Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಗೊತ್ತಿಲ್ಲದೆ ಮಾಡುವ ಈ ಚಿಕ್ಕ ತಪ್ಪುಗಳೇ ಸಾಕು ಸಂಸಾರ ಹಾಳಾಗಲು!
ಕೆಲವೊಮ್ಮೆ ನಮ್ಮ ಅರಿವಿಗೆ ಬಾರದೆಯೇ ನಾವು ಮಾಡುವ ಚಿಕ್ಕ ತಪ್ಪುಗಳು ಸಾಕು ಸಂಬಂಧದಲ್ಲಿ ದೊಡ್ಡ ಬಿರುಕು ಮೂಡಲು. ಕೆಲವೊಂದು ವರ್ತನೆಯಾಗಿರಬಹುದು ಅಥವಾ ನಾವಾಡುವ ಮಾತಾಗಿರಬಹುದು, ಸಮಯ ಕೊಡದಿರುವುದು ಇರಬಹುದು ಹೀಗೆ ನಮಗೆ ನಮ್ಮಿಂದ ತಪ್ಪಾಗುತ್ತಿದೆ ಎಂದು ಅರಿವಿಗೆ ಬಾರದೇ ಇರುವ ಕೆಲವೊಂದು ವಿಷಯಗಳೇ ಸಾಕು ಸಂಸಾರದ ತಾಳ ತಪ್ಪಿಸಲು.
ಉದಾಹರಣೆಗೆ ನಮ್ಮ ಸಂಗಾತಿಯನ್ನು ಟೇಕ್ ಇಟ್ ಫಾರ್ ಗ್ರ್ಯಾಂಟೆಡ್ ಆಗಿ ತೆಗೆದುಕೊಳ್ಳುವುದು. ಅದರಿಂದ ಅವರ ಮನಸ್ಸಿಗೆ ನೋವಾಗುತ್ತಿದೆ ಎಂದು ಗಮನಿಸುವುದೇ ಇಲ್ಲ... ನಮ್ಮ ಈ ವರ್ತನೆ ಅವರಿಗೆ ತುಂಬಾನೇ ನೋವುಂಟು ಮಾಡಬಹುದು, ನಮ್ಮ ವರ್ತನೆಯಿಂದ ಬೇಸತ್ತು ನಮ್ಮಿಂದ ದೂರಾಗುವ ಕಟು ನಿರ್ಧಾರ ಮಾಡಬಹುದು, ಆದ್ದರಿಂದ ದಾಂಪತ್ಯದಲ್ಲಿ ಈ ಚಿಕ್ಕ ತಪ್ಪುಗಳನ್ನು ಮಾಡಲೇಬೇಡಿ.

ಸಂಗಾತಿಯ ಅವಶ್ಯಕತೆ, ಭಾವನೆಗಳನ್ನು ನಿರ್ಲಕ್ಷ್ಯ ಮಾಡುವುದು
ಎಷ್ಟೋ ಜನರಿಗೆ ಈ ಒಂದು ಕೆಟ್ಟ ಚಾಳಿ ಇರುತ್ತದೆ. ಸಂಗಾತಿಯ ಅವಶ್ಯಕತೆಯೇನು, ಅವರ ಭಾವನೆಯೇನು ಎಂದು ತಿಳಿಯಲು ಪ್ರಯತ್ನಿಸುವುದೇ ಇಲ್ಲ. ತಮ್ಮ ಪಾಡಿಗೆ ತಾವು ಬ್ಯುಸಿಯಾಗಿರುತ್ತಾರೆ. ನಮ್ಮ ವರ್ತನೆಯಿಂದ ಅವರಿಗೆ ಒಂಟಿತನ ಕಾಡುತ್ತಿರಬಹುದು ಎಂದು ಯೋಚಿಸುವುದೇ ಇಲ್ಲ. ನಾವು ನಮ್ಮ ಕೆಲಸದಲ್ಲಿ ಬ್ಯುಸಿಯಾಗಿರುತ್ತೇವೆ. ನಾನೇನೂ ಕಡಿಮೆ ಮಾಡುತ್ತಿಲ್ಲ, ಅವರಿಗೆ ಬೇಕಾಗಿರುವುದು ಕೊಡಿಸುತ್ತಿದ್ದೇನೆ ಎಂಬ ಭಾವನೆ ಕೆಲವರಲ್ಲಿ ಇರುತ್ತದೆ,
ಆದರೆ ನಾವು ಕೊಡಿಸುವ ವಸ್ತುಗಳಿಗಿಂತ ನಮ್ಮಿಂದ ನಮ್ಮ ಸಂಗಾತಿ ಮತ್ತೇನೋ ನಿರೀಕ್ಷೆ ಮಾಡುತ್ತಿದ್ದಾಳೆ/ನೆ ಎಂದು ಯೋಚಿಸುವುದೇ ಇಲ್ಲ.. ಸದಾ ಬ್ಯುಸಿ ಅಂತ ಕೂತಾಗ ಅವರಿಗೆ ನೀವು ಅವರನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಅನಿಸಲಾರಂಭಿಸಿದರೆ ಅದರಿಂದ ನಿಮ್ಮ ಸಂಸಾರದಲ್ಲಿ ಏನು ಬೇಕಾದರೂ ಸಂಭವಿಸಬಹುದು. ನಿಮ್ಮಿಂದ ಸಿಗದ ಪ್ರೀತಿ, ಅಟೆನೆಕ್ಷನ್ ಬೇರೆಯವರು ನೀಡಿದರೆ ಆ ಕಡೆ ಆಕರ್ಷಿತರಾಗಲೂ ಬಹುದು. ಆದ್ದರಿಂದ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ.
* ಟೇಕ್ ಇಟ್ ಫಾರ್ ಗ್ರ್ಯಾಂಟೆಟ್
ಯಾವುದೇ ಕಾರಣಕ್ಕೆ ನಿಮ್ಮ ಸಂಗಾತಿಯನ್ನು ಈ ರೀತಿ ಭಾವಿಸಲೇಬೇಡಿ ಹಾಗೆ ಮಾಡಿದ್ದೇ ಆದರೆ ಅದರಿಂದ ನಿಮ್ಮ ಸಂಗಾತಿಯ ಮನಸ್ಸಿಗೆ ತುಂಬಾನೇ ನೋವಾಗುವುದು. ಸ್ವಾಭಿಮಾನಿಗಳಾದರೆ ಅವರು ನಿಮ್ಮೊಂದಿಗೆ ಸಂಬಂಧ ಮುಂದುವರೆಸಲು ಇಷ್ಟಪಡುವುದಿಲ್ಲ. ಇದುವೇ ವಿಚ್ಛೇದನಕ್ಕೆ ಕಾರಣವಾಗಬಹುದು ಅಥವಾ ಅನೈತಿಕ ಸಂಬಂಧಕ್ಕೆ ಕಾರಣವಾಗಬಹುದು.
* ಎಲ್ಲದಕ್ಕೂ ಕೊಂಕು ನುಡಿಯುವುದು
ಈ ಸ್ವಭಾವ ನಿಮ್ಮಲ್ಲಿದ್ದರೆ ಅದಕ್ಕೆ ಫುಲ್‌ಸ್ಟಾಪ್ ಹಾಕುವುದು ಒಳ್ಳೆಯದು. ನಾವಾಡುವ ಕೊಂಕು ನುಡಿಯಿಂದ ನಿಮ್ಮ ಸಂಗಾತಿಗೆ ಎಷ್ಟು ಬೇಸರವಾಗುತ್ತಿದೆ ಎಂದು ಯೋಚಿಸುವುದಿಲ್ಲ. ಇದರಿಂದ ಅವರ ಆತ್ಮವಿಶ್ವಾಸ ಕುಗ್ಗುವುದು ಅಥವಾ ಅವರಿಗೆ ನಿಮ್ಮ ಬಗ್ಗೆ ಬೇಸರ ಮೂಡುವುದು. ಈ ಕೊಂಕು ನುಡಿಯಿಂದಲೇ ಸಂಸಾರ ಹಾಳಾಗಬಹುದು. ಇಬ್ಬರು ಖುಷಿಯಾಗಿದ್ದರೆ ಮಾತ್ರ ಸುಂದರ ದಾಂಪತ್ಯ ಎಂದು ಹೇಳಲಾಗುವುದು.
* ನಮ್ಮ ಭಾವನೆಗಳನ್ನು, ಖುಷಿಯನ್ನು ನಾವೇ ಬದಿಗೊತ್ತುವುದು
ನಾನು, ನನ್ನ ಸಂಸಾರ ಎಂಬ ಕಾರಣಕ್ಕೆ ಕೆಲವರು ತಮ್ಮ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ತಾವೇನೋ ತ್ಯಾಗ ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. ನಾವೇ ಖುಷಿಯಾಗಿರದಿದ್ದರೆ ಹೇಗೆ ತಾನೇ ನಾವು ಮತ್ತೊಬ್ಬರನ್ನು ಖುಷಿಯಾಗಿಡಲು ಸಾಧ್ಯ. ನಾವು ಖುಷಿಯಾಗಿರದಿದ್ದರೆ ಯಾವುದೋ ಅಸಮಧಾನ ನಮ್ಮನ್ನು ಕಾಡುತ್ತಾಲೇ ಇರುತ್ತದೆ, ಈ ಅಸಮಧಾನ ನಮ್ಮ ವರ್ತನೆಯಲ್ಲೂ ಕಾಣಬಹುದು, ಇದರಿಂದಾಗಿ ನಮ್ಮ ಸಂಗಾತಿಯ ಮನಸ್ಸಿಗೆ ನೋವುಂಟಾಗುವುದು. ಆದ್ದರಿಂದ ಮೊದಲು ನೀವು ಖುಷಿಯಾಗಿರಿ, ಆವಾಗ ನಿಮ್ಮ ಸುತ್ತ ಇರುವವರು ಖುಷಿಯಾಗಿರುತ್ತಾರೆ.
ಈ ಸಣ್ಣ ಬದಲಾವಣೆ ಮಾಡಿ ಸಂಸಾರದಲ್ಲಿ ದೊಡ್ಡ ಬದಲಾವಣೆಯಾಗುವುದು
ಸಂಗಾತಿಯನ್ನು ಹೊಗಳಿ
ಪತ್ನಿ ಒಂದು ಒಳ್ಳೆಯ ಅಡುಗೆ ಮಾಡಿದಾಗ , ಮನೆ-ಮಕ್ಕಳ ಜವಾಬ್ದಾರಿ ನಿಭಾಯಿಸುವ ರೀತಿ ಇವುಗಳನ್ನು ಹೊಗಳಿ, ಅದೇ ರೀತಿ ಪತಿ ಕೂಡ ತನ್ನ ಕುಟುಂಬಕ್ಕಾಗಿ ತುಂಬಾನೇ ಕಷ್ಟಪಡುತ್ತಿರುತ್ತಾನೆ, ಆತನ ಶ್ರಮವನ್ನು ನೀವು ಮನಸಾರೆ ಹೊಗಳಿ. ಒಬ್ಬರನ್ನೊಬ್ಬರು ಸದಾ ಗೌರವ-ಪ್ರೀತಿಯಿಂದ ಕಾಣಿ, ಇದರಿಂದ ದಾಂಪತ್ಯ ತುಂಬಾನೇ ಸುಂದರವಾಗುವುದು.
ಯಾವುದೇ ನಿರ್ಧಾರದಲ್ಲಿ ಸಂಗಾತಿಯನ್ನು ನಿರ್ಲಕ್ಷ್ಯ ಮಾಡಬೇಡಿ
ನಿರ್ಧಾರ ಚಿಕ್ಕದಾಗಿರಲಿ ಆದರೆ ದೊಡ್ಡದಾಗಿರಲಿ ನಿರ್ಲಕ್ಷ್ಯ ಮಾಡಬೇಡಿ. ಏನಾದರೂ ನಿರ್ಧಾರ ತೆಗೆದು ಕೊಳ್ಳುವಾಗ ನಾನು ಎನ್ನುವುದಕ್ಕಿಂತ ನಾವು ಎಂಬ ಭಾವನೆಯಿದ್ದರೆ ಇಬ್ಬರಲ್ಲಿ ಹೊಂದಾಣಿಕೆ ಹೆಚ್ಚುವುದು.
ಯಾರೂ ಪರ್ಫೆಕ್ಟ್ ಅಲ್ಲ: ಈ ಪ್ರಪಂಚದಲ್ಲಿ ಯಾರೂ ಪರ್ಫೆಕ್ಟ್ ಅಲ್ಲ, ನಾವು ಒಬ್ಬರನ್ನು ಇಷ್ಟಪಡುವಾಗ ಅವರ ಒಳ್ಳೆಯ ಗುಣ ಮಾತ್ರ ನಿಮಗೆ ಇಷ್ಟವಾಗದ ಕೆಲವೊಂದು ಸಂಗತಿಗಳಲ್ಲಿ ಹೊಂದಿಕೊಂಡು ಹೋಗಲು ಪ್ರಯತ್ನಿಸಬೇಕು. ನಿಮ್ಮ ಪ್ರೀತಿ, ಅನುಕಂಪ ಎಲ್ಲವನ್ನೂ ನಿಮ್ಮ ಸಂಗಾತಿ ನಿರೀಕ್ಷೆ ಮಾಡುತ್ತಾರೆ, ಅದನ್ನು ನೀಡಿ, ಇದರಿಂದ ಅವರು ಕೂಡ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ, ದಾಂಪತ್ಯ ಸುಖವಾಗಿರುತ್ತದೆ.



Click it and Unblock the Notifications