Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮುದ್ದಿನ ಮಡದಿ ಮುನಿಸಿಕೊಂಡಾಗ ಹೀಗೆ ಹೇಳಿ ನೋಡಿ ಮಂಜಿನಂತೆ ಕರಗುವಳು
ದಾಂಪತ್ಯ ಜೀವನದಲ್ಲಿ ಸರಸ-ವಿರಸ, ಸುಖ-ದುಃಖ, ನೋವು-ನಲಿವು ಎಲ್ಲವೂ ಸಹಜ. ಒಂದು ಸಂಸಾರವನ್ನು ಅಚ್ಚು ಕಟ್ಟಾಗಿ ನಡೆಸಿಕೊಂಡು ಹೋಗುವಲ್ಲಿ ಪುರುಷರ ಪಾತ್ರ ಎಷ್ಟಿರುತ್ತದೆಯೋ ಮಹಿಳೆಯರ ಪಾತ್ರ ಕೂಡ ಅಷ್ಟೇ ಇರುತ್ತದೆ.
ಸಂಸಾರದಲ್ಲಿ ಜಗಳಗಳು ಮಾಮೂಲಿ. ಒಂದು ಬಾರಿ ಮುನಿಸಿಕೊಂಡ ಪತ್ನಿಯನ್ನು ಮತ್ತೆ ಒಲಿಸಿಕೊಳ್ಳೋದು ಸುಲಭದ ಕೆಲಸವಂತೂ ಅಲ್ವೇ ಅಲ್ಲ. ಇಂತಹ ಸಂದರ್ಭದಲ್ಲಿ ನಾವು ಪತ್ನಿಗಾಗಿ ಕೆಲವೊಂದು ಹೊಗಳಿಕೆ ಮಾತುಗಳನ್ನು ಹೇಳಬೇಕಾಗುತ್ತದೆ. ಆಗ ಮಾತ್ರ ಪತ್ನಿಯನ್ನು ಒಲಿಸಿಕೊಳ್ಳೋದಕ್ಕೆ ಸಾಧ್ಯವಾಗುವುದು. ಹಾಗಾದ್ರೆ ಪತ್ನಿಗೆ ಇಷ್ಟವಾಗುವಂತಹ ಆ ಮಾತುಗಳು ಯಾವುದು ಅನ್ನೋದನ್ನ ಹೇಳ್ತೀವಿ.

1. ನೀನು ಶ್ರೇಷ್ಠ ಪತ್ನಿ ಎಂದು ಹೇಳಿ
ಸಂಸಾರದಲ್ಲಿ ಮಹಿಳೆಯ ಪಾತ್ರ ತುಂಬಾನೇ ಇದೆ. ಪತಿ ದುಡಿದು ಸಂಸಾರವನ್ನು ನೋಡಿಕೊಂಡರೆ ಇತ್ತ ಪತ್ನಿ ಮನೆ, ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಕೆಲವೊಂದು ಸಾರಿ ಮಹಿಳೆ ಹೊರಗಡೆ ಕೆಲಸ ಮಾಡುತ್ತಲೂ ಮನೆಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾಳೆ. ಇದಕ್ಕೆ ಪ್ರತಿಯಾಗಿ ಆಕೆ ಬೇರೆ ಏನನ್ನೂ ಬಯಸೋದಿಲ್ಲ. ನೀವು ಆಡುವ ಒಂದು ಮಾತು ಆಕೆಯನ್ನು ಖುಷಿ ಪಡಿಸಬಹುದು. ಆಕೆಯ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿ.
2. ನೀನು ಪ್ರೀತಿ ಪಾತ್ರಳು ಎಂದು ಹೇಳಿ
ಮಹಿಳೆ ತನ್ನ ಮನೆ, ಗಂಡ, ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಸಂಸಾರವನ್ನು ಚೆನ್ನಾಗಿ ತೂಗಿಸಿಕೊಂಡು ಹೋಗುತ್ತಾಳೆ. ತನ್ನ ಎಲ್ಲಾ ಸುಖ, ಸಂತೋಷವನ್ನು ತ್ಯಾಗ ಮಾಡಿ, ತನ್ನ ಇಡೀ ಜೀವನವನ್ನು ಸಂಸಾರಕ್ಕಾಗಿ ಮೀಸಲಿಡುತ್ತಾಳೆ. ಇಂತಹ ತ್ಯಾಗಮಯಿ ಪತ್ನಿಗೆ ನೀನು ಪ್ರೀತಿ ಪ್ರಾತ್ರಳು ಎನ್ನುವ ಮಾತು ತುಂಬಾನೇ ಖುಷಿ ನೀಡುತ್ತದೆ.
3. ನಿನ್ನ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿ
ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಕೇವಲ ಅಡುಗೆ ಮನೆಗಷ್ಟೇ ಸೀಮಿತ ಅಂತ ಹೇಳಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಹ್ಯಕಾಶದವರೆಗೂ ಹೋಗಿ ಮಹಿಳೆಯರು ಚಾಪು ಮೂಡಿಸಿದ್ದಾರೆ. ಕೆಲವೊಂದು ಸಾರಿ ಮಹಿಳೆಯರಲ್ಲಿ ಅತೀವ ಕೌಶಲ್ಯವಿದ್ದರೂ ಕೂಡ ಮದುವೆಯಾದ ಮೇಲೆ ಕೆಲಸವನ್ನು ಬಿಟ್ಟು ಮನೆ, ಗಂಡ, ಮಕ್ಕಳಿಗಾಗಿ ದುಡಿಯುತ್ತಾರೆ. ಇಂತಹ ಶ್ರಮಜೀವಿ ಮಹಿಳೆಗೆ ಒಂದು ಧನ್ಯವಾದದ ಮಾತು ಖಂಡಿತ ಬೇಕು.
4. ನೀನು ಪ್ರತಿಭಾವಂತೆ ಎಂದು ಹೇಳಿ
ನಿಮ್ಮ ಪತ್ನಿಯಲ್ಲೂ ಅನೇಕ ಕೌಶಲ್ಯಗಳು ಇರುತ್ತದೆ. ಆದರೆ ಆಕೆ ಅದನ್ನು ಎಲ್ಲೂ ಕೂಡ ಹೇಳಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಮನೆ, ಗಂಡ, ಮಕ್ಕಳು ಅಂತ ಸಂಸಾರಕ್ಕಾಗಿ ಮೂರು ಹೊತ್ತು ದುಡಿಯುತ್ತಾಳೆ. ಇಂತಹ ಮಹಿಳೆಗೆ ಪತಿಯಾದವನು ಕೆಲವೊಂದು ಸಪ್ರೈಸ್‌ಗಳನ್ನು ನೀಡುವ ಮುಖಾಂತರ ಆಕೆಯನ್ನು ಸಂತೋಷ ಪಡಿಸಬಹುದು. ಇಲ್ಲವಾದರೆ ನೀವು ಆಕೆಗೆ ಪ್ರತಿಭಾವಂತೆ ಎಂದು ಒಂದು ಮಾತು ಹೇಳಿ ಆಕೆ ತುಂಬಾನೇ ಖುಷಿ ಪಡುತ್ತಾಳೆ.
5. ನೀನು ಶ್ರೇಷ್ಠ ತಾಯಿ ಎಂದು ಹೇಳಿ
ಜಗತ್ತಿನಲ್ಲಿ ಪ್ರತಿಯೊಬ್ಬ ಮಹಿಳೆಯು ಖಂಡಿತ ಒರ್ವ ಶ್ರೇಷ್ಠ ತಾಯಿಯಾಗಿರುತ್ತಾಳೆ. ಆದರೆ ಕೆಲವೊಂದು ಬಾರಿ ಆಕೆಗೆ ನಾನು ಒಳ್ಳೆಯ, ಸಮರ್ಥ ತಾಯಿಯಲ್ಲ ಎಂದು ಅನ್ನಿಸುತ್ತದೆ. ಮಕ್ಕಳು ಹೇಳದ ಮಾತು ಕೇಳದಾಗ, ಮಕ್ಕಳನ್ನು ಆಕೆಯಿಂದ ನಿಭಾಯಿಸಲು ಸಾಧ್ಯವಾಗದಿದ್ದಾಗ ಆಕೆ ಒಳಗಿಂದ ಕೊರಗುತ್ತಿರುತ್ತಾಳೆ. ಇದನ್ನೆಲ್ಲಾ ಆಕೆ ನಿಮ್ಮ ಜೊತೆ ಹಂಚಿಕೊಳ್ಳೋದಿಲ್ಲ. ಆದರೆ ಆಕೆಯ ನೋವನ್ನು ನೀವೆ ಅರ್ಥ ಮಾಡಿಕೊಳ್ಳಿ. ಆಕೆಗೆ ನೀನೊಬ್ಬ ಶ್ರೇಷ್ಠ ತಾಯಿ ಎಂದು ಹೇಳಿ. ಖಂಡಿತ ಆಕೆ ತುಂಬಾನೇ ಖುಷಿ ಪಡುತ್ತಾಳೆ.
6. ಆಕೆಯನ್ನು ಬುದ್ಧಿವಂತೆ ಎಂದು ಹೇಳಿ
ಸಂಸಾರವನ್ನು ತೂಗಿಸಿಕೊಂಡು ಹೋಗುವ ತಾಕತ್ತು ಆಕೆಯಲ್ಲಿ ಇದೆ ಅಂದ್ರೆ ಆಕೆ ಖಂಡಿತ ಬುದ್ಧಿವಂತೆಯೇ ಆಗಿರುತ್ತಾಳೆ. ಇನ್ನೂ ಕೆಲವರು ಓದಿನಲ್ಲಿ ಬುದ್ಧಿವಂತರಾಗಿರ್ತಾರೆ ಆದರೆ ಮಕ್ಕಳಿಗಾಗಿ ಕೆಲಸ ಬಿಟ್ಟು ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳ್ತಾರೆ. ಕೆಲವೊಂದು ಸಲ ಆ ಕೊರಗು ಅವರನ್ನು ಕಾಡುತ್ತದೆ. ಮಕ್ಕಳಿಗಾಗಿ ಕರಿಯರ್ ಹಾಳಾಯ್ತು ಅಂತ ಕೊರಗುವ ಮಹಿಳೆಯರು ತುಂಬಾನೇ ಜನ ಇದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಆಡುವ ಮಾತುಗಳು ಆಕೆಯ ಮನಸ್ಸಿಗೆ ಮುದ ನೀಡಬಹುದು.
ಮಹಿಳೆ ಎಂದರೆ ಶಕ್ತಿ. ಆಕೆಗೆ ಸರಿಸಾಟಿ ಬೇರ್ಯಾವುದು ಇಲ್ಲ. ಪತ್ನಿಯ ಘನತೆ, ಗೌರವ ಕಾಪಾಡೋದು ಪತಿಯಾದವನ ಕರ್ತವ್ಯ. ಜೀವನದ ಪ್ರತಿ ಹಂತದಲ್ಲೂ ಪತ್ನಿಗೆ ಪತಿಯ ಪ್ರೋತ್ಸಾಹ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications



