Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಯಾವ ಮಹಿಳೆ ಪುರುಷ ಈ ವಿಚಾರಗಳನ್ನು ತಿಳಿದುಕೊಳ್ಳುತ್ತಾಳೋ ಅವಳ ಬಗ್ಗೆ ಅವನಿಗೆ ಪ್ರೀತಿ ಹೆಚ್ಚುವುದು
ಭಾವನೆಗಳ ವಿಚಾರಕ್ಕೆ ಬಂದರೆ ಮಹಿಳೆಯರು ಹೆಚ್ಚು, ಪುರುಷರು ಕಡಿಮೆ ಎನ್ನುವಂತಿಲ್ಲ. ಯಾಕೆಂದರೆ ಮಹಿಳೆಯರಲ್ಲಿ ಎಷ್ಟು ಭಾವನೆಗಳಿಗೆ ಬೆಲೆ ಕೊಡಲಾಗುತ್ತೋ ಪುರುಷರಲ್ಲಿಯೂ ಕೂಡ ಅಷ್ಟೇ ಭಾವನೆಗಳು ತುಂಬಿರುತ್ತವೆ. ಹಾಗೆ ನಾವು ಹೆಣ್ಣು ಮಕ್ಕಳನ್ನು ಹುಡುಗರು ಅರ್ಥ ಮಾಡಿಕೊಳ್ಳಬೇಕು. ಎಂದೆ ಬಯಸುತ್ತೇವೆ.
ಒಂದು ವೇಳೆ ಹುಡುಗಿಯರ ಮನಸ್ಸು ಹುಡುಗರಿಗೆ ಅರ್ಥವಾಗದೆ ಇದ್ದಲ್ಲಿ ಹುಡುಗನೇ ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂದು ಟೀಕೆ ಮಾಡುತ್ತೇವೆ. ಆದರೆ ಇದೇ ರೀತಿ ಹುಡುಗರಿಗೂ ಕೂಡ ತಮ್ಮನ್ನು ಅರ್ಥ ಮಾಡಿಕೊಳ್ಳುವ ಹುಡುಗಿ ಸಿಗಬೇಕು ಎನ್ನುವ ಆಸೆ ಇರುತ್ತೆ ಎಂಬುದು ನಿಮಗೆ ಗೊತ್ತಾ?

ಹೌದು, ಹುಡುಗರಿಗೂ ಕೂಡ ಹುಡುಗಿಯರ ಮೇಲೆ ಅಷ್ಟೇ ನಿರೀಕ್ಷೆ ಇರುತ್ತದೆ. ತಮ್ಮನ್ನು ಹಾಗೆ ನೋಡಿಕೊಳ್ಳಬೇಕು ತಮ್ಮನ ಹೀಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವ ಭಾವನೆ ಇರುತ್ತದೆ ಆದರೆ ಹುಡುಗರು ಯಾವುದನ್ನು ಹೇಳಿಕೊಳ್ಳುವುದಿಲ್ಲ ಅಷ್ಟೇ. ಕೆಲವೊಮ್ಮೆ ಹೆಣ್ಣು ಮಕ್ಕಳು ಹುಡುಗರನ್ನ ಅರ್ಥಮಾಡಿಕೊಳ್ಳುವಲ್ಲಿ ಸೋಲುತ್ತಾರೆ. ಅನು ಅತಿಯಾಗಿ ಪ್ರೀತಿಸುವ ಹುಡುಗನ ಮನಸ್ಸಿನಲ್ಲಿ ಏನಿದೆ ಆತನಿಗೆ ಏನು ಬೇಕು ಎನ್ನುವುದನ್ನು ಕೂಡ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಹೀಗೆ ಪುರುಷರನ್ನ ಮಹಿಳೆಯರು ಅರ್ಥವೇ ಮಾಡಿಕೊಳ್ಳದೆ ಇರುವಂತಹ ವಿಚಾರಗಳು ಯಾವವು ಎಂಬುದನ್ನು ನೋಡೋಣ!
ಪುರುಷರು ಹೇಗೆ ಸಮಸ್ಯೆ ಪರಿಹರಿಸುತ್ತಾರೆ?
ಎಷ್ಟೋ ಬಾರಿ ಹುಡುಗಿಯರು ಸಂಕಷ್ಟದಲ್ಲಿ ಇರುವಾಗ ತಕ್ಷಣಕ್ಕೆ ನೆನಪಾಗುವುದೇ ಅವರನ್ನು ಪ್ರೀತಿಸುವ ಹುಡುಗ. ಹಾಗಾಗಿ ಯಾವುದೇ ಸಂದರ್ಭದಲ್ಲಿ ಹುಡುಗನಿಗೆ ಒಂದು ಫೋನ್ ಕಾಲ್ ಮಾಡಿದರು ಸಾಕು ಆತ ಆಕೆಯ ಸಹಾಯಕ್ಕೆ ನಿಲ್ಲುತ್ತಾನೆ. ಆದರೆ ಹುಡುಗ ಹೇಗೆ ಸಮಸ್ಯೆಯನ್ನು ಪರಿಹರಿಸುತ್ತಾನೆ ಎಂಬುದರ ಬಗ್ಗೆ ಹುಡುಗಿಯರಿಗೆ ಅರಿವು ಇರುವುದಿಲ್ಲ ಜೊತೆಗೆ ಎಷ್ಟೋ ಹುಡುಗಿಯರು ಅದನ್ನು ಬಾಯಿ ಬಿಟ್ಟು ಕೇಳುವುದು ಇಲ್ಲ. ಆದರೆ ಇಷ್ಟು ದೊಡ್ಡ ಸಮಸ್ಯೆಯನ್ನು ನೀನು ಹೇಗೆ ನಿಭಾಯಿಸಿದೆ ಎಂದು ತನ್ನ ಪ್ರೀತಿಸುವ ಹುಡುಗಿ ಕೇಳಲಿ ಎಂದು ಪುರುಷರು ನಿರೀಕ್ಷೆ ಮಾಡುವುದಂತೂ ಸುಳ್ಳಲ್ಲ.
ಹುಡುಗರಿಗೂ ಬೇಕು ಹೊಗಳಿಕೆ!
ನಿಮಗೆ ಹೆಣ್ಣುಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಿಗೂ ಕೂಡ ತನ್ನನ್ನು ಪ್ರೀತಿಸುವವರು ತನ್ನನ್ನು ಹೊಗಳಬೇಕು, ಶಭಾಷ್ ಎನ್ನಬೇಕು ಎನ್ನುವ ಆಸೆ ಇರುತ್ತದೆ. ಹುಡುಗಿಯರು ತಾವಾಗಿಯೇ ಹೇಳಿಸಿಕೊಂಡು ಹೊಗಳಿಸಿಕೊಂಡಿದ್ದು ಇದೆ. ಆದರೆ ಹುಡುಗರು ಹಾಗಲ್ಲ ತಾವು ಮಾಡುವ ದೊಡ್ಡ ಕೆಲಸಕ್ಕೂ ಕೂಡ ಹೊಗಳಿಸಿಕೊಳ್ಳುವುದಿಲ್ಲ ಆದರೆ ಹುಡುಗರಲ್ಲಿಯೂ ಕೂಡ ತನ್ನನ್ನು ಪ್ರಶಂಸೆ ಮಾಡಬೇಕು ಎನ್ನುವ ಮನೋಭಾವ ಇರುತ್ತದೆ.
ಅವನ ಸ್ನೇಹಿತರ ಬಗ್ಗೆ ಮಾತನಾಡುವುದು!
ಹುಡುಗಿಯರು ತನ್ನ ಸ್ನೇಹಿತರ ಬಗ್ಗೆ ಹುಡುಗರು ಯಾವುದೇ ಒಂದು ತಪ್ಪು ಮಾತನಾಡಿದರು ಸಹಿಸುವುದಿಲ್ಲ ನಿನ್ನ ಸ್ನೇಹಿತರು ಸರಿ ಇಲ್ಲ ಎನ್ನುವ ಮಾತನ್ನು ಕೇಳಲು ಇಷ್ಟಪಡುವುದಿಲ್ಲ. ಅದರಂತೆ ಹುಡುಗರು ಕೂಡ ತನ್ನನ್ನು ಜೀವಕ್ಕೆ ಜೀವ ಕೊಟ್ಟು ಪ್ರೀತಿಸುವಂತಹ ಸ್ನೇಹಿತರನ್ನು ಬಿಟ್ಟು ಕೊಡುವುದಿಲ್ಲ. ತನ್ನನ್ನು ಪ್ರೀತಿಸುವ ಹುಡುಗಿ ನನ್ನ ಸ್ನೇಹಿತರನ್ನು ಕೂಡ ಅಷ್ಟೇ ಗೌರವದಿಂದ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಅದನ್ನ ಎಂದು ಬಾಯಿಬಿಟ್ಟು ಹೇಳಿಕೊಳ್ಳುವುದಿಲ್ಲ.
ಪ್ರೀತಿ ತೋರಿಸುವ ವಿಧಾನ!
ಹೆಣ್ಣು ಮಕ್ಕಳಿಗೆ ತನ್ನನ್ನು ಪ್ರೀತಿಸುವ ಹುಡುಗ ಎಷ್ಟು ಪ್ರೀತಿ ಮಾಡುತ್ತಾನೆ ಎನ್ನುವುದನ್ನು ಆಗಾಗ ಪರೀಕ್ಷೆ ಮಾಡುವ ಅಭ್ಯಾಸ ಇರುತ್ತದೆ. ನಾನಂದರೆ ನಿನಗೆ ಎಷ್ಟು ಇಷ್ಟ ಎಂದು ಪ್ರಾಯೋಗಿಕವಾಗಿಯೇ ಸಾಕಷ್ಟು ಬಾರಿ ತೋರಿಸಬೇಕು ಎಂದು ಬಯಸುತ್ತಾರೆ. ತನಗೆ ಬೇಕಾಗಿದ್ದೆಲ್ಲವನ್ನು ಅರ್ಥ ಮಾಡಿಕೊಂಡು ತಕ್ಷಣವೇ ಅದನ್ನು ಈಡೇರಿಸಬೇಕು ಎಂದು ಬಯಸುತ್ತಾರೆ. ಹುಡುಗರಲ್ಲಿಯೂ ಈ ನಿರೀಕ್ಷೆ ಇರುತ್ತದೆ ಎಂಬುದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ. ಹುಡುಗರು ಕೂಡ ಬೇಸರದಲ್ಲಿ ಇರುವಂತಹ ಪರಿಸ್ಥಿತಿ ಬರುತ್ತದೆ ಆಗ ಹುಡುಗಿ ತಾನಾಗಿಯೇ ಬಂದು ಆ ಸಮಸ್ಯೆಗಳನ್ನು ಪರಿಹರಿಸಬೇಕು ತನ್ನನ್ನು ಸಮಾಧಾನ ಮಾಡಬೇಕು ಎಂದು ಹುಡುಗರಲ್ಲಿಯೂ ನಿರೀಕ್ಷೆ ಇರುವುದು ಸಹಜ.
ಫ್ಯಾಮಿಲಿಗೆ ಗೌರವ ಕೊಡುವುದು!
ಪ್ರೀತಿಸುತ್ತಿರುವ ಸಮಯದಲ್ಲಿ ಅಥವಾ ಮದುವೆಯಾದ ನಂತರ ಹುಡುಗಿ ತನ್ನ ಮನೆಯವರಿಗೆ ತನ್ನನ್ನು ಮದುವೆ ಆಗಿರುವ ಗಂಡ ಅಥವಾ ಪ್ರೀತಿಸುವ ಹುಡುಗ ಗೌರವ ಕೊಡಬೇಕು ಎಂದು ಬಯಸುತ್ತಾಳೆ. ಹುಡುಗನಿಂದ ಆಗಾಗ ತನ್ನ ಮನೆಗೆ ಫೋನ್ ಮಾಡಿಸಿ ಅವರ ಯೋಗಕ್ಷೇಮ ವಿಚಾರಿಸಲು ಹೇಳುತ್ತಾಳೆ. ಈ ರೀತಿ ಹುಡುಗರು ಕೂಡ ತನ್ನ ಸಂಬಂಧಿಕರನ್ನ ತನ್ನನ್ನು ಪ್ರೀತಿಸುವ ಹುಡುಗಿ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾನೆ ಅದನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ ಆದರೆ ಆತನಿಗೆ ಆ ನಿರೀಕ್ಷೆ ಯಾವಾಗಲು ಇರುತ್ತದೆ.
ಯಾವಾಗ ಹುಡುಗಿಯನ್ನು ಹುಡುಗರು ಅರ್ಥ ಮಾಡಿಕೊಳ್ಳುತ್ತಾರೋ ಅದೇ ರೀತಿ ಹುಡುಗಿಯರು ಕೂಡ ಹುಡುಗನನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆತನ ಮನಸ್ಸು ಕೂಡ ನಿಮಗೆ ಅರ್ಥವಾದರೆ ಅಲ್ಲಿ ಒಂದು ಮಧುರವಾದ ಬಾಂಡಿಂಗ್ ಕ್ರಿಯೇಟ್ ಆಗುತ್ತದೆ. ಹೀಗೆ ಪ್ರೀತಿಯಲ್ಲಿ ಬಾಂಡಿಂಗ್ ಕ್ರಿಯೇಟ್ ಆದರೆ ಯಾವುದೇ ಕಾರಣಕ್ಕೂ ಅಂತಹ ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲ. ಸಂಬಂಧದಲ್ಲಿ ಹೊಂದಾಣಿಕೆ ಎನ್ನುವುದು ಬಹಳ ಮುಖ್ಯ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಇದ್ದರೆ ಆ ಸಂಬಂಧಕ್ಕೆ ಯಾವುದೇ ಮೌಲ್ಯವು ಇರುವುದಿಲ್ಲ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ.



Click it and Unblock the Notifications