Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾರ್ದಿಕ್ ಪಾಂಡ್ಯಾ -ನಟಾಸಾ ವಿಚ್ಛೇದನ: ಜೀವನಾಂಶದ ಬಗ್ಗೆ ನಮ್ಮ ಭಾರತದ ಕಾನುನು ಹೇಳುವುದೇನು?
ಈ ವರ್ಷ ಡಿವೋರ್ಸ್ ಆದ ಸೆಲೆಬ್ರಿಟಿ ಜೋಡಿಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಹಾರ್ದಿಕ್ ಪಾಂಡ್ಯಾ ಹಾಗೂ ನಟಾಸಾ ವಿಚ್ಚೇದನ, ಇವರಿಬ್ಬರ ವಿಚ್ಚೇದನ ರೂಮರ್ ಅತಿ ಹೆಚ್ಚು ಸದ್ದು ಮಾಡಿದ್ದು ಜೀವನಾಂಶದ ಬಗ್ಗೆ. ಹಾರ್ದಿಕ ಪತ್ನಿ ನಟಾಶಾ ಸೆರ್ಬಿಯನ್ ದೇಶದವಳು, ಹಾಗಾಗಿ ಹಾರ್ದಿಕ್ ತಮ್ಮ ಗಳಿಕೆಯಿಂದ ಶೇ. 70 ರಷ್ಟು ಹಣವನ್ನು ಜೀವನಾಂಶವಾಗಿ ಕೊಡಬೇಕಾಗುತ್ತೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಟುತ್ತಿತ್ತು.
ವಿಚ್ಚೇದನ ಸಮಯದಲ್ಲಿ ಆಸ್ತಿ, ಜೀವನಾಂಶ, ಮಹಿಳೆಯರ ಹಕ್ಕುಗಳ ಬಗ್ಗೆ ಭಾರತೀಯ ಕಾನೂನು ಏನಿದೆ ಎಂದು ನೋಡೋಣ ಬನ್ನಿ:

ಎಲ್ಲಾ ವಿಚ್ಛೇದನ ಸುಲಭವಾಗಿ ಮುಗಿಯುವುದಿಲ್ಲ
ಪರಸ್ಪರ ಒಪ್ಪಿಗೆ ಪಡೆದು ಪ್ರತ್ಯೇಕವಾಗುವುದಾದರೆ ದೊಡ್ಡ ಸಮಸ್ಯೆ ಇರಲ್ಲ, ಕೋರ್ಟ್ ಇಬ್ಬರಿಗೆ ವಿಚ್ಛೇದನಕ್ಕೆ ಒಪ್ಪಿಗೆ ಇದೆಯೇ ಎಮದು ಕೇಳುತ್ತದೆ ಇವರು ಹೇಳುವ ಉತ್ತರದಿಂದ ಇವರಿಬ್ಬರು ಜೊತೆಗೆ ಬಾಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಿಗೆ ಮನವರಿಕೆಯಾದರೆ ಅವರು ಇಬ್ಬರಿಗೆ ವಿಚ್ಛೇದನ ನೀಡುತ್ತಾರೆ.
ಇನ್ನು ಕೆಲವು ಕೇಸ್‌ಗಲು ತುಂಬಾನೇ ಜಟಿಲವಾಗಿರುತ್ತದೆ, ಅಲ್ಲಿ ಮಕ್ಕಳ ಕಸ್ಟಡಿ, ಆಸ್ತಿ, ಜೀವನಾಂಶ ಹೀಗೆ ಹಲವು ಸಮಸ್ಯೆಗಳಿರುತ್ತದೆ, ಇಂಥ ಸಂದರ್ಭದಲ್ಲಿ ಕೋರ್ಟ್ ಈ ಅಂಶಗಳನ್ನು ಪರಿಗಣಿಸುತ್ತದೆ.
ವಿಚ್ಛೇದನ ಸಮಯದಲ್ಲಿ ಆಸ್ತಿ ಹಕ್ಕು
ಪತ್ನಿಯಾಗಿದ್ದವಳು ವಿಚ್ಚೇದನ ಸಮಯದಲ್ಲಿ ಗಂಡನ ಆಸ್ತಿಯಿಂದ ಶೇ. 50ರಷ್ಟು ಜೀವನಾಂಶ ಕೇಳಬಹುದು, ಗಂಡ ಹಂಡತಿಯನ್ನು ಬಿಟ್ಟು ಹೋಗಿದ್ದರೆ ಅವಳು ಅವಳ ಜೀವನಾಧಾರಕ್ಕೆ ಶೇ. 50ರಷ್ಟು ಜೀವನಾಂಶ ಕೇಳಬಹುದು, ಆದರೆ ಇದು ವಿಚ್ಛೇದನದ ಸಂದರ್ಭದಲ್ಲಿ ಮಾತ್ರ ದೊರೆಯುತ್ತದೆ.
ಆಸ್ತಿ ಗಂಡನೇ ಮಾಡಿದ್ದರೂ ಅವಳು ತನ್ನ ಪತಿಯ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಹೊಂದಿರುತ್ತಾಳೆ.
ಇಬ್ಬರು ಜೊತೆಯಾಗಿ ಆಸ್ತಿ ಖರೀದಿ ಮಾಡಿದ್ದರೆ?
ಇಬ್ಬರು ಖುಷಿಯಾಗಿ ಬಾಳ್ವೆ ಮಾಡುತ್ತಿದ್ದಾಗ ಹೆಂಡತಿ ತಾನು ದುಡಿದ ಹಣವನ್ನು ಪತಿಗೆ ಆಸ್ತಿ ಖರೀದಿಗೆ ನೀಡಿದ್ದರೆ ನಂತರ ಯಾವುದೋ ಕಾರಣಕ್ಕೆ ಬೆರೆಯಾಗಲು ತೀರ್ಮಾನಿಸಿದ್ದರೆ ಆವಾಗ ಹೆಂಡತಿ ತಾನು ಹೂಡಿಕೆ ಮಾಡಿರುವ ಹಣಕ್ಕೆ ದಾಖಲೆ ತೋರಿಸಬೇಕು.
ಹೆಂಡತಿಯ ಹಣದಿಂದಲೇ ಆಸ್ತಿ ಖರೀದಿ ಮಾಡಿದ್ದರೆ
ಅವಳು ಆ ಆಸ್ತಿಯನ್ನು ತನ್ನ ಸ್ವಂತ ಹಣದಿಂದ ಖರೀದಿ ಮಾಡಿದ್ದರೆ ಅದು ಮ ಮದುವೆಗೆ ಮೊದಲೆ ಅಗಿರಲಿ ಅಥವಾ ನಂತರವಾಗಿರಲಿ ಆ ಆಸ್ತಿಯ ಮೇಲೆ ಹಕ್ಕು ಅವಳದ್ದು ಮಾತ್ರ ಆಗಿರುತ್ತದೆ, ಗಂಡನಿಗೆ ಅಸ್ತಿಯಲ್ಲಿ ಪಾಲು ಇರಲ್ಲ.
ಜೀವನಾಂಶ
ಕಾಯ್ದೆ 125ರ ಪ್ರಕಾರ ಮಹಿಳೆ ತನ್ನ ಹಾಗೂ ಮಕ್ಕಳ ಖರ್ಚಿಗೆ ಇಂತಿಷ್ಟು ಹಣ ನಿಡಬೇಕೆಂದು ಜೀವನಾಂಶ ಕೇಳಬಹುದು, ಈ ಬಗ್ಗೆ ಪತಿ ತನ್ನ ವಾದವನ್ನು ಮಂಡಿಸಬಹುದು, ಇಬ್ಬರ ವಾದಗಳನ್ನು ಕೇಳಿದ ಬಳಿಕ ನ ಕೋರ್ಟ್ ಜೀವನಾಂಶವಾಗಿ ಎಷ್ಟು ಹಣ ನೀಡಬೇಕು ಎಂಬುವುದರ ಬಗ್ಗೆ ತಿರ್ಪು ನೀಡುತ್ತದೆ. ಇದನ್ನು ಬೇಕಿದ್ದರೆ ತಿಂಗಳಿಗೆ ಇಂತಿಷ್ಟು ಅಮತೆ ಪಡೆಯಬಹುದು ಅಥವಾ ಒಟ್ಟು ಜೀವನಾಂಶವನ್ನು ಒಂದೇ ಬಾರಿಯಲ್ಲಿ ಮಾಡಬಹುದು.
ವಿಚ್ಛೇದನ ಬಳಿಕ ಗಂಡಾಗಲಿ, ಹೆಣ್ಣಾಗಲಿ ಅರ್ಥಿಕ ತೊಂದರೆಗೆ ಒಳಗಾಗಬಾರದು ಎಂಬುವುದರ ಬಗ್ಗೆ ಕೋರ್ಟ್ ಯೋಚಿಸಿ ತೀರ್ಪು ನೀಡುತ್ತದೆ.
ನಟಾಸಾ ಜೀವನನಂಶ ಪಡೆದುಕೊಂಡಿದ್ದಾರಾ?
ಇದರ ಬಗ್ಗೆ ಮಾಹಿತಿ ಇನ್ನೂ ಹೊರ ಬಂದಿಲ್ಲ, ಇಬ್ಬರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ನಾಲ್ಕು ವರ್ಷದ ದಾಂಪತ್ಯ ಜೀವನ ಕೊನೆಗೊಳಿಸಿದ್ದೇವೆ ಎಂಬುವುದರ ಬಗ್ಗೆ ಸ್ಪಷ್ಟಪಡಿಸಿದ್ದಾರೆ, ಅಲ್ಲದೆ ಮಗನ ಖುಷಿಗಾಗಿ ಅಗಸ್ತ್ಯನನ್ನು ಇಬ್ಬರೂ ನೊಡಿಕೊಳ್ಳುತ್ತೇವೆ ( We will Co-parent to ensuree that give him everything that we can for his happinesss ಎಂದು ಬರೆದುಕೊಂಡಿದ್ದಾರೆ).



Click it and Unblock the Notifications