Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಪತಿ ನಿಮ್ಮನ್ನು ಹೀಯಾಳಿಸುತ್ತಿದ್ದರೆ ಆ ಸ್ವಭಾವ ತಡೆಯುವುದು ಹೇಗೆ?
ನಮ್ಮನ್ನು ಯಾರಾದರೂ ಹೀಯಾಳಿಸುವುದನ್ನು ಯಾರೂ ಇಷ್ಟಪಡುವುದಿಲ್ಲ, ಆದರೆ ವೈವಾಹಿಕ ಜೀವನ ಅಂತ ಬಂದಾಗ ಸಂಗಾತಿ ನಮ್ಮನ್ನು ಹೀಯಾಳಿಸುವ/ಸುಮ್ಮನೆ ರೇಗುವ ಸಂಗಾತಿಯಾದರೆ ತುಂಬಾ ಹಿಂಸೆ ಅನಿಸುವುದು ಆದರೆ ಸುಮ್ಮನೆ ಸಂಸಾರ ಒಡೆಯುವುದು ಬೇಡ ಎಂದು ಬಯಸುವವರು ಅದನ್ನೆಲ್ಲಾ ಸಹಿಸುತ್ತಾರೆ.
ಆದರೆ ಹೀಗೆ ಸಹಿಸುತ್ತಾರೆ ಎಂದ ಮಾತ್ರಕ್ಕೆ ಸಂಗಾತಿ ತನ್ನ ಕೆಟ್ಟ ವರ್ತನೆ ಬದಲಾಯಿಸದೆ ಹೋದರೆ ಸುಮ್ಮನೆ ನೋವು ಅನುಭವಿಸುವ ಬದಲಿಗೆ ಗಂಡನ ಆ ವರ್ತನೆ ಬದಲಾಯಿಸಲು ನೀವು ಪ್ರಯತ್ನ ಮಾಡುವುದು ಒಳ್ಳೆಯದು. ಗಂಡ ತನ್ನ ಹೆಂಡತಿಯನ್ನು ಹೀಯಾಳಿಸಲು ಕಾರಣವೇನು?. ಗಂಡನ ಆ ರೀತಿಯ ವರ್ತನೆ ಬದಲಾಯಿಸುವುದು ಹೇಗೆ? ಎಂದು ನೋಡೋಣ ಬನ್ನಿ:

ಗಂಡ ಹೆಂಡತಿಯನ್ನು ಹೀಯಾಳಿಸಲು ಕಾರಣವೇನು?
ನೀವೇ ಕಾರಣ: ಈ ರೀತಿ ಅನಿಸಿದರೆ ನಿಮಗೆ ಅಚ್ಚರಿ ಅನಿಸಬಹುದು, ಆದರೆ ಸತ್ಯವೂ ಹೌದು. ಅವರು ಹೀಯಾಳಿಸಿದಾಗ ನೀವು ಆಗಲೇ ಪ್ರತಿಕ್ರಿಯೆ ನೀಡಿದ್ದರೆ ಅವರು ಮುಂದೆ ಆ ರೀತಿ ಮಾಡುತ್ತಿರಲಿಲ್ಲ, ಆದರೆ ನೀವು ಮೌನವಹಿಸಿದಾಗ ಅವರಿಗೆ ಅವರು ಹೇಳುವುದೇ ಸರಿ ಅನಿಸುವುದು, ನಿಮ್ಮ ಮೌನವೇ ಅವರು ಅವರ ಚಾಳಿ ಮುಂದುವರೆಸಿಕೊಂಡು ಹೋಗಲು ಕಾರಣವಾಗುತ್ತದೆ.
ಅಪರೂಪಕ್ಕೆ ರೇಗುವುದು ಸಂಬಂಧದಲ್ಲಿ ಸಹಜ
ಹೀಯಾಳಿಸುವುದು ಬೇರೆ, ರೇಗುವುದು ಬೇರೆ , ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡಕ್ಕೆ ಒಳಗಾದಾಗ, ಪತ್ನಿ ಮಾಡಿದ ಏನಾದರೂ ಕೆಲಸ ಇಷ್ಟವಾಗದಿದ್ದಾಗ ರೇಗುವುದು ಸಹಜ, ಆದರೆ ಪ್ರತಿದಿನ ರೇಗುವುದು ಸರಿಯಲ್ಲ. ಸುಮ್ಮನೆ ಹೆಂಡತಿಯನ್ನು ಬೈಯ್ಯುತ್ತಿದ್ದರೆ ಅಥವಾ ಹೀಯಾಳಿಸುತ್ತಿದ್ದರೆ ಅದರಿಂದ ಗಂಡ-ಹೆಂಡತಿ ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗುವುದು, ಅಂತರ ಹೆಚ್ಚಾಗುವುದು.
ಗಂಡನ ಈ ವರ್ತನೆ ಬದಲಾಯಿಸುವುದು ಹೇಗೆ?
1. ತಾಳ್ಮೆಯಿಂದಿರಿ: ಪತಿ ರೇಗಿದಾಗ, ಹೀಯಾಳಿಸಿದಾಗ ಆ ಕ್ಷಣ ತಾಳ್ಮೆವಹಿಸಿ, ನಂತರ ಅವರ ಬಳಿ ಅವರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವುಂಟಾಯ್ತು ಎಂದು ಅವರಿಗೆ ಹೇಳಿ, ಅವರು ನಿಮ್ಮನ್ನು ಪ್ರೀತಿಸುತ್ತಿದ್ದರೆ ಖಂಡಿತವಾಗಲೂ ಅವರು ತಮ್ಮ ವರ್ತನೆ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
2. ಅವರ ಬದಲಾಗದಿದ್ದರೆ?
ಹೌದು ಕೆಲವರಿಗೆ ಎಷ್ಟೇ ಬುದ್ಧಿ ಮಾತು ಹೇಳಿದರೂ, ಪ್ರೀತಿ ತೋರಿದರೂ ಅವರು ತಮ್ಮ ವರ್ತನೆ ಬದಲಾಯಿಸುವುದಿಲ್ಲ ಅಂಥ ಸಂದರ್ಭದಲ್ಲಿ ನೀವು ಅವರು ನಿಮ್ಮನ್ನು ಹೀಯಾಳಿಸುತ್ತಿದ್ದರೆ ಅದನ್ನು ಸಹಿಸಿಕೊಂಡು ಇರಬೇಕೆಂದಿಲ್ಲ, ನಿಮ್ಮ ಬದುಕು ಹೇಗಿರಬೇಕು ಎಂದು ನಿರ್ಧರಿಸುವ ಸಂಪೂರ್ಣ ಹಕ್ಕು ನಿಮಗಿದೆ.
ಸಂಸಾರ ಎಂದರೆ ಹೊಂದಾಣಿಕೆ ಇರಬೇಕು, ಆದರೆ ಅಲ್ಲಿ ದೌರ್ಜನ್ಯವಿದ್ದರೆ ಅಂಥ ಸಂಸಾರ ಜೀವನದಿಂದ ಆಪತ್ತು ತಪ್ಪಿದ್ದಲ್ಲ. ನೀವು ಆತ್ಮಗೌರವಕ್ಕೆ ಪೆಟ್ಟಾದರೆ ಅವರ ಜೊತೆ ಇರಲು ಇಷ್ಟಪಡಲ್ಲ ಎಂಬುವುದು ನಿಮ್ಮ ಸಂಗಾತಿಗೆ ಗೊತ್ತಾದರೆ ಅವರು ಖಂಡಿತ ತಮ್ಮ ಸ್ವಭಾವ ಬದಲಾಯಿಸಲು ಯತ್ನಿಸುತ್ತಾರೆ.
ಸಂಸಾರದಲ್ಲಿ ಪತ್ನಿಗಿಂತ ಪತಿಯ ಸ್ಥಾನ ತುಂಬಾ ಮೇಲು ಎಂದೇನಿಲ್ಲ, ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಬಾಳ್ವೆ ಮಾಡಿದರೆ ಮಾತ್ರ ಅಲ್ಲಿ ಪ್ರೀತಿ ಇರಲು ಸಾಧ್ಯ.



Click it and Unblock the Notifications