Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ಗುಣಗಳು ನಿಮ್ಮ ಪತ್ನಿಯಲ್ಲಿ ಇದೆ ಎಂದಾದರೆ ನೀವು ತುಂಬಾನೇ ಅದೃಷ್ಟವಂತರು
ಒಂದು ಕುಟುಂಬದಲ್ಲಿ ನೆಮ್ಮದಿ ಇರಬೇಕೆಂದರೆ ಗಂಡನಿಗಿಂತ ಹೆಂಡತಿಯಲ್ಲಿ ಒಳ್ಳೆಯ ಗುಣಗಳಿರಬೇಕಾಗುತ್ತದೆ. ಹಾಗಾಗಿಯೇ ಎಷ್ಟೋ ಕುಟುಂಬಗಳಲ್ಲಿ ಗಂಡ ಕುಡುಕನಾಗಿದ್ದರೂ, ಮನೆ ಕಡೆ ಗಮನ ಹರಿಸಿದಿದ್ದರೂ, ಬೇಜಾವ್ದಾರಿಯಿಂದ ವರ್ತಿಸುತ್ತಿದ್ದರೂ ಆ ಕುಟುಂಬ ಬೀದಿಗೆ ಬರುವುದಿಲ್ಲ, ಸಾಯುವವರೆಗೂ ಜೊತೆಯಲ್ಲಿ ಇರುತ್ತಾರೆ.
ಅದೇ ಪತ್ನಿಯಾದವಳು ಸರಿಯಿಲ್ಲದಿದ್ದರೆ ಆ ಕುಟುಂಬದಲ್ಲಿ ಬಾಳುವುದು ಸಾಧ್ಯವೇ ಆಗುವುದಿಲ್ಲ, ಅಂಥ ಹೆಣ್ಣಿರುವ ಕುಟುಂಬದಲ್ಲಿ ನೆಮ್ಮದಿ ಎಂಬುವುದು ಇಲ್ಲವಾಗುತ್ತೆ, ಯಾವ ಹೆಣ್ಣಿನಲ್ಲಿ ಈ ಗುಣಗಳಿರುತ್ತದೋ ಅವಳನ್ನು ಪಡೆದ ಗಂಡ ಅದೃಷ್ಟವಂತ...

ಗಂಡನಿಗೆ ಬೆಂಬಲವಾಗಿ ನಿಲ್ಲುವವಳು
ಎಂಥದ್ದೇ ಪರಿಸ್ಥಿತಿ ಆಗಿರಲಿ ಗಂಡನಿಗೆ ಬೆಂಬಲವಾಗಿ ನಿಲ್ಲುವವಳು ಅವನು ಕುಗ್ಗಿದಾಗ ಹೆದರಬೇಡ ನಾನು ನಿನ್ನ ಜೊತೆ ಇರುತ್ತೇನೆ, ಎಲ್ಲವೂ ಸರಿಯಾಗುತ್ತೆ ಎಂದು ಧೈರ್ಯ ತುಂಬುವವಳು, ಗಂಡನ ಸುಖದಲ್ಲಿ ಮಾತ್ರವಲ್ಲ ಕಷ್ಟದಲ್ಲಿಯೂ ಸುಖವಾಗಿ ನಿಲ್ಲುವವಳು ಮಾತ್ರ ಒಳ್ಳೆಯ ಹೆಂಡತಿಯಾಗಲು ಸಾಧ್ಯ.
ಅವನ ಬದುಕು ಚೆನ್ನಾಗಿ ಇರುವಾಗ ಖುಷಿಯಿಂದ ಇದ್ದು , ಒಂದು ವೇಳೆ ಅವನ ಬದುಕಿನಲ್ಲಿ ಏನಾದರೂ ಕಷ್ಟ ಎದುರಾದಾಗ ಅವನನ್ನು ಮಾತ್ರ ಹೊಣೆಯನ್ನಾಗಿ ಮಾಡುವ ಹೆಂಡತಿಯಾದರೆ ಆ ಪುರುಷ ಜೀವನದಲ್ಲಿ ಸೋಲು ಗಂಡಾಗ ಮತ್ತೆ ಗೆಲುವಿನ ಕಡೆ ಮರಳುವುದು ಕಷ್ಟವಾಗುವುದು.
ಅವನು ಹೇಗಿದ್ದಾನೋ ಹಾಗೇ ಇಷ್ಟಪಡುತ್ತಾಳೆ , ಗೌರವಿಸುತ್ತಾಳೆ
ಗಂಡ-ಹೆಂಡತಿ ಸಂಬಂಧವೆಂದರೆ ಪರಸ್ಪರ ಗೌರವಿಸಬೇಕು. ಗಂಡನನ್ನು ತುಂಬಾ ಪ್ರೀತಿಸಬೇಕು, ಗೌರವಿಸಬೇಕು, ಬೇರೆಯವರ ಮುಂದೆ ಗಂಡನ ಹೀಯಾಳಿಸಬಾರದು, ಗಂಡನಿಗೆ ಅವಮಾನವಾಗುವಂತೆ ನಡೆದುಕೊಳ್ಳಬಾರದು. ನೀವಿಬ್ಬರೇ ಇದ್ದಾಗ ಒಬ್ಬರನ್ನೊಬ್ಬರು ಕಾಲೆಳೆಯುವುದು ಒಕೆ(ತಮಾಷೆಗೆ ಮಾತ್ರ), ಅದೇ ಬೇರೆಯವರ ಮುಂದೆ ತಮಾಷೆಗೂ ಆ ರೀತಿ ಮಾಡಬಾರದು.
ಅವನ ಆಸಕ್ತಿಗಳಲ್ಲಿ ತಾನು ಆಸಕ್ತಿ ತೋರಿಸುವುದು
ಗಂಡನ ಇಷ್ಟವನ್ನು ಅರಿತು ಅದರಲ್ಲಿ ತಾನು ಆಸಕ್ತಿ ತೋರಿಸುವುದು, ಅದರ ಬಗ್ಗೆ ಅವನಲ್ಲಿ ಚರ್ಚಿಸುವುದು, ಅವನ ಒಳ್ಳೆಯ ಕಾರ್ಯಗಳನ್ನು ಬೆಂಬಲಿಸುವುದು ಇವೆಲ್ಲಾ ಗಂಡ-ಹೆಂಡತಿ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುತ್ತದೆ.
ಹೆಂಡತಿ ಮಾತ್ರ ಗಂಡನ ಆಸಕ್ತಿ ಗಮನಿಸುವುದಲ್ಲ, ಗಂಡನೂ ಹೆಂಡತಿಯ ಆಸೆಗಳ ಕಡೆ ಗಮನಹರಿಸಬೆಕು, ಅವಳ ಭಾವನೆಗಳನ್ನು ಗೌರವಿಸಬೇಕು, ಹೀಗೆ ಮಾಡಿದರೆ ನಮ್ಮ ಸಂಸಾರ ಅನಂದ ಸಾಗರ ಅಂತ ಇಬ್ಬರಿಗೂ ಅನಿಸುವುದು.
ಸರಿಯಾದ ವಿಷಯಕ್ಕೆ ಜಗಳವಾಡುವುದು
ಹೌದು ಜಗಳವಾಡಿದಳು ಎಂದರೆ ಅವಳು ಕೆಟ್ಟವಳಲ್ಲ, ಅವಳು ಯಾವ ವಿಷಯಕ್ಕೆ ಜಗಳವಾಡಿದಳು ಎಂಬುವುದು ಮುಖ್ಯ. ಅವಳು ಜಗಳವಾಡಿದರ ಹಿಂದೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಒಳಿತನ ದೃಷ್ಟಿಕೋನ ಉದಾಹರಣೆಗೆ ನೀವು ಹೀಗೆ ಕುಡಿಯಬೇಡಿ, ದುಡ್ಡು ವ್ಯರ್ಥ ಮಾಡಬೇಡಿ, ಆರೋಗ್ಯ ಹಾಳು ಮಾಡಬೇಡಿ ಎಂದೆಲ್ಲಾ ಜಗಳವಾಡುತ್ತಿದ್ದರೆ ಅವಳಿಗೆ ನೀವೆಂದರೆ ಅಷ್ಟೊಂದು ಇಷ್ಟ, ಹಾಗಾಗಿ ಜಗಳವಾಡುತ್ತಾಳೆ.
ಹಾಗಾಗಿ ಅವಲು ಜಗಳವಾಡಿದಾಗ ಯಾವ ಕಾರಣಕ್ಕೆ ಜಗಳವಾಡಿದಳು ಎಂಬುವುದರ ಕಡೆಯೂ ಗಮನಹರಿಸಿ. ನಮ್ಮಿಂದ ಆದ ತಪ್ಪಿನಿಂದಾಗಿ ಅವಲಿಗೆ ಕೋಪ ಬಂದಿದೆ ಎಂದು ಖಂಡಿತ ತಿಳಿಯುತ್ತದೆ, ಸರಿಪಡಿಸಲು ಪ್ರಯತ್ನಿಸಿ.
ಮನೆಯ ಆಚರಣೆ, ಸಂಸ್ಕೃತಿಯನ್ನು ಗೌರವಿಸುವವಳು
ಎಲ್ಲಾ ಕುಟುಂಬದಲ್ಲಿಯೂ ಅವರದ್ದೇ ಆದ ನಿಯಮಗಳಿರುತ್ತದೆ, ಆಚರಣೆಗಳಿರುತ್ತದೆ, ಗಂಡನ ಮನೆಗೆ ಬಂದ ಮೇಲೆ ಅದನ್ನು ಗೌರವಿಸುವ ಗುಣ ಅವಳಲ್ಲಿ ಇರಬೇಕು. ಗಂಡನನ್ನು ಮಾತ್ರ ಅವನ ಮನೆಯವರನ್ನೂ ಪ್ರೀತಿಯಿಂದ ಕಾಣುವ ಗುಣ ಅವಳಲ್ಲಿ ಇರಬೇಕು.
ಗಂಡನ ಜೊತೆ ಮುಕ್ತವಾಗಿ ಮಾತನಾಡಬೇಕು, ಅವನ ಜೊತೆ ಲವಲವಿಕೆಯಿಂದ ಮಾತನಾಡಬೇಕು, ಏನೆ ಸಮಸ್ಯೆ ಇದ್ದರೂ ಮುಕ್ತವಾಗಿ ಮಾತನಾಡಿ ಬಗೆಹರಿಸಲು ಪ್ರಯತ್ನಿಸಬೇಕು, ಮನೆಯ ಸಮಸ್ಯೆಗೆ ಮುರನೇಯವರು ಹಸ್ತಕ್ಷೇಪ ಮಾಡಲು ಬಿಡಬಾರದು.. ಈ ಎಲ್ಲಾ ಗುಣಗಳು ಹೆಣ್ಣಿನಲ್ಲಿ ಇದ್ದರೆ ಆ ಕುಟುಂಬ ತುಂಬಾನೇ ಸುಂದರವಾಗಿರುತ್ತದೆ.



Click it and Unblock the Notifications