Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಆ ವ್ಯಕ್ತಿ ಎಮೋಷನಲಿ ಮೆಚ್ಯೂರ್ ಇಲ್ಲ ಎಂದು ಈ ಗುಣಗಳಿಂದಲೇ ತಿಳಿಯಬಹುದು
ನಮ್ಮ ಸ್ವಭಾವ, ನಮ್ಮ ವರ್ತನೆ ನೋಡಿ ಜನರು ನಮ್ಮ ಬಗ್ಗೆ ಅಭಿಪ್ರಾಯ ಬೆಳೆಸಿಕೊಳ್ಳುತ್ತಾರೆ. ಕೆಲವರ ವರ್ತನೆ ನೋಡಿದಾಗ ಇನ್ನೂ ಮಕ್ಕಳ ರೀತಿ ಆಡುತ್ತಿದ್ದಾರೆ ಒಂದು ಮೆಚ್ಯೂರ್ ಆಲೋಚನೆಯಿಲ್ಲ ಎಂದಿ ಅನಿಸುವುದು. ನಾವು ನಮ್ಮ ಭಾವನೆಗಳ ಮೇಲೆ ಎಷ್ಟು ಹಿಡಿತವನ್ನು ಹೊಂದಿರುತ್ತೇವೋ ಅಷ್ಟು ಗಂಭೀರವಾಗಿರುತ್ತೇವೆ, ಜನ ನಮ್ಮನ್ನು ಗೌರವಿಸುತ್ತಾರೆ.. ಒಬ್ಬ ವ್ಯಕ್ತಿ ಎಮೋಷನಲಿ ಮೆಚ್ಯೂರ್ ಅಲ್ಲ ಎಂಬುವುದು ಅವರ ಈ ಗುಣಗಳಿಂದಲೇ ತಿಳಿಯಬಹುದು:

ಕ್ಷಮೆ ಕೇಳಲು ಒಪ್ಪದಿರುವುದು'
ತಮ್ಮಿಂದ ತಪ್ಪಾದರೆ ಕ್ಷಮೆ ಕೇಳುವುದು ದೊಡ್ಡತನ, ಆದರೆ ಕೆಲವರು ಕ್ಷಮೆ ಕೇಳಲು ಒಪ್ಪುವುದಿಲ್ಲ, ತಾವು ಹೇಳಿದ್ದೇ ಸರಿ ಎಂದು ಭಾವಿಸುತ್ತಾರೆ, ಈ ಬಗೆಯ ವರ್ತನೆ ತೋರಿದಾಗ ಬೇರೆಯವರಿಗೆ ತುಂಬಾನೇ ಬಾಲಿಶ ಎಂದನಿಸುವುದು.
ಎಲ್ಲದಕ್ಕೂ ನಿಮ್ಮ ಬಳಿ ಉತ್ತರವಿದೆ
ಇದು ಕೂಡ ನಿಮ್ಮ ವ್ಯಕ್ತಿತ್ವಕ್ಕೆ ತೂಕವನ್ನು ತರುವುದಿಲ್ಲ. ಯಾರು ಮೆಚ್ಯೂರ್ ಆಗಿ ಯೋಚಿಸುತ್ತಾರೋ ಅವರು ತಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲ ಎಂದು ಹೇಳಲು ಹಿಂಜರಿಯುವುದಿಲ್ಲ, ಆದರೆ ಆಲೋಚೆಯಲ್ಲಿ ಮೆಚ್ಯೂರಿಯಿಟಿ ಇಲ್ಲದವರೂ ತನಗೆ ಎಲ್ಲಾ ಗೊತ್ತು ಎಂದು ಸಾಧಿಸಲು ಹೋಗುತ್ತಾರೆ. ಹೀಗೆ ಮಾಡಲು ಹೋಗಿ ಬೇರೆಯವರ ಕಣ್ಣಿಗೆ ಮತ್ತೆ ಚಿಕ್ಕವರಾಗಿ ಕಾಣುತ್ತಾರೆ.
ಬೇಗನೆ ಕೋಪಗೊಳ್ಳುವುದು
ಎಮೋಷನಲಿ ಮೆಚ್ಯೂರ್ ಅಲ್ಲದವರು ಬೇಗನೆ ತುಂಬಾ ಕೋಪಗೊಳ್ಳುತ್ತಾರೆ. ನಮ್ಮಿಂದ ಯಾವುದು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳುವ ಬದಲಿಗೆ ಕೋಪದಿಂದ ತಮ್ಮ ದೌರ್ಬಲ್ಯ ಮರೆಮಾಚಲು ಯೋಚಿಸುತ್ತಾರೆ.
ವಿಷಯವನ್ನು ತಿರುಚುವುದು
ಎಮೋಷನಲಿ ಮೆಚ್ಯೂರ್ ಅಲ್ಲದವರು ವಿಷಯವನ್ನು ತಿರುಚಿ ಹೇಳುವ ಸ್ವಭಾವ ಹೊಂದಿರುತ್ತಾರೆ. ಒಂದು ರೀತಿ ಚಾಡಿ ಗುಣ ಇವರಲ್ಲಿ ಇರುತ್ತದೆ, ಇವರ ಈ ಗುಣದಿಂದ ಬೇರೆಯವಿಗೆ ತೊಂದರೆ ಉಂಟು ಮಾಡುತ್ತಾರೆ.
ಸೈಲೆಂಟ್ ಟ್ರೀಟ್ಮೆಂಟ್
ಕೆಲವರು ತಮ್ಮ ಆಪ್ತರಿಗೆ ಸೈಲೆಂಟ್ ಟ್ರೀಟ್ಮೆಂಟ್ ನೀಡಲು ಬಯಸುತ್ತಾರೆ, ಅಂದರೆ ಏನಾದರೂ ಮನಸ್ತಾಪವದರೆ ಮಾತನಾಡದೇ ಇರುವುದು, ಈ ರೀತಿಯ ವರ್ತನೆ ತುಂಬಾ ಬಾಲಿಶವಾದದ್ದು ಎಂದು ಥೆರಾಪಿಸ್ಟ್‌ಗಳ ಅಭಿಪ್ರಾಯವಾಗಿದೆ.



Click it and Unblock the Notifications
