Latest Updates
-
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ
ಒಂದು ಮೊಬೈಲ್ ಕುಟುಂಬದಲ್ಲಿ ಇಷ್ಟೆಲ್ಲಾ ಪ್ರಭಾವ ಬೀರುತ್ತಿದೆ, ಜಾಗ್ರತೆ
ಸಂಬಂಧದಲ್ಲಿ ಮೊಬೈಲ್ ವರವೂ ಹೌದು, ಶಾಪವೂ ಹೌದು. ನಮ್ಮವರು ದೂರ ಇದ್ದರೆ ಈ ಮೊಬೈಲ್ ಕಾರಣದಿಂದಾಗಿ ದೂರ ಇದೆ ಎಂದು ಅನಿಸುವುದೇ ಇಲ್ಲ, ಅದೇ ರೀತಿ ಈ ಮೊಬೈಲ್ ಹತ್ತಿರ ಇದ್ದರೂ ಸಂಬಂಧವನ್ನು ದೂರ ಮಾಡುತ್ತಿದೆ. ಎಷ್ಟೊಂದು ವಿಚಿತ್ರವಲ್ಲ.

ಅದರಲ್ಲಿಯೂ ವೈವಾಹಿಕ ಬದುಕಿನ ಮೇಲೆ ತುಂಬಾನೇ ಪರಿಣಾಮ ಬೀರುತ್ತಿದೆ:
ಎಷ್ಟೋ ವೈವಾಹಿಕ ಬದುಕಿನಲ್ಲಿ ಸಮಸ್ಯೆಗೆ ಮೊಬೈಲ್ ಕಾರಣವಾಗುತ್ತಿದೆ. ಸಂಗಾತಿ ನನ್ನ ಕಡೆ ಗಮನ ನೀಡುತ್ತಿಲ್ಲ ಎಂದು ವಿಚ್ಛೇದನದ ಮೆಟ್ಟಿಲು ಹತ್ತುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮೊಬೈಲ್‌ನಿಂದಾಗಿ ದಂಪತಿ ನಡುವೆ ಸಂವಹನ ಕಡಿಮೆಯಾಗುತ್ತಿದೆ.
ಸಂಗಾತಿ ಜೊತೆಯೇ ಇದ್ದರು ಒಬ್ಬರು ಪರಸ್ಪರ ಮಾತನಾಡುವ ಬದಲಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ, ರೀಲ್ಸ್ ನೋಡುತ್ತಾ, ಸೋಷಿಯಲ್ ಮೀಡಿಯಾ ನೋಡುತ್ತಾ ಸಮಯ ಕಳೆಯುತ್ತಾರೆ, ಇಬ್ಬರ ನಡುವೆ ಆಡಬೇಕಾಗಿರುವ ಮಾತುಗಳು ಅವರಲ್ಲಿಯೇ ಉಳಿಯುತ್ತಿದೆ, ಹೀಗಾಗಿ ಸಂಬಂಧಗಳು ದುರ್ಬಲವಾಗುತ್ತಿದೆ.
ಬೆಡ್‌ರೂಂನಲ್ಲಿ ನೋ ಮೊಬೈಲ್ ಎಂಬ ರೂಲ್ಸ್ ಇದ್ದರೆ ತುಂಬಾನೇ ಒಳ್ಳೆಯದು
ಮೊಬೈಲ್ ಒಂಥರಾ ಹಾರ್ಟ್ ರೀತಿಯಾಗಿದೆ, ಸದಾ ನಮ್ಮ ಜೊತೆಯಲ್ಲಿಯೇ ಇರಬೇಕು, ಕೆಲವರಿಗೆ ಒಂದು ಅರ್ಧ ಗಂಟೆ ಮೊಬೈಲ್ ಬಿಟ್ಟು ಇರಲು ಕಷ್ಟವಾಗುವುದು. ಕೆಲವರ ಕೆಲಸ ಕಾರ್ಯಗಳು ಮೊಬೈಲ್‌ನಲ್ಲಿಯೇ ನಡೆಯುವುದರಿಂದ ಮೊಬೈಲ್ ತುಂಬಾನೇ ಅನಿವಾರ್ಯ. ನಿಮ್ಮ ಅನಿವಾರ್ಯ ಏನೇ ಇರಲಿ ಬೆಡ್‌ರೂಂನಿಂದ ಮೊಬೈಲ್ ದೂರವಿಡಬೇಕು, ಇದರಿಂದ ಯಾವುದೇ ಕೆಲಸದ ಕರೆಗಳ ಅಥವಾ ಮೆಸೇಜ್‌ಗಳ
ಅಡಚಣೆ ಇರಲ್ಲ, ಸಂಗಾತಿ ಜೊತೆ ಮನಬಿಚ್ಚಿ ಮಾತನಾಡಿ, ಇಬ್ಬರು ಆ ದಿನದ ಘಟನೆಗಳನ್ನು ಹೇಳಿಕೊಳ್ಳಿ, ಇದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ತುಂಬಾನೇ ಸಹಕಾರಿಯಾಗಿದೆ. ಇಬ್ಬರು ಜೊತೆಯಾಗಿ ಕ್ವಾಲಿಟಿ ಸಮಯ ಕಳೆಯುತ್ತೀರಿ. ಇದರಿಂದ ನಿಮ್ಮಿಬ್ಬರ ಬಾಂಧವ್ಯ ಗಟ್ಟಿಯಾಗಲಿದೆ.
ಮಕ್ಕಳಿದ್ದರೆ ಅವರ ಜೊತೆ ಸಮಯ ಕಳೆಯಿರಿ
ಕೆಲ ಪೋಷಕರು ಮಕ್ಕಳು ಗಲಾಟೆ ಮಾಡದಿರಲಿ ಎಂದು ಮಕ್ಕಳ ಕೈಲಿ ಮೊಬೈಲ್ ಕೊಟ್ಟು ತಾವು ಒಂದು ಮೊಬೈಲ್ ಹಿಡಿದು ಕೂತು ಬಿಡುತ್ತಾರೆ, ಹೀಗೆ ಮಾಡಲೇಬೇಡಿ, ನಿಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಯಾಗಬೇಕೆಂದರೆ ನೀವು ಅವರ ಜೊತೆ ಆಟವಾಡಿ, ಮಕ್ಕಳ ಜೊತೆ ಹೆಚ್ಚು ಸಮಯ ಕಳೆದರೆ ಅವರ ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಿಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ.
ದೂರದಲ್ಲಿದ್ದಾಗ ನಮ್ಮ ಬಾಂಧವ್ಯ ಬೆಸೆಯಬೇಕಾಗಿದ್ದ ಮೊಬೈಲ್ ಹತ್ತಿರವಿದ್ದಾಗ ನಮ್ಮ ಬಾಂಧವ್ಯ ಹಾಳು ಮಾಡದಿರಲಿ
ಈ ಮೊಬೈಲ್ ಕೆಟ್ಟದು-ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ, ಅದನ್ನು ಹೇಗೆ ಬಳಸಬೇಕು ಎಂಬುವುದು ನಮಗೆ ಗೊತ್ತಿರಬೇಕು. ಕೆಲ ವಿಚ್ಛೇದನಕ್ಕೆ ಸಂಗಾತಿ ನನಗೆ ಇಷ್ಟವಿಲ್ಲದಿದ್ದರೂ ತುಂಬಾ ಹೊತ್ತು ಫೋನ್‌ನಲ್ಲಿ ಬೇರೆ ಯಾರೋ ಜೊತೆಗೆ ಮಾತನಾಡುತ್ತಿದ್ದಾರೆ ಎಂಬುವುದಾಗಿರುತ್ತದೆ. ಅದು ಫ್ರೆಂಡ್ ಆಗಿರಲಿ ಅಥವಾ ಬೇರೆ ಯಾರೇ ಆಗಿರಲಿ ನಿಮ್ಮ ಸಂಗಾತಿಗೆ ಇಷ್ಟವಿಲ್ಲ ಎಂದಾದರೆ ಮಾತನಾಡದಿರಿ. ಸಂಗಾತಿ ಕೊಡಬೇಕಾದ ಸಮಯ ಕೊಡದೆ ಸದಾ ಮೊಬೈಲ್‌ನಲ್ಲಿ ಕಳೆಯುವುದರಿಂದ ಇಂಥ ಸಮಸ್ಯೆಗಳು ಉಂಟಾಗುವುದು.
ಹಾಗಾಗಿ ಮೊಬೈಲ್ ನಿಮ್ಮ ಸಂಬಂಧವನ್ನು ಗಟ್ಟಿಯಾಗಿಸಲು ಯಾವ ರೀತಿ ಬಳಸಬೇಕು ಎಂದು ತಿಳಿದಿದ್ದರೆ ಒಳ್ಳೆಯದು.



Click it and Unblock the Notifications