Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಮದುಮಗಳ ಪಾದ ಮುಟ್ಟಿ ನಮಸ್ಕರಿಸಿದ ಮದುಮಗ: ಮನ ಮೆಚ್ಚಿದ ಮದುಮಗನ ವೀಡಿಯೋ ವೈರಲ್
ಮದುಮಗಳ ಪಾದ ಮುಟ್ಟಿ ನಮಸ್ಕರಿಸಿದ ಮದುಮಗ, ಹುಡುಗನ ನಡತೆ ನೋಡುಗರ ಮನ ಗೆದ್ದಿದೆ, ಹೆಣ್ಣು ದೇವತೆಯಾದ ಕ್ಷಣ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ಇಂಥ ಪತಿ ಪಡೆದ ಅವಳೆಷ್ಟು ಅದೃಷ್ಟವಂತಳು ಎಂದು ಹೇಳುತ್ತಿದ್ದಾರೆ.
ಕೆಲವರಿಗೆ ಈ ವೀಡಿಯೋ ನೋಡಿ ಅಚ್ಚರಿಯಾದರೆ ಇನ್ನು ಕೆಲವರು ಈ ವೀಡಿಯೋವನ್ನು ನೋಡಿ ಸಂತೋಷಪಡುತ್ತಿದ್ದಾರೆ, ಇದನ್ನು ನೋಡಿದ ಹೆಣ್ಮಕ್ಕಳು ನಮ್ಮ ಪತಿಯಾಗುವವನಿಗೆ ಈ ಹುಡುಗನಲ್ಲಿರುವ ಗುಣ ಇರಲಿ ಎಂದು ದೇವರಲ್ಲಿ ಬೇಡುವಂತಿದೆ ಈ ವೀಡಿಯೋ...

ತನ್ನ ಪತ್ನಿಯ ಕಾಲು ಮುಟ್ಟಿ ನಮಸ್ಕರಿಸುವುದು ಚಿಕ್ಕ ವಿಷಯ ಅಲ್ವೇ ಅಲ್ಲ, ಅವನ ಮನಸ್ಸಿನಲ್ಲಿ ಅವಳ ಬಗ್ಗೆ ಅಂಥ ದೊಡ್ಡ ಸ್ಥಾನವಿರುತ್ತದೆ, ಅವಳನ್ನು ಬರೀ ಹೆಣ್ಣಾಗಿ ಅಲ್ಲ, ಅವಳನ್ನು ತನ್ನ ದೇವತೆಯನ್ನಾಗಿ ಕಾಣುವ ಗುಣ ಅವನಲ್ಲಿದ್ದರೆ ಮಾತ್ರ ಅವನಿಗೆ ಹೆಂಡತಿಯನ್ನು ಈ ರೀತಿ ಗೌರವಿಸಲು ಸಾಧ್ಯ.
ಈ ವೀಡಿಯೋವನ್ನು ಅಸ್ಸಾಂನ ಕಲ್ಲೋಲ್ ದಾಸ್ ಎಂಬುವವರು ಶೇರ್ ಮಾಡಿದ್ದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋ ಮಿಲಿಯನ್ ವ್ಯೂವ್ಸ್ ಬಂದಿದೆ.
ಅದೊಂದು ಮದುವೆ ಕಾರ್ಯಕ್ರಮ, ಆ ಮದುವೆಯಲ್ಲಿ ಬಂದ ಅತಿಥಿಗಳ ಮುಂದೆ ಪತ್ನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ, ಇದನ್ನು ನೋಡಿ ಮದುವೆಗೆ ಬಂದ ಅತಿಥಿಗಳು ತಪ್ಪಾಳೆ ತಟ್ಟಿ, ಆತನ ನಡೆಗೆ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವೀಡಿಯೋ ನೋಡಿ ತುಂಬಾನೇ ಕಮೆಂಟ್ ಬರುತ್ತಿದೆ.
ಒಳ್ಳೆಯ ಹುಡುಗನ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಕು ಎಂಬುವುದು ಪ್ರತಿಯೊಬ್ಬರ ಪೋಷಕರ ಮನದ ಆಸೆ
ಹೆಣ್ಮಕ್ಕಳ ಪೋಷಕರಿಗೆ ತಮ್ಮ ಹೆಣ್ಮಕ್ಕಳನ್ನು ಮದುವೆ ಮಾಡಿ ಕೊಡುವಾಗ ನಮ್ಮ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗ ಸಿಗಲಿ ಎಂದು ಬಯಸುತ್ತಾರೆ. ಅವಳನ್ನು ಮದುವೆ ಮಾಡಿ ಕೊಡವಾಗ ಒಂದು ಕಡೆ ಖುಷಿ, ಮುಂದೆ ನಮ್ಮ ಮಗಳ ಬದುಕು ಹೇಗಿರುತ್ತದೆ ಎಂಬ ಭಯ ಕಾಡುತ್ತಲೇ ಇರುತ್ತದೆ, ನಮ್ಮ ಮಗಳನ್ನು ನಮಗಿಂತ ಚೆನ್ನಾಗಿ ನೋಡಿಕೊಳ್ಳುವವನೇ ಸಿಕ್ಕರೆ ಅವರೆಷ್ಟು ಖುಷಿ ಪಡುತ್ತಾರೆ ಎಂಬುವುದನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ. ಆ ಹೆತ್ತ ಜೀವಗಳಿಗೆ ಇನ್ನೇನು ಬೇಕು, ಅದೇ ಖುಷಿ ಇಂದು ಆ ಹೆಣ್ಮಗಳನ್ನು ಹೆತ್ತ ಪೋಷಕರಿಗೆ ಇರುತ್ತದೆ ಅಲ್ವಾ? ಪ್ರತಿಯೊಂದು ತಂದೆ ತಾಯಿಗೆ ಇಮಥ ಗುಣದ ಅಳಿಯ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?
ಹೆಣ್ಣನ್ನು ಗುಲಾಮಗಳು ಎಂದು ಕಾಣುವವರೂ ಸಾಕಷ್ಟು ಮಂದಿ ಇದ್ದಾರೆ
ಎಷ್ಟೋ ಜನರಿಗೆ ಪತ್ನಿಯೆಂದರೆ ಗುಲಾಮಳು, ತನ್ನ ಕಾಮತೃಷೆ ತೀರಿಸುವವಳು ಆಗಿರಬೇಕು, ತನ್ನ ಮಕ್ಕಳನ್ನು ಹೆರುವ ಯಂತ್ರವಾಗಿರಬೇಕು, ಮನೆ ಕೆಲಸ ಮಾಡುವ ಮನೆ ಕೆಲಸದಾಳು ಆಗಿರಬೇಕು, ಒಟ್ಟಿನಲ್ಲಿ ಸಂಬಳವಿಲ್ಲದೆ ದೊರೆಯುವ ಗುಲಾಮಳಾಗಿರಬೇಕು ಎಂದು ಯೋಚಿಸುವ ಪುರುಷರಿಗೇನೂ ಬರವಿಲ್ಲ. ಆದರೆ ಅವಳನ್ನು ಗೌರವಿಸುವ, ತನ್ನಷ್ಟೇ ಸಮಾನಳು ಅವಳು ಕೂಡ ಎಂದು ಯೋಚಿಸುವವರು ತುಂಬಾ ವಿರಳ. ಇಂಥ ಹುಡುಗರ ಸಂಖ್ಯೆ ಹೆಚ್ಚಾಗಬೇಕು, ಆಗ ಬಹುತೇಕ ಹೆಣ್ಮಕ್ಕಳು ಕಣ್ಣೀರು ದೂರಾಗುವುದು.
ಈ ಹೆಣ್ಮಗಳ ನಗು ನೋಡಿ, ಇಂಥ ಪತಿಯನ್ನು ಪಡೆದ ನಾನು ಪುಣ್ಯವಂತೆ ಅಂದುಕೊಂಡಿರಬಹುದು, ಅವನು ಅವಳ ಕಾಲು ಮುಟ್ಟಿ ನಮಸ್ಕರಿಸಿದ್ದು ನೋಡಿ ಅವಳಿಗೆ ಅಚ್ಚರಿಯಾಗುತ್ತೆ, ಅದೇ ಕ್ಷಣ ಅವಳಿಗೆ ಅವನ ವರ್ತನೆ ನೋಡಿ ತುಂಬಾನೇ ಖುಷಿಯಾಗಿದೆ ಎಂಬುವುದು ಅವಳ ನಹು ಹೇಳುತ್ತದೆ... ಸಂಸಾರ ಎಂದರೆ ಇಬ್ಬರೂ ಸಮಾನರು, ಒಬ್ಬರನ್ನೊಬ್ಬರು ಗೌರವಿಸಬೇಕು, ಆಗ ಮಾತ್ರ ಬದುಕಿನ ಬಂಡಿ ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications