Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನೈತಿಕ ಸಂಬಂಧವಿದೆ ಎಂದು ಸೂಚಿಸುವ ಪತಿಯ ನಡವಳಿಕೆಗಳಿವು
ಮನೆಯಲ್ಲಿ ಸುಂದರವಾದ ಪತ್ನಿ ಇದ್ದರೂ ಕೂಡ ಕೆಲ ಗಂಡಸರು ಅನ್ಯ ಮಹಿಳೆಯರತ್ತ ಆಕರ್ಷಿತರಾಗೋದು ಸಹಜ. ಇದಕ್ಕೆ ಕಾರಣ ಅವರಿಗೆ ಪತ್ನಿಯ ಮೇಲೆ ಆಸಕ್ತಿ ಇಲ್ಲದಿರಬಹುದು. ಅಥವಾ ಬೇರ್ಯಾವುದಾದರೂ ಕಾರಣ ಇದ್ದಿರಬಹುದು.
ಗಂಡಸರು ತಮ್ಮ ಅನೈತಿಕ ಸಂಬಂಧದ ಬಗ್ಗೆ ಹೇಳಿಕೊಳ್ಳುವುದಿಲ್ಲ. ಕೆಲವೊಂದು ಸಲ ಅವರ ನಡವಳಿಕೆಗಳು ಅನೈಕ ಸಂಬಂಧವಿರುವ ಬಗ್ಗೆ ಸುಳಿವುಗಳನ್ನು ನೀಡುತ್ತದೆ.

ಹಾಗಾದ್ರೆ ಪತಿಗೆ ಅನೈತಿಕ ಸಂಬಂಧವಿದೆಯೆಂದು ತಿಳಿದುಕೊಳ್ಳುವುದು ಹೇಗೆ? ಎಂಬುದನ್ನು ಹೇಳ್ತೀವಿ.

1. ಪತ್ನಿಗೆ ತಿಳಿಯದಂತೆ ಫೋನ್ ಸಂಭಾಷಣೆ
ನಿಮ್ಮ ಪತಿಗೆ ಅನೈತಿಕ ಸಂಬಂಧವಿರುವ ಬಗ್ಗೆ ನಿಮಗೆ ಗುಮಾನಿ ಎದ್ದಿರಬಹುದು. ಇಂತಹ ಸಂದರ್ಭದಲ್ಲಿ ಅವರ ಕೆಲವು ನಡವಳಿಕೆಗಳನ್ನು ಗಮನಿಸಿ. ಫೋನ್ ಬಂದಾಗ ಹೊರಗಡೆ ಹೋಗಿ ಅಥವಾ ಬಾತ್ ರೂಂನಲ್ಲಿ ಮಾತನಾಡುವುದು. ಇಂತಹ ನಡುವಳಿಕೆಗಳು ಕಂಡು ಬಂದಾಗ ಅವರ ಫೋನ್ ಪರಿಶೀಲನೆ ಮಾಡಿ.

2. ಪತಿ ಖಾಸಗಿತನವನ್ನು ಬಯಸಿದಾಗ
ಪತಿ-ಪತ್ನಿಯ ನಡುವೆ ಗುಪ್ತ ವಿಚಾರಗಳು ಅನ್ನೋದು ಇರೋದಿಲ್ಲ. ಪತಿಯ ಬಗ್ಗೆ ಪತ್ನಿಗೆ ಹಾಗೂ ಪತ್ನಿಯ ಬಗ್ಗೆ ಪತಿಗೆ ಎಲ್ಲಾ ವಿಚಾರಗಳು ತಿಳಿದಿರುತ್ತದೆ. ಆದರೆ ಏಕಾಏಕಿ ನಿಮ್ಮ ಪತಿ ಫೋನ್‌ಗೆ ಹೊಸ ಲಾಕ್ ಹಾಕುವುದು. ಲಾಪ್‌ಟಾಪ್‌ಗೆ ಬೇರೆ ಪಾಸ್‌ವರ್ಡ್ ಅಳವಡಿಸೋದು. ಅಷ್ಟೇ ಅಲ್ಲ, ಮೊಬೈಲ್‌ನಲ್ಲಿ ಕೆರೆ ಹಾಗೂ ಮೆಸೇಜ್ ಹಿಸ್ಟರಿಗಳನ್ನು ಅಳಿಸಿ ಹಾಕುತ್ತಿದ್ದರೆ ಖಂಡಿತ ನಿಮ್ಮ ಪತಿಗೆ ಅನೈತಿಕ ಸಂಬಂಧವಿದೆ ಎಂದು ಅರ್ಥ.

3. ಲೈಂಗಿಕ ಆಸಕ್ತಿ ಕಡಿಮೆ ಆದಾಗ
ನಿಮ್ಮ ಪತಿಯು ಲೈಂಗಿಕ ಚಟುವಟಿಯಲ್ಲಿ ಭಾಗವಹಿಸದಿದ್ದಾಗ ಅಥವಾ ನೀವು ಬಯಸಿದಾಗ ಅವರು ಆಸಕ್ತಿ ತೋರಿಸದೇ ಇರುವುದು ಕೂಡ ಒಂದು ಸೂಚನೆಯೇ ಸರಿ. ಅವರಿಗೆ ಬೇರೆ ಕಡೆ ಎಲ್ಲವೂ ಸಿಗುವಾಗ ಪತ್ನಿಯ ಮೇಲಿನ ಆಸಕ್ತಿ ಕ್ರಮೇಣ ಕಡಿಮೆಯಾಗುತ್ತಾ ಸಾಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಜೊತೆ ರೋಮ್ಯಾಂಟಿಕ್ ಆಗಿ ಇರಲು ಅವರು ಇಷ್ಟ ಪಡೋದಿಲ್ಲ.

4. ಪತಿಯು ಪದೇ ಪದೇ ಬೇರೆ ಮಹಿಳೆಯ ಹೆಸರು ಹೇಳುತ್ತಿರುತ್ತಾನೆ
ಪತಿಯು ನಿಮ್ಮ ಜೊತೆಗೆ ಮಾತನಾಡುವಾಗಲೇ ಪದೇ ಪದೇ ಬೇರೊಬ್ಬ ಮಹಿಳೆಯ ಹೆಸರನ್ನು ಉಲ್ಲೇಖಿಸಿ ಆಕೆ ಹೀಗೆ ಮಾಡಿದ್ದಳು. ಅದು ನನಗೆ ಇಷ್ಟವಾಗಿತ್ತು. ಹೀಗೆ ಪದೇ ಪದೇ ಒರ್ವ ಮಹಿಳೆಯ ಹೆಸರನ್ನು ಸಂಬೋಧಿಸುತ್ತಿದ್ದರೆ ಕೊಂಚ ಹುಷಾರಾಗಿರಿ. ಒರ್ವ ವ್ಯಕ್ತಿ ಯಾರ ಬಗ್ಗೆ ಚಿಂತಿಸುತ್ತಿರುತ್ತಾನೆಯೋ ಅವರ ಹೆಸರು ಅವನ ಅರಿವಿಗೆ ಬಾರದೆ ಪದೇ ಪದೇ ಹೇಳುತ್ತಾನೆ.

5. ಇದ್ದಕ್ಕಿದ್ದ ಹಾಗೆ ದಿನಚರಿ ಬದಲಾಗಬಹುದು
ನಿಮ್ಮ ಪತಿಯು ಆಫೀಸ್‌ಗೆ ಹೋಗಿ ಬರೋ ಸಮಯ ಸಾಮಾನ್ಯವಾಗಿ ಬದಲಾಗೋದಿಲ್ಲ. ಆದರೆ ಇತ್ತೀಚಿಗೆ ಮನೆಗೆ ಲೇಟಾಗಿ ಬರುವುದು. ಅಥವಾ ಬೆಳಗ್ಗೆ ಬೇಗ ಮನೆಯಿಂದ ಹೊರಡೋದು. ವೀಕೆಂಡ್‌ನಲ್ಲಿ ಮನೆಯಿಂದ ಹೊರಗಡೆ ಇರೋದು. ಕುಟುಂಬಕ್ಕೆ ಸಮಯ ಕೊಡದೇ ಇರೋದು ಇಂತಹ ಗುಣಗಳು ಆತನಲ್ಲಿ ಇದ್ದರೆ ಅನೈತಿಕ ಸಂಬಂಧವಿದೆ ಎಂದು ಖಂಡಿತವಾಗಿ ಹೇಳಬಹುದು.

6. ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌ಗಳನ್ನು ಮುಚ್ಚಿಡುವುದು
ಪತಿಗೆ ಅನೈತಿಕ ಸಂಬಂಧವಿದ್ದಾಗ ಖರ್ಚು ಹೆಚ್ಚಾಗುತ್ತದೆ. ತನ್ನ ಗೆಳತಿಗಾಗಿ ಅಧಿಕ ಖರ್ಚುಗಳನ್ನು ಮಾಡಬೇಕಾಗುತ್ತದೆ. ಆಕೆಗಾಗಿ ದುಬಾರಿ ಗಿಫ್ಟ್, ಹೋಟೆಲ್‌ನಲ್ಲಿ ಪಾರ್ಟಿ ಹೀಗೆ ಎಲ್ಲದಕ್ಕೂ ಖರ್ಚು ಮಾಡಬೇಕಾಗುತ್ತದೆ. ಇಂತಹ ವೇಳೆ ಅವರು ಕ್ರೆಡಿಟ್ ಕಾರ್ಡ್ ಬಳಸಿದ್ದರೆ ಖಂಡಿತ ಅದನ್ನು ನಿಮ್ಮಿಂದ ಮುಚ್ಚಿಡುತ್ತಾರೆ.

7. ಜೀವನ ಶೈಲಿ ಬದಲಾಗಬಹುದು
ಇಷ್ಟು ದಿನ ಆಫೀಸ್‌ಗೆ ನಾರ್ಮಲ್ ಆಗಿ ಹೊಗುತ್ತಿದ್ದ ನಿಮ್ಮ ಪತಿ ಇತ್ತೀಚಿಗೆ ತುಂಬಾನೇ ಸ್ಟೈಲೀಸ್ ಆಗಿ ಕಾಣಿಸಿಕೊಳ್ತಿದ್ದಾರೆ. ಡ್ರೆಸ್ಸಿಂಗ್ ಸ್ಟೈಲ್, ಹೇರ್‌ಸ್ಟೈಲ್ ಹೀಗೆ ಅವರ ಕೆಲವೊಂದು ನಡವಳಿಕೆ ಬದಲಾಗಿರಬಹುದು. ಇಷ್ಟು ವರ್ಷದಲ್ಲಿ ನಾರ್ಮಲ್ ಆಗಿ ಬಟ್ಟೆ ಧರಿಸುತ್ತಿದ್ದವರು ಸಡನ್ ಆಗಿ ಬದಲಾದ್ರೆ ಏನೋ ಸರಿಇಲ್ಲ ಅನ್ನೋ ಅನುಮಾನ ಮೂಡಲೇಬೇಕು.

8. ಸಡನ್ ಆಗಿ ಪ್ರವಾಸಕ್ಕೆ ತೆರಳಬಹುದು
ಅನೈತಿಕ ಸಂಬಂಧವಿದ್ದಾಗ ತಮ್ಮ ಗೆಳತಿಯ ಜೊತೆಗೆ ಹೊರಗಡೆ ಹೋಗೋದಕ್ಕೆ ಇಷ್ಟ ಪಡುತ್ತಾರೆ. ಈ ವೇಳೆ ಸಡನ್ ಆಗಿ ಆಫೀಸ್ ಟ್ರಿಪ್ ಅಂತ ನಿಮ್ಮ ಬಳಿ ಸುಳ್ಳು ಹೇಳಿ ಹೊರಡುತ್ತಾರೆ. ಹೀಗೆ ಪದೇ ಪದೇ ಪ್ರವಾಸಕ್ಕಾಗಿ ಹೊರಗಡೆ ಹೋಗುತ್ತಿದ್ದರೆ ಅಂತಹ ಗಂಡನ ಮೇಲೆ ಒಂದು ಕಣ್ಣಿಟ್ಟರೆ ಒಳ್ಳೆಯದು.
ದಾಂಪತ್ಯ ಜೀವನದಲ್ಲಿ ಕೆಲವೊಂದು ಸಾರಿ ಈ ರೀತಿ ಆಗೋದು ಸಹಜ. ಆದರೆ ಪತ್ನಿಯಾದವಳು ಇದಕ್ಕೆಲ್ಲಾ ಅವಕಾಶ ನೀಡಬಾರದು. ಆದಷ್ಟು ಗಂಡನನ್ನು ನಿಯಂತ್ರಣದಲ್ಲಿ ಇಡಬೇಕು. ಗಂಡನನ್ನು ಬೇರೆ ಮಹಿಳೆ ಕಡೆಗೆ ಆಕರ್ಷಿತವಾಗಲು ಬಿಡಲೇಬಾರದು.



Click it and Unblock the Notifications