Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ಸಂಬಂಧದಲ್ಲಿ ಸ್ವಾತಂತ್ರ್ಯ ಇಲ್ಲದಿದ್ದರೂ ಕಷ್ಟ, ಅತಿಯಾದ ಸ್ವಾತಂತ್ರ್ಯ ಕೂಡ ಸಂಬಂಧ ಮುರಿಯುತ್ತೆ
ಒಂದಿಷ್ಟೂ ಫ್ರೀಡಂ ಇಲ್ಲ ಈ ರಿಲೇಷನ್‌ಶಿಪ್ ಸಾಕಾಗಿದೆ ಎಂದು ಹೇಳುವವರನ್ನು ನೋಡುತ್ತೇವೆ, ಅಷ್ಟು ಫ್ರೀಡಂ ಕೊಟ್ಟಿದ್ದಕ್ಕೆ ಅವನಿಗೆ/ ಅವಳಿಗೆ ಆ ಗತಿಯಾಯ್ತು, ಸ್ವಲ್ಪ ಕಂಟ್ರೋಲ್‌ನಲ್ಲಿ ಇಟ್ಟಿದ್ದರೆ ಎಲ್ಲವೂ ಹದ್ದು ಬಸ್ತಿನಲ್ಲಿ ಇರ್ತಾ ಇತ್ತು ಎಂದು ಹೇಳುವವರನ್ನು ನೋಡಿದ್ದೇವೆ,
ಹಾಗಾದರೆ ಈ ಫ್ರೀಡಂ ಅಂದರೆ ಸಂಬಂಧದಲ್ಲಿ ಸ್ವಾತಂತ್ರ್ಯ ಎಂದರೇನು? ಹೇಗಿದ್ದರೆ ಒಳ್ಳೆಯದು, ಸ್ವಾತಂತ್ರ್ಯ ಹೆಸರಿನಲ್ಲಿ ಏನು ಆದರೆ ಆ ಸಂಬಂಧ ಮುರಿದು ಬೀಳುತ್ತೆ ಎಂದು ನೋಡೋಣ:

ಸಂಬಂಧದಲ್ಲಿ ಸ್ವಾತಂತ್ರ್ಯ (ರಿಲೇಷನ್‌ಶಿಪ್ ಫ್ರೀಡಂ )
ಅದು ಗಂಡ-ಹೆಂಡತಿ ಅಥವಾ ಬಾಯ್ ಫ್ರೆಂಡ್-ಗರ್ಲ್ ಫ್ರೆಂಡ್ ನಡುವೆ ಆಗಿರಲಿ ಅವರಿಗೆ ಇಷ್ಟವಾಗಿದ್ದನ್ನು ಮಾಡುವ ಸ್ವಾತಂತ್ರ್ಯ ಇರಬೇಕು, ಎಲ್ಲದಕ್ಕೂ ಮೂಗು ತೂರಿಸಬಾರದು, ಅಲ್ಲದೆ ಎಲ್ಲದಕ್ಕೂ ಅನುಮತಿ ಪಡೆಯುವಂತೆ ಇರಬಾರದು. ಒಂದು ಸರಳ ಉದಾಹರಣೆ ತೆಗೆದುಕೊಳ್ಳುವುದಾದರೆ ಉಡುಗೆ. ಅವಳಿಗೆ ತನಗೆ ಇಷ್ಟವಾದ ಉಡುಗೆ ಧರಿಸುವ ಸ್ವಾತಂತ್ರ್ಯ ಇರಬೇಕು, ಅವನ ಆಣತಿಯಂತೆ ಅವಳು ಡ್ರೆಸ್ಸಿಂಗ್ ಮಾಡಿಕೊಳ್ಳಬೇಕು ಎಂದರೆ ಅಲ್ಲಿ ಅವಳ ಇಚ್ಛೆ ಅವಳ ಸ್ವಾತಂತ್ರ್ಯ ದೂರಾಗಿರುತ್ತದೆ. ಇನ್ನು ಅವನಿಗೆ ತನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೆಕು ಎಂಬ ಆಸೆ, ಅದರೆ ಅವಳಿಗೆ ಇಷ್ಟವಾಗಲ್ಲ, ಸುಮ್ಮನೆ ಜಗಳ ಏಕೆ ಎಂದು ಇವನು ಸುಮ್ಮನಾದರೆ ಅಲ್ಲಿ ಅವನಿಗೆ ಸ್ವಾತಂತ್ರ್ಯ ಇಲ್ಲ ಎಂದರ್ಥ.
ಸ್ವಾತಂತ್ರ್ಯ ಇಲ್ಲದ ಸಂಬಂಧದಲ್ಲಿ ಬಾಳುವುದು ತುಂಬಾನೇ ಕಷ್ಟ. ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಅಗಿದ್ದರೆ ಅವರ ಸಂಬಂಧ ಮುರಿದು ಬೀಳುತ್ತೆ, ಗಂಡ-ಹೆಂಡತಿ ಆದರೆ ಕೆಲವರು ವಿಚ್ಛೇದನ ತೆಗೆದುಕೊಂಡರೆ, ಇನ್ನು ಕೆಲವರು ನರಕದ ಬಾಳ್ವೆ ನಡೆಸುತ್ತಾರೆ. ಹಾಗಾಗಿ ಸಂಬಂಧದಲ್ಲಿ ಸ್ವಾತಂತ್ರ್ಯ ತುಂಬಾನೇ ಮುಖ್ಯ ಇದನ್ನು ಬೇಕಿದ್ದರೆ ಪರ್ಸನಲ್ ಸ್ಪೇಸ್ ಎಂದು ಕರೆಯಬಹುದು. ಇದು ತುಂಬಾನೆ ಮುಖ್ಯ, ಒಬ್ಬರನ್ನೊಬ್ಬರು ನಿಯಂತ್ರಿಸದೆ ಇದ್ದರೆ ಆ ಸಂಬಂಧ ತುಂಬಾ ಚೆನ್ನಾಗಿರಲಿದೆ, ಪ್ರೀತಿ ಹೆಚ್ಚಾಗುತ್ತದೆ, ಹೊಂದಾಣಿಕೆ ಇರಲಿದೆ. ಇಬ್ಬರು ಸ್ನೇಹಿತರಂತೆ ಖುಷಿ-ಖುಷಿಯಾಗಿ ಇರುತ್ತಾರೆ.
ಈ ಸ್ವಾತಂತ್ರ್ಯ ಹೆಚ್ಚಾದರು ಒಳ್ಳೆಯದಲ್ಲ ಎಂದು ಹೇಳುವುದೇಕೆ?
ಅತಿಯಾದ ಸ್ವಾತಂತ್ರ್ಯ ಅಂತ ಹೇಳಲು ಸಾಧ್ಯವಿಲ್ಲ ಅದನ್ನು ಸ್ವೇಚ್ಛಾಕಾರ ಎಂದು ಹೇಳಬಹುದು. ಸ್ವಾತಂತ್ರ್ಯವನ್ನು ತಪ್ಪಾಗಿ ಅರ್ಥ ಮಾಡಿಕೊಂಡಾಗ ಅದುವೇ ಸ್ವೇಚ್ಚಾಚಾರ. ಸ್ವಾತಂತ್ರ್ಯ ಏನು ಎಂದು ಹೇಳುವಾಗ ಉಡುಪಿನ ಬಗ್ಗೆ ಹೇಳಿದ್ವಿ ಅಲ್ವಾ, ಯಾವ ಬಗೆಯ ಉಡುಪು ಬೇಕಾದರೂ ಧರಿಸುವ ಸ್ವಾತಂತ್ರ್ಯ ಇರಬೇಕು, ಆದರೆ ಅದು ಸಭ್ಯತೆ ಮೀರಬಾರದು. ಅತಿಯಾದ ಮೈ ಪ್ರದರ್ಶನದ ಉಡುಪು ಧರಿಸಿ ಇದು ನನ್ನ ಸ್ವಾತಂತ್ರ್ಯ ಎಂದರೆ ಅದು ಸ್ವಾತಂತ್ರ್ಯ ಅಲ್ಲ, ಸ್ವೇಚ್ಛಾಕಾರವಾಗುತ್ತೆ, ಅವರಿಗೆ ನಾನು ಏನಾದರು ಹೇಳಿದರೆ ತಪ್ಪು ತಿಳಿಯಬಹುದೆಂಬ ಭಯ, ಒಂದು ವೇಳೆ ಅವರು ಹೇಳಲು ಪ್ರಾರಂಭಿಸಿದರೆ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯಾಯ್ತು ಎಮದು ಜೋರು ಬೊಬ್ಬೆ ಹಾಕಲು ಪ್ರಾರಂಭಿಸಿದರೆ ಅವರಿಗೆ ಏನು ಹೇಳಬೇಕು ಎಂದು ತಿಳಿಯಲ್ಲ, ಅದರೆ ನಿಮ್ಮ ನಡುವಿನ ಸಂಬಂಧ ಶಿಥಿಲವಾಗುವುದು.
ಅದೇ ರೀತಿ ಗೆಳತನ. ಯಾವುದೇ ಗೆಳೆತನಕ್ಕೆ ಒಂದು ಎಲ್ಲೆ ಇದ್ದರೆ ಮಾತ್ರ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ನಿಮ್ಮ ಗೆಳೆತನ (ವಿರುದ್ಧ ಲಿಂಗದ ನಡುವಿನ ಗೆಳೆತನ) ಸಂಸಾರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಬಹುದು. ಹಾಗಾಗಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಮಾಡಬಾರದು ಎಂಬ ಸ್ಪಷ್ಟ ಕಲ್ಪನೆಯೂ ಇರಬೇಕಾಗುತ್ತದೆ.
ಈಗ ಹೇಳಿ ಸಂಬಂಧದಲ್ಲಿ ಸ್ವಾತಂತ್ರ್ಯ ಇಲ್ಲದಿದ್ದರೂ ಕಷ್ಟ, ಅತಿಯಾದ ಸ್ವಾತಂತ್ರ್ಯವೂ ಒಳ್ಳೆಯದಲ್ಲ ಅಲ್ವಾ?



Click it and Unblock the Notifications