Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅರೇಂಜ್ ಮ್ಯಾರೇಜ್ ಆಗುವ ಮೊದಲು ಈ ವಿಚಾರ ಗೊತ್ತಿರಲೇಬೇಕು!
ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ನೂರಾರು ಆಸೆ, ಕನಸುಗಳಿರುತ್ತದೆ. ಆದರೆ ಮದುವೆ ಯಾವಾಗ ಯಶಸ್ವಿ ಎನಿಸಿಕೊಳ್ಳುತ್ತದೆ ಎಂದರೆ ಗಂಡು- ಹೆಣ್ಣು ಇಬ್ಬರೂ ಸೇರಿ ಸಂಸಾರದ ಬಂಡಿಯನ್ನು ಜೊತೆಯಾಗಿ ಎಳೆದಾಗ ಮಾತ್ರ ಆ ಸಂಬಂಧಕ್ಕೆ ಒಂದು ಅರ್ಥ ಸಿಗೋದು. ಸಾಮಾನ್ಯವಾಗಿ ಲವ್ ಮಾಡಿ ಮದುವೆಯಾಗುವವರು ತಮಗೆ ತಕ್ಕುದಾದ ಸರಿಯಾದ ಜೋಡಿಯನ್ನೇ ಆರಿಸಿ ಮದುವೆಯಾಗುತ್ತಾರೆ. ಆದರೆ ಅರೇಂಜ್ ಮ್ಯಾರೇಜ್‌ಗಳಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ.
ಪ್ರೇಮ ವಿವಾಹಗಳು ಎರಡು ಜೋಡಿ ಇಷ್ಟ ಪಟ್ಟು ಮದುವೆಯಾದರೆ. ಇನ್ನೂ ಅರೇಂಜ್ ಮ್ಯಾರೇಜ್‌ಗಳಲ್ಲಿ ಹೆಚ್ಚಿನ ಮದುವೆಗಳು ಒತ್ತಾಯದ ಮದುವೆಗಳೇ ಆಗಿರುತ್ತದೆ. ಈ ರೀತಿ ಒತ್ತಾಯದ ಮದುವೆಯಾದವರು ಹೆಚ್ಚಿನ ಸಂದರ್ಭದಲ್ಲಿ ಸುಖವಾಗಿರೋದಕ್ಕೆ ಸಾಧ್ಯವಿರೋದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಜೋಡಿಗಳ ಮಧ್ಯೆ ಹೊಂದಾಣಿಕೆ ಇರೋದಿಲ್ಲ. ಅಷ್ಟಕ್ಕು ಅರೇಂಜ್ ಮ್ಯಾರೇಜ್ ಆಗುವ ಸಂದರ್ಭದಲ್ಲಿ ನಮಗೆ ಬೇಕಾದ ಜೀವನ ಸಂಗಾತಿಯನ್ನು ಹುಡುಕೋದು ಹೇಗೆ? ನಮಗೆ ಇಷ್ಟ ಆಗುವ ಜೀವನ ಸಂಗಾತಿಯನ್ನು ಹುಡುಕಲು ಈ ಟಿಪ್ಸ್ ಫಾಲೋ ಮಾಡಿ.

1. ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಿ
ಸಾಮಾನ್ಯವಾಗಿ ಲವ್ ಮ್ಯಾರೇಜ್‌ನಲ್ಲಿ ಮದುವೆಯಾಗುವವರ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಹೆಚ್ಚಾಗಿ ಗೊತ್ತಿರುತ್ತದೆ. ಆದರೆ ಅರೇಂಜ್ ಮ್ಯಾರೇಜ್ ಈ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿರೋದಿಲ್ಲ. ಇಂತಹ ಸಂದರ್ಭದಲ್ಲಿ ನಾವು ಹುಡುಗ/ಹುಡುಗಿಯ ಬಗ್ಗೆ, ಅವರ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಆ ಹುಡುಗನಿಗೆ ಕ್ರಿಮಿನಲ್ ಹಿನ್ನೆಲೆ ಇದ್ದರೆ ಆ ಬಗ್ಗೆ ವಿಚಾರಿಸಿಕೊಳ್ಳಿ.
ಇನ್ನೂ ಕೆಲವು ಸಂಬಂಧಗಳಲ್ಲಿ ಹುಡುಗನ ಸಂಭಳದ ಬಗ್ಗೆ ಸುಳ್ಳು ಹೇಳಿರುತ್ತಾರೆ. ಈ ಬಗ್ಗೆ ಆತನ ಆಫೀಸ್‌ಗೆ ತೆರಳಿ ವಿಚಾರಿಸಿ. ಅಥವಾ ಗೊತ್ತಿರುವವರ ಜೊತೆಗೆ ಸಂಪರ್ಕ ಮಾಡಿ ವಿಚಾರ ತಿಳಿದುಕೊಳ್ಳಿ. ಇನ್ನೂ ಹುಡುಗ ವಿದೇಶದಲ್ಲಿ ಇರುವುದಾದರೆ ಈ ಬಗ್ಗೆ ವಿಚಾರಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಕೆಲವರು ಈ ಬಗ್ಗೆ ಸುಳ್ಳು ಕೂಡ ಹೇಳಿರುತ್ತಾರೆ.
2. ಹುಡುಗ/ಹುಡುಗಿಯನ್ನು ವೈಯಕ್ತಿಕವಾಗಿ ಭೇಟಿಯಾಗಿ
ಅರೇಂಜ್ ಮ್ಯಾರೇಜ್ ಆಗುವಾಗ ಸಂಗಾತಿಯ ಬ್ಯಾಕ್‌ಗ್ರೌಂಡ್ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಮುಖ್ಯ ಸಂಗಾತಿಯ ಜೊತೆಗೆ ಮಾತನಾಡುವುದು. ಮನೆಯವರು ಮದುವೆಗೆ ಒಪ್ಪಿದ್ರು ಎಂದ್ರು ಕಣ್ಣು ಮುಚ್ಚು ಮದುವೆಯಾಗೋದಕ್ಕೆ ಹೋಗಬೇಡಿ. ಮೊದಲಿಗೆ ಹುಡುಗ-ಹುಡುಗಿ ಬೇಟಿಯಾಗಿ ನಿಮ್ಮ ಇಷ್ಟ, ಕಷ್ಟ, ಆಸಕ್ತಿ ಮತ್ತು ಕುಟುಂಬದ ಬಗ್ಗೆ ಮಾತನಾಡಿ ವಿಚಾರಿಸಿಕೊಳ್ಳಿ.
ಒಂದು ವೇಳೆ ಅವರು ನಿಮಗೆ ಹೊಂದಿಕೊಳ್ಳುವಂತಿದ್ದರೆ ಮಾತ್ರ ಸಂಬಂಧವನ್ನು ಮುಂದುವರಿಸಲು ಒಪ್ಪಿಗೆ ನೀಡಿ. ಕೆಲವೊಂದು ಮದುವೆಯಾದ ಮೇಲೆ ಹುಡುಗಿಗೆ ಕೆಲಸ ಮಾಡೋದಕ್ಕೆ ಇಷ್ಟವಿದ್ದರೂ ಕೂಡ ಹುಡುಗ ಅದನ್ನು ಒಪ್ಪಿಕೊಳ್ಳೋದಿಲ್ಲ. ಹೀಗಾಗಿ ಈ ಬಗ್ಗೆ ಮೊದಲೇ ವಿಚಾರಿಸಿಕೊಂಡು ಒಂದು ನಿರ್ಧಾರಕ್ಕೆ ಬಂದರೆ ಒಳ್ಳೆಯದು.
3. ಮುಕ್ತವಾಗಿ ಪ್ರಶ್ನೆಗಳನ್ನು ಕೇಳಿ
ನಿಮ್ಮ ಸಂಗಾತಿಯಾಗುವವರ ಜೊತೆಗೆ ಮಾತನಾಡುವುದಕ್ಕೆ ನಿಮಗೆ ಅವಕಾಶ ಸಿಕ್ಕಾಗ ಅವರ ಜೊತೆಗೆ ನೀವು ಎಲ್ಲಾ ವಿಷಯವನ್ನು ಮಕ್ತವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಅವರೇನು ಅಂದುಕೊಳ್ಳುತ್ತಾರೋ ಎಂದು ನೀವು ಅಂಜಿಕೆ ಪಟ್ಟಕೊಂಡರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಸಮಸ್ಯೆ ಎದುರಾಗಲಿದೆ. ಹುಡುಗನ ಸಂಭಳದ ಬಗ್ಗೆ ಕೇಳಿ, ಅವರಿಗೆ ಬೇರ್ಯಾವುದಾದರೂ ಮೂಲಗಳಿಂದ ಆದಾಯ ಬರುತ್ತಿದ್ದರೆ ಆ ಬಗ್ಗೆ ಮಾತನಾಡಿ. ಇನ್ನೂ ಅವರು ವ್ಯಾಪಾರ ಮಾಡುತ್ತಿದ್ದರೆ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳಿ.
4. ಸಂಗಾತಿಯ ಗುಣ ಹಾಗೂ ನೋಟದ ಬಗ್ಗೆ ಗಮನವಿರಲಿ
ಲವ್ ಮ್ಯಾರೇಜ್ ಆಗುವುದಾದರೆ ಹುಡುಗ/ಹುಡುಗಿಯ ಲುಕ್ ಹಾಗೂ ಗುಣ ನಡೆತೆಯ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಂಡಿರುತ್ತೇವೆ. ಆದರೆ ಅರೇಂಜ್ ಮ್ಯಾರೇಜ್‌ಗಳಲ್ಲಿ ಹಾಗಾಗುವುದಿಲ್ಲ. ಮನೆಯವರು ದುಡ್ಡು, ಆಸ್ತಿ- ಅಂತಸ್ತು ನೋಡಿ ಮದುವೆ ಮಾಡಿ ಕೊಟ್ಟಿರುತ್ತಾರೆ. ಹಾಗಂತ ನಾವು ಕಣ್ಣು ಮುಚ್ಚಿ ಮದುವೆಯಾಗೋದಿಕ್ಕಾಗೋದಿಲ್ಲ.
ಹಣದ ಆಸೆಗೆ ಬಿದ್ದು ಮದುವೆಯಾಗುವ ತಪ್ಪು ಖಂಡಿತ ಮಾಡಲೇಬೇಡಿ. ಮೊದಲಿಗೆ ಹುಡುಗ/ಹುಡುಗಿಯ ಗುಣ-ನಡೆತೆಯ ಬಗ್ಗೆ ತಿಳಿದುಕೊಳ್ಳಿ. ಇದರ ಜೊತೆಗೆ ಅವರ ಲುಕ್ ಬಗ್ಗೆ ಕೂಡ ಚೂರು ಗಮನ ಕೊಡಿ. ಇನ್ನೂ ಅವರ ಡ್ರೆಸ್ಸಿಂಗ್ ಸೆನ್ಸ್ ಕೂಡ ಚೆನ್ನಾಗಿರಲಿ. ಅರೇಂಜ್ ಮ್ಯಾರೇಜ್ ಆಗುವ ಮೊದಲು ಈ ಎಲ್ಲಾ ಅಂಶದ ಬಗ್ಗೆ ಗಮನ ಕೊಡುವುದು ಕೂಡ ಮುಖ್ಯವಾಗುತ್ತದೆ.
5. ಹಳೆಯ ಸಂಬಂಧದ ಬಗ್ಗೆ ತಿಳಿದುಕೊಳ್ಳಿ
ಅರೇಂಜ್ ಮ್ಯಾರೇಜ್ ಆಗುವ ಮೊದಲು ನಿಮ್ಮ ಸಂಗಾತಿಯ ಹಳೆಯ ಸಂಬಂಧದ ಬಗ್ಗೆ ತಿಳಿದುಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಅವರು ಎಷ್ಟು ವರ್ಷ ಸಂಬಂಧದಲ್ಲಿದ್ರು, ಅವರ ಸಂಬಂಧ ಹೇಗಿತ್ತು? ಸಂಬಂಧ ಮುರಿಯೋದಕ್ಕೆ ಕಾರಣ ಏನು ಅನ್ನೋದನ್ನು ತಿಳಿದುಕೊಳ್ಳಿ. ಅಥವಾ ಅವರು ಹಿಂದಿನ ಪ್ರೀತಿಯ ನೆನಪಿನಲ್ಲೇ ಇದ್ದಾರಾ? ಈ ಬಗ್ಗೆ ನೀವು ತಿಳಿದುಕೊಂಡರೆ ಉತ್ತಮ.
ಅರೇಂಜ್ ಮ್ಯಾರೇಜ್ ಆಗುವ ಮೊದಲು ಪೂರ್ವಪರ ವಿಚಾರಿಸಿಕೊಂಡು ಆದರೆ ಒಳ್ಳೆಯದು. ಒಲ್ಲದಿದ್ದರೆ ನಿಮ್ಮ ವೈವಾಹಿಕ ಜೀವನವೇ ಹಾಳಾಗಿಬಿಡಬಹುದು.



Click it and Unblock the Notifications
