀತಿಪಾತ್ರರೊಂದಿಗೆ ಸಾಮಾನ್ಯವಾಗಿ ಚರ್ಚಿಸುತ್ತೇವೆ. ಆದರೆ ನಿಮ್ಮ ಸಂಗಾತಿ ನಿಮ್ಮನ್ನು ಇದರಿಂದ ಹೊರಗಿಡುತ್ತಿದ್ದಅರೆ ಎಂದರೆ ಅವರಿಗೆ ನಿಮ್ಮಿಂದ ಅಂತರ ಬೇಕಿದೆ ಎಂದೇ ಅರ್ಥ.
ನಿಮಗಿಂತ ಇನ್ನೊಬ್ಬರಿಗೆ ಮಹತ್ವ ಹೆಚ್ಚು ಕೊಡುವುದು : ಮನುಷ್ಯ ತನಗೆ ಎಲ್ಲಿ ನೆಮ್ಮದಿ ಸಿಗುತ್ತಾನೋ ಅಲ್ಲಿ ಇರಲು ಇಚ್ಛಿಸುತ್ತಾನೆ. ನಿಮ್ಮ ಸಂಗಾತಿಗೆ ಈಗ ನಿಮಗಿಂತ ಅವರ ಸ್ನೇಹಿತರೊಂದಿಗೆ ಕಾಲ ಕಳೆಯುವುದು ಹೆಚ್ಚು ಹಿತ ಎನಿಸುತ್ತಿದೆ ಎಂದರೆ ನಿಮ್ಮ ಪ್ರೀತಿಯಲ್ಲಿ ಅವರು ನೆಮ್ಮದಿ ಕಾಣುತ್ತಿಲ್ಲ ಎನ್ನಬಹುದು.
ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುವುದು : ನಾವು ಮಾಡಿದ ಮೆಸೇಜ್ಗೆ ತಡವಾಗಿ ರಿಪ್ಲೈ ಬಂದಾಗ ಯಾರಿಗಾದರೂ ಕೋಪ ಬರುತ್ತದೆ. ನಿಮ್ಮ ಪ್ರಿಯತಮ ಅಥವಾ ಪ್ರೇಯಸಿ ನಿಮ್ಮ ಮೆಸೇಜ್ಗಳಿಗೆ ತಡವಾಗಿ ಉತ್ತರಿಸುತ್ತಿದ್ದಾರೆ ಎಂದರೆ ಪ್ರೀತಿ ಕಮ್ಮಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರಿಗೆ ಅವರದ್ದೇ ಆದ ಕೆಲಸಗಳಿಗೂ ಸಮಯ ಬೇಕು ಎಂಬುದನ್ನು ಖಂಡಿತ ನೀವು ಅರ್ಥ ಮಾಡಿಕೊಳ್ಳಬೇಕು.
ಚಿಕ್ಕ ಚಿಕ್ಕ ವಿಷಯಗಳನ್ನು ಹಂಚಿಕೊಳ್ಳದೇ ಇರುವುದು : ಪ್ರೀತಿಸಿದ್ದೀರಿ ಎಂದ ಮಾತ್ರಕ್ಕೆ ಎಲ್ಲಾ ವಿಷಯಗಳನ್ನು ನಿಮಗೆ ವರದಿ ಒಪ್ಪಿಸಬೇಕು ಎಂಬು ನಿರೀಕ್ಷೆ ಮಾಡುವುದೇ ತಪ್ಪು. ನಿಮ್ಮ ಸಂಗಾತಿಯು ಎಲ್ಲಾ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿಲ್ಲ ಎಂದರೆ ಅವರನ್ನು ಪೀಡಿಸದೇ ಅವರ ವೈಯಕ್ತಿಕ ಜೀವನಕ್ಕೆ ಬೆಲೆ ಕೊಡುವುದು ಒಳ್ಳೆಯದು.
ನಿಮ್ಮೊಂದಿಗೆ ಹೆಚ್ಚು ಕಾಲ ಕಳೆಯುವುದಿಲ್ಲ : ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಮಾತನಾಡುವ ಸಂದರ್ಭದಲ್ಲಿ ನಿದ್ರೆಗೆ ಜಾರುತ್ತಿದ್ದಾರೆಯೇ..? ಅಥವಾ ಇನ್ಯಾವುದೋ ಕೆಲಸಗಳಲ್ಲಿ ಕಳೆದು ಹೋಗುತ್ತಿದ್ದಾರೆಯೇ..? ಹಾಗೆಂದ ಮಾತ್ರಕ್ಕೆ ಅವರಿಗೆ ಪ್ರೀತಿಯಿಲ್ಲ ಎಂದಲ್ಲ. ಆದರೆ ಅವರಿಗೆ ಕೆಲ ಕಾಲ ಒಂಟಿಯಾಗಿ ಇರಬೇಕು ಎಂದು ಎನಿಸುತ್ತಿರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಕೆಲವರು ತಮಗಾಗುವ ಅನುಭವಗಳನ್ನು ಬಾಯ್ಬಿಟ್ಟು ಹೇಳುತ್ತಾರೆ. ಇನ್ನು ಕೆಲವರು ತಮ್ಮ ವರ್ತನೆಯ ಮೂಲಕ ತೋರಿಸಿಕೊಳ್ಳುತ್ತಾರೆ . ಹೀಗಾಗಿ ನಿಮ್ಮ ಸಂಗಾತಿಯ ವರ್ತನೆಗಳನ್ನು ನೀವು ಗಮನಿಸಬೇಕು. ಅತಿಯಾದರೆ ಅಮೃತವೂ ವಿಷವಾಗುತ್ತದೆ.
ಅದೇ ರೀತಿ ಪ್ರೀತಿ ಅತಿಯಾದರೂ ಅಹಿತಕರ ಎನಿಸುತ್ತದೆ. ಹೀಗಾಗಿ ಎಲ್ಲರಿಗೂ ಅವರ ವೈಯಕ್ತಿಕ ಜೀವನವನ್ನು ಅನುಭವಿಸಲು ಅವಕಾಶ ನೀಡಬೇಕು. ಪ್ರೀತಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರನ್ನು ಬಂಧಿಸಿ ಇಟ್ಟುಕೊಳ್ಳುವುದು ಕೂಡ ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ ಎಂಬುದು ನಿಮ್ಮ ಗಮನದಲ್ಲಿ ಎಂದಿಗೂ ಇರಲಿ .



Click it and Unblock the Notifications