Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ವೃತ್ತಿ ಹಾಗೂ ವೈವಾಹಿಕ ಜೀವನವನ್ನು ಬ್ಯಾಲೆನ್ಸ್ ಮಾಡೋದು ನೀವಂದುಕೊಂಡಷ್ಟು ಕಷ್ಟ ಇಲ್ಲ!
ಗಂಡ ಕೆಲಸಕ್ಕೆ ಹೋಗುತ್ತಿದ್ದು ಹೆಂಡತಿ ಮನೆಯಲ್ಲಿ ಇದ್ದರೆ ಅಂತಹ ಕುಟುಂಬದಲ್ಲಿ ಹೆಚ್ಚಾಗಿ ಸಮಸ್ಯೆ ಬರೋದಿಲ್ಲ. ವೀಕೆಂಡ್ ನಲ್ಲಿ ಹೆಂಡತಿಗಾಗಿ ಗಂಡ ಸಮಯ ಕೊಡುತ್ತಾನೆ. ಇನ್ನೂ ಹೆಂಡತಿ ಒಬ್ಬಳೇ ಮನೆಯನ್ನು ನಿಭಾಯಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾಳೆ. ಹೀಗಾಗಿ ಇಬ್ಬರೂ ಕೂಡ ಸಂಸಾರವನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಆದ್ರೆ ಯಾವಾಗ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೊರಗೆ ಹೋಗುತ್ತಾರೋ ಆಗ ನಿಜವಾದ ಸಮಸ್ಯೆ ಎದುರಾಗೋದು.
ಇತ್ತೀಚಿಗೆ ಗಂಡಸರಂತೆ ಹೆಂಗಸರು ಕೂಡ ತಮ್ಮ ವೃತ್ತಿ ಜೀವನದ ಬಗ್ಗೆ ಗಂಭೀರವಾಗಿದ್ದಾರೆ. ಮದುವೆಯಾದ ಮೇಲೂ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಇದ್ರಿಂದಾಗಿ ಒಬ್ಬರಿಗೊಬ್ಬರು ಸಮಯ ನೀಡೋದಕ್ಕೆ ಆಗೋದಿಲ್ಲ, ಮನೆ ಕೆಲಸವನ್ನು ಇಬ್ಬರೂ ನಿಭಾಯಿಸಬೇಕಾಗಿರೋದ್ರಿಂದ ಈ ವಿಚಾರಕ್ಕೆ ಜಗಳ ನಡೆಯುತ್ತೆ. ಹೀಗೆ ಹತ್ತು-ಹಲವು ಸಮಸ್ಯೆಗಳು ದಂಪತಿಗಳ ಮಧ್ಯೆ ಎದುರಾಗದೇ ಇರೋದಿಲ್ಲ. ಅಷ್ಟಕ್ಕು ವೃತ್ತಿ ಹಾಗೂ ವೈವಾಹಿಕ ಜೀವನವನ್ನು ಒಟ್ಟಾಗಿ ನಿಭಾಯಿಸೋದು ಹೇಗೆ? ಇಲ್ಲಿದೆ ಟಿಪ್ಸ್

1. ಕೆಲಸವನ್ನು ಹಂಚಿಕೊಳ್ಳಿ
ಗಂಡ-ಹೆಂಡತಿ ಇಬ್ಬರೂ ಹೊರಗೆ ಹೋಗಿ ಕೆಲಸ ಮಾಡುತ್ತಿದ್ದಾರೆ ಅಂದ್ರೆ ಮನೆ ಕೆಲಸವನ್ನು ಇಬ್ಬರೂ ಕೂಡ ಹಂಚಿಕೊಳ್ಳಲೇಬೇಕು. ಹೀಗಾಗಿ ಯಾವ ಕೆಲಸವನ್ನು ಯಾರು ಮಾಡಬೇಕೆಂದು ನಿರ್ಧಾರ ಮಾಡಿಕೊಳ್ಳಿ. ಇಬ್ಬರೂ ಕೆಲದಿಂದ ವಾಪಾಸ್ಸ್ ಬಂದ ಮೇಲೆ ಜವಾಬ್ದಾರಿಗಳು ಹಂಚಿಕೊಳ್ಳಿ. ಇನ್ನೂ ರಜಾ ದಿನದಂದು ಅಡುಗೆ ಸೇರಿದಂತೆ ಇನ್ನುಳಿದ ಕೆಲಸಗಳನ್ನು ಇಬ್ಬರೂ ಒಟ್ಟಾಗಿ ಮಾಡಬೇಕು.
2. ಬುದ್ಧಿವಂತಿಕೆಯಿಂದ ವೃತ್ತಿ ಬಗ್ಗೆ ನಿರ್ಧಾರ ಮಾಡಿ
ಮಕ್ಕಳಾಗೋವರೆಗೂ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿರುತ್ತೀರಿ. ಆದರೆ ಮಕ್ಕಳಾದ ಮೇಲೆ ಮಗುವನ್ನು ನೋಡಿಕೊಳ್ಳಿ ಬಹುದೊಡ್ಡ ಹೊಣೆಗಾರಿಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರು ಕೆಲಸ ಬಿಡೋ ಯೋಚನೆಯನ್ನು ಮಾಡುತ್ತಾರೆ. ಒಂದು ವೇಳೆ ನಿಮ್ಮ ಭವಿಷ್ಯ ಉಜ್ವಲವಾಗಿದ್ದರೆ, ನಿಮಗೆ ಸಿಕ್ಕಾಪಟ್ಟೆ ಕೆಲಸದ ಅವಕಾಶಗಳು ಇದ್ದರೆ ವೃತ್ತಿ ಜೀವನ ತ್ಯಜಿಸುವ ನಿರ್ಧಾರ ಮಾಡಬೇಡಿ.
ಮಕ್ಕನ್ನು ನೋಡಿಕೊಳ್ಳೋದಕ್ಕೆ ಬೇರೆ ಏನಾದರೂ ದಾರಿ ಹುಡುಕಬೇಕು. ನಿಮ್ಮ ಅತ್ತೆ ಅಥವಾ ಅಮ್ಮನನ್ನು ನಿಮ್ಮ ಮನೆಯಲ್ಲಿ ಇರೋದಕ್ಕೆ ಹೇಳಿ. ಅಜ್ಜ- ಅಜ್ಜಿಯ ಆರೈಕೆಯಲ್ಲಿ ಬೆಳೆದ ಮಕ್ಕಳು ದಾರಿ ತಪ್ಪೋದಿಲ್ಲ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಪರಿಚಯಸ್ಥರನ್ನು ನಿಮ್ಮ ಮನೆಯಲ್ಲಿ ಇರಿಸಿ ಅವರು ಮಗುವನ್ನು ನೋಡಿಕೊಳ್ಳಲಿ. ನಿಮ್ಮ ಭವಿಷ್ಯ ಉತ್ತಮವಾಗಬೇಕೆಂದರೆ ನೀವು ಈ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ.
3. ಫ್ರೀ ಆಗಿದ್ದ ಸಮಯದಲ್ಲಿ ಕೆಲಸದ ಬಗ್ಗೆ ಮಾತನಾಡಬೇಡಿ
ವಾರಪೂರ್ತಿ ಕೆಲಸ ಮಾಡುವವರಿಗೆ ಖಂಡಿತ ರೆಸ್ಟ್ ಬೇಕಾಗುತ್ತೆ. ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ಕುಟುಂಬದ ಜೊತೆಗೆ ಫ್ಯಾಮಿಲಿ ಟ್ರಿಪ್ ಮಾಡಿ. ಗಂಡ ಹಾಗೂ ಮಕ್ಕಳ ಜೊತೆಗೆ ಹೊರಗಡೆ ಹೋಗಿ ಹಾಯಾಗಿ ಇದ್ದು ಬನ್ನಿ. ಈ ಸಮಯದಲ್ಲಿ ಆಫಿಸ್ ವಿಷಯಗಳನ್ನು ಮಾತನಾಡೋದಕ್ಕೆ ಹೋಗಲೇಬೇಡಿ. ನಿಮಗೆ ಕುಟುಂಬದೊಂದಿಗೆ ಸಿಕ್ಕ ಅಮೂಲ್ಯ ಸಮಯವನ್ನು ಎಂಜಾಯ್ ಮಾಡಿ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
4. ಬಡ್ಜೆಟ್ ಪ್ಲಾನ್ ಮಾಡಿಕೊಳ್ಳಿ
ನಾವು ದುಡಿಯುವ ಉದ್ದೇಶವೇ ಹಣ ಗಳಿಸೋದಕ್ಕಾಗಿ. ಭವಿಷ್ಯದ ಬಗ್ಗೆ ಮನುಷ್ಯ ಎಷ್ಟೇ ಚಿಂತಿಸಿದರೂ ಕೂಡ ಕೊನೆಗೆ ಕೈ ತುಂಬಾ ದುಡ್ಡು ಗಳಿಸಿ ಒಂದೊಳ್ಳೆ ಜೀವನ ನಡೆಸಬೇಕು ಅನ್ನೋ ಉದ್ದೇಶ ಹೊಂದಿರುತ್ತಾನೆ. ಹೀಗಾಗಿ ಮನೆಯಲ್ಲಿ ಇಬ್ಬರು ದುಡುಯುತ್ತಿದ್ದಾಗ ಖರ್ಚು-ವೆಚ್ಚ ಹಾಗೂ ಉಳಿತಾಯದ ಬಗ್ಗೆ ಪ್ಲಾನ್ ಮಾಡಿಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ.
5. ಮಲಗುವ ಮೊದಲು ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ
ಗಂಡ-ಹೆಂಡತಿ ಎಂದ ಮೇಲೆ ಜಗಳ, ಮನಸ್ಥಾಪ ಎಲ್ಲವೂ ಇದ್ದೇ ಇರುತ್ತೆ. ಹಾಗಂತ ಅದನ್ನೇ ಮುಂದುವರಿಸಿಕೊಂಡು ಹೋಗೋದು ಜೀವನ ಅಲ್ಲ. ಇವತ್ತು ಗಂಡ-ಹೆಂಡತಿಯ ಮಧ್ಯೆ ಜಗಳಗಳು ಇದ್ದರೆ ಮಲಗುವ ಮೊದಲು ಇಬ್ಬರೂ ಮಾತನಾಡಿ ಅದನ್ನು ಪರಿಹರಿಸಿಕೊಳ್ಳಬೇಕು. ಅದೇ ಜಗಳವನ್ನು ನಾಳೆಯವರೆಗೂ ತೆಗೆದುಕೊಂಡು ಹೋಗಬಾರದು.
6. ಒಬ್ಬರಿಗೊಬ್ಬರು ಪ್ರೋತ್ಸಾಹ ನೀಡಿ
ಗಂಡ-ಹೆಂಡತಿಯು ಶಿವ-ಶಕ್ತಿಯಂತಿರಬೇಕು. ಯಾವುದೇ ಸಂದರ್ಭ ಬಂದರೂ ಒಬ್ಬರನ್ನೊಬ್ಬರೂ ಬಿಟ್ಟು ಕೊಡಬಾರದು. ನಿಮ್ಮ ಸಂಗಾತಿ ಭಾವನಾತ್ಮಕವಾಗಿ ಕುಗ್ಗಿ ಹೋದಾಗ ಅವರಿಗೆ ನೀವು ಚೈತನ್ಯ ತುಂಬುವವರಾಗಬೇಕು. ನಿಮ್ಮ ಸಂಗಾತಿಗೆ ಆರ್ಥಿಕ ಸಮಸ್ಯೆ ಬಂದಾಗಲೂ ಕೂಡ ನಿಮ್ಮ ಪ್ರೋತ್ಸಾಹ ಖಂಡಿತಬೇಕು. ಒಟ್ಟಿನಲ್ಲಿ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಗಂಡ-ಹೆಂಡತಿ ಜೊತೆಯಲ್ಲೇ ಇರಬೇಕು.
ಸಣ್ಣ-ಪುಟ್ಟ ಸಮಸ್ಯೆಗಳನ್ನು ಎದುರಿಸೋದಕ್ಕೆ ಸಾಧ್ಯವಾಗದೇ ವೃತ್ತಿ ಜೀವನದವನ್ನು ತ್ಯಜಿಸೋದು ಸರಿಯಲ್ಲ. ಎಂತಹದ್ದೇ ಸಮಸ್ಯೆ ಬಂದರೂ ಮುನ್ನುಗ್ಗಿ ಎದುರಿಸೋದು ಹೇಗಂತ ನಮಗೆ ಗೊತ್ತಿರಬೇಕು.



Click it and Unblock the Notifications

