Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದೇ ಮಗುವಿಗಿಂತ ಒಡಹುಟ್ಟಿದವರು ಜೊತೆಗಿದ್ದರೆ ಆ ಮಗುವಿಗೆ ಈ ರೀತಿಯೆಲ್ಲಾ ಪ್ರಯೋಜನವಿದೆ
ತಮಗೆ ಎಷ್ಟು ಮಕ್ಕಳು ಬೇಕು ಎಂಬುವುದು ಆ ದಂಪತಿಗಳ ವೈಯಕ್ತಿಕ ತೀರ್ಮಾನವಾಗಿರುತ್ತದೆ, ಕೆಲವರು ಎರಡು ಮಕ್ಕಳು ಇರಲಿ ಎಂದು ಬಯಸಿದರೆ ಇನ್ನು ಕೆಲವರು ಇಲ್ಲ ಇರುವ ಒಂದು ಮಗುವಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸೋಣ, ಅವನು/ಅವಳಿಗೆ ಬೇಕಾಗಿರುವುದೆಲ್ಲಾ ಒದಗಿಸಲು ಸಾಧ್ಯವಾಗುವುದು, ಆದರೆ ಎರಡು ಮಕ್ಕಳಿದ್ದರೆ ಆರ್ಥಿಕವಾಗಿ ತುಂಬಾನೇ ಕಷ್ಟ ಎಂದು ಯೋಚಿಸುತ್ತಾರೆ.

ಆದರೆ ಒಂದೇ ಮಗುವಿರುವ ಎಷ್ಟೋ ಮನೆಗಳಲ್ಲಿ ಆ ಮಗುವಿಗೆ 3-4 ವಯಸ್ಸಾದಾಗ ಅದು ಅಮ್ಮ ನಮಗೊಂದು ಪಾಪು ಬೇಕು ಎಂದು ಕೇಳುತ್ತದೆ, ಶಾಲೆಗೆ ಹೋಗುವಾಗ ಅಂತೂ ಅವರ ಸಹಪಾಠಿಗಳು ತಮ್ಮ ಸಹೋದರ-ಸಹೋದರಿ ಬಗ್ಗೆ ಹೇಳುವುದನ್ನು ಕೇಳಿ ನಮಗೂ ಒಂದು ಮಗು ಬೇಕು ಎಂದು ಕೇಳುತ್ತಾರೆ, ಎಷ್ಟೋ ದಂಪತಿ ಮೊದಲ ಮಗು ಅದರ ಜೊತೆ ಆಟವಾಡಲು ತಮ್ಮನೋ, ತಂಗಿಯೋ ಬೇಕು ಎಂಬ ಕಾರಣಕ್ಕೆ ಮತ್ತೊಂದು ಮಗುವಿನ ಬಗ್ಗೆ ಆಲೋಚನೆ ಮಾಡಲಾರಂಭಿಸುತ್ತಾರೆ.
ಆದರೆ ಈಗೀನ ಕಾಲದಲ್ಲಿ ಎರಡು ಮಕ್ಕಳಿರುವುದು ಪ್ಲಸ್ ಹೌದು
ಹೌದು ಎಷ್ಟೋ ದಂಪತಿಗಳು ಆರ್ಥಿಕ ಕಾರಣದಿಂದಾಗಿ ಎರಡನೇ ಮಗು ಬೇಡ ಎಂದು ತೀರ್ಮಾನಕ್ಕೆ ಬಂದಿರುತ್ತದೆ, ಆದರೆ ಮಗುವಿನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಎರಡು ಮಕ್ಕಳಿದ್ದರೆ ಒಳ್ಳೆಯದು, ಏಕೆಂದರೆ ನಗರ ಪ್ರದೇಶಗಳಲ್ಲಿದ್ದರೆ ಗಂಡ-ಹೆಂಡತಿ ಇಬ್ಬರೂ ವರ್ಕಿಂಗ್ ಇದ್ದರೆ ಆ ಮಗುವಿಗೆ ತುಂಬಾನೇ ಒಂಟಿತನ ಕಾಡುವುದು, ಅಲ್ಲದೆ ನಗರ ಪ್ರದೇಶಗಳಲ್ಲಿ ಅಕ್ಕ-ಪಕ್ಕದ ಮನೆಯವರ ಮಕ್ಕಳು ಜೊತೆಯಾಗಿ ಆಟ ಆಡುವುದು ಎಲ್ಲಾ ಕಮ್ಮಿನೇ, ಮಕ್ಕಳು ಮನೆಯಲ್ಲಿಯೇ ಗೊಂಬೆಗಳ ಜೊತೆ ಆಡುವುದು ಎಷ್ಟೊಂದು, ಹಾಗಾಗಿ ಆ ಮಕ್ಕಳಲ್ಲಿ ಒಂಟಿತನ ಕಾಡಲಾರಂಭಿಸುತ್ತದೆ.
ಮಕ್ಕಳು ಜೊತೆ ನಾವು ಆಟ ಆಡಿದರೂ ಮಕ್ಕಳು-ಮಕ್ಕಳು ಸೇರಿ ಆಡಿದಂತೆ ಆಗಲ್ಲ
ಕೆಲ ಪೋಷಕರು ತಮ್ಮ ಮಕ್ಕಳಿಗೆ ತುಂಬಾನೇ ಸಮಯ ಮೀಸಲಿಡುತ್ತಾರೆ, ಆದರೂ ಮಕ್ಕಳು-ಮಕ್ಕಳು ಜೊತೆಯಾಗಿ ಕೂಡಿ ಆಡಿದಾಗ ಅವರಲ್ಲಿ ಇರುವ ಲವಲವಿಕೆ ನಮ್ಮ ಜೊತೆ ಆಡುವಾಗ ಇರಲ್ಲ, ಅಲ್ಲದೆ ನಮಗೆ ಅವರ ಜೊತೆ ಆಡುವಾಗ ಬೇಗನೆ ಬೋರ್ ಅನಿಸುವುದು ಹೀಗೆಲ್ಲಾ ಆಗುತ್ತದೆ, ಅದೇ ಎರಡು ಮಕ್ಕಳಿದ್ದರೆ ಅವರಷ್ಟಕ್ಕೇ ಆಡುತ್ತಾರೆ.
ನಮ್ಮಲ್ಲಿ ಪಶ್ಚಾತಾಪದ ಭಾವವೂ ಕಡಿಮೆಯಾಗುವುದು
ಎಷ್ಟೋ ಬಾರಿ ಕೆಲಸದ ಬ್ಯುಸಿಯಿಂದ ಮಕ್ಕಳ ಕಡೆ ಗಮನ ನೀಡಲು ಸಾಧ್ಯವಾಗಲ್ಲ, ಆವಾಗ ನಮಗೆ ಒಂದು ರೀತಿ ಪಶ್ಚಾತಾಪ ಉಂಟಾಗುವುದು. ಅದೇ ಎರಡು ಮಕ್ಕಳಿದ್ದರೆ ನಮಗೆ ಈ ಪಶ್ಚಾತಾಪ ಕಾಡಲ್ಲ, ಅವರಿಗೆ ಹಸಿದಾಗ ತಿನ್ನುವುದಕ್ಕೆ ಕೊಡುವುದು ಮಾಡಿದರೆ ಸಾಕು ಆಟ ಅವರಿಬ್ಬರೇ ಆಡುತ್ತಾರೆ. ಅದರಲ್ಲೂ ಮೊದಲ ಮಗುವಿಗೂ ಎರಡನೇ ಮಗುವಿಗೆ ಅಂತರವಿದ್ದರೆ ದೊಡ್ಡ ಮಗು ಚಿಕ್ಕ ಮಗುವಿನ ಆರೈಕೆ ಕೂಡ ಮಾಡುತ್ತದೆ.
ದೊಡ್ಡದಾಗಲೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೊಬ್ಬರು ಇರುತ್ತಾರೆ
ನಾನು ನಮ್ಮ ಒಡಹುಟ್ಟಿದವರ ಜೊತೆಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ, ಆದರೆ ನಮ್ಮ ಮಕ್ಕಳು ಬೆಳೆದು ದೊಡ್ಡವರಾದಾಗ ಅವರಿಗೆ ಇಂಥ ವಿಷಯಗಳಲ್ಲಿ ಒಂಟಿತನ ಕಾಡಬಹುದು, ಒಂಟಿಯಾಗಿ ಬೆಳೆದ ನಮ್ಮ ಸ್ನೇಹಿತರು ಈ ಕುರಿತು ಹೇಳುವುದನ್ನು ಕೇಳುತ್ತೇವೆ.
ಹೀಗೆ ಒಂದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಕ್ಕಳಿಗೆ ಈ ರೀತಿಯೆಲ್ಲಾ ತುಂಬಾ ಒಳ್ಳೆಯದು.ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?.....



Click it and Unblock the Notifications