Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಶ್ವದ ಅಪ್ಪಂದಿರ ದಿನ: ಅಪ್ಪಂದಿರ ದಿನ ಆರಂಭಗೊಂಡಿದ್ದು ಹೇಗೆ? ಏನಿದರ ಇತಿಹಾಸ ಗೊತ್ತಾ?
ತಂದೆ ಮಕ್ಕಳ ಬೆನ್ನ ಹಿಂದೆ ನಿಂತು ಅವರ ಯಶಸ್ಸನ್ನೇ ನೋಡುವ ಕಾವಲುಗಾರ ಇದ್ದಂತೆ. ತಾಯಿಯಂತೆ ಮಕ್ಕಳ ಮುದ್ದು ಮಾಡೋ ಬದಲು ಬೆದರಿಸಿ ಪ್ರೀತಿ ತೋರಿಸುವ ತಂದೆ ಎಲ್ಲವನ್ನು ಹೆಗಲ ಮೇಲೆ ಹೊತ್ತು ಮಕ್ಕಳ ಬೆಳೆಸುತ್ತಾನೆ. ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ. ಈ ವಿಶೇಷ ಸಂಬಂಧವನ್ನು ಆಚರಿಸಲು ನಾವು ಪ್ರತಿ ವರ್ಷ ತಂದೆಯ ದಿನವನ್ನು ಆಚರಿಸುತ್ತೇವೆ.
ಈ ವರ್ಷ ಅಪ್ಪಂದಿರ ದಿನವನ್ನ ಜೂನ್ 16ರಂದು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ, ಅಪ್ಪ ಜತೆ ಗಿದ್ದರೆ ಪ್ರಪಂಚದಲ್ಲಿ ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಏನೋ ವಿಶ್ವಾಸ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ ಮಾತ್ರ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ.

ಹಾಗಾದ್ರೆ ಈ ಅಪ್ಪಂದಿರ ದಿನ ಆರಂಭವಾಗಿದ್ದು ಏಕೆ? ಯಾವಾಗ?
ಮಕ್ಕಳ ಜೀವನ ರೂಪಿಸಲು ಪ್ರಮುಖ ಕಾರಣ ಅದು ತಂದೆ. ತಂದೆ ಹಾಕಿಕೊಟ್ಟ ಹಾದಿಯಲ್ಲೇ ಮಕ್ಕಳ ನಡೆಯುತ್ತಾರೆ. ಹೀಗಾಗಿ ತಂದೆಯ ತ್ಯಾಗ, ಆತನಿಗೂ ಒಂದು ದಿನ ಮೀಡಲಿಡಲು ಒಂದು ದಿನ ಆಚರಣೆಗೆ ಮುಡಿಪಾಗಿದೆ. ಈ ದಿನ ಆರಂಭಗೊಂಡಿದ್ದು ದೂರದ ಅಮೆರಿಕದಲ್ಲಿ ಇದರ ಹಿಂದೆ ದೊಡ್ಡ ದುರಂತದ ಕಥೆ ಇದೆ. 1908ರಲ್ಲಿ ಅಮೆರಿಕದ ಪಶ್ಚಿಮ ವರ್ಜೀನಿಯಾದಲ್ಲಿ ಭೀಕರ ಅಪಘಾತ ನಡೆದಿತ್ತು, ಈ ಅಪಘಾಯದಲ್ಲಿ ನೂರಾರು ಮಂದಿ ಮೃತಪಟ್ಟಿದ್ದರು.
ಇಲ್ಲೋರ್ವರ ಮಗಳು ಗ್ರೇಸ್ ಗೋಲ್ಡನ್ ಕ್ಲೇಟನ್, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು. ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್ ಡಾಡ್ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.
ಇದೊಂದೆ ಈ ಅಪ್ಪಂದಿರ ದಿನಾಚರಣೆ ಆರಂಭಗೊಳ್ಳಲು ಹಲವು ರೀತಿಯ ವ್ಯಾಖ್ಯಾನಗಳಿವೆ. ಆದರೆ ಯಾವುದು ಸರಿ ಎಂಬುದು ಖಚಿತವಾಗಿಲ್ಲ.
ಅಪ್ಪಂದಿರ ದಿನದ ಪ್ರಾಮುಖ್ಯತೆ ಏನು?
ನಿತ್ಯ ನಮ್ಮ ತಂದೆಯೊಂದಿಗೆ ಸಮಯ ಕಳೆಯಬೇಕಾಗಿದ್ದರೂ, ಉದ್ಯೋಗ-ಅಧ್ಯಯನದಂತಹ ಹಲವಾರು ಕಾರಣಗಳಿಂದ ನಮಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಂದೆಯ ದಿನವು ಬಹಳ ಮುಖ್ಯವಾಗಿದೆ. ಆದರೆ ನಿಮ್ಮ ತಂದೆಯ ಗೌರವ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳಲು ಈ ದಿನವು ತುಂಬಾ ವಿಶೇಷವಾಗಿದೆ. ಈ ದಿನದಂದು, ನಿಮ್ಮ ತಂದೆಗೆ ವಿಶೇಷವಾದದ್ದನ್ನು ಅಡುಗೆ ಮಾಡಿ, ಅವರಿಗೆ ಉಡುಗೊರೆಗಳನ್ನು ಖರೀದಿಸಿ ಮತ್ತು ಅನನ್ಯವಾದದ್ದನ್ನು ಮಾಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಈ ದಿನದಂದು ನಿಮ್ಮ ತಂದೆಯ ಆಸೆಗಳ ಕುರಿತು ಕೇಳುವುದು, ಅವರ ಜೀವನದ ಗುರಿಗಳ ಇಡೇರಿಸಲು ನೀವು ಸಹ ಅವರಿಗೆ ಕೈಜೋಡಿಸಿ. ಅಲ್ಲದೆ ಮಕ್ಕಳ ಸಾಕಿ ಸಲಹಿದ ಅವರ ಕುರಿತು ಒಂದು ದಿನದ ಮಟ್ಟಿಗಾದರು ಆರೈಕೆ, ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸಲು ಇದೊಂದು ದಿನ ಮೀಸಲಿಡಲಾಗಿದೆ.
ಇತ್ತೀಚೆಗೆ ಅಪ್ಪಂದಿರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಮೊದಲೆಲ್ಲ ಅಪ್ಪಂದಿರ ದಿನ ಆಚರಣೆಯಲ್ಲಿದ್ದರೂ ಅಮ್ಮಂದಿರ ದಿನದಷ್ಟು ಜನಪ್ರಿಯತೆ ಗಳಿಸಿರಲಿಲ್ಲ. ಭಾರತದಲ್ಲಿ ಇಂದಿಗೂ ಅಪ್ಪಂದಿರ ದಿನಕ್ಕೆ ಅಷ್ಟೆನೂ ಪ್ರಾಮುಖ್ಯತೆ ನೀಡಲಾಗಿಲ್ಲ. ಆದರೂ ಜನ ಆಚರಿಸುವ ಸಂಖ್ಯೆ ಹೆಚ್ಚುತ್ತಿದೆ. ಆದ್ರೆ ಭಾರತದಲ್ಲಿ ಅಪ್ಪಂದಿರ ದಿನದ ಅಂಗವಾಗಿ ಹಲವು ಸಂಘ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳ ರೂಪಿಸುತ್ತವೆ.



Click it and Unblock the Notifications
