Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಪುರುಷ ಅನ್ಯ ಮಹಿಳೆಯ ಆಕರ್ಷಣೆಗೆ ಒಳಗಾಗೋದು ಏಕೆ..? ಇಲ್ಲಿದೆ 5 ಕಾರಣ..!
ಮದುವೆ ಎಂಬುದು ಒಂದು ಮಧುರವಾದ ಸಂಬಂಧವಾಗಿರುತ್ತೆ. ಅದ್ರೆ ಮದುವೆಯಾದ ಹೊಸತರಲ್ಲಿದ್ದ ಭಾವನೆ ಒಂದೆರಡು ವರ್ಷ ಕಳೆಯುವಾಗ ಇರುವುದಿಲ್ಲ. ಆಗ ಪತಿ-ಪತ್ನಿ ನಡುವೆ ನೂರಾರು ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿರುತ್ತದೆ.
ಅಲ್ಲದೆ ಪುರುಷರು ಬೇಗ ಅನ್ಯ ಮಹಿಳೆಯ ಕಡೆ ವಾಲಲು ಆರಂಭಿಸುತ್ತಾರೆ. ಕೆಲವೊಂದು ವೈವಾಹಿಕ ಸಂಬಂಧ ಈ ಕಾರಣದಿಂದಲೇ ಮುರಿದು ಬೀಳುತ್ತದೆ. ಜೊತೆಗೆ ಒಂದಿಷ್ಟು ಸಾವಿನಲ್ಲೂ ಅಂತ್ಯವಾಗಬಹುದು. ಹಾಗಾದ್ರೆ ಪುರುಷ ಪರಸ್ತ್ರೀ ಸಹವಾಸ ಮಾಡಲು ಕಾರಣಗಳೇನು? ಇದರಲ್ಲಿ ಕುಟುಂಬದ ಪಾತ್ರವೇನು ಅಥವಾ ಪತ್ನಿಯ ಪಾತ್ರವೇನಿರಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಮದುವೆಯಾದ ಸ್ವಲ್ಪ ಸಮಯದ ನಂತರ, ಪುರುಷನು ಇತರ ಮಹಿಳೆಯರನ್ನು ಇಷ್ಟಪಡಲು ಪ್ರಾರಂಭಿಸುತ್ತಾನೆ. ಅವನು ಅವರ ಕಡೆಗೆ ಆಕರ್ಷಿತನಾಗಲು ಪ್ರಾರಂಭಿಸುತ್ತಾನೆ ಮತ್ತು ಅವರೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಪ್ರಾರಂಭಿಸುತ್ತಾನೆ. ಹೀಗಾದಾಗ ಒಂದು ಸಂಸಾರವೇ ಬೀದಿಗೆ ಬೀಳುತ್ತದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು?
ಇದು ಧರ್ಮ, ಸಂಪತ್ತು, ಕೆಲಸ, ಮೋಕ್ಷ, ಕುಟುಂಬ, ಸಂಬಂಧಗಳು, ಘನತೆ, ಸಮಾಜ, ಸಂಬಂಧಗಳು, ದೇಶ ಮತ್ತು ಜಗತ್ತಿಗೆ ಸಂಬಂಧಿಸಿದ ತತ್ವಗಳನ್ನು ವಿವರಿಸುತ್ತದೆ. ಅಂದರೆ ಒಬ್ಬ ವ್ಯಕ್ತಿ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಬೇಕಾದರೆ ಆತನ ಮನಸ್ಸಿನಲ್ಲಿ ಗಾಢವಾಗಿ ಯಾವುದಾದರು ವಿಚಾರ ನೋವುಂಟು ಮಾಡಿರಬೇಕಾಗುತ್ತದೆ. ಇಲ್ಲವೆ ಮಾನಸಿಕವಾಗಿ ನೆಮ್ಮದಿ ಇಲ್ಲದಿರುವ ಸ್ಥಿತಿಯಲ್ಲಿ ಆತ ನರಳುತ್ತಿರಬಹುದಾಗಿದೆ.
ದೈಹಿಕ ಆಸರೆ ಬಯಸಿ ಆತ ಪರಸ್ತ್ರಿ ಸಂಬಂಧ ಬೆಳೆಸುವುದು
ಪುರುಷನಾದವರನು ಮದುವೆಯ ಬಳಿಕ ಪರಸ್ತ್ರಿ ಸಂಬಂಧ ಬೆಳಸಲು ಪ್ರಮುಖ ಕಾರಣ ಇದಾಗಿರಲಿದೆ. ಆತ ದೈಹಿಕ ಸಂತೃಪ್ತಿಗಾಗಿ ಅನ್ಯ ಸಂಬಂಧದಲ್ಲಿ ಆಸಕ್ತಿ ಬೆಳೆಸಿಕೊಳ್ಳಬಹುದು. ಪತ್ನಿಯಿಂದ ಆತನಿಗೆ ದೈಹಿಕ ಆಸೆಗಳಿಗೆ ಸಂಬಂಧಿಸಿದ ತೃಪ್ತಿ ಸಿಗದಿದ್ದರೆ ಅನ್ಯ ಸ್ತ್ರೀ ಕುರಿತು ಆಕರ್ಷಿತನಾಗುತ್ತಾನೆ.
ಚಿಕ್ಕ ವಯಸ್ಸಿನಲ್ಲಿ ಮದುವೆ
ಪತ್ನಿ ಹಾಗೂ ಪತ್ನಿ ಇಬ್ಬರ ಸಂಬಂಧದಲ್ಲಿ ಯಾರು ಯಾವ ವರ್ಷದಲ್ಲಿ ಮದುವೆಯಾಗಿದ್ದರು ಎಂಬುದು ಮುಖ್ಯವಾಗುತ್ತದೆ. ಇಬ್ಬರಿಗೂ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದರೆ ಹಾಗೂ ಪತಿಗಿಂತ ಪತ್ನಿಯ ವಯಸ್ಸು ತುಂಬಾ ಚಿಕ್ಕದಾಗಿದ್ದರೆ ಆತ ಮತ್ತೊಂದು ಸಂಬಂಧ ಹೊಂದಬಹುದಂತೆ. ಇದರಲ್ಲಿ ಆತ ಮದುವೆಯಾದ ಬಳಿಕ ಪತ್ನಿಯಲ್ಲಿ ಆಸಕ್ತಿ ಇಲ್ಲದಿರುವುದು ಹಾಗೂ ಯಾರದ್ದೋ ಒತ್ತಡಕ್ಕೆ ಮಣಿದು ಮದುವೆಯಾಗಿರಬಹುದು.
ಪತ್ನಿ ಹಾಗೂ ಮನೆಯಲ್ಲಿ ಒತ್ತಡ
ಪುರುಷನೊಬ್ಬ ವಿವಾಹೇತರ ಸಂಬಂಧಕ್ಕೆ ಒಳಗಾಗಲು ಪತ್ನಿ ಹಾಗೂ ಆ ಮನೆಯ ಪರಿಸ್ಥಿತಿ ಸಹ ಕಾರಣವಾಗಲಿದೆ. ಆತನಿಂದ ಮನೆ ಏನು ಬಯಸುತ್ತಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆತನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದನ್ನು ಆತನಿಂದ ಮನೆ ಅಥವಾ ಪತ್ನಿ ಬಯಸುತ್ತಿದ್ದರೆ ಅದರಿಂದ ಆತನಲ್ಲಿ ಒತ್ತಡ, ಜಿಗುಪ್ಸೆ ಈ ರೀತಿ ಅಡ್ಡದಾರಿಗೆ ಕಾರಣವಾಗಲಿದೆ.
ಮಕ್ಕಳ ನಂತರ ಸಂಬಂಧಗಳು ಬದಲಾಗಬಹುದು
ವೈವಾಹಿಕ ಜೀವನದಲ್ಲಿ ಪ್ರೀತಿಯ ತೀವ್ರತೆಯು ನೀವು ಪೋಷಕರಾಗುವವರೆಗೂ ಇರುತ್ತದೆ. ಮಗುವಿನ ಜನನದ ನಂತರ ಪುರುಷರು ತಮ್ಮ ಹೆಂಡತಿಯಿಂದ ದೂರವಾಗಲು ಪ್ರಾರಂಭಿಸುತ್ತಾರೆ. ಹೆಂಡತಿ ತನ್ನ ಮಗುವಿಗೆ ಬದಲಾಗಿ ತನ್ನ ಗಂಡನಿಗೆ ಕಡಿಮೆ ಪ್ರಾಮುಖ್ಯತೆಯನ್ನು ನೀಡಲು ಪ್ರಾರಂಭಿಸುತ್ತಾಳೆ ಎಂಬುದೇ ಇದರ ಹಿಂದಿನ ಕಾರಣವಾಗಬಹುದು.
ಮದ್ಯಪಾನ ಹಾಗೂ ದುಶ್ಚಟ
ಅನ್ಯ ಸಂಬಂಧದಲ್ಲಿ ತೊಡಗುವ ಪುರುಷರು ಬಹುಪಾಲು ಯಾವುದಾದರೊಂದು ದುಶ್ಚಟ ಹೊಂದಿರುತ್ತಾರೆ. ಅದು ಮದ್ಯಪಾನ, ಸಿಗರೇಟ್, ಜೂಜು ಹೀಗೆ ಇತ್ಯಾದಿ. ಈ ಎಲ್ಲಾ ದುಶ್ಚಟಗಳನ್ನು ಆತ ಮನೆಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಪತ್ನಿ ಇದನ್ನು ಪ್ರಶ್ನಿಸುವ ಕಾರಣಕ್ಕೆ ಮನೆಗೆ ತೆರಳಲು ಸಹ ಆತ ಇಷ್ಟಪಡುವುದಿಲ್ಲ. ಇದು ಆತನಿಗೆ ಮತ್ತೊಬ್ಬಾಕೆ ಕಡೆ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ.



Click it and Unblock the Notifications