Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
ಬೆಡ್‌ರೂಂನಲ್ಲಿ ಮೊಬೈಲ್ ತರುವ ಈ ಅಪಾಯಗಳ ಬಗ್ಗೆ ನಿರ್ಲಕ್ಷ್ಯ ಬೇಡ್ವೆ ಬೇಡ
ಈ ಮೊಬೈಲ್ ಫೋನ್ ಎಂಬುವುದು ನಮ್ಮನ್ನೆಲ್ಲಾ ಎಷ್ಟೊಂದು ಆವರಿಸಿಕೊಂಡು ಬಿಟ್ಟಿದೆ ಅಲ್ವಾ? ಬೆಳಗ್ಗೆ ಎದ್ದಾಗ ನಮ್ಮ ಕೈ ಸೇರುವ ಮೊಬೈಲ್ ಫೋನ್ ರಾತ್ರಿ ಮಲಗುವವರೆಗೆ ನಮ್ಮ ಜೊತೆಯೇ ಇರುತ್ತಿದೆ. ಕೆಲವರಂತೂ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ. ಒಂದು ಗುಂಪಿನ ಮಧ್ಯ ಕೂತರೂ ಒಂಟಿಯಾಗುತ್ತಿದ್ದೇವೆ. ಎಲ್ಲರೂ ಅವರವರ ಲೋಕದಲ್ಲಿ ಮರೆತು ಹೋಗುವುದರಿಮದ ಪರಸ್ಪರ ಕುಳಿತು ಮಾತನಾಡುವುದನ್ನೇ ಮರೆಯುತ್ತಿದ್ದೇವೆ.

ಈ ಮೊಬೈಲ್ ಸಂಬಂಧದ ಮೇಲೂ ತುಂಬಾನೇ ಪ್ರಭಾವ ಬೀರುತ್ತಿದೆ. ಸಂಗಾತಿ ಸದಾ ತನ್ನ ಮೊಬೈಲ್‌ನಲ್ಲೇ ಸಮಯ ಕಳೆಯುತ್ತಾರೆ, ನನ್ನ ಕೊತೆ ಹೆಚ್ಚು ಮಾತನಾಡುತ್ತಿಲ್ಲ ಎಂದು ಬಹುತೇಕರು ತಮ್ಮ ವೈವಾಹಿಕ ಜೀವನದ ಬಗ್ಗೆ ಬೇಸರದಿಂದ ಹೇಳುತ್ತಿದ್ದಾರೆ. ಮೊಬೈಲ್ ನಮಗೆ ತುಂಬಾನೇ ಅವಶ್ಯಕವಾದ ವಸ್ತು ಹೌದು, ಆದರೆ ಮೊಬೈಲ್ ಅನ್ನು ಬೆಡ್‌ರೂಂಗೆ ತರಲೇಬೇಡಿ. ಮಲಗುವ ಕೋಣೆಯಲ್ಲಿ ಮೊಬೈಲ್ ಇಡಲೇಬೇಡಿ, ಹೀಗೆ ಮಾಡುವುದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.
ಹೌದು ಮಲಗಲು ಹೋಗುವ ಮೊದಲು ಮೊಬೈಲ್ ದೂರವಿಡಿ
ಬೆಡ್ ಮೇಲೆ ಮಲಗಿದ ಮೇಲೆ ಮೊಬೈಲ್ ಹಿಡಿದು ಮಲಗಿದರೆ ಅದರಲ್ಲಿ ಕಳೆದು ಹೋಗಿ, ಪಕ್ಕದಲ್ಲಿರುವ ಸಂಗಾತಿಯೇ ಮರೆತು ಹೋಗುವುದು. ನಮ್ಮ ಈ ವರ್ತನೆ ಸಂಗಾತಿಗೆ ತುಂಬಾನೇ ಕಿರಿಕಿರಿ ಉಂಟು ಮಾಡಬಹುದು, ಅಸಮಧಾನಕ್ಕೆ ಕಾರಣವಾಗಬಹುದು. ಆದ್ದರಿಂದ ಈ ತಪ್ಪನ್ನು ಮಾಡಬೇಡಿ.
ಬೆಡ್‌ರೂಂನಲ್ಲಿ ಗಂಡ-ಹೆಂಡತಿ ಸ್ವಲ್ಪ ಹೊತ್ತು ಮನಸ್ಸು ಬಿಚ್ಚಿ ಮಾತನಾಡಿ
ವರ್ಷಗಳು ಉರುಳುತ್ತಿದ್ದಂತೆ ಇಬ್ಬರು ಒಂದೇ ಮನೆಯಲ್ಲಿ ಒಂದೇ ಕೋಣೆಯಲ್ಲಿ ಇದ್ದರೂ ಮೊದಲು ಇದ್ದಂಥ ಮಾತುಕತೆಗಳು ಕಡಿಮೆಯಾಗುವುದು. ಇಬ್ಬರು ಅವರವರ ಕೆಲಸದಲ್ಲಿ ಬ್ಯುಸಿಯಾಗುತ್ತೇವೆ, ಇದರಿಂದ ಸಂಸಾರ ಎಂಬುವುದು ಯಾಂತ್ರಿಕ ಬದುಕಾಗುವುದು.
ವೈವಾಹಿಕ ಬದುಕು ಯಾಂತ್ರಿಕವಾಗಲು ಬಿಡಬೇಡಿ
ವೈವಾಹಿಕ ಬದುಕು ಯಾಂತ್ರಿಕವಾಗಲಾರಂಭಿಸಿದರೆ ಆ ಬದುಕಿನಲ್ಲಿ ಏನೋ ಮಿಸ್ ಆದಂತೆ ಅನಿಸಲಾರಂಭಿಸುವುದು. ಇಬ್ಬರು ಮನಸ್ಸು ಬಿಚ್ಚಿ ಮಾತನಾಡಿ, ಆ ದಿನದ ವಿಷಯಗಳನ್ನು ಹೇಳಿ. ಕೆಲಸದ ಒತ್ತಡ, ಹಣದ ಸಮಸ್ಯೆ ಎಲ್ಲವೂ ಬದಿಗೊತ್ತಿ ಸ್ವಲ್ಪ ಹೊತ್ತು ಇಬ್ಬರು ಸ್ನೇಹಿತರಂತೆ ಮಾತನಾಡಿ, ಹೀಗೆ ಮಾಡುವುದರಿಂದ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಲೇ ಹೋಗುತ್ತದೆ.
ಅತಿಯಾದ ಮೊಬೈಲ್ ಬಳಕೆಯಿಂದ ಇಮೋಷನಲ್ ಕನೆಕ್ಷನ್ ಕಡಿಮೆಯಾಗುವುದು
ವೀಡಿಯೋ, ರೀಲ್ಸ್ ಮೂಲಕ ಬೇರೆಯವರ ವಿಚಾರಗಳನ್ನು ತಿಳಿಯುತ್ತೇವೆ, ಆದರೆ ನಮ್ಮವರಿಗೆ ಸಮಯ ಕೊಡದೆ ಅವರ ಮನಸ್ಸು ಅರಿಯಲು ಕಷ್ಟಪಡುತ್ತೇವೆ. ಆದ್ದರಿಂದ ಈ ತಪ್ಪನ್ನು ಮಾಡದಿರಿ.
ಅತಿಯಾದ ಮೊಬೈಲ್ ಬಳಕೆ ಡೌಟ್‌ಗೂ ಕಾರಣವಾಗುವುದು
ಸಂಗಾತಿ ಅತಿಯಾಗಿ ಬಳಕೆ ಮಾಡುತ್ತಿದ್ದರೆ ಇದರಿಂದ ಸಂಗಾತಿಗೆ ಸಂಶಯ ಬರಬಹುದು, ಇದರಿಂದ ಕೂಡ ಸಂಸಾರದಲ್ಲಿಸಮಸ್ಯೆ ಉಂಟಾಗುವುದು.
ಆದ್ದರಿಂದ ಬೆಡ್‌ರೂಂನಲ್ಲಿ ಮೊಬೈಲ್‌ನಲ್ಲಿ ಕಳೆದು ಹೋಗುವ ಬದಲಿಗೆ ಅನುರಾಗದಲ್ಲಿ ಕಳೆದು ಹೋಗಿ.....



Click it and Unblock the Notifications