ಅಪ್ಪಂದಿರ ದಿನದ ಶುಭಾಶಯಗಳು: ಮಕ್ಕಳಿಗೆ ಈ ಅಪ್ಪಂದಿರುವ ಹೇಳ ಬಯಸುತ್ತಿರುವ ಪ್ರಮುಖ 3 ಅಂಶಗಳಿವು

ಅಪ್ಪಂದಿರ ದಿನದ ಶುಭಾಶಯಗಳು.....

ಹೆಣ್ಣಿಗೆ ತಾನು ಗರ್ಭಿಣಿ ಎಂದು ತಿಳಿದಾಗ ಎಷ್ಟು ಖುಷಿಯಾಗುವುದೋ ಗಂಡಿಗೆ ತಾನು ತಂದೆಯಾಗುತ್ತಿದ್ದೇನೆ ಎಂದು ತಿಳಿದಾಗ ಅಷ್ಟೇ ಖುಷಿಯಾಗುತ್ತದೆ, ಅವನಿಗೆ ನನ್ನ ಮಗು ಪತ್ನಿ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ಅತಿ ಖುಷಿಯಿಂದ ದಿನಗಳನ್ನು ಎಣಿಸುತ್ತಾನೆ ಜೊತೆಗೆ ತನ್ನ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಯೋಚಿಸಿ ಹಣ ಸೇವಿಂಗ್ಸ್, ಮಗುವಿಗಾಗಿ ನಾನು ಏನೆಲ್ಲಾ ಮಾಡಬೇಕು ಎಂಬುವುದನ್ನು ಒಂದು ಒಳ್ಳೆಯ ಅಪ್ಪ ಅಂದುಕೊಂಡೇ ಕೊಳ್ಳುತ್ತಾನೆ.

Fathers Day 2024

ಹೆರಿಗೆ ನೋವಿನಲ್ಲಿ ಪತ್ನಿ ಒದ್ದಾಡುತ್ತಿರುವಾಗ ತಾನು ಕೂಡ ಮಾನಸಿಕವಾಗಿ ಅಷ್ಟೇ ನೋವು, ಒದ್ದಾಟ ಅನುಭವಿಸುತ್ತಾನೆ, ತಾಯಿ-ಮಗು ಕ್ಷೇಮವಾಗಿ ಬರಲಿ ಎಂದು ಪ್ರಾರ್ಥಿಸುತ್ತಾನೆ. ನಂತರ ತನಗಾಗಿ ದುಡಿಯುವುದನ್ನು ಮರೆತು ಬಿಡುತ್ತಾನೆ. ತಾನು ದುಡಿಯುವುದೆಲ್ಲಾ ಮಕ್ಕಳಿಗಾಗಿ ಆಗಿರುತ್ತದೆ. ಅವರ ವಿದ್ಯಾಭ್ಯಾಸ, ಮದುವೆ ಅಂತ ಸುಮಾರು 50 ವರ್ಷಕ್ಕೂ ಅಧಿಕ ಸಮಯ ತನ್ನ ಕುಟುಂಬಕ್ಕಾಗಿ ದುಡಿಯುತ್ತಾನೆ, ಇನ್ನು ಕೆಲವರು ಇಡೀ ಜೀವನ ಕುಟುಂಬಕ್ಕಾಗಿ ದಡಿಯುತ್ತಲೇ ಇರುತ್ತಾರೆ.

ಅಪ್ಪನಿಗೆ ತನ್ನ ಮಕ್ಕಳ ಬಗ್ಗೆ ನೂರೆಂಟು ಕನಸು ಇರುತ್ತದೆ, ಆದರೆ ತಮ್ಮ ಜೀವನದ ಅನುಭವದಿಂದ ಕೆಲವೊಂದು ವಿಷಯಗಳನ್ನು ಮಕ್ಕಳಿಗೆ ಹೇಳಬೇಕೆಂದು ಬಯಸಿರುತ್ತಾರೆ, ನಾವು ಇದರ ಕುರಿತು ಅಪ್ಪಂದಿರ ಬಳಿ ನಿಮ್ಮ ಮಕ್ಕಳಿಗೆ ನಿಮ್ಮ ಜೀವನ ಅನುಭವದಿಂದ ಯಾವ ಮೂರು ಮಾರ್ಗದರ್ಶನ ನೀಡುತ್ತೀರಿ ಎಂದು ಕೇಳಿದಾಗ ಅವರ ಉತ್ತರ ಹೀಗಿತ್ತು:

ಶರತ್‌ ಕುಮಾರ್
ಇವರು ಪ್ರಾಧ್ಯಾಪಕರಾಗಿದ್ದಾರೆ, ಮಗಳ ಬದುಕಿನ ಬಗ್ಗೆ ನೂರೆಂಟು ಕನಸು ಹೊತ್ತಿರುವ ಈ ತಂದೆಯ ಮಾತುಗಳು

ತಂದೆಯಾಹೇಗಿ ನನ್ನ ಮಗಳಿಗೆ ಳುವ ಸಲಹೆ ಏನೆಂದರೆ .....

* ಮಗಳೇ ಜೀವನ ಅನ್ನೊಂದು ಒಂದು ಪುಸ್ತಕದ ಹಾಗೆ ಪ್ರತಿ ಪುಟದಲ್ಲಿ ನಿನ್ನ ಅದ್ಭುತ,ಸುಂದರ ಅನುಭವವನ್ನು ಬರೀಬೇಕು.
* ಆದಷ್ಟು ಸರಳವಾಗಿರು - ಜೀವನದಲ್ಲಿ ಆಡಂಬರದ ದುಬಾರಿ ಜೀವನ ಶೈಲಿಗೆ, ವಸ್ತುಗಳಿಗೆ ಸಮಯ,ಹಣ ವ್ಯರ್ಥ ಮಾಡಬೇಡ. "Simple living High thinking"
* ನೀನು ಓದಿ ರಾಂಕ್ ತಗೊಳಿಲ್ಲ ಅಂದ್ರು ಪರವಾಗಿಲ್ಲ ಆದ್ರೆ ಜೀವನದಲ್ಲಿ ಯಾವತ್ತೂ ಫೇಲ್ ಆಗ್ಬೇಡ....ನಿನ್ನ ಶ್ರದ್ಧೆ ಯಾವುದೇ ಕೆಲಸದ ಮೇಲೆ ಪ್ರೀತಿ ಅಸಾಧ್ಯವನ್ನು ಸಾಧ್ಯ ಮಾಡುವ ಹಾಗಿರಬೇಕು.
- ನಿಮ್ಮಪ್ಪ

ರತನ್‌, ವೃತ್ತಿ ಎಲೆಕ್ಟ್ರಿಷಿಯನ್‌ ಆಗಿರುವ ಇವರಿಗೆ ಇಬ್ಬರು ಮಕ್ಕಳು, ಮಕ್ಕಳಿಗೆ ಇವರು ತಮ್ಮ ಮಕ್ಕಳ ಬಗ್ಗೆ ಹೇಳಿರುವ ಮಾತುಗಳೇ ಸಾಕು ಮಕ್ಕಳ ಬಗ್ಗೆ ಅವರ ಕನಸು ತಿಳಿಸುತ್ತೆ

ಯಾರನ್ನು ಹೀಯಾಳಿಸಿ ಮಾತನಾಡಬೇಡ, ನಿಂದಿಸಬೇಡ, ಅಪ್ಪ ಅಮ್ಮನ ಗೌರವಕ್ಕೆ ದಕ್ಕೆ ತರಬೇಡ
ಹಿರಿಯರಾಗಲಿ, ಕಿರಿಯರಾಗಲಿ, ಗೌರವ ಕೊಟ್ಟು ಗೌರವ ತಗೋ
ವಿದ್ಯಾಭ್ಯಾಸ ಯಾವತ್ತೂ ಅರ್ಧಕ್ಕೆ ನಿಲ್ಲಿಸಬೇಡ

ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಸುಬಿನ್‌ ತಮ್ಮ ಪುಟ್ಟ ಮಗು ಬೆಳೆದು ದೊಡ್ಡವನಾದ ಅವನು ಹೇಗಿರಬೇಕು ಎಂಬ ಕನಸು ನಮ್ಮೊಂದಿಗೆ ಹಂಚಿಕೊಂಡಿದ್ದು ಹೀಗೆ
ಎಲ್ಲರ ಜೊತೆ ನೀನು ಕೂಡ ಒಬ್ಬನಾಗಿ ಬೆಳೆಯುವ ಸ್ವಭಾವ ಬೆಳೆಸಿಕೊಳ್ಳು
ಪ್ರಶ್ನೆ ಹಾಕಲು ಭಯಪಡಬೇಡ
ಯಾರು ಏನು ಹೇಳುತ್ತಾರೆ ಎಂದು ಕೇಳುವ ತಾಳ್ಮೆ ನಿನ್ನಲ್ಲಿ ಇರಲಿ.

ಐಟಿ ಕ್ಷೇತ್ರದಲ್ಲಿ ಮ್ಯಾನೇಜರ್ ಆಗಿರುವ ಸಫ್ತದರ್ ಅವರು ತಮ್ಮ ಮಗನಿಗೆ ತಾನು ಕೊಡುವ ಸಲಹೆಯೆಂದರೆ
ಮಾನವೀಯತೆ ಇರಲಿ, ಸೋಲಿಗೆ ಭಯ ಬೇಡ, ಸೋಲಿನಿಂದ ಪಾಠ ಕಲಿ, ಸೋಲಿನಿಂದ ಪಾಠ ಕಲಿ, ಹಣದ ಹಿಂದೆ ಓಡಬೇಡ, ನಿನ್ನ ಕನಸಿನ ಬೆನ್ನಟ್ಟಿ ಹೋಹು, ಪ್ರತಿಯೊಬ್ಬರಿಗೂ ಅವಕಾಶ ದೊರೆಯುತ್ತದೆ, ಅದನ್ನು ಪಡೆಯಲು ಪ್ರಯತ್ನಿಸು, ಅದರಿಂದ ಪಾಠ ಕಲಿ, ಎಲ್ಲರನ್ನೂ ಗೌರವಿಸು, ನಿನ್ನ ಶತ್ರುವನ್ನೂ ದ್ವೇಷಿಸಬೇಡ. ಜೀವನವನ್ನು ಖುಷಿಯಿಂದ ಅನುಭವಿಸು, ಒಳ್ಳೆಯ ಮನುಷ್ಯನಾಗಿರು.

ಪತ್ರಕರ್ತರಾಗಿರುವ ದಾಮೋದರಾ ದೊಂಡಲೆ ಅವರು ತಮ್ಮ ಮಗಳು ಬೆಳೆದು ದೊಡ್ಡವಳಾದಾಗ ಅವಳು ಹೇಗಿರಬೇಕು ಎಂಬುವುದರ ಬಗ್ಗೆ ಅವರಲ್ಲಿರುವ ಕನಸುಗಳು
ಸ್ವಾವಲಂಬಿಯಾಗಿರಬೇಕು
ಧೈರ್ಯವಾಗಿ ಪರಿಸ್ಥಿತಿ ಎದುರಿಸು
ಎಲ್ಲಾ ಸಂಬಂಧ ಕಾಪಾಡಿಕೊಳ್ಳಬೇಕು

ಇವೆಲ್ಲಾ ಅಪ್ಪನ ಕನಸುಗಳಾದರೆ ಅಪ್ಪನ ಕನಸಿನಂತೆ ಬೆಳೆದಿರುವ ಈ ಮಕ್ಕಳು ನಮ್ಮೊಂದಿಗೆ ಅವರು ತಮ್ಮ ಅಪ್ಪನ ಕುರಿತು ನುಡಿದಿರುವ ನುಡಿಗಳಿವು
ನಮ್ಮಪ್ಪ ಅವರ ಇಡೀ ಜೀವನವನ್ನು ನಮಗಾಗಿ ಮೀಸಲಿಟ್ಟಿದ್ದಾರೆ, ನಮ್ಮನ್ನು ಉನ್ನತ ಸ್ಥಾನದಲ್ಲಿ ಬಯಸಿದ್ದರು, ಅದಕ್ಕಾಗಿ ಶ್ರಮಿಸಿದರು, ಅವರು ಬಯಸಿದಂತೆ ನಾವೆಲ್ಲಾ ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಹಂತದಲ್ಲಿದ್ದೇವೆ. ಅವರ ಪ್ರೀತಿ, ಅವರ ಜವಾಬ್ದಾರಿ ನಮ್ಮ ಕುಟುಂಬವನ್ನು ಸದೃಢವನ್ನಾಗಿಸಿದೆ. ಲವ್‌ ಯೂ ಡ್ಯಾಡಿ...

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್‌ ಸ್ವಾಮಿ ತಮ್ಮ ಮಗನ ಬಗ್ಗೆ ಕಟ್ಟಿಕೊಂಡಿರುವ ಕನಸುಗಳಿವು
ನಯ ವಿನಯ ಇರಬೇಕೂ, ತಂದೆ ತಾಯಿಗೆ ,ಗುರು ಹಿರಿಯರಿಗೆ ಗೌರವ ಕೊಡಬೇಕು , ಸಹೋದರ ಸಹೋದರಿಯರಿಗೆ ಸ್ನೇಹ ,ದೇವರಲ್ಲಿ ಭಕ್ತಿ ಇರಬೇಕು , ಸೃಜನ ಶೀಲತೆ ಇರಬೇಕು. ಕರುಣೆ, ಸಹಾಯ ಮಾಡುವ ಗುಣ ಬೆಳಿಸಿಕೊಳ್ಳಬೇಕು.. ಇನ್ನೊಬ್ಬರನ್ನ ನೋಡಿ ಹೊಟ್ಟೆ ಹುರಿ ಅಥವಾ ಅಸೂಯೆ ಪಡುವುದನ್ನು ಮಾಡಬಾರದು, ಮತ್ತೊಬ್ಬರ ಏಳಿಗೆಯನ್ನು ಆನಂದಿಸಬೇಕು , ನಾವು ಬೆಳೆಯಬೇಕೆಂಬ ಸ್ಪೂರ್ತಿ ಮನೋಭಾವನೆ ಹೊಂದಿರಬೇಕು , ಜೊತೆಯಲ್ಲಿರುವವರಿಗೂ ಕೈ ಹಿಡಿದು ನಡೆಯಬೇಕು.
ಸಕಲ ಪ್ರಾಣಿ ಪಕ್ಷಿ ಜೀವಿಗಳ ಮೇಲೆ ಪ್ರೀತಿ ಇರಬೇಕು. ಇವೆಲ್ಲ ಗುಣಗಳಿದ್ದರೆ ಮಾನವರಾಗಿ ಬದುಕಲು ಸಾಧ್ಯ

ಪತ್ರಕರ್ತನಾಗಿರುವ ಚೇತನ್‌ ಕುಮಾರ್ ತಮ್ಮ ಮಗಳ ಕುರಿತು ನುಡಿದಿರುವ ನುಡಿಗಳಿವು
ಅವಳು ತುಂಬಾನೇ ಡಿಪ್ಲೋಮ್ಯಾಟಿಕ್ ಆಗಿರಬೇಕು
ಜೀವನದ ಪ್ರತಿಕ್ಷಣ ಸಂತೋಷದಿಂದ ಕಳೆಯಬೇಕು
ಸೋಲಿಗೆ ಕುಗ್ಗಬಾರದು

ಬೆಂಗಳೂರಿನ ಹರ್ಷೇಂದ್ರ ಜೈನ್ ಅಪ್ಪನ ಕುರಿತು ನುಡಿದ ಮಾತುಗಳು

ಯಾವುದೇ ಫಲಾಪೇಕ್ಷ ಇಲ್ಲದೆ ಅದ್ಭುತವಾದ ಪ್ರೀತಿಯನ್ನು ತೋರುವ ಪ್ರಪಂಚದ ಏಕೈಕ ವ್ಯಕ್ತಿ ಅಪ್ಪ. # ಪ್ರೀತಿ, ಸಹನೆ, ತಾಳ್ಮೆ, ಮಮತೆಯ ಪ್ರತೀಕ ತಾಯಿಯಾದರೆ ,... ಬೇಕು ಬೇಡಗಳ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಶ್ರಮಜೀವಿ ಅಪ್ಪ... #ತನಗೋಸ್ಕರ ಹಸಿವಾದಾಗ ಇಡ್ಲಿ ತಿನ್ನಲು ಹಿಂದೆ ಮುಂದೆ ನೋಡುವ ಅಪ್ಪ ,,,, ಮಗಳಿಗೋಸ್ಕರ ಪಿಜ್ಜಾ ಬರ್ಗರ್ ಕೊಡಿಸುವ ಮಮತಾಮಯಿ ಅಪ್ಪ... ಮಾಳ ಹರ್ಷೇಂದ್ರ ಜೈನ್

ಬೆಂಗಳೂರಿನ ಸಂಕೇತ್‌ ಮಗನಿಗೆ ಹೇಳ ಬಯಸುವ ಸಲಹೆಗಳಿವು ಚಿಪ್ಲೂನ್‌ಕರ್

1. ಜನರನ್ನು ಅವರು ಇರುವಂತೆಯೇ ಸ್ವೀಕಾರ ಮಾಡು.
2. ನಿನ್ನ ವರ್ತನೆ ಅಥವಾ ನಡವಳಿಕೆ ನಿನ್ನ ಸ್ಥಾನ ಮಾನ, ಆರ್ಥಿಕ ಸ್ಥಿತಿ ಅಥವಾ ಯಾರೋ ನಿನ್ನನ್ನು ಗಮನಿಸುತ್ತಿದ್ದಾರೋ ಇಲ್ಲವೋ ಎನ್ನುವುದರ ಮೇಲೆ ಅವಲಂಬಿತ ಆಗದೇ ಇರಲಿ.
3. ಎಲ್ಲರಿಗೂ ಬೇಕಾದವನಂತೆ ಇರು. ಆದರೆ ನೀನು, ನಿನ್ನ ಕುಟುಂಬ, ನಿನ್ನ ಆಪ್ತ ಗೆಳೆಯರ ನಂತರ ಬೇರೆಯವರ ಬಗ್ಗೆ ಯೋಚಿಸು.

English summary

Fathers Day 2024: 3 Life Advice Father Want To To Give His Kids

Fathers Day 2024: Here some of the fathers shared some beautiful advice for their kids, read on..
X
Desktop Bottom Promotion