Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Friendship Day: ನಾಯಿ ಮತ್ತು ಮನುಷ್ಯನ ಸ್ನೇಹ ಗಟ್ಟಿಯಾಗಿಸುವ ಅಂಶಗಳಿವು
ಸಾಮಾನ್ಯವಾಗಿ ನಾವು ನಮ್ಮ ಮನೆಯವರನ್ನು ಬಿಟ್ಟರೆ ಹೆಚ್ಚು ಪ್ರೀತಿ ಮಾಡೋದು ಅಂದ್ರೆ ಅದು ನಾವು ಮನೆಯಲ್ಲಿ ಸಾಕುವ ಶ್ವಾನವನ್ನು. ಹೆಚ್ಚಿನ ಮನೆಗಳಲ್ಲಿ ನಾಯಿಯನ್ನು ಸಾಕುತ್ತಾರೆ. ಹಾಗೂ ಅವುಗಳನ್ನು ನಮ್ಮ ಮನೆ ಮಗನಿಗಿಂತ ಹೆಚ್ಚಾಗಿ ಪ್ರೀತಿ ಕೊಟ್ಟು ಸಾಕುತ್ತೇವೆ.

ನಾಯಿಯೂ ಕೂಡ ನಮಗೆ ಅಷ್ಟೇ ನೀಯತ್ತಾಗಿ ಇರುತ್ತದೆ. ಉಂಡ ಮನೆಗೆ ಎರಡು ಬಗೆಯುವ ಬುದ್ಧಿ ನಾಯಿಗಳಿಗೆ ಇರೋದಿಲ್ಲ. ನಮ್ಮಲ್ಲಿ ಅನೇಕ ಜನ ನಮಗೆ ಸ್ನೇಹಿತರು ಇಲ್ಲ ಅಂತ ಬೇಸರ ಪಟ್ಟುಕೊಳ್ಳುತ್ತಿರಬಹುದು. ಅಂತವರು ನೀವು ಮನೆಯಲ್ಲಿ ಸಾಕುವ ನಾಯಿಯನ್ನೇ ನೀವು ಬೆಸ್ಟ್ ಫ್ರೆಂಡ್ ಆಗಿ ಸ್ವೀಕರಿಸಬಹುದು. ಅಷ್ಟಕ್ಕು ನಾಯಿಗಳಿಗೆ ಸ್ನೇಹದ ನಿಜವಾದ ಸಾರವನ್ನು ಕಲಿಸೋದು ಹೇಗೆ ಅನ್ನೋದನ್ನು ತಿಳಿಯೋಣ.
1. ನಾಯಿಗಳನ್ನು ಅತಿಯಾಗಿ ಪ್ರೀತಿಸಿ
ಸಾಕು ಪ್ರಾಣಿಗಳಾದ ನಾಯಿಗಳಿಗೆ ನಾವು ಒಂದು ತುತ್ತು ಊಟ ಹಾಕಿದರೆ ಅದರ ಋಣವನ್ನು ಅವುಗಳು ಎಂದಿಗೂ ಮರೆಯೋದಿಲ್ಲ. ಅವುಗಳು ನಮ್ಮ ಸೌಂದರ್ಯ ಆಗಲಿ ಅಥವಾ ಅಂತಸ್ತು ನೋಡಿ ನಮ್ಮನ್ನು ಪ್ರೀತಿಸೋದಿಲ್ಲ. ನಾವು ಅವುಗಳಿಗೆ ಎಷ್ಟು ಪ್ರೀತಿ ಕೊಡುತ್ತೆವೆಯೋ ಅದಕ್ಕಿಂತ ನೂರು ಪಟ್ಟು ಅವುಗಳು ನಮ್ಮನ್ನು ಪ್ರೀತಿ, ಕಾಳಜಿ ಮಾಡುತ್ತವೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಾಣ ಕೊಟ್ಟದರೂ ನಮ್ಮನ್ನು ಕಾಪಾಡುತ್ತವೆ.
2. ಈ ಕ್ಷಣವನ್ನು ಆನಂದಿಸಲು ನಾಯಿಗಳಿಂದ ಕಲಿಯುತ್ತೇವೆ
ಸಾಕು ಪ್ರಾಣಿಗಳಿಗೆ ನಾವು ಕಲಿಸಬೇಕಾದ ಅಗತ್ಯವಾದ ವಿಚಾರ ಅಂದ್ರೆ ಈ ಕ್ಷಣವನ್ನು ಆನಂದಿಸೋದಕ್ಕೆ ಕಲಿಸಬೇಕು. ಶ್ವಾನಗಳು ಮನುಷ್ಯರ ಹಾಗೆ ಭೂತಕಾಲದ ಬಗ್ಗೆ ಚಿಂತಿಸೋದಿಲ್ಲ. ಭವಿಷ್ಯದ ಬಗ್ಗೆ ಅವುಗಳಿಗೆ ಗೊತ್ತಿರೋದಿಲ್ಲ.
ಊಟ ಮಾಡುವಾಗ ಅದನ್ನು ಆನಂದಿಸಿಕೊಂಡು ತಿನ್ನುತ್ತವೆ. ಆಟ ಆಡುವಾಗ ಅದು ಬೇರೆ ಯಾವುದರ ಬಗ್ಗೆ ಯೋಚಿಸೋದಿಲ್ಲ. ಈ ರೀತಿ ಖುಷಿಯ ಕ್ಷಣಗಳನ್ನು ಎಂಜಾಯ್ ಮಾಡಿ. ಈ ಕ್ಷಣವನ್ನು ಆನಂದಿಸೋದನ್ನು ನಾವು ನಾಯಿಗಳಿಂದ ಕಲಿಯಬೇಕು.
3. ಶ್ವಾನಗಳು ಉತ್ತಮ ಕೇಳುಗರು
ನಾವು ತುಂಬಾನೇ ದುಃಖದಲ್ಲಿದ್ದಾಗ ನಮ್ಮ ಮನಸ್ಸಿನ ಮಾತನ್ನು ಕೇಳಲು ಯಾರಾದರೂ ಬೇಕು ಅಂತ ಅನ್ನಿಸುತ್ತದೆ. ಆದರೆ ಕೆಲವೊಂದು ಸಲ ನಮ್ಮ ನೋವುಗಳನ್ನು ತಾಳ್ಮೆಯಿಂದ ಕೇಳುವವರೂ ಯಾರು ಸಿಗೋದಿಲ್ಲ, ಸಿಕ್ಕರೂ ಕೂಡ ನಮ್ಮ ರಹಸ್ಯಗಳನ್ನು ಅವರು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆಯೋ ಎಂಬ ಭಯ ಇದ್ದೇ ಇರುತ್ತದೆ.
ಆದರೆ ಶ್ವಾನಗಳು ಉತ್ತಮ ಕೇಳುಗರು. ನಾವು ಏನನ್ನಾದರೂ ಹೇಳುತ್ತಿದ್ದರೆ ಸುಮ್ಮನೆ ಕುಳಿತುಕೊಂಡು ಅದನ್ನೇ ಅಲಿಸುತ್ತಾ ಇರುತ್ತವೆ. ಅವುಗಳಿಗೆ ಎಲ್ಲವೂ ಅರ್ಥ ಆಗದಿದ್ದರೂ ಕೂಡ ತಾಳ್ಮೆ ಕಳೆದುಕೊಳ್ಳೋದಿಲ್ಲ. ಇಂತಹ ಸಮಯದಲ್ಲಿ ನಮ್ಮ ಮಾತನ್ನು ಕೇಳೋದಕ್ಕೆ ಯಾರಾದರೂ ಇದ್ದಾರೆ ಅನ್ನೋ ತೃಪ್ತಿ ನಮ್ಮಲ್ಲಿರುತ್ತದೆ.
4. ದಯಾಮಯಿಗಳಾಗಿರುತ್ತವೆ
ನಮ್ಮ ಸಾಕು ಪ್ರಾಣಿಗಳಾದ ಶ್ವಾನಗಳು ಯಾವಾಗಲೂ ನಮಗೆ ಪ್ರಾಮಾಣಿಕರಾಗಿಯೇ ಇರುತ್ತದೆ. ನಾವು ಮನೆಯಿಂದ ಹೊರಗಡೆ ಹೋದರೆ ನಾವು ಬರುವವರೆಗೂ ನಮ್ಮ ದಾರಿಯನ್ನೇ ಕಾಯುತ್ತಿರುತ್ತದೆ. ಮನುಷ್ಯರಿಗಿಂತ ಹೆಚ್ಚಾಗಿ ನಾಯಿಗಳು ನಮ್ಮ ಮೇಲೆ ದಯೆ ಹಾಗೂ ಸಹಾನುಭೂತಿಯನ್ನು ತೋರುತ್ತದೆ. ತನ್ನ ಮನೆಯವರಿಗೆ ಹೊರಗಿನವರಿಂದ ಯಾವುದೇ ರೀತಿ ತೊಂದರೆ ಆಗದಂತೆ ಕಾಪಾಡುತ್ತವೆ.
5. ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸುತ್ತವೆ
ಹೆಚ್ಚಿನವರು ನಾಯಿಯನ್ನು ಮನೆ ಮಗನಂತೆ ಕಾಣುತ್ತಾರೆ. ಅವುಗಳ ಮೇಲೆ ಪ್ರೀತಿ, ಕಾಳಜಿ ತೋರುವುದು ಮಾತ್ರವಲ್ಲದೇ ನಾಯಿಯನ್ನು ಸ್ನಾನ ಮಾಡಿಸೋದು, ವಾಕ್ ಗೆ ಕರೆದುಕೊಂಡು ಹೋಗೋದು ಎಲ್ಲಾವನ್ನೂ ಮಾಡುತ್ತದೆ. ಇದಕ್ಕೆ ತಕ್ಕಂತೆ ನಾಯಿಗಳು ಕೂಡ ನಮ್ಮ ಮೇಲೆ ಪ್ರೀತಿ ತೋರುತ್ತವೆ. ಶ್ವಾನಗಳು ಮನುಷ್ಯರ ಹಾಗಲ್ಲ. ಎಂದಿಗೂ ನಮಗೆ ದ್ರೋಹ ಮಾಡೋದಿಲ್ಲ. ಇದರಿಂದಾಗಿ ನಾಯಿ ಹಾಗೂ ಮನುಷ್ಯನ ನಡುವಿನ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ.
ಎಷ್ಟೊ ಅಲ ನಾವು ಒಂಟಿಯಾಗಿದ್ದೀವಿ ಅನ್ನೋ ಭಾವನೆ ನಮ್ಮನ್ನು ಕಾಡುತ್ತದೆ. ನಾವು ಒಬ್ಬರೆ ಇದ್ದಾಗ ಏನೇನೋ ಯೊಚನೆಗಳು ಕೂಡ ಕಾಡುತ್ತದೆ. ನೀವು ನಾಯಿಯೊಂದನ್ನು ತಂದು ಮನೆಯಲ್ಲಿ ಸಾಕಿದರೆ ನಿಮಗೆ ಯಾವತ್ತಿಗೂ ಒಬ್ಬಂಟಿ ಅನ್ನೋ ಭಾವನೆ ಬರೋದಿಲ್ಲ.



Click it and Unblock the Notifications

