Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಸ್ನೇಹಿತ ನಿಮ್ಮನ್ನು ರಹಸ್ಯವಾಗಿ ಪ್ರೀತಿಸುತ್ತಿದ್ದಾನೆಂದು ಗೋತ್ತಾಗೋದು ಹೇಗೆ?
ಸಹಜವಾಗಿ ಎಲ್ಲಾ ಸಂಬಂಧಗಳು ಶುರುವಾಗುವುದು ಸ್ನೇಹದಿಂದ. ಯಾವಾಗ ನಮಗೆ ಒಬ್ಬ ವ್ಯಕ್ತಿಯ ಗುಣ ಇಷ್ಟವಾಗುತ್ತದೆಯೋ ಅವರು ನಮಗೆ ತುಂಬಾ ಆಪ್ತರು ಎನ್ನುವ ಭಾವನೆ ಬರುತ್ತದೆ. ಅವರ ಜೊತೆಗೆ ನಮಗೆ ಗಾಢವಾದ ಸ್ನೇಹ ಹುಟ್ಟಿಕೊಳ್ಳುತ್ತದೆ. ಹಾಗೂ ಆ ವ್ಯಕ್ತಿ ನಮ್ಮ ಜಗತ್ತಿನ ತುಂಬೆಲ್ಲಾ ಆವರಿಸಿಕೊಳ್ಳುತ್ತಾರೆ. ಕೆಲವೊಂದು ಸಲ ನಿಮ್ಮ ಸ್ನೇಹಿತನಿಗೆ ನಿಮ್ಮ ಮೇಲೆ ಪ್ರೀತಿ ಹುಟ್ಟಬಹುದು. ನಿಮ್ಮನ್ನು ಅವರು ಬಾಳ ಸಂಗಾತಿಯಾಗಿ ನೋಡೋದಕ್ಕೆ ಇಷ್ಟ ಪಡಬಹುದು. ಅಷ್ಟಕ್ಕು ನಿಮ್ಮ ಸ್ನೇಹಿತನಿಗೆ ನಿಮ್ಮ ಮೇಲೆ ಪ್ರೀತಿ ಹುಟ್ಟಿದೆ ಅನ್ನೋದು ಗೊತ್ತಾಗೋದು ಹೇಗೆ?
1. ಆ ವ್ಯಕ್ತಿ ನಿಮಗಾಗಿ ಲಭ್ಯರಿರುತ್ತಾರೆ
ನಿಮ್ಮ ಆತ್ಮೀಯ ಸ್ನೇಹಿತನಿಗೆ ನಿಮ್ಮ ಮೇಲೆ ಪ್ರೀತಿ ಹುಟ್ಟಿದೆ ಎಂದು ತಿಳಿಯುವುದು ಹೇಗೆಂದರೆ ನಿಮಗೆ ಅಗತ್ಯವಿರುವಾಗ ನಿಮ್ಮ ಸ್ನೇಹಿತ ನಿಮಗಾಗಿ ಲಭ್ಯವಿರುತ್ತಾರೆ. ನಿಮ್ಮ ನೋವುಗಳ ಬಗ್ಗೆ ನೀವು ಹೇಳದೇನೇ ಅವರು ತಿಳಿದುಕೊಳ್ಳುತ್ತಾರೆ. ನಿಮ್ಮ ಸುಖ, ದುಃಖ ಎಲ್ಲದರಲ್ಲೂ ಅವರು ಸಮ ಪಾಲುದಾರರಾಗಿರುತ್ತಾರೆ. ಈ ಎಲ್ಲಾ ಲಕ್ಷಣಗಳು ನಿಮ್ಮ ಸ್ನೇಹಿತನಲ್ಲಿ ಇದ್ದರೆ ಖಂಡಿತ ನಿಮ್ಮ ಮೇಲೆ ಅವರಿಗೆ ಪ್ರೀತಿ ಇದೆ ಎಂದರ್ಥ.

2. ನಿಮ್ಮ ಸ್ನೇಹಿತ ಅವನ ಖುಷಿಯ ಕ್ಷಣಗಳ ಬಗ್ಗೆ ಹಂಚಿಕೊಳ್ಳುತ್ತಾನೆ
ನಿಮ್ಮ ಸ್ನೇಹಿತ ನಿಮ್ಮನ್ನು ತುಂಬಾನೇ ಹಚ್ಚಿಕೊಂಡಿರುತ್ತಾನೆ. ಅವನ ಜೀವನದಲ್ಲಿ ನಡೆದ ಪ್ರತಿಯೊಂದು ಖುಷಿಯ ಕ್ಷಣಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳೋದಕ್ಕೆ ಇಷ್ಟ ಪಡುತ್ತಾನೆ. ಅವನ ಖುಷಿಯಲ್ಲಿ ನೀವು ಅವನ ಜೊತೆಯಲ್ಲಿ ಇರಬೇಕೆಂದು ಆತ ಇಷ್ಟ ಪಡುತ್ತಾನೆ.
3. ನಿಮ್ಮ ಮೇಲೆ ಆಸಕ್ತಿ ಇದೆ ಅನ್ನೋದು ಗೊತ್ತಾಗುತ್ತದೆ
ನಿಮ್ಮ ಸ್ನೇಹಿತನಿಗೆ ನಿಮ್ಮ ಮೇಲೆ ಪ್ರೀತಿ ಇದ್ದರೆ ಆತ ನಿಮಗೆ ಪ್ರೀತಿಯ ಮೇಲೆ ಆಸಕ್ತಿ ಇದೆಯಾ ಅನ್ನೋದನ್ನು ತಿಳಿದುಕೊಳ್ಳೋದಕ್ಕೆ ಪ್ರಯತ್ನಿಸುತ್ತಾನೆ. ಪದೇ ಪದೇ ಪ್ರೀತಿಯ ವಿಚಾರವನ್ನೇ ಪರೋಕ್ಷವಾಗಿ ಹೇಳುತ್ತಿರುತ್ತಾನೆ. ನಿಮ್ಮಲ್ಲಿರುವ ಗುಣಗಳು ಯಾವ ಹುಡುಗಿಯಲ್ಲಿ ಇರುತ್ತದೆಯೋ ಅಂತಹ ಹುಡುಗಿಯೇ ಬೇಕು ಎಂದು ಹೇಳುತ್ತಾನೆ. ಇನ್ನೂ ನಿಮಗೆ ಯಾವ ರೀತಿ ಗುಣಗಳಿರುವ ಇಷ್ಟ ಇದೆ ಎಂದು ಆತ ಕೇಳುತ್ತಿರುತ್ತಾನೆ. ಹೀಗೆ ಇಡೀ ದಿನ ಪ್ರೀತಿಯ ಬಗ್ಗೆ ಮಾತಾಡುತ್ತಾನೆ.
4. ಎಲ್ಲರ ಮುಂದೆ ನಿಮ್ಮ ಕಾಳಜಿ ಮಾಡುತ್ತಾರೆ
ನಿಮ್ಮ ಸ್ನೇಹಿತ ಸಾಮಾನ್ಯವಾಗಿ ನಿಮ್ಮ ಕಾಳಜಿಯನ್ನು ಮಾಡುತ್ತಾರೆ. ಆದರೆ ನೀವು ನಿಮ್ಮ ಸ್ನೇಹಿತರ ಬಳಗದ ಜೊತೆ ಇರುವಾಗಲೂ ನಿಮ್ಮ ಬಗ್ಗೆ ವಿಶೇಷ ಕಾಳಜಿ ಮಾಡುವುದನ್ನು ಅವರು ಮರೆಯೋದಿಲ್ಲ. ನೀವು ಅವರ ಬಾಳ ಸಂಗಾತಿ ಎನ್ನುವ ರೀತಿಯಲ್ಲಿ ನಿಮ್ಮ ಮೇಲೆ ಪ್ರೀತಿ, ಕಾಳಜಿಯನ್ನು ಮಾಡುತ್ತಾರೆ. ಬೇರೆಯವರು ಏನು ಹೇಳುತ್ತಾರೋ ಎನ್ನುವುದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳೋದಿಲ್ಲ.
5. ನಿಮಗಾಗಿ ಸಪ್ರೈಸ್ ನೀಡುತ್ತಾರೆ
ಸಾಮಾನ್ಯವಾಗಿ ನಮ್ಮ ಪ್ರೀತಿ ಪಾತ್ರರು ನಮಗೆ ಸಪ್ರೈಸ್ ನೀಡೋದಕ್ಕೆ ಇಷ್ಟ ಪಡುತ್ತಾರೆ. ನಿಮ್ಮ ಸ್ನೇಹಿತ ಕೂಡ ನಿಮಗೆ ಇದೇ ರೀತಿ ಸಪ್ರೈಸ್ ನೀಡೋದಕ್ಕೆ ಪ್ರಯತ್ನಿಸುತ್ತಾನೆ. ನಿಮ್ಮ ಆಫೀಸ್ ಗೆ ವಿಶೇಷ ಗಿಫ್ಟ್ ಕಳುಹಿಸಿ ಕೊಡುತ್ತಾನೆ. ಅಷ್ಟೇ ಅಲ್ಲದೇ, ನಿಮಗಾಗಿ ಸಪ್ರೈಸ್ ಡಿನ್ನರ್ ಸಿದ್ಧಪಡಿಸುತ್ತಾನೆ. ಒಟ್ಟಿನಲ್ಲಿ ನಿಮ್ಮನ್ನು ಒರ್ವ ಸ್ಪೆಷಲ್ ಹುಡುಯಂತೆ ಆತ ಉಪಚಾರ ಮಾಡುತ್ತಾನೆ.
6. ನಿಮ್ಮ ಮಾತನ್ನು ಕೇಳುತ್ತಾರೆ
ನಾವು ನೋವಿನಲ್ಲಿದ್ದಾಗ ನಮಗೆ ಹೆಗಲಾಗಿ ಯಾರಾದರೂ ಇರಬೇಕು ಅಂತ ಎಲ್ಲರೂ ಬಯಸುತ್ತಾರೆ. ಈ ಸಮಯದಲ್ಲಿ ನಿಮ್ಮ ಸ್ನೇಹಿತ ನಿಮ್ಮ ಜೊತೆಯಲ್ಲಿ ಇರುತ್ತಾನೆ. ನಿಮ್ಮ ಖುಷಿಯಲ್ಲಿ ಮಾತ್ರವಲ್ಲದೇ ನಿಮ್ಮ ನೋವಿನಲ್ಲೂ ಕೂಡ ಆತ ನಿಮ್ಮ ಜೊತೆಗೆ ಇರುತ್ತಾನೆ. ಸಾಧ್ಯವಾದಷ್ಟು ನಮ್ಮನ್ನು ಸಮಾಧಾನ ಪಡಿಸೋದಕ್ಕೆ ಆತ ಪ್ರಯತ್ನಿಸುತ್ತಾನೆ. ಜೀವನ ಪೂರ್ತಿ ಅವನು ನಿಮ್ಮ ಜೊತೆಗೆ ಇದೇ ರೀತಿ ಇರಲು ಇಷ್ಟ ಪಡುತ್ತಾನೆ.
7. ನಿಮ್ಮ ಬಗ್ಗೆ ಪೊಸೆಸಿವ್ ಆಗಿರುತ್ತಾರೆ
ಒಂದು ವೇಳೆ ನಿಮ್ಮ ಆತ್ಮೀಯ ಸ್ನೇಹಿತ ನಿಮ್ಮನ್ನು ಇಷ್ಟ ಪಟ್ಟಿದ್ದರೆ ಅವನು ನಿಮ್ಮ ಬಗ್ಗೆ ತುಂಬಾನೇ ಪೊಸೆಸಿವ್ ಆಗಿರುತ್ತಾನೆ. ನೀವು ಬೇರೆ ಹುಡುಗರ ಜೊತೆಗೆ ಮಾತಾಡಿದರೆ, ಅವರ ಜೊತೆಗೆ ಎಲ್ಲಾದರೂ ಹೋದರೆ ನಿಮ್ಮ ಸ್ನೇಹಿತನಿಗೆ ಇಷ್ಟ ಆಗೋದಿಲ್ಲ. ಅವರು ಈ ವಿಚಾರವನ್ನು ನೇರವಾಗಿ ಹೇಳೋದಿಲ್ಲ. ಆದರೆ ಅವರ ನಡವಳಿಕೆಯಿಂದ ನೀವು ಎಲ್ಲವನ್ನೂ ತಿಳಿದುಕೊಳ್ಳಬಹುದು.
8. ನಿಮ್ಮನ್ನ ಸದಾ ಕಾಲ ರಕ್ಷಿಸುತ್ತಾರೆ
ಸಾಮಾನ್ಯವಾಗಿ ನಮ್ಮ ಸ್ನೇಹಿತರಿಗೆ ನಮ್ಮ ಬಗ್ಗೆ ಕಾಳಜಿ ಇದ್ದೇ ಇರುತ್ತದೆ. ಅವರು ನಿಮಗೆ ರಕ್ಷಣೆಯನ್ನು ನೀಡುತ್ತಾರೆ. ಆದರೆ ನಿಮ್ಮನ್ನು ಪ್ರೀತಿ ಮಾಡುವ ನಿಮ್ಮ ಆತ್ಮೀಯ ಸ್ನೇಹಿತ ಸದಾ ನಿಮ್ಮನ್ನು ರಕ್ಷಣೆ ಮಾಡುತ್ತಾನೆ. ಬೇರೆಯವರಿಂದ ನಿಮಗೆ ಒಂಚೂರು ನೋವಾದರೂ ಆತ ಸಹಿಸೋದಿಲ್ಲ.
ಈ ಎಲ್ಲಾ ಗುಣಗಳು ನಿಮ್ಮ ಆತ್ಮೀಯ ಸ್ನೇಹಿತನಲ್ಲಿ ಇದ್ದರೆ ಖಂಡಿತ ಆತ ನಿಮ್ಮನ್ನು ರಹಸ್ಯವಾಗಿ ಪ್ರೀತಿಸುತ್ತಿದ್ದಾನೆ ಎಂದರ್ಥ.



Click it and Unblock the Notifications

