Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಪತಿ ನಿಮಗೆ ಮೋಸ ಮಾಡುತ್ತಿದ್ದಾನೆ ಅನ್ನೋದು ತಿಳಿಯೋದು ಹೇಗೆ? ಈ ರೀತಿಯ ವರ್ತನೆ ಇದ್ದರೆ ಎಚ್ಚರ.!
ಸಂಸಾರವೆಂದರೆ ಪ್ರೀತಿ, ನಂಬಿಕೆ. ಆ ನಂಬಿಕೆಗೆ ದ್ರೋಹವಾದರೆ ಅದನ್ನು ಸಹಿಸಲು ಯಾವ ಸಂಗಾತಿಗೂ ಸಾಧ್ಯಾಗುವುದಿಲ್ಲ. ಪತಿ ಪತ್ನಿಗೆ ಮೋಸ ಮಾಡಬಹುದು, ಪತ್ನಿ ಪತಿಗೆ ಮೋಸ ಮಾಡಬಹುದು. ಮೋಸ ಯಾರೇ ಮಾಡಲಿ ಒಡೆದು ಹೋಗುವುದು ಒಂದು ಸುಂದರ ಸಂಸಾರ, ಮಕ್ಕಳಿದ್ದರೆ ಅವರ ಭವಿಷ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದನ್ನು ಸಹ ನಾವು ಗಮನಿಸಿರಬಹುದು. ಅದರಲ್ಲೂ ಪುರುಷ ಬೇರೆ ಮಹಿಳೆಯ ಜಾಲಕ್ಕೆ ಬೀಳುವ ಪ್ರಕರಣಗಳು ಏರುತ್ತಲೇ ಇವೆ.
ಮಹಿಳೆಗೆ ಹೋಲಿಸಿದರೆ ಸಂಗಾತಿಗೆ ಮೋಸ ಮಾಡುವ ಪತಿ ಪತ್ನಿಗೆ ತಿಳಿಯದಂತೆ ಮತ್ತೊಂದು ಸಂಬಂಧ ಹೊಂದುವುದು ಹೆಚ್ಚಂತೆ. ಜೊತೆಗೆ ಅದನ್ನು ನಿಭಾಯಿಸುವುದರಲ್ಲೂ ಅವರು ತುಂಬಾನೆ ಹುಷಾರಂತೆ. ಎಷ್ಟೋ ಮಹಿಳೆಗೆ ತನ್ನ ಪತಿ ಮೋಸ ಮಾಡುತ್ತಿದ್ದಾನೆ ಎಂಬುದು ತಿಳಿಯುವುದೇ ಇಲ್ಲವಂತೆ. ಆಕೆಗೆ ಅನುಮಾನ ಬಾರದಂತೆ ಆತ ನಿಭಾಯಿಸುವುದರಲ್ಲಿ ನಿಸ್ಸೀಮನಂತೆ.

ಆತನ ಮೇಲೆ ಅನುಮಾನಪಟ್ಟರೆ ಮುಂದೆ ಪಶ್ಚತ್ತಾಪ ಪಡಬೇಕಾಗುತ್ತದೆ ಎಂಬ ಮನೋಭಾವವನ್ನು ಆತ ಪತ್ನಿಯಲ್ಲಿ ಬೆಳೆಸಿರುತ್ತಾನಂತೆ. ಹೀಗಾಗಿ ಯಾವ ಪತ್ನಿಯೂ ತನ್ನ ಗಂಡನ ಬಗ್ಗೆ ಅನುಮಾನ ಪಡುವಾಗ ತುಂಬಾ ಯೋಚಿಸುತ್ತಾಳೆ. ಜೊತೆಗೆ ತಪ್ಪು ಮಾಡುತ್ತಿದ್ದೇನೆ ಎಂಬ ಭಾವನೆ ಆಕೆ ಒಳಗಾಗುತ್ತಾಳೆ. ಆದರೆ ಸತ್ಯವೇ ಬೇರೆ ಇರುತ್ತದೆ.
ನಿಮ್ಮ ಪತಿ ನಿಮಗೆ ಮೋಸ ಮಾಡುತ್ತಿದ್ದಾರೆ ಅನ್ನೋದನ್ನ ತಿಳಿಯುವುದಾದರು ಹೇಗೆ? ಇತ್ತೀಚೆಗೆ ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತಿದ್ದಾರೆಯೇ? ನಿಮ್ಮ ಸಂಗಾತಿ ನೇರವಾಗಿ ಹೇಳದಿದ್ದರೂ ಸಹ ಅವರಿಗೆ ಸ್ಥಳಾವಕಾಶದ ಅಗತ್ಯವಿದೆ ಎಂಬುದನ್ನು ಸಾಬೀತುಪಡಿಸುವ ಪ್ರಮುಖ ಅಂಶವನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.
ನಿಮ್ಮ ಬಗ್ಗೆ ನಿಧಾನವಾಗಿ ಆಸಕ್ತಿ ಇಲ್ಲದಿರಬಹುದು
ನೀವು ಅವರ ಹಾವ ಭಾವದಲ್ಲಿ ವ್ಯತ್ಯಾಸ ಗುರುತಿಸಲು ಆರಂಭಿಸಿದರೆ ಹೆಚ್ಚು ನಿಗಾ ಇಡುವುದು ಉತ್ತಮ. ಏಕೆಂದರೆ ಅವರು ಹೊರಗೆ ಹೋದಾಗ ನಿಮ್ಮ ಮೆಸೇಜ್‌ಗಳಿಗೆ, ಕರೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಅಥವಾ ಆದಷ್ಟು ಇದರಿಂದ ದೂರ ಉಳಿಯುತ್ತಾರೆ ಎಂದರೆ ಇದರಲ್ಲಿ ಯಾವುದೋ ಸಮಸ್ಯೆ ಇದೆ ಎಂದರ್ಥ. ಒಂದೆರಡು ಬಾರಿ ಈ ರೀತಿ ಆದರೆ ಆಥವಾ ಆಫಿಸ್ ವಿಚಾರದಲ್ಲಿ ಈ ರೀತಿ ಆದರೆ ಅದು ಉದ್ದೇಶ ಪೂರ್ವಕವಲ್ಲ. ಆದರೆ ಇದು ನಿರಂತರವಾಗಿ ಮುಂದುವರೆದರೆ ಖಂಡಿತ ಈ ಕುರಿತು ಚಿಂತಿಸಬೇಕಾಗುತ್ತದೆ.
ಅವರು ನಿಮ್ಮೊಂದಿಗೆ ದೀರ್ಘ ಕರೆಗಳಲ್ಲಿ ನಿರತರಾಗದಿರುವುದು
ನಿಮ್ಮ ಪತಿ ಯಾವಾಗಲು ನೀವು ಕರೆ ಮಾಡಿದಾಗ ಸುದೀರ್ಘ ಮಾತುಕತೆಗೆ ಮುಂದಾಗದೆ ಇರುವುದು. ಅಂದರೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಿಮ್ಮ ಕರೆಯನ್ನು ಇಡಲು ಆತ ಕಾಯುತ್ತಿದ್ದರೆ ನಿಮ್ಮ ಕರೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದರ್ಥ. ಅಲ್ಲದೆ ರೊಮ್ಯಾಂಟಿಕ್ ಮಾತುಕತೆಗೆ ಮುಂದಾಗು ಬದಲು ನಿಮ್ಮ ಕರೆಯಿಂದ ಆದಷ್ಟು ಅಂತರ ಕಾಯ್ದುಕೊಳ್ಳಲು ಅವರು ಮುಂದಾಗುವುದು.
ನಿಮ್ಮಿಂದ ಹಲವು ವಿಚಾರ ಮುಚ್ಚಿಡುವುದು
ನಿಮ್ಮ ಪತಿ ಮನೆಯಲ್ಲಿ ಎಷ್ಟು ಕೆಲಸದಲ್ಲಿ ಯಾವ ವಿಚಾರದಲ್ಲಿ ನಿಮ್ಮನ್ನೂ ಸಹ ಸೇರಿಸಿಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತಿರುತ್ತದೆ. ಆದರೆ ಕೆಲವೊಮ್ಮೆ ಹೊರಗಿನ ಕಾರ್ಯ ನಿಮ್ಮ ಅರಿವಿಗೆ ತರಲು ಅವರು ಇಷ್ಟಪಡುವುದಿಲ್ಲ. ನೀವು ಕೇಳಿದರು ಈ ಬಗ್ಗೆ ವ್ಯವಹರಿಸುವುದಿಲ್ಲ. ದಿನದ ಅಂತ್ಯದಲ್ಲಿ ನಿಮ್ಮ ಅರಿವಿಗೆ ಬಾರದಂತೆ ಸುತ್ತಾಟ ಆರಂಭಿಸುವುದು, ಇದು ನಿರಂತರವಾಗಿ ನಡೆದುಕೊಂಡು ಬರುವುದು. ಜೊತೆಗೆ ಹಲವು ವಿಚಾರಗಳನ್ನು ಗುಟ್ಟಾಗಿ ವ್ಯವಹರಿಸುತ್ತಿರುವುದು.
ನಿಮಗೆ ಎಲ್ಲಾ ವಿವರಗಳನ್ನು ನೀಡದಿರುವುದು
ನಿಮ್ಮ ಸಂಗಾತಿಯು ತಮ್ಮ ಜೀವನದ ಬಗ್ಗೆ ಪ್ರತಿ ವಿವರವನ್ನು ನಿಮಗೆ ಹೇಳುತ್ತಿಲ್ಲವಾದರೆ, ಅವರು ಸ್ವಲ್ಪ ಜಾಗವನ್ನು ಬಯಸುತ್ತಾರೆ ಎಂಬ ಸಂಕೇತವಾಗಿದೆ. ಪ್ರತಿ ಬಾರಿ ನೀವು ಮಾತನಾಡಿಸಲು ಮುಂದಾದರೆ ಹೇಗಾದರು ಈ ಮಾತಿನ ಕ್ಷಣವನ್ನು ಬೇರೆಡೆ ಸಾಗುವಂತೆ ಮಾಡುವುದು. ಇಲ್ಲವೆ ಕೆಲಸದ ನೆಪ ಹೇಳಿ ಹೊರಗೆ ಹೋಗುವುದು.
ಮೊಬೈಲ್‌ಗೆ ಕರೆ ಬಂದರೆ ಆತಂಕ
ಇನ್ನು ನಿಮ್ಮ ಪತಿಯ ಮೊಬೈಲ್‌ಗೆ ಕರೆ ಬಂದಾಗ ಅವರು ಆತಂಕಕ್ಕೆ ಎದುಯರಾಗುವ ಸನ್ನಿವೇಶ ನೀವು ಗಮನಿಸಿದ್ದರೆ ಅಥವಾ ಕರೆ ಬಂದ ಕೂಡಲೆ ಅವರು ಅದನ್ನು ಕಟ್ ಮಾಡಿದರೆ ಇಲ್ಲವೆ ಎದ್ದು ಹೊರಹೋದರೆ ಗಮನವಿಡುವುದು ಒಳಿತು. ಇದಕ್ಕೆ ಬೇರೆ ಕಾರಣಗಳು ಸಹ ಇರಬಹುದು.



Click it and Unblock the Notifications
