Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಸಂಗಾತಿಯ ನಡವಳಿಕೆ ಹೀಗಿದ್ದರೆ ಅವರದ್ದು ತೋರ್ಪಡಿಕೆಯ ಪ್ರೀತಿ ಎಂದರ್ಥ!
ಪ್ರೀತಿ ಒಂದು ಪವಿತ್ರವಾದ ಬಂಧ ಇದ್ದಂತೆ. ಎರಡು ಮನಸ್ಸುಗಳು ಸೇರಿದಾಗ ಅಲ್ಲಿ ಒಂದು ಪವಿತ್ರವಾದ ಪ್ರೀತಿ ಹುಟ್ಟುತ್ತದೆ. ಆದರೆ ಆ ಪ್ರೀತಿಯು ಎರಡು ಕಡೆಯೂ ನಿಶ್ಕಲ್ಮಷವಾಗಿರಬೇಕು. ಇಲ್ಲದಿದ್ದರೆ ಆ ಪ್ರೀತಿಗೆ ಅರ್ಥವಿರೋದಿಲ್ಲ. ಕೆಲವೊಂದು ಸಂಬಂಧಗಳಲ್ಲೂ ಕೂಡ ಇದೇ ರೀತಿ ಆಗುತ್ತದೆ. ಒಬ್ಬರೂ ತುಂಬಾನೇ ಪ್ರಮಾಣಿಕವಾಗಿ ಪ್ರೀತಿ ಮಾಡುತ್ತಿರುತ್ತಾರೆ. ಪ್ರೀತಿಸಿದವರಿಗಾಗಿ ಪ್ರಾಣ ಕೊಡೋದಕ್ಕ ಸಿದ್ಧವಿರುತ್ತಾರೆ. ಆದರೆ ಇನ್ನೊಬ್ಬರು ಬರಿ ಮೇಲ್ನೋಟಕ್ಕೆ ಮಾತ್ರ ಪ್ರೀತಿಸಿದಂತೆ ನಾಟಕವಾಗುತ್ತಾರೆ.
ಸಂಗಾತಿಯ ಮೇಲೆ ನಿಜವಾದ ಪ್ರೀತಿ ಇರೋದಿಲ್ಲ. ಪ್ರೀತಿಯ ಹೆಸರಿನಲ್ಲಿ ಸಂಗಾತಿಗೆ ಮೋಸ ಮಾಡುತ್ತಿರುತ್ತಾರೆ. ಆದರೆ ನಮಗೆ ಈ ವಿಚಾರ ಗೊತ್ತೇ ಆಗೋದಿಲ್ಲ. ಅಷ್ಟಕ್ಕು ನಿಮ್ಮ ಸಂಗಾತಿಯು ಪ್ರೀತಿಯ ಹೆಸರಿನಲ್ಲಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಗೊತ್ತಾಗೋದು ಹೇಗೆ? ಈ ನಡವಳಿಕೆಗಳು ಇದ್ದರೆ ಖಂಡಿತ ನಿಮ್ಮ ಪತಿ ಪ್ರೀತಿಯ ಹೆಸರಿನಲ್ಲಿ ನಿಮಗೆ ಮೋಸ ಮಾಡುತ್ತಿದ್ದಾರೆ ಅನ್ನೋದು ಗೊತ್ತಾಗುತ್ತದೆ.

1. ಭಾವನೆಗಳು ಸ್ಥಿರವಾಗಿ ಇರೋದಿಲ್ಲ
ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಸರಿಯಾಗಿ ಗಮನಿಸುತ್ತಿರಬೇಕು. ಅವರು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ನಿಮ್ಮ ಬಗ್ಗೆ ಅವರು ಯಾವಾಗಲೂ ಕಾಳಜಿ ವಹಿಸುತ್ತಾರೆ. ನಿಮಗೆ ಒಂದು ಚೂರು ನೋವಾದರೂ ಅವರಿಗೆ ಅದನ್ನು ಸಹಿಸೋದಕ್ಕೆ ಸಾಧ್ಯವಾಗೋದಿಲ್ಲ. ಒಂದು ವೇಳೆ ಅವರು ನಿಮ್ಮನ್ನು ಪ್ರೀತಿಸುವಂತೆ ನಾಟವಾಡುತ್ತಿದ್ದರೆ ನಿಮ್ಮ ಬಗ್ಗೆ ಒಂದು ಸಾರಿ ಕಾಳಜಿ ತೋರಿದಂತೆ ಮಾಡಿ ನಂತರ ಅವರಷ್ಟಕ್ಕೆ ಅವರು ಇದ್ದು ಬಿಡುತ್ತಾರೆ.
ನಿಮ್ಮ ನೋವು, ಕಷ್ಟಗಳಲ್ಲಿ ಸ್ಪಂದಿಸಬೇಕು ಎಂದು ಅವರಿಗೆ ಅನ್ನಿಸೋದೇ ಇಲ್ಲ. ಅವರಿಗೂ ಹಾಗೂ ನಿಮಗೂ ಸಂಬಂಧವಿಲ್ಲದೇ ಇರುವ ಹಾಗೆ ಇದ್ದು ಬಿಡುತ್ತಾರೆ. ಒಂದು ವೇಳೆ ನೀವಾಗಿಯೇ ನಿಮ್ಮ ನೋವಿನ ಬಗ್ಗೆ ವ್ಯಕ್ತ ಪಡಿಸಿದರೂ ಕೂಡ ಅವರು ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗುವುದಿಲ್ಲ. ಈ ರೀತಿಯ ಸಂಬಂಧಗಳು ಹೆಚ್ಚು ದಿನ ಉಳಿಯೋದಿಲ್ಲ.
2. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತದೆ
ಸಂಬಂಧ ಎಂದ ಮೇಲೆ ಅಲ್ಲಿ ಲೈಂಗಿಕ ಕ್ರಿಯೆಯೂ ತುಂಬಾನೇ ಮುಖ್ಯವಾಗುತ್ತದೆ. ಮಾನಸಿಕ ಸಂಪರ್ಕದ ಜೊತೆಗೆ ದೈಹಿಕ ಸಂಪರ್ಕವು ಕೂಡ ಚೆನ್ನಾಗಿದ್ದರೆ ಮಾತ್ರ ಆ ಸಂಬಂಧ ಗಟ್ಟಿಯಾಗಿರೋದಕ್ಕೆ ಸಾಧ್ಯ. ಸಂಗಾತಿಗೆ ನಿಮ್ಮ ಮೇಲೆ ನಿಜವಾಗಿಯೂ ಪ್ರೀತಿ ಇಲ್ಲದೇ ಅವರು ನಿಮ್ಮನ್ನು ಪ್ರೀತಿಸಿದವರಂತೆ ನಾಟಕವಾಡುತ್ತಿದ್ದರೆ ಅವರಿಗೆ ಬೇಕಾದಾಗ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರಿಸುತ್ತಾರೆ.
ಇನ್ನೂ ನಿಮ್ಮ ಲೈಂಗಿಕ ಭಾವನೆಗಳಿಗೆ ಅವರು ಬೆಲೆ ಕೊಡುವುದಿಲ್ಲ. ಅವರ ಲೈಂಗಿಕ ತೃಪ್ತಿಯನ್ನು ಈಡೇರಿಸಿಕೊಂಡು ಸುಮ್ಮನಿರುತ್ತಾರೆ. ಹೆಚ್ಚಾಗಿ ನಿಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳದ ನಿಮ್ಮ ಸಂಗಾತಿ ಯಾವಾಗ ಅವರು ಲೈಂಗಿಕ ಕ್ರಿಯೆಯ ಮೇಲೆ ಆಸಕ್ತಿ ಹೆಚ್ಚಾಗುತ್ತದೆ ಆಗ ನಿಮ್ಮಲ್ಲಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ನಿಮ್ಮ ಕಾಳಜಿ ಮಾಡುತ್ತಾರೆ. ಸಂಗಾತಿಯ ನಡವಳಿಕೆ ಈ ರೀತಿ ಇದ್ದರೆ ಇದು ಬರೀ ತೋರ್ಪಡಿಕೆಯ ಪ್ರೀತಿಯಾಗಿರುತ್ತದೆ ಅಷ್ಟೇ.
3. ಅವರ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿಲ್ಲ
ಒಬ್ಬರನ್ನೊಬ್ಬರು ಅರಿತುಕೊಂಡು ಬಾಳುವುದೇ ಪ್ರೀತಿ. ಇಲ್ಲಿ ಒಬ್ಬರು ಮತ್ತೊಬ್ಬರ ಕಷ್ಟ, ದುಃಖ, ನೋವುಗಳಿಗೆ ಹೆಗಲಾಗಬೇಕು. ಆದರೆ ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳಿಗೆ ಬೆಲೆ ಕೊಡೋದಿಲ್ಲ. ಜೊತೆಗೆ ಅವರ ಭಾವನೆಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಅವರ ಬಾಳಿನಲ್ಲಿ ಏನೇ ನಡೆಯುತ್ತಿದ್ದರು ನಿಮ್ಮಲ್ಲಿ ಹೇಳಿಕೊಳ್ಳುವುದಿಲ್ಲ. ಏನೇ ಕಷ್ಟಗಳು ಬಂದರೂ ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ.
ಯಾಕಂದ್ರೆ ಅವರಿಗೆ ಗೊತ್ತಿರುತ್ತದೆ ಭವಿಷ್ಯದಲ್ಲಿ ಅವರು ನಿಮ್ಮ ಜೊತೆಗೆ ಇರುವುದಿಲ್ಲ. ನಿಮ್ಮನ್ನು ಕೇವಲ ಟೈಂ ಪಾಸ್‌ಗಾಗಿ ಮಾತ್ರ ಪ್ರೀತಿ ಮಾಡಿ ನಂತರ ಬಿಟ್ಟು ಹೋಗುವುದು ಅವರ ಉದ್ದೇಶವಾಗಿರುತ್ತದೆ. ಹೀಗಾಗಿ ಅವರ ಯಾವುದೇ ಖಾಸಗಿ ವಿಚಾರಗಳು ನಿಮಗೆ ಗೊತ್ತಾಗದ ಹಾಗೆ ಜಾಗರೂಕತೆ ವಹಿಸುತ್ತಾರೆ.
4. ನಿಮಗೆ ಗೌರವ ನೀಡುವುದಿಲ್ಲ
ಸಂಬಂಧದಲ್ಲಿ ಒಬ್ಬರಿಗೆ ಗೌರವ ಕೊಟ್ಟು ಅವರಿಂದ ಗೌರವವನ್ನು ಪಡೆದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಆದರೆ ನಿಮ್ಮ ಸಂಗಾತಿಯು ನೀವು ಗೌರವ ಕೊಡಬೇಕೆಂದು ಬಯಸುತ್ತಾರೆ ಹೊರತು ನಿಮಗೆ ಗೌರವ ಕೊಡೋದಕ್ಕೆ ತಯಾರಿರುವುದಿಲ್ಲ. ನಿಮ್ಮನ್ನು ನಿಂದಿಸಿ, ಹೀಯಾಳಿಸಿ ಮಾತನಾಡುತ್ತಾರೆ. ನಿಮ್ಮ ನಿರ್ಧಾರಗಳನ್ನು ಅವರು ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ಅವರಿಗೆ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಾರೆ.
5. ಕೊಟ್ಟ ಮಾತಿಗೆ ಬದ್ಧರಾಗಿರೋದಿಲ್ಲ
ಸಂಗಾತಿಗೆ ನಿಮ್ಮ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ಅವರು ನಿಮ್ಮನ್ನು ಜೋಪಾನ ಮಾಡುತ್ತಾರೆ. ಕೇವಲ ತೋರ್ಪಡಿಕೆಯ ಪ್ರೀತಿಯಾದರೆ ಅವರು ನಿಮಗೆ ಕೊಟ್ಟ ಯಾವ ಮಾತನ್ನೂ ಕೂಡ ಉಳಿಸಿಕೊಳ್ಳುವುದಿಲ್ಲ. ಒಂದೊಂದು ಸಾರಿ ಒಂದೊಂದು ಮಾತನಾಡುತ್ತಾರೆ. ಪದೇ ಪದೇ ಸುಳ್ಳು ಹೇಳುತ್ತಾರೆ. ಒಂದು ಸುಳ್ಳು ಹೇಳಲು ಮತ್ತೊಂದು ಸುಳ್ಳು ಹೀಗೆ ಸುಳ್ಳಿನಲ್ಲೇ ಮನೆ ಕಟ್ಟುತ್ತಾರೆ.
ನಿಷ್ಕಲ್ಮಶ ಪ್ರೀತಿ ಯಾವುದು ತೋರ್ಪಡಿಕೆಯ ಪ್ರೀತಿ ಯಾವುದು ಅನ್ನೋದು ನಮಗೆ ಅವರ ನಡವಳಿಕೆಯಲ್ಲಿ ಗೊತ್ತಾಗಿ ಬಿಡುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ಪ್ರೀತಿಯ ನಾಟಕವಾಡುತ್ತಿರುವುದು ಖಾತರಿಯಾದರೆ ಆ ಪ್ರೀತಿಯನ್ನು ಅಲ್ಲಿಗೆ ಕೊನೆಯಾಗಿಸುವುದು ಒಳ್ಳೆಯದು.



Click it and Unblock the Notifications

