Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನಿಮ್ಮಲ್ಲಿ ಈ ಗುಣಗಳಿದ್ದರೆ ಯಾವ ಹುಡುಗಿಯಾದರೂ ಪ್ರೀತಿಯಲ್ಲಿ ಬೀಳುತ್ತಾಳೆ
ಪ್ರೀತಿ ಇಂಥವರ ಮೇಲೆ ಹುಟ್ಟುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಯಾರ ಮೇಲೂ ಕೂಡ ಪ್ರೀತಿ ಹುಟ್ಬಬಹುದು. ಆದ್ರೆ ನಮಗೆ ಯಾರ ಮೇಲೆ ಪ್ರೀತಿಯಾಗುತ್ತೋ ಅವರು ನಮ್ಮನ್ನು ಪ್ರೀತಿ ಮಾಡಬೇಕಂತೇನಿಲ್ಲ. ಹುಡುಗರು ಒಂದು ಹುಡುಗಿಯನ್ನು ಇಷ್ಟ ಪಟ್ಟರೆ ಅವರನ್ನು ಪಡೆಯೋದಕ್ಕೆ ತುಂಬಾನೇ ಪ್ರಯತ್ನ ಪಡುತ್ತಾರೆ. ಆದ್ರೆ ಕೆಲವೊಂದು ಸಲ ಆ ಪ್ರಯತ್ನದಲ್ಲಿ ಸೋತು ಹೋಗುತ್ತಾರೆ. ಅಷ್ಟಕ್ಕು ಹುಡುಗಿಯರು ಎಂತಹ ಹುಡುಗನನ್ನು ಇಷ್ಟ ಪಡುತ್ತಾರೆ. ಹುಡುಗರಲ್ಲಿ ಯಾವ ಗುಣಗಳಿದ್ದರೆ ಹುಡುಗಿಯರಿಗೆ ಇಷ್ಟವಾಗುತ್ತದೆ ಅನ್ನೋದನ್ನ ತಿಳಿಯೋಣ.

1. ಎಲ್ಲರನ್ನೂ ಗೌರವಿಸುವ ಗುಣವಿರಬೇಕು
ಹುಡುಗ ನೋಡೋದಿಕಷ್ಟೇ ಚೆನ್ನಾಗಿದ್ದರೆ ಹುಡುಗಿಯರಿಗೆ ಇಷ್ಟವಾಗೋದಿಲ್ಲ. ಹುಡುಗರಲ್ಲಿ ಮತ್ತೊಬ್ಬರಿಗೆ ಗೌರವ ನೀಡುವ ಗುಣವಿರಬೇಕು. ಹಿರಿಯರು, ಅಧಿಕಾರಿಗಳು, ಸ್ನೇಹಿತರು ಮತ್ತು ಮಹಿಳೆಯರನ್ನು ಎಲ್ಲರನ್ನೂ ಆತ ಗೌರವ ಭಾವದಿಂದ ಕಾಣಬೇಕೆಂದು ಹುಡುಗಿ ಬಯಸುತ್ತಾಳೆ. ಅಷ್ಟೇ ಯಾಕೆ, ಅಪರಿಚಿತರನ್ನು ಮಾತನಾಡಿಸುವಾಗಲೂ ಅಷ್ಟೇ ಗೌರವದಿಂದ ಮಾತನಾಡಿಸಬೇಕು.
2. ಮಹಿಳೆಯರನ್ನು ಪೂಜ್ಯ ಭಾವದಿಂದ ಕಾಣಬೇಕು
ಪುರುಷರಲ್ಲಿ ಮಹಿಳೆಯರು ಗುರುತಿಸುವ ಮೊದಲ ಗುಣ ಎಂದರೆ ಆತ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾನೆ ಎಂದು. ಆತನ ತಾಯಿ, ತಂಗಿ, ಸಂಬಂಧಿಕರು ಅಥವಾ ಸ್ನೇಹಿತರೇ ಆಗಲಿ. ಪ್ರತಿಯೊಬ್ಬರನ್ನೂ ಪೂಜ್ಯ ಭಾವದಿಂದ ಕಾಣಬೇಕು. ಸಂಕಷ್ಟದ ಪರಿಸ್ಥಿತಿಯಲ್ಲಿ ಅವರಿಗೆ ಹೆಗಲಾಗಬೇಕು. ಅಂತಹ ಗುಣ ಇರುವ ಪುರುಷರು ಮಹಿಳೆಯರಿಗೆ ಬೇಗನೆ ಇಷ್ಟವಾಗುತ್ತಾರೆ.
3. ಪ್ರಾಮಾಣಿಕತೆ
ಪುರುಷರಲ್ಲಿ ಇರಬೇಕಾದ ಮತ್ತೊಂದು ಗುಣ ಎಂದರೆ ಪ್ರಾಮಾಣಿಕತೆ. ತನ್ನ ಮಾತು, ನಡವಳಿಕೆ ಹಾಗೂ ಮಾಡುವ ಕೆಲಸದಲ್ಲಿ ಪುರುಷರು ಪ್ರಾಮಾಣಿಕತೆಯನ್ನು ತೋರಬೇಕು. ಯಾವುದೇ ಕಾರಣಕ್ಕೂ ಮೋಸ ಮಾಡುವ ಗುಣ ಆತನಲ್ಲಿ ಇರಬಾರದು. ನೀವು ಈ ಮೊದಲು ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದು, ಈಗ ಅವರಿಂದ ದೂರವಾಗಿದ್ದರೆ ಅದನ್ನು ನೀವು ಇಷ್ಟ ಪಡುವ ಹುಡುಗಿಯಲ್ಲಿ ಮುಕ್ತವಾಗಿ ಹೇಳಿಕೊಳ್ಳಿ. ಆಗ ನಿಮ್ಮ ಸಂಗಾತಿ ಅದನ್ನು ಒಪ್ಪಿಕೊಳ್ಳುತ್ತಾಳೆ. ಒಂದು ವೇಳೆ ನೀವು ಹಳೆಯ ವಿಚಾರವನ್ನು ಮುಚ್ಚಿಟ್ಟರೆ ಮುಂದೊಂದು ದಿನ ಸಮಸ್ಯೆ ಎದುರಿಸಬೇಕಾಗುತ್ತದೆ.
4. ಫ್ಯಾಮಿಲಿ ಮ್ಯಾನ್ ಆಗಿರಬೇಕು
ಹುಡುಗರಲ್ಲಿ ಫ್ಯಾಮಿಲಿ ಮ್ಯಾನ್ ಗುಣವಿದ್ದರೆ ಹುಡುಗಿಯರಿಗೆ ಇಷ್ಟವಾಗುತ್ತದೆ. ಹುಡುಗನಾದವನು ಇಡೀ ದಿನ ಫ್ರೆಂಡ್ಸ್, ಪಾರ್ಟಿ ಅಂತ ಹೊರಗಡೆ ಸುತ್ತಾಡೋದನ್ನು ಬಿಟ್ಟು ಮನೆಗಾಗಿ ಸಮಯ ಮೀಸಲಿಡಬೇಕು. ಸಾಧ್ಯವಾದಷ್ಟು ಮನೆಯಲ್ಲಿ ತಾಯಿ, ತಂದೆಗೆ ಸಹಾಯ ಮಾಡಬೇಕು. ತಂಗಿಗೆ ಒಳ್ಳೆಯ ಅಣ್ಣನಾಗಿರಬೇಕು. ಕುಟುಂಬವನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ಈ ಎಲ್ಲಾ ಗುಣಗಳು ಹುಡುಗಿಯರಿಗೆ ಇಷ್ಟವಾಗುತ್ತದೆ.
5. ಆರ್ಥಿಕವಾಗಿ ಸದೃಢರಾಗಿರಿ
ನಿಮ್ಮಲ್ಲಿ ಈ ಮೇಲಿನ ನಾಲ್ಕು ಗುಣಗಳಿರೋದು ಎಷ್ಟು ಮುಖ್ಯವು ಅಷ್ಟೇ ಮುಖ್ಯ ನೀವು ಆರ್ಥಿಕವಾಗಿ ಸದೃಢರಾಗಿರೋದು ಕೂಡ. ನೀವೊಂದು ಒಳ್ಳೆಯ ಕೆಲಸದಲ್ಲಿರಬೇಕು, ಹಾಗೂ ಸೇವಿಂಗ್ಸ್ ಕೂಡ ಮಾಡಿರಬೇಕು. ನಿಮ್ಮನ್ನು ಮದುವೆಯಾದ ಮೇಲೆ ಹುಡುಗಿಗೆ ಮುಂದೆ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯಾಗುವುದಿಲ್ಲ ಅನ್ನೋದನ್ನ ಖಾತರಿ ಪಡಿಸಿಕೊಂಡು ಹೆಚ್ಚಿನವರು ಮದುವೆಯಾಗಲು ಒಪ್ಪುತ್ತಾರೆ. ಇದು ಕೇಳೋದಕ್ಕೆ ಕೊಂಚ ಕಷ್ಟ ಅನ್ನಿಸಬಹುದು. ಆದರೆ ಇದುವೇ ನಿಜವಾದ ಸತ್ಯ.
6. ಹುಡುಗಿಯನ್ನು ನೀವು ಬದಲಾಯಿಸಲು ಪ್ರಯತ್ನಿಸಬೇಡಿ
ಹುಡುಗಿ ನಿಮ್ಮ ಸ್ನೇಹಿತೆಯೇ ಆಗಿರಬಹುದು. ಆದರೆ ಆಕೆಯನ್ನು ನೀವು ಬದಲಾಯಿಸಲು ಪ್ರಯತ್ನಿಸಬೇಡಿ. ನೀನು ಹೀಗಿರಬೇಡ, ಈ ರೀತಿ ಮಾಡಬೇಡ, ಈ ಗುಣಗಳನ್ನು ಬದಲಾಯಿಸು ಎಂದು ಹೇಳಬೇಡಿ. ಬದಲಾಗಿ ಆಕೆ ಹೇಗಿದ್ದಾಳೆಯೋ ಅದೇ ರೀತಿ ಆಕೆಯನ್ನು ಸ್ವೀಕರಿಸಿ. ಆಕೆಯ ಸಮಸ್ಯೆಗಳಿಗೆ ಸ್ಪಂದಿಸಿ. ಈ ಗುಣ ನಿಮ್ಮಲ್ಲಿದ್ದರೆ ಖಂಡಿತ ಹುಡುಗಿ ನಿಮ್ಮನ್ನು ಇಷ್ಟ ಪಡುತ್ತಾಳೆ.
7. ಮಾತುಗಾರಿಕೆ, ಬುದ್ಧಿವಂತಿಕೆ ಇರಬೇಕು
ಬುದ್ಧಿವಂತ ಹುಡುಗರತ್ತ ಹುಡುಗಿಯರು ಬಹು ಬೇಗನೆ ಆಕರ್ಷಿತರಾಗುತ್ತಾರೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದುಕೊಳ್ಳಿ. ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿ. ನಿಮ್ಮ ಹುಡುಗಿಗೂ ಅಗತ್ಯವಿದ್ದಾಗ ಕೆಲಸದಲ್ಲಿ ಸಹಕರಿಸಿ. ಇನ್ನೂ ಮುಖ್ಯವಾದ ವಿಚಾರ ಅಂದರೆ ನಿಮಗೆ ಚೆನ್ನಾಗಿ ಮಾತನಾಡೋದು ಹೇಗೆ ಅನ್ನೋದು ಗೊತ್ತಿರಬೇಕು. ನಿಮ್ಮ ಮಾತು ಎಂಥವರನ್ನಾದರೂ ಮೋಡಿ ಮಾಡುತ್ತಿರಬೇಕು.
8. ಡ್ರೆಸ್ಸಿಂಗ್ ಸ್ಟೈಲ್ ಚೆನ್ನಾಗಿರಲಿ
ನಾವು ಬೇರೆಯವರ ಮುಂದೆ ಹೇಗೆ ಕಾಣಿಸುತ್ತೇವೆ ಅನ್ನೋದು ಕೂಡ ತುಂಬಾನೇ ಮುಖ್ಯವಾಗುತ್ತದೆ ಅಲ್ವಾ? ಆಫಿಸ್‌ಗೆ ಅಥವಾ ಹೊರಗಡೆ ಎಲ್ಲಾದರೂ ಹೋಗುವಾಗ ಚೆನ್ನಾಗಿ ಡ್ರೆಸ್ಸ್ ಮಾಡಿಕೊಳ್ಳಿ. ಡ್ರೆಸ್ಸಿಂಗ್ ಸೆನ್ಸ್ ಚೆನ್ನಾಗಿರುವ ಹುಡುಗರನ್ನು ಹುಡುಗಿಯರನ್ನು ಇಷ್ಟ ಪಡುತ್ತಾರೆ. ನಾವು ಎಲ್ಲಾ ಜಾಗಕ್ಕೆ ಒಂದೇ ರೀತಿ ಡ್ರೆಸ್ ಮಾಡಿಕೊಂಡು ಹೋಗೋದಿಕ್ಕೆ ಆಗೋದಿಲ್ಲ. ಹೀಗಾಗಿ ಯಾವ ಸ್ಥಳಕ್ಕೆ ಹೋಗುವಾಗ ಹೇಗೆ ಡ್ರೆಸ್ಸ್ ಮಾಡಿಕೊಳ್ಳಬೇಕು ಅನ್ನೋ ಪ್ರಜ್ಞೆ ಇರಬೇಕು.
ಹುಡುಗಿಯರು ನಿಮ್ಮನ್ನು ನೋಡಿ ಮೆಚ್ಚಿಕೊಳ್ಳಬೇಕೆಂದರೆ ಇಷ್ಟು ಗುಣಗಳಿದ್ದರೆ ಸಾಕು. ಎಂತಹ ಹುಡುಗಿಯಾದರೂ ನಿಮ್ಮ ಈ ಗುಣಗಳಿಗೆ ಮನ ಸೋಲದೆ ಇರೋದಿಲ್ಲ.



Click it and Unblock the Notifications

