Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಈ ಟಿಪ್ಸ್ ಗಳನ್ನು ಪಾಲಿಸಿದ್ರೆ ನೀವು ಗಂಡನಿಗೆ ತಕ್ಕ ಹೆಂಡತಿಯಾಗುತ್ತೀರಿ!
ದಾಂಪತ್ಯದಲ್ಲಿ ಎಲ್ಲಾ ರೀತಿಯ ಸಾಮರಸ್ಯಗಳು ಇದ್ದೇ ಇರುತ್ತದೆ. ಎಲ್ಲಾ ಸಮಯದಲ್ಲೂ ದಾಂಪತ್ಯದಲ್ಲಿ ಖುಷಿಯೇ ತುಂಬಿರುತ್ತೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಕೆಲವೊಂದು ಸಲ ಇಬ್ಬರ ಮಧ್ಯೆ ಮನಸ್ಥಾಪ ಬಂದೇ ಬರುತ್ತದೆ.
ಆದರೆ ನೀವು ಪತ್ನಿಯಾಗಿ ನಿಮ್ಮ ಗಂಡನನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು ಎಂದಿದ್ದರೆ ನೀವು ಕೆಲವೊಂದು ವಿಚಾರಗಳಲ್ಲಿ ಕಾಂಪ್ರಮೈಸ್ ಮಾಡಲೇಬೇಕಾಗುತ್ತದೆ. ಅಷ್ಟಕ್ಕು ಗಂಡನಿಗೆ ಉತ್ತಮ ಪತ್ನಿಯಾಗಿ ಇರೋದು ಹೇಗೆ ಅನ್ನೋದನ್ನು ತಿಳಿಯೋಣ.

1. ಗಂಡನ ಮಾತನ್ನು ಆಲಿಸಿ
ಗಂಡ-ಹೆಂಡತಿಯ ಮಧ್ಯೆ ಜಗಳ ಆಗೋದಕ್ಕೆ ಮುಖ್ಯ ಕಾರಣ ಒಬ್ಬರ ಮಾತನ್ನು ಮತ್ತೊಬ್ಬರು ಕೇಳುವುದಿಲ್ಲ ಎನ್ನುವ ಕಾರಣಕ್ಕೆ. ನೀವು ನಿಮ್ಮ ಗಂಡನಿಗೆ ಉತ್ತಮ ಪತ್ನಿಯಾಗಬೇಕೆಂದಿದ್ದರೆ ಅವರು ಮಾತನಾಡಲು ಶುರು ಮಾಡಿದಾಗ ಅವರ ಮಾತನ್ನು ಗಮನವಿಟ್ಟು ಕೇಳೋದಕ್ಕೆ ಶುರು ಮಾಡಿ. ಅದನ್ನು ಅರ್ಥ ಮಾಡಿಕೊಳ್ಳಿ. ಹಾಗೂ ಯಾವುದೇ ಕಾರಣಕ್ಕೂ ಮಧ್ಯ ಮಾತನಾಡೋದಕ್ಕೆ ಹೋಗಬೇಡಿ. ಆ ನಂತರ ನಿಮ್ಮ ಅಭಿಪ್ರಾಯ ತಿಳಿಸಿದರೆ ಸಾಕು.
2. ಪತಿಯನ್ನು ಹೊಗಳಿ
ಪ್ರತಿಯೊಬ್ಬರಿಗೂ ಹೊಗಳಿಕೆಯ ಮಾತುಗಳು ಖಂಡಿತ ಇಷ್ಟ ಆಗುತ್ತದೆ. ಅದಕ್ಕೆ ನಿಮ್ಮ ಗಂಡ ಹೊರತಾಗಿಲ್ಲ. ಖಂಡಿತ ಅವರಿಗೂ ಹೊಗಳಿಕೆಯ ಮಾತುಗಳು ಇಷ್ಟ ಆಗಿರಬಹುದು. ಅವರು ಚೆನ್ನಾಗಿ ರೆಡಿಯಾದಾಗ ಸುಂದರವಾಗಿ ಕಾಣುತ್ತಿದ್ದೀರಿ ಅಂತ ಹೇಳಿ. ನಿಮ್ಮನ್ನು ಗಂಡನನ್ನಾಗಿ ಪಡೆದಿರೋದು ನನ್ನ ಪುಣ್ಯ ಎಂದು ಹೇಳಿ. ಇನ್ನೂ ನೀವು ಮಾಡುವ ಕೆಲಸಗಳು ಹೆಮ್ಮೆ ಅನ್ನಿಸುತ್ತದೆ ಎಂದು ಹೇಳುತ್ತಿರಿ. ಆದರೆ ನಿಮ್ಮ ಮಾತುಗಳು ಅವರಿಗೆ ನಾಟಕೀಯ ಅನ್ನಿಸಬಾರದು. ಹೀಗಾದರೆ ಖಂಡಿತ ನಿಮ್ಮ ಗಂಡನಿಗೆ ನಿಮ್ಮ ಮಾತುಗಳು ಇಷ್ಟ ಆಗುತ್ತದೆ.
3. ಪ್ರೀತಿ ತೋರಿಸಿ
ನೀವು ನಿಮ್ಮ ಪತಿಯನ್ನು ತುಂಬಾನೇ ಪ್ರೀತಿಸುತ್ತಾ ಇರುತ್ತೀರಿ. ಆದರೆ ಅದನ್ನು ಅವರೊಂದಿಗೆ ವ್ಯಕ್ತ ಪಡಿಸಿ ಇರೋದಿಲ್ಲ. ಮಾನಸಿನ ಪ್ರೀತಿಯನ್ನು ಕೆಲವೊಂದು ಸಲ ಅವರಿಗೆ ಅರ್ಥ ಮಾಡಿಸೋದು ಕಷ್ಟ. ಆದರೆ ದೈಹಿಕ ಪ್ರೀತಿಯನ್ನು ಅವರಿಗೆ ತೋರಿಸಬಹುದು. ಇಬ್ಬರೂ ಒಳ್ಳೆಯ ಮೂಡ್ ನಲ್ಲಿ ಇದ್ದಾಗ ಅವರನ್ನು ಮದ್ದಾಡಿ. ಅವರನ್ನು ಅಪ್ಪಿಕೊಳ್ಳೋದ್ರ ಮೂಲಕ ನಿಮ್ಮ ಭಾವನೆಯನ್ನು ವ್ಯಕ್ತ ಪಡಿಸಿ. ಅವರ ಕೈ ಹಿಡಿಯುವುದು, ಕಿಸ್ ಮಾಡುವುದು. ಈ ಮುಖಾಂತರವೂ ನಿಮ್ಮ ಪ್ರೀತಿ ತೋರ್ಪಡಿಸಬಹುದು.
4. ಪತಿಗೆ ಇಷ್ಟವಾಗುವ ಆಹಾರವನ್ನು ಸಿದ್ಧಪಡಿಸಿ
ನಿಮ್ಮ ಪತಿಗೆ ಪ್ರಿಯವಾದ ಆಹಾರ ಯಾವುದು ಅನ್ನೋದು ನಿಮಗೆ ಖಂಡಿತ ಗೊತ್ತಿರುತ್ತದೆ. ಸಾಧ್ಯವಾದಷ್ಟು ಅವರಿಗೆ ಇಷ್ಟವಾಗುವ ಆಹಾರವನ್ನೇ ತಯಾರಿಸಿ ನಿಮ್ಮ ಪತಿಗೆ ಸಪ್ರೈಸ್ ನೀಡಿ. ಆಹಾರದ ವಿಚಾರದಲ್ಲಿ ಅವರಿಗೆ ಎಂದಿಗೂ ನಿರಾಶೆಯಾಗದಂತೆ ನೋಡಿಕೊಳ್ಳಿ. ಗಂಡ ಕೆಲಸದಿಂದ ಬಂದ ತಕ್ಷಣ ಅವರಿಗೆ ರುಚಿ ರುಚಿ ಮಾಡಿ ಬಡಿಸಿದರೆ ಗಂಡ ಖಂಡಿತ ಸಂತೃಪ್ತನಾಗುತ್ತಾನೆ.
5. ಪತಿಯ ಹವ್ಯಾಸಗಳನ್ನು ಪ್ರೋತ್ಸಾಹಿಸಿ
ಪ್ರತಿಯೊಬ್ಬರಿಗೂ ಬೇರೆ ಬೇರೆ ಹವ್ಯಾಸಗಳು ಇರುತ್ತದೆ. ಅದೇ ರೀತಿ ನಿಮ್ಮ ಪತಿಗೂ ಏನಾದರೂ ಹವ್ಯಾಸ ಇರಬಹುದು. ಆಟ ಆಡೋದು, ಹಾಡು ಕೇಳೋದು ಅಥವಾ ವಿಡಿಯೋ ಗೇಮ್ ಆಡುವುದು ಇತ್ಯಾದಿ. ಇದೆಲ್ಲದರಲ್ಲಿ ನಿಮಗೆ ಆಸಕ್ತಿ ಇಲ್ಲದಿದ್ದರೂ ಕೂಡ ನಿಮ್ಮ ಪತಿಗೆ ಪ್ರೋತ್ಸಾಹ ನೀಡಿ. ಅವರೊಂದಿಗೆ ನೀವು ಆಟ ಆಡಿ ಅಥವಾ ಹಾಡು ಕೇಳಿ. ಒಟ್ಟಿನಲ್ಲಿ ನೀವು ಅವರಿಗೆ ಜೊತೆಯಾಗಿರಿ.
6. ಗಂಡನಿಗೆ ಸಪ್ರೈಸ್ ನೀಡಿ
ಪ್ರತಿಯೊಬ್ಬರಿಗೂ ಸಪ್ರೈಸ್ ಇಷ್ಟ ಆಗುತ್ತದೆ. ಸಾಮಾನ್ಯವಾಗಿ ಗಂಡದಿರು ಸಪ್ರೈಸ್ ನೀಡ್ತಾರೆ. ಆದರೆ ನೀವು ನಿಮ್ಮ ಗಂಡನ ವಿಶೇಷ ದಿನದಂದು ಅವರಿಗೆ ಸಪ್ರೈಸ್ ನೀಡಿ. ಅವರ ಹುಟ್ಟು ಹಬ್ಬ ಹಾಗೂ ಮದುವೆ ವಾರ್ಷಿಕೋತ್ಸವವನ್ನು ಚೆನ್ನಾಗಿ ಆಚರಿಸಿ. ಮನೆಯೊಳಗಡೆ ಹೂವು, ಬಲೂನ್, ಬಣ್ಣ ಬಣ್ಣದ ದೀಪಗಳಿಂದ ನಿಮ್ಮ ಕೈಯಾರೆ ಸಿಂಗರಿಸಿ. ಹಾಗೂ ಇದರ ಜೊತೆಗೆ ಏನಾದ್ರು ಸಪ್ರೈಸ್ ಗಿಫ್ಟ್ ಪ್ಲಾನ್ ಮಾಡಿ.
7. ಅವರ ಕನಸಿನಲ್ಲಿ ನೀವು ಜೊತೆಯಾಗಿರಿ
ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕನಸು ಇದ್ದೇ ಇರುತ್ತದೆ. ನಿಮ್ಮ ಪತಿಗೂ ಅಂತಹದ್ದೇ ಕನಸು ಇರಬಹುದು. ಆ ಕನಸಿನಲ್ಲಿ ನೀವು ಅವರ ಜೊತೆಯಾಗಿರಿ. ಅವರನ್ನು ಪ್ರತಿ ಹೆಜ್ಜೆಯಲ್ಲೂ ಪ್ರೋತ್ಸಾಹಿಸಿ. ಅವರಿಗೆ ಹುರಿದುಂಬಿಸಿ. ಅವರಿಗೆ ಹೆಗಲಾಗಿ ನಿಲ್ಲಿ. ನಿಮ್ಮ ಕೈಯಲ್ಲಿ ಆಗುವ ಸಹಾಯವನ್ನು ಅವರಿಗೆ ಮಾಡಿ. ಖಂಡಿತ ನಿಮ್ಮ ಪತಿ ಖುಷಿ ಪಡುತ್ತಾರೆ.
ನಿಮ್ಮಲ್ಲಿ ಈ ರೀತಿಯ ಗುಣಗಳು ಇದ್ದರೆ ಖಂಡಿತ ನೀವು ಪತಿಗೆ ತಕ್ಕ ಪತ್ನಿಯಾಗೋದ್ರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.



Click it and Unblock the Notifications

