Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ನಿಮ್ಮ ಹುಡುಗನ ಸ್ನೇಹಿತರನ್ನು ಭೇಟಿ ಮಾಡುವಾಗ ಈ ವಿಚಾರ ಗೊತ್ತಿರಲಿ
ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ಎಲ್ಲರ ಬಳಿ ಹೇಳಿಕೊಂಡು ತೋರಿಕೆಯ ಪ್ರೀತಿ ಮಾಡುವುದು ಸರಿಯಲ್ಲ. ಹಾಗಂತ ಯಾರ ಬಳಿಯೂ ಹೇಳದೇ ಕದ್ದು ಮುಚ್ಚಿ ಪ್ರೀತಿ ಮಾಡೋದು ಸರಿಯಲ್ಲ. ಒರ್ವ ಪ್ರಾಮಾಣಿಕವಾಗಿ ಪ್ರೀತಿ ಮಾಡುವ ಹುಡುಗ ತಾನು ಪ್ರೀತಿ ಮಾಡುವ ಹುಡುಗಿಯನ್ನು ಸಂಬಂಧಿಕರಿಗೆ ಪರಿಚಯ ಮಾಡಿಕೊಡುತ್ತಾನೆ.
ಅದೇ ರೀತಿ ತನ್ನ ಸ್ನೇಹಿತರಿಗೂ ಪರಿಚಯ ಮಾಡಿ ಕೊಡುತ್ತಾನೆ. ಆದರೆ ಅದೆಲ್ಲದಕ್ಕೂ ಸಮಯ ಸಂದರ್ಭ ಕೂಡಿ ಬರಬೇಕು. ಒಂದು ವೇಳೆ ನಿಮ್ಮ ಹುಡುಗ ಆತನ ಸ್ನೇಹಿತರಿಗೆ ನಿಮ್ಮನ್ನು ಪರಿಚಯ ಮಾಡಲು ಬಯಸಿದ್ದಲ್ಲಿ ಈ ವಿಚಾರದ ಬಗ್ಗೆ ಗಮನವಿರಲಿ.

1. ಧರಿಸುವ ಬಟ್ಟೆಯ ಬಗ್ಗೆ ಗಮನವಿರಲಿ
ನಿಮ್ಮ ಹುಡುಗ ನಿಮ್ಮನ್ನು ಆತನ ಸ್ನೇಹಿತರಿಗೆ ಪರಿಚಯ ಮಾಡೋದಕ್ಕೆ ಬಯಸಿದರೆ ನೀವು ಮೊದಲ ಬಾರಿಗೆ ಅವರನ್ನು ಭೇಟಿ ಮಾಡೋದ್ರಿಂದ ನೀವು ಧರಿಸುವ ಬಟ್ಟೆಯ ಬಗ್ಗೆ ಗಮನವಿರಲಿ. ನೀವೇನಾದರೂ ರಾತ್ರಿ ಪಾರ್ಟಿಗೆ ಹೋಗೋದಾದರೆ ಆ ಸಂದರ್ಭಕ್ಕೆ ಹೋಲುವ ಬಟ್ಟೆಯನ್ನು ಧರಿಸಿದರೆ ಉತ್ತಮ. ಇನ್ನೂ ಆ ಬಟ್ಟೆಗೆ ಹೋಲುವ ಮೇಕಪ್, ಆಭರಣ, ಜೊತೆಗೆ ಮ್ಯಾಚ್ ಆಗುವ ಚಪ್ಪಲಿ ಧರಿಸಲು ಮರೆಯದಿರಿ.
2. ನೀವು ಬೇರೆಯವರನ್ನು ಅನುಕರಣೆ ಮಾಡಬೇಡಿ
ಅನುಕರಣೆ ಒಳ್ಳೆಯದು ಹಾಗಂತ ಸಂಪೂರ್ಣವಾಗಿ ಒಬ್ಬರನ್ನು ಅನುಕರಣೆ ಮಾಡುವುದು ಸರಿಯಲ್ಲ. ಆಗ ನೀವು ನಿಮ್ಮತನವನ್ನು ಕಳೆದುಕೊಂಡು ಬಿಡುತ್ತೀರಿ. ನಿಮ್ಮ ಹುಡುಗನ ಸ್ನೇಹಿತರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಬರಬೇಕೆಂದು ನಾಟಕವಾಡಬೇಡಿ. ನೀವು ಹೇಗಿದ್ದೀರಿ ಹಾಗೆಯೇ ಇರಿ. ಅದೇ ಒಳ್ಳೆಯದು. ಬೇರೆಯವರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ನೀವು ನಿಮ್ಮತನವನ್ನು ಬಿಟ್ಟು ಕೊಡಬೇಡಿ.
3. ಆತ್ಮ ವಿಶ್ವಾಸದಿಂದಿರಿ
ನಿಮ್ಮ ಹುಡುಗ ಆತನ ಸ್ನೇಹಿತರಿಗೆ ಮೊಟ್ಟ ಮೊದಲ ಬಾರಿಗೆ ನಿಮ್ಮನ್ನು ಪರಿಚಯ ಮಾಡಲು ಬಯಸುತ್ತಾನೆ. ಇಂತಹ ಸಂದರ್ಭದಲ್ಲಿ ನಿಮ್ಮೊಳಗೆ ಭಯ ಇರಬಹುದು. ಅಥವಾ ನೀವು ಅವರ ಎದುರು ಮಾತನಾಡೋದಕ್ಕೆ ಮುಜುಗರ ಪಟ್ಟುಕೊಳ್ಳಬಹುದು. ಆದರೆ ನೀವು ಇದನ್ನು ಬೇರೆಯವರ ಮುಂದೆ ತೋರ್ಪಡಿಸಬಾರದು. ಬೇರೆಯವರ ಮುಂದೆ ಆತ್ಮ ವಿಶ್ವಾಸ ಹೆಚ್ಚಾಗಿರಬೇಕು. ನಿಮ್ಮ ಮಾತಿನಲ್ಲಿ ಒಂದು ರೀತಿಯ ಗತ್ತಿರಬೇಕು. ನೀವು ನಾಚಿಕೆ ಮಾಡಿಕೊಂಡು ಹೋದ ಜಾಗದಲ್ಲಿ ಯಾರ ಹತ್ತಿರ ಮಾತನಾಡದೇ ಇದ್ದರೆ ಕೆಟ್ಟ ಅಭಿಪ್ರಾಯ ಮೂಡುತ್ತದೆ.
4. ಪೊಸೆಸಿವ್ ಆಗಿರಬೇಡಿ
ನಿಮ್ಮ ಹುಡುಗ ಎಂದರೆ ನಿಮ್ಮಲ್ಲಿ ಒಂದು ರೀತಿ ಪೊಸೆಸಿವ್ ಗುಣ ಇದ್ದೇ ಇರುತ್ತದೆ. ಆತ ಬೇರೆ ಹುಡುಗಿಯರ ಜೊತೆಯಲ್ಲಿ ಆತ್ಮೀಯವಾಗಿ ಮಾತನಾಡಿದರೆ ನಿಮಗೆ ಇಷ್ಟ ಆಗೋದಿಲ್ಲ. ಆದರೆ ಆತನ ಸ್ನೇಹಿತರನ್ನು ಭೇಟಿಯಾಗಲು ಹೋದಾಗ ನೀವು ನಿಮ್ಮ ಹುಡುಗನ ಬಗ್ಗೆ ಪೊಸೆಸಿವ್ ಆಗಬೇಡಿ. ಆತ ಬೇರೆ ಹುಡುಗಿಯರೊಂದಿಗೆ ಮಾತನಾಡುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಕೋಪಿಸಿಕೊಳ್ಳಬೇಡಿ. ಆಗ ನಿಮ್ಮ ಮೇಲೆ ಆತನ ಸ್ನೇಹಿತರಿಗೆ ಕೆಟ್ಟ ಅಭಿಪ್ರಾಯ ಬರಹುದು.
5. ವಿವಾದಾತ್ಮಕ ಚರ್ಚೆ ಬೇಡ
ನಿಮ್ಮ ಹುಡುಗ ಆತನ ಸ್ನೇಹಿತರನ್ನು ಭೇಟಿ ಮಾಡಿಸಿದ ಸಂದರ್ಭದಲ್ಲಿ ನೀವು ಅವರ ಜೊತೆ ಹಾಯ್, ಬಾಯ್ ಹೇಳಿ ಸುಮ್ಮನಾದರೆ ನಿಮ್ಮ ಮೇಲೆ ಅವರಿಗೆ ಅಹಂಕಾರಿ ಎಂಬ ಅಭಿಪ್ರಾಯ ಬರಬಹುದು. ನಿಮ್ಮಿಂದ ಸಾಧ್ಯವಾದಷ್ಟು ಪ್ರತಿಯೊಬ್ಬರ ಜೊತೆಗೆ ಸಂವಹನ ಮಾಡೋದಕ್ಕೆ ಪ್ರಯತ್ನಿಸಿ. ಹಾಗಂತ ಸಿಕ್ಕಾಪಟ್ಟೆ ಮಾತನಾಡಿ ಒಂದೇ ಬಾರಿಗೆ ಅವರ ಜೊತೆಗೆ ಆತ್ಮೀಯವಾಗಿದ್ದೀರಿ ಎಂದು ನಡೆದುಕೊಳ್ಳೋದಕ್ಕೂ ಹೋಗಬೇಡಿ. ಇನ್ನೂ ಈ ಸಂದರ್ಭದಲ್ಲಿ ವಿವಾದಾತ್ಮಕ ಚರ್ಚೆಗಳನ್ನು ಮಾಡೋದು ಬೇಡ.
6. ನಿಮ್ಮ ಗೌರವವನ್ನು ನೀವು ಕಾಪಾಡಿಕೊಳ್ಳಿ
ಗೌರವ ಅನ್ನೋದು ಪ್ರತಿಯೊಬ್ಬ ಮನುಷ್ಯನಿಗೂ ತುಂಬಾನೇ ಮುಖ್ಯವಾಗುತ್ತದೆ. ನಿಮ್ಮ ಹುಡುಗ ಆತನ ಸ್ನೇಹಿತನಿಗೆ ನಿಮ್ಮನ್ನು ಪರಿಚಯ ಮಾಡೋದಕ್ಕೆ ಬಯಸಿದಾಗ ಆ ಸಂದರ್ಭದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ನೇಹಿತರೆಲ್ಲಾ ಸೇರಿ ನಿಮ್ಮ ಹಾಗೂ ನಿಮ್ಮ ಕಾಲು ಎಳೆಯೋದಕ್ಕೆ ಪ್ರಯತ್ನಿಸಬಹುದು. ಆದರೆ ಯಾವುದೇ ಕಾರಣಕ್ಕೂ ಅದು ನಿಮ್ಮ ಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ. ಮರ್ಯಾದಿ ಕಳೆದುಕೊಳ್ಳುವ ಕೆಲಸ ಮಾಡಲೇಬೇಡಿ.
ಮದುವೆಗೆ ಮೊದಲಾಗಲಿ ಅಥವಾ ಮದುವೆಯ ನಂತರವಾಗಲಿ ನಿಮ್ಮ ಸಂಗಾತಿ ಆತನ ಸ್ನೇಹಿತರಿಗೆ ನಿಮ್ಮನ್ನು ಪರಿಚಯ ಮಾಡಿಸೋದಕ್ಕೆ ಬಯಸಿದಾಗ ಈ ಎಲ್ಲಾ ವಿಚಾರಗಳು ನಿಮ್ಮ ಗಮನದಲ್ಲಿ ಇರಲೇಬೇಕು.



Click it and Unblock the Notifications
