Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ವಿಚ್ಛೇದನದ ಬಗ್ಗೆ ಮಕ್ಕಳಿಗೆ ತಿಳಿಸುವುದು ಹೇಗೆ? ಈ ಪರಿಸ್ಥಿತಿ ಅವರಿಗೆ ನೋವಾಗದಂತೆ ಹೇಗೆ ಹ್ಯಾಂಡಲ್ ಮಾಡಬೇಕು
ಗಂಡ-ಹೆಂಡತಿ ಈ ಸಂಬಂಧ ಸಾಕು ಬೇರೆ-ಬೇರೆ ಆಗೋಣ ಎಂದು ತೀರ್ಮಾನಿಸಿದಾಗ ಅವರಿಗೆ ಮಕ್ಕಳಿದ್ದರೆ ಈ ವಿಷಯವನ್ನು ಮಕ್ಕಳಿಗೆ ತಿಳಿಸುವುದು ತುಂಬಾನೇ ಕಷ್ಟ.
ಸ್ವಲ್ಪ ದೊಡ್ಡ ಮಕ್ಕಳಾದರೆ ಪರಿಸ್ಥಿತಿ ಅವರಿಗೆ ಅರ್ಥವಾಗುವುದು, ಅದೇ 10 ವರ್ಷದ ಕೆಳಗಿನ ಮಕ್ಕಳಾದರೆ ತುಂಬಾನೇ ಕಷ್ಟ, ಅವರಿಗೆ ಅಪ್ಪ-ಅಮ್ಮ ಇನ್ಮುಂದೆ ಜೊತೆಗೆ ಇರಲ್ಲ ಎಂದು ತಿಳಸುವುದು ತುಂಬಾನೇ ಕಷ್ಟ , ಆದರೆ ವಾಸ್ತವ ಹೇಳಲೇಬೇಕು, ಆದರೆ ಮಕ್ಕಳಿಗೆ ಈ ವಿಷಯದ ಬಗ್ಗೆ ಹೇಳುವಾಗ ಈ ಕುರಿತು ಜಾಗ್ರತೆವಹಿಸಿ:

ಮಕ್ಕಳಿಗೆ ನೀವು ಅವರ ಜೊತೆ ಸದಾ ಇರುತ್ತೇವೆ ಎಂದು ಹೇಳಿ
ಮಕ್ಕಳಿಗೆ ವಿಚ್ಛೇದನದ ಬಗ್ಗೆ ಹೇಳುವಾಗ ನಮ್ಮ ಭವಿಷ್ಯದ ಗತಿಯೇನು ಎಂಬ ಚಿಂತೆ ಕಾಡುವುದು, ಹಾಗಾಗಿ ಅವರನ್ನು ಭಯಪಡಿಸಬೇಡಿ, ಅವರನ್ನು ಪ್ರೀತಿಯಿಂದ ಕರೆದು ಕೂರಿಸಿ, ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗಲ್ಲ, ನೀನು ಯಾವಾಗ ಬೇಕಾದರೂ ನನ್ನ ಕಾಣಬಹುದು ಎಂದು ಧೈರ್ಯ ತುಂಬಿ.
ಮಕ್ಕಳಿಗೆ ನಿಮ್ಮ ಸಂಗಾತಿಯ ಬಗ್ಗೆ ತಪ್ಪು ಮಾತುಗಳನ್ನು ಹೇಳಬೇಡಿ
ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಸಾಧ್ಯವಾಗದೆ ನೀವು ವಿಚ್ಛೇದನ ಪಡೆದಿರಬಹುದು, ಅದರೆ ಈ ಬಗ್ಗೆ ಮಕ್ಕಳ ಜೊತೆ ಹೇಳಬೇಡಿ, ತಾಯಿ ಬಗ್ಗೆ ತಂದೆ ದೂರುವುದು, ತಂದೆ ಬಗ್ಗೆ ತಾಯಿ ದೂರುವುದು ಮಾಡಬೇಡಿ, ವಿಚ್ಛೇದನ ಪಡೆದರೂ ಮಕ್ಕಳಿಗೆ ಒಳ್ಳೆಯ ಪೋಷಕರಾಗಲು ತಂದೆ-ತಾಯಿ ಪ್ರಯತ್ನಿಸಬೇಕು.
ಮಕ್ಕಳ ವಯಸ್ಸು ಗಮನಿಸಬೇಕು
10 ವರ್ಷದ ಕೆಳಗಿನ ಮಕ್ಕಳಾದರೆ ವಿಚ್ಚೇದನದ ಬಗ್ಗೆ ತಿಳಿಸುವುದು ಕಷ್ಟವಾಗಲ್ಲ, ಆ ಪ್ರಾಯದಲ್ಲಿ ಅವರಿಗೆ ವಿಚ್ಚೇದನದ ಬಗ್ಗೆ ಅರ್ಥವಾಗಲ್ಲ, ಬರ್ತಾ ಬರ್ತಾ ಅವರಿಗೆ ನಿಧಾನಕ್ಕೆ ಅರ್ಥವಾಗುತ್ತೆ, ಅಪ್ಪ-ಅಮ್ಮ ಜೊತೆಗೆ ಬಾಳಲ್ಲ ಎಂಬ ಸತ್ಯ ಅರಿತು ಬಾಳಲು ಪ್ರಯತ್ನಿಸುತ್ತಾರೆ. ಅದೇ ಹದಿಹರೆಯದ ಪ್ರಾಯದವರಾದರೆ ತುಂಬಾನೇ ಕಷ್ಟ. ಹೌದು ಈ ಪ್ರಾಯದಲ್ಲಿ ಅಪ್ಪ-ಅಮ್ಮ ಬೇರೆ-ಬೇರೆಯಾಗುತ್ತಿದ್ದಾರೆ ಎಂದು ತಿಳಿದಾಗ ಮಕ್ಕಳ ಮನಸ್ಸಿಗೆ ತುಂಬಾನೇ ಆಘಾತವಾಗುವುದು, ಈ ಪ್ರಾಯದಲ್ಲಿ ಮಕ್ಕಳಿಗೆ ಅದನ್ನು ಸಹಿಸುವುದು ಕಷ್ಟವಾಗುವುದು, ಅಪ್ಪ-ಅಮ್ಮನ ವಿಚ್ಛೇದನದ ಬಗ್ಗೆ ತನ್ನ ಫ್ರೆಂಡ್ಸ್ ಸರ್ಕಲ್‌ಗೆ ಏನು ಹೇಳಬೇಕು ? ಎಂಬೆಲ್ಲಾ ಗೊಂದಲ ಇರುತ್ತದೆ. ಹಾಗಾಗಿ ನೀವು ಈ ಪ್ರಾಯದ ಮಕ್ಕಳಿದ್ದರೆ ಅವರನ್ನು ತುಂಬಾನೇ ಚೆನ್ನಾಗಿ ಹ್ಯಾಂಡಲ್ ಮಾಡಬೇಕು. ನಮಗಿಬ್ಬರಿಗೆ ಹೊಂದಾಣಿಕೆ ಬರುತ್ತಿಲ್ಲ ಹಾಗಾಗಿ ಬೇರೆಯಾದೆವು ಆದರೆ ನಿನಗೆ ಸದಾ ನಾವಿಬ್ಬರು ಜೊತೆಗಿರುತ್ತೇವೆ ಎಂಬ ಆತ್ಮವಿಶ್ವಾಸ ತುಂಬಬೇಕು ಹಾಗೂ ಅದರಂತೆ ನಡೆದುಕೊಳ್ಳಬೇಕು.
ಮಕ್ಕಳಿಗಾಗಿ ಕಿತ್ತಾಡಬಾರದು?
ಹೌದು ತುಂಬಾ ಗಂಡ-ಹೆಂಡತಿ ವಿಚ್ಛೇದನಕ್ಕೆ ಮುಂದಾಗುವಾಗ ಮಗುಗಾಗಿ ಕಿತ್ತಾಡುತ್ತಾರೆ, ನನ್ನ ಜೊತೆ ಇರಬೇಕು ಎಂದು ಹೆಂಡತಿ ಹೇಳಿದರೆ ಗಂಡ ಕೋರ್ಟ್ ಹೇಳಿರುವ ದಿನಗಳಲ್ಲಿ ನನ್ನ ಜೊತೆ ಕಳುಹಿಸಲೇಬೇಕು ಎಂದು ಹಠ ಹಿಡಿಯುತ್ತಾನೆ, ಹೀಗೆ ಮಾಡಲೇಬೇಡಿ, ನಿಮ್ಮ ಮಗು ಗೊಂಬೆಯಲ್ಲ. ಈ ವಿಷಯದಲ್ಲಿ ಇಬ್ಬರೂ ಮಗುವಿನ ದೃಷ್ಟಿಯಿಂದ ಯೋಚಿಸಬೇಕು, ಮಗು ತಂದೆ ಜೊತೆ ಸ್ವಲ್ಪ ದಿನ ಇರುತ್ತೇನೆ ಎಂದು ಹೇಳಿದಾಗ ತಾಯಿ ಅಡ್ಡ ಪಡಿಸಬೇಡಿ, ಅದೇ ರೀತಿ ಮಗುವನ್ನು ತಾಯಿಯಿಂದ ಬಲವಂತವಾಗಿ ಕಿತ್ತುಕೊಂಡು ಹೋಗಲು ತಂದೆಯೂ ಪ್ರಯತ್ನಿಸಬಾರದು. ಇಬ್ಬರೂ ಮಗುವಿಗೆ ಬೇಕು, ಹಾಗಾಗಿ ಮಗುವಿನ ಭಾವನೆಗಳನ್ನು ಅರಿಯಲು ಪ್ರಯತ್ನಿಸಿದರೆ ನಿಮ್ಮ ವಿಚ್ಛೇದನ ಮಗುವಿನ ಕೆಟ್ಟ ಪ್ರಭಾವ ಬೀರದಂತೆ ತಡೆಗಟ್ಟಬಹುದು.
ವಿಚ್ಛೇದನ ತೆಗೆದುಕೊಳ್ಳುವುದು ನಿಮ್ಮಿಬ್ಬರ ವೈಯಕ್ತಿಕ ತೀರ್ಮಾನ, ನೀವು ನೆಮ್ಮದಿಗಾಗಿ ಕಂಡು ಕೊಂಡ ಮಾರ್ಗ, ಆದರೆ ನಿಮ್ಮ ವಿಚ್ಛೇದನ ಮಕ್ಕಳ ನೆಮ್ಮದಿ ಹಾಳಾಗದಂತೆ ಜಾಗ್ರತೆವಹಿಸಬೇಕು.



Click it and Unblock the Notifications
