Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹುಡುಗ-ಹುಡುಗಿ ಕೊನೆಯವರೆಗೂ ಫ್ರೆಂಡ್ ಆಗಿರಲು ಸಾಧ್ಯವೇ? ಸಾಧ್ಯ ಎಂಬುವುದಕ್ಕೆ ಇವರಿಬ್ಬರು ಉತ್ತಮ ಉದಾಹರಣೆ
ಇನ್‌ಸ್ಟಾದಲ್ಲಿ ಒಂದು ಬೆಸ್ಟಿ ಜೋಡಿ ತುಂಬಾನೇ ಗಮನ ಸೆಳೆದಿದ್ದಾರೆ, ಹುಡುಗಿ ಮತ್ತು ಹುಡುಗ ಒಳ್ಳೆಯ ಸ್ನೇಹಿತರಾಗಿರಲು ಸಾಧ್ಯವೇ? ಎಂಬ ಪ್ರಶ್ನೆಗೆ ಒಂದೊಳ್ಳೆಯ ಇವರಿಬ್ಬರು. ಇವರ ಸ್ನೇಹ ನೋಡುವಾಗ ಇದಪ್ಪಾ ನಿಜವಾದ ಸ್ನೇಹ ಎಂದು ಹೇಳುವಿರಿ.
ತಮ್ಮ ಫ್ರೆಂಡ್ಶ್ಯಿಪ್ ಅನ್ನು ಬೇರೆ ಯಾವುದೇ ಕಾರಣಕ್ಕೆ ಹಾಳು ಮಾಡಲು ಇಷ್ಟಪಡದವರು

ಸೋಷಿಯಲ್ ಮೀಡಿಯಾದಲ್ಲಿ ಇನ್‌ಫ್ಲ್ಯೂಯನ್ಸರ್ ಆಗಿರುವ ವ್ಯಕ್ತಿಯೊಬ್ಬರಿಗೆ ಇವರಿಬ್ಬರು ಕಣ್ಣಿಗೆ ಬಿದ್ದಾಗ ಮಾತನಾಡುವ ಪ್ರಯತ್ನ ಪಡುತ್ತಾರೆ, ಅವರನ್ನು ನೀವು ಜೋಡಿಗಳಾ ಎಂದು ಕೇಳಿದಾಗ ಅವರು ಅದನ್ನು ನಗುಮುಖದಿಂದ ಸ್ವೀಕರಿಸುತ್ತಾರೆ, ಆ ಹುಡುಗಿ 'ಇಲ್ಲಾ, ನಾವಿಬ್ಬರು ಬೆಸ್ಟಿ' ಎಂದು ಉತ್ತರಿಸುತ್ತಾಳೆ, ಹಾಗೆ ಹೇಳುವಾಗಲೂ ಅವರ ಮುಖದಲ್ಲಿದ್ದ ಆ ಶುದ್ಧ ನಗು ನೋಡುವುದೇ ಚೆಂದ.
ಅವರು ಅವರ ಕತೆ ಹೇಳುತ್ತಾರೆ. ನಮ್ಮ ಸ್ನೇಹ ಹೇಗೆ ಬೆಳೆಯಿತು ಎಂದು ಕೂಡ ಹೇಳುತ್ತಾರೆ. ಇವರು ಭೇಟಿಯಾಗಿದ್ದು ಜಿಮ್‌ನಲ್ಲಿ, ನಂತರ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯುತ್ತದೆ. ಆ ಹುಡುಗಿ ನನಗೆ ಇನ್ನೂ ಹಲವು ಹುಡುಗಿಯರು ಫ್ರೆಂಡ್ಸ್ ಇದ್ದಾರೆ, ಈಗ ಈ ಬೆಸ್ಟಿ ಬಂದ ಮೇಲೆ ಅವರ ಜೊತೆ ತಿರುಗಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಅದಕ್ಕೆ ಅವರನ್ನು ಮಾತಾಡಿಸಿದ ವ್ಯಕ್ತಿ ನೀವಿಬ್ಬರು ಏಕೆ ಡೇಟಿಂಗ್ ಮಾಡಿಲ್ಲ ಎಂದಾಗ ' It's too good t be ruined for anything else' ಎಂದು ಹೇಳುವ ಮೂಲಕ ಸದಾ ನಾವು ಫ್ರೆಂಡ್ಸ್ ಆಗಿಯೇ ಇರಬಯಸುತ್ತೇವೆ ಎಂದು ಹೇಳಿದ್ದಾರೆ. ಇವರನ್ನು ನೋಡಿದಾಗ ಸುದೀಪ್‌ರ ಆಟೋಗ್ರಾಫ್ ಚಿತ್ರದಲ್ಲಿ ಮೀನಾ ಹಾಗೂ ಸುದೀಪ್ ಅವರ ಫ್ರೆಂಡ್‌ಶಿಪ್ ನಮ್ಮ ಕಣ್ಮುಂದೆ ಬರುತ್ತದೆ.
ಅಲ್ಲದೆ ಅವರು ತಮ್ಮ ವಯಸ್ಸಿನ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ, ಆಕೆ ನನಗೆ 38 ಇವನಿಗೆ 31 ಎಂದು ಹೇಳಿದಾಗ ಅವನು ಅಲ್ಲ 33 ಎಂದು ಹೇಳುತ್ತಾರೆ, ಅಲ್ಲದೆ ಆಕೆ ಇವನಿಗೆ ಹುಡುಗಿ ನೋಡಬೇಕು, ಮದುವೆ ಮಾಡಿಸಬೇಕು ಎಂದು ಕೂಡ ಹೇಳುತ್ತಾಳೆ. ನಂತರ ಆ ಸೋಷಿಯಲ್ ಮೀಡಿಯಾದ ಬಳಕೆದಾರರು ಕೇಳಿದಾಗ ಇಬ್ಬರು ತಮ್ಮ ಫೋಟೋ ಕ್ಲಿಕ್ ಮಾಡಲು ಅನುಮತಿ ನೀಡುತ್ತಾರೆ, ಆ ಫೋಟೋಗಳು ಅಷ್ಟೊಂದು ಚೆನ್ನಾಗಿ ಬಂದಿದೆ.
ಒಂದೊಳ್ಳೆಯ ಸ್ನೇಹ ಪ್ರೇಮವಾಗಿ ಬದಲಾದ ಎಷ್ಟೋ ಉದಾಹರಣೆಗಳಿವೆ
ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದು ಕೊನೆಗೆ ಬೇರೊಬ್ಬ ವ್ಯಕ್ತಿಗಳು ಇವರ ಬದುಕಿನಲ್ಲಿ ಬರುತ್ತಾರೆ ಅಂದರೆ ಅವರು ಮದುವೆಯಾಗುತ್ತಾರೆ ಎಂದಾದಾಗ ಇವರಿಗೆ ಸಹಿಸಲು ಸಾಧ್ಯವಾಗಲ್ಲ. ಆವಾಗ ಇವರಿಬ್ಬರ ನಡುವೆ ಪ್ರೀತಿ ಚಿಗುರುತ್ತದೆ, ಎಷ್ಟೋ ಸ್ನೇಹಿತರ ನಡುವೆ ಪ್ರೀತಿ ಇದೇ ರೀತಿಯಲ್ಲಿ ಚಿಗುರಿರುತ್ತದೆ.
ಗಟ್ಟಿ ಸ್ನೇಹವೂ ಉಳಿದುಕೊಂಡಿದ್ದು ಇದೆ
ಇನ್ನು ಕೆಲ ಸ್ನೇಹಿತರು ಕೊನೆಯವರಿಗೂ ಅಷ್ಟೇ ಒಳ್ಳೆಯ ಸ್ನೇಹಿತರಾಗಿರುತ್ತಾರೆ, ಆದರೆ ಈ ರೀತಿ ಸ್ನೇಹಿತರಾಗಿರಲು ಮುಂದೆ ಅವರಿಗೆ ಸಿಗುವ ಜೀವನ ಸಂಗಾತಿಗಳು ಇವರ ಬಗ್ಗೆ ಸಂಪೂರ್ಣ ಅರ್ಥ ಮಾಡಿಕೊಡಿರಬೇಕು, ಇಲ್ಲದಿದ್ದರೆ ಸಮಸ್ಯೆ ಉಂಟಾಗುವುದು.
ಒಂದು ಹುಡುಗ-ಹುಡುಗಿ ಸ್ನೇಹಿತರಾಗಿದ್ದರೆ ಈ ಸಮಾಜ ಕೂಡ ಸಂಶಯದ ಕಣ್ಣಿನಿಂದ ನೋಡುತ್ತದೆ
ಒಂದು ಹುಡುಗ-ಹುಡುಗಿ ಸ್ನೇಹಿತರಾಗಿದ್ದರೆ ನೀವು ಪ್ರೇಮಿಗಳಾ ಎಂದು ಕೇಳುವವರೇ ಹೆಚ್ಚು, ಅಲ್ಲದೆ ಅವರ ಸಂಬಂಧದ ಬಗ್ಗೆ ಸುಮ್ಮನೆ ಇಲ್ಲ ಸಲ್ಲದ ಮಾತನಾಡುತ್ತಾರೆ.
ಈ ಕಾರಣದಿಂದಲೇ ಅವರಿಬ್ಬರ ನಡುವೆ ಬಾಂಧವ್ಯ ಅಷ್ಟು ಚೆನ್ನಾಗಿರಲ್ಲ. ಈ ಎಲ್ಲಾ ಕಾರಣಗಳಿಂದ ಹೆಣ್ಣು-ಗಂಡಿನ ಸಂಬಂಧ ಸ್ನೇಹಿತರಾಗಿ ಉಳಿಯುವುದು ಕಷ್ಟ.



Click it and Unblock the Notifications
