Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಅತ್ತೆಯೇ ನಿಮ್ಮ ಸಂಸಾರವನ್ನು ಹಾಳು ಮಾಡುತ್ತಿದ್ದಾರಾ? ಸರಿಪಡಿಸೋದು ಹೇಗೆ?
ಗಂಡ-ಹೆಂಡತಿ ಎಂದ ಮೇಲೆ ಪ್ರೀತಿಯ ಜೊತೆಗೆ ಇಬ್ಬರ ಮಧ್ಯೆ ಮನಸ್ಥಾಪ, ಜಗಳ ಇದ್ದಿದ್ದೇ. ಆದ್ರೆ ಅದು ತುಂಬಾ ಹೊತ್ತು ಇರೋದಿಲ್ಲ. ಗಂಡ-ಹೆಂಡತಿ ಇಬ್ಬರು ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ. ಆದ್ರೆ ಕೆಲವೊಂದು ಸಲ ಏನಾಗುತ್ತೆ ಎಂದರೆ ನಿಮ್ಮಬ್ಬರ ಸುಂದರ ಸಂಸಾರದಲ್ಲಿ ಅತ್ತೆ ಹುಳಿ ಹಿಂಡೋದಕ್ಕೆ ಶುರು ಮಾಡ್ತಾರೆ. ಇದರಿಂದ ದಂಪತಿಗಳ ಸಂಬಂಧ ಹಾಳಾಗುತ್ತದೆ. ಅಷ್ಟಕ್ಕು ಅತ್ತೆ ಯಾಕೆ ದಾಂಪತಿಗಳ ಮಧ್ಯೆ ವಿಲನ್ ಆಗ್ತಿದ್ದಾರೆ? ಈ ಸಮಸ್ಯೆಯಿಂದ ಪಾರಾಗೋದು ಹೇಗೆ ಎಂದು ತಿಳಿದುಕೊಳ್ಳೋಣ.
1. ಅತ್ತೆ ನಿಮ್ಮ ಮೇಲೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ
ಸಾಮಾನ್ಯವಾಗಿ ಮನೆಗೆ ಸೊಸೆ ಬಂದ ಮೇಲೆ ಅತ್ತೆಗೆ ಒಂದು ರೀತಿ ಹೊಟ್ಟೆ ಕಿಚ್ಚು ಇದ್ದೇ ಇರುತ್ತದೆ. ಮನೆಗೆ ಬಂದ ಸೊಸೆಯು ನನ್ನ ಮಗನಿಂದ ನನ್ನನ್ನು ದೂರ ಮಾಡುತ್ತಿದ್ದಾಳೆ ಎನ್ನುವ ನೋವು ಇದ್ದೇ ಇರುತ್ತದೆ. ಮಗನು ಅಮ್ಮನಷ್ಟೇ ಪ್ರಾಮುಖ್ಯತೆಯನ್ನು ಹೆಂಡತಿಗೂ ಕೊಡುವಾಗ ಅಮ್ಮನಿಗೆ ಸಹಿಸಿಕೊಳ್ಳುವುದು ಕಷ್ಟ ಆಗುತ್ತದೆ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಆಕೆ ಸೊಸೆಯನ್ನು ದ್ವೇಷಿಸೋದಕ್ಕೆ ಶುರು ಮಾಡ್ತಾಳೆ. ಸೊಸೆಯ ಬಗ್ಗೆ ಚಾಡಿ ಹೇಳುತ್ತಾಳೆ.
ಪರಿಹಾರ : ಸೊಸೆಯಾಗಿ ನೀವು ಆಕೆಯನ್ನು ನಿಮ್ಮ ತಾಯಿಯಂತೆ ನೋಡಿಕೊಳ್ಳಿ. ಮಗನಿಂದ ಆಕೆಯನ್ನು ದೂರ ಮಾಡುತ್ತಿಲ್ಲ ಎಂದು ಆಕೆಗೆ ಅರ್ಥ ಮಾಡಿಸಿ. ನಿಮ್ಮ ತಾಯಿಗೆ ಕೊಡೋ ಪ್ರೀತಿ, ಗೌರವವನ್ನು ಆಕೆಗೂ ತೋರಿಸಿ. ಖಂಡಿತ ಎಲ್ಲವೂ ಸರಿಯಾಗುತ್ತದೆ.

2. ಅಮ್ಮ-ಹೆಂಡತಿ ಇಬ್ಬರಲ್ಲಿ ಯಾರೆಂದು ನಿರ್ಧರಿಸಲು ಹೇಳುತ್ತಾರೆ
ಕೆಲವೊಂದು ಸಾರಿ ಸೊಸೆ ಮನೆಗೆ ಬಂದ ತಕ್ಷಣ ಅತ್ತೆಯಂದಿರಿಗೆ ಏನಾಗುತ್ತೋ ಗೊತ್ತಿಲ್ಲ. ಮೊಸರಲ್ಲಿ ಕಲ್ಲು ಹುಡುಕಿದಂತೆ ಸೊಸೆ ಮಾಡೋ ಪ್ರತಿಯೊಂದು ಕೆಲಸದಲ್ಲೂ ತಪ್ಪು ಹುಡುಕೋದಕ್ಕೆ ಶುರು ಮಾಡುತ್ತಾರೆ. ಕೊನೆಗೆ ಅದು ಮಗನವರೆಗೂ ಹೋಗಿ ನಿಲ್ಲತ್ತದೆ. ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡೆಂದು ಅಮ್ಮನೇ ಹೇಳುತ್ತಾರೆ. ಆಗ ಮಗನಿಗೆ ಅಡ ಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಎಷ್ಟೋ ಸಂಬಂಧಗಳು ಹಾಳಾಗಿದೆ.
ಪರಿಹಾರ : ಮೊದಲು ಮಗ ಅಮ್ಮನ ಬಳಿ ಮಾತನಾಡಿ. ಆಕೆ ಏನು ತಪ್ಪು ಮಾಡುತ್ತಿದ್ದಾಳೆ ಎಂಬುವುದನ್ನು ಮನವರಿಕೆ ಮಾಡಿಕೊಡಬೇಕು. ಸೊಸೆಗೆ ಆಗೋ ನೋವನ್ನು ಅಮ್ಮನಿಗೆ ಖುದ್ದು ಮಗನೇ ಅರ್ಥ ಮಾಡಿಸಬೇಕು. ಇಬ್ಬರನ್ನು ಒಟ್ಟಿಗೆ ಕುಳಿತು ಮಾತನಾಡಿಸಿ ಪರಿಹಾರ ಕಂಡುಕೊಳ್ಳಬೇಕು.
3. ಗೌಪ್ಯವಾಗಿ ಮಾತನಾಡೋದು ತಾಯಿಗೆ ಇಷ್ಟ ಆಗೋದಿಲ್ಲ
ಕೆಲವೊಂದು ಮನೆಗಳಲ್ಲಿ ತಾಯಿಯು ಮಗನಿಗೆ ಮದುವೆಯಾದ ಮೇಲೂ ಮಗನನ್ನು ಸೆರಗಿನ ಗಂಟಿನಲ್ಲೇ ಕಟ್ಟಿಕೊಂಡು ಇರಬೇಕೆಂದು ಬಯಸುತ್ತಾಳೆ. ಮಗ ಹೆಂಡತಿಗೂ ಸಮನಾದ ಪ್ರಾಮುಖ್ಯತೆ ಕೊಡುತ್ತಿದ್ದರೆ ಆಕೆಗೆ ಇಷ್ಟ ಆಗೋದಿಲ್ಲ. ಅವರಿಬ್ಬರೂ ಗೌಪ್ಯವಾಗಿ ಮಾತನಾಡೋದಾಗಲಿ, ಹೆಚ್ಚು ಹೊತ್ತು ಕೋಣೆಯಲ್ಲಿ ಸಮಯ ಕಳೆದರೂ ತಾಯಿ ಸಿಟ್ಟು ಮಾಡಿಕೊಳ್ಳುತ್ತಾಳೆ. ಅವರಿಬ್ಬರಿಗೂ ನೋವಾಗುವಂತೆ ಚುಚ್ಚಿ ಮಾತನಾಡುತ್ತಾಳೆ.
ಪರಿಹಾರ : ಸೊಸೆಯೇ ಅತ್ತೆಯಲ್ಲಿ ಮಾತನಾಡಿ ಆಕೆಗೆ ಅರ್ಥ ಮಾಡಿಸಬೇಕು. ಮಗನನ್ನು ಆಕೆಯಿಂದ ಕಿತ್ತುಕೊಳ್ಳುತ್ತಿಲ್ಲ ಎಂಬುದನ್ನು ಆಕೆಗೆ ಮನವರಿಕೆ ಮಾಡಿಸಿ.
4. ಸೊಸೆಯ ಮೇಲೆ ರೇಗಾಡುತ್ತಾಳೆ
ಎಲ್ಲಾ ಮನೆಯಲ್ಲಿಯೂ ಸೊಸೆಯೇ ಕೆಟ್ಟವಳು ಅಂತ ಹೇಳೋದಿಕ್ಕೆ ಆಗೋದಿಲ್ಲ. ಅತ್ತೆ ಮಗನ ವಿರುದ್ಧ ಸೊಸೆಯನ್ನು ಎತ್ತಿ ಕಟ್ಟೋದಕ್ಕೆ ಪ್ರಯತ್ನಿಸುತ್ತಾಳೆ. ಪ್ರತಿ ಸಾರಿ ಆಕೆಯ ಮನಸ್ಸಿಗೆ ನೋವು ಮಾಡೋದಕ್ಕೆ ಯತ್ನಿಸುತ್ತಾಳೆ. ಇದರಿಂದ ದಾಂಪತ್ಯದಲ್ಲಿ ಕಲಹ ಹೆಚ್ಚಾಗಿ ಸೊಸೆಗೆ ಮದುವೆಯೇ ಬೇಡ ಅನ್ನಿಸಬಹುದು. ಆಕೆಯ ವಿಚ್ಛೇದನ ತೆಗೆದುಕೊಳ್ಳೋದಕ್ಕೆ ನಿರ್ಧರಿಸಬಹುದು.
ಪರಿಹಾರ : ಸೊಸೆಯು ಮಗನ ಹೆಂಡತಿ ಆಕೆ ಶತ್ರುವಲ್ಲ ಎಂಬುದನ್ನು ಅತ್ತೆಗೆ ಅರ್ಥ ಮಾಡಿಸಿ. ಮೊದಲು ನೀವು ನಿಮ್ಮ ಪತಿಯ ಜೊತೆ ಮಾತನಾಡಿ ನಿಮ್ಮ ಮೇಲೆ ಅತ್ತೆ ಸುಮ್ಮನೆ ಆರೋಪ ಹೊರಿಸುತ್ತಿದ್ದಾರೆ. ನೀವು ಯಾವುದೇ ತಪ್ಪನ್ನು ಮಾಡುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಸಿ. ನಿಜವಾಗಿಯೂ ನಿಮ್ಮ ಹೆಂಡತಿ ತಪ್ಪು ಮಾಡಿಲ್ಲ ಎಂದಾದರೆ ಈಗ ನೀವು ನಿಮ್ಮ ಅಮ್ಮನ ಮನಸ್ಥಿಯನ್ನು ಅರ್ಥ ಮಾಡಿಕೊಳ್ಳಿ.
5. ಸೊಸೆ ಎರಡು ಮುಖ ಹೊಂದಿರುತ್ತಾಳೆ
ಅತ್ತೆ ನಿಮ್ಮ ಸಂಸಾರವನ್ನು ಹಾಳು ಮಾಡೋ ಮತ್ತೊಂದು ವಿಧಾನ ಅಂದ್ರೆ ಆಕೆ ನಿಮ್ಮೊಂದಿಗೆ ತುಂಬಾ ಒಳ್ಳೆಯವಳಂತೆ ನಟನೆ ಮಾಡುತ್ತಾಳೆ. ನಿಮ್ಮ ಎದುರು ಚೆನ್ನಾಗಿ ಮಾತನಾಡುತ್ತಾಳೆ. ಆದರೆ ನಿಮ್ಮ ಹಿಂದೆ ನಿಮ್ಮ ಬಗ್ಗೆ ಚಾಡಿ ಹೇಳುತ್ತಾಳೆ. ಸ್ನೇಹಿತರು, ಸಂಬಂಧಿಕರಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿರುತ್ತಾಳೆ.
ಪರಿಹಾರ : ಮೊದಲು ನೀವು ನಿಮ್ಮ ಅತ್ತೆಯ ಬಳಿ ಕೂತು ಮಾತನಾಡಿ. ಆಕೆ ಯಾಕೆ ಈ ರೀತಿ ಮಾತನಾಡುತ್ತಿದ್ದಾಳೆ ಎಂದು ಅವಳಲ್ಲಿ ಕೇಳಿ. ನಂತರ ನಿಮ್ಮ ಗಂಡನ ಬಳಿ ಈ ವಿಚಾರದ ಬಗ್ಗೆ ಮಾತನಾಡಿ. ಆದರೆ ಇದರಿಂದ ಮನೆಯಲ್ಲಿ ಜಗಳ ಸೃಷ್ಟಿಯಾಗದಂತೆ ನೋಡಿಕೊಳ್ಳಿ.
ಮನೆಗೆ ಸೊಸೆ ಬಂದ ಮೇಲೆ ಮನೆಯಲ್ಲಿ ಈ ರೀತಿ ಕಲಹಗಳು ಸೃಷ್ಟಿಯಾಗೋದು ಕಾಮನ್. ಆದರೆ ಆ ಸಮಸ್ಯೆಯನ್ನು ಬಗೆಹರಿಸುವ ಜಾಣ್ಮೆ ನಿಮ್ಮಲ್ಲಿದ್ದರೆ ಮಾತ್ರ ನೀವು ಸುಂದರ ಸಂಸಾರ ನಡೆಸೋದಕ್ಕೆ ಸಾಧ್ಯ.



Click it and Unblock the Notifications

