Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
Fathers Day 2023 : ಗಂಡು ಮಕ್ಕಳು ಅಪ್ಪನಿಂದ ನಿರೀಕ್ಷಿಸುವ 6 ಸಂಗತಿಗಳಿವು!
ಅಪ್ಪ ಎಂದರೆ ಆಕಾಶ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಅಪ್ಪನೊಂದಿಗೆ ಒಂದು ರೀತಿಯ ಉತ್ತಮ ಬಾಂಧವ್ಯ ಇರುತ್ತದೆ. ಅದೇ ರೀತಿ ಗಂಡು ಮಕ್ಕಳು ಅಮ್ಮನ ಜೊತೆಗೆ ಹೆಚ್ಚು ಆತ್ಮೀಯರಾಗಿರುತ್ತಾರೆ. ಹೆಚ್ಚಿನ ಗಂಡು ಮಕ್ಕಳಿಗೆ ಅಪ್ಪನ ಜೊತೆಗೆ ಅಷ್ಟೊಂದು ಉತ್ತಮವಾದ ಬಾಂಧವ್ಯ ಇರೋದಿಲ್ಲ. ಅಪ್ಪನನ್ನು ಕಂಡರೆ ಅದೇನೋ ಒಂಥರಾ ಭಯ ಇರುತ್ತೆ.
ಆದ್ರೆ ಇತ್ತ ಅಪ್ಪ ಮಾತ್ರ ತನ್ನ ಮಕ್ಕಳಿಗಾಗಿ ಹಗಲೂ-ರಾತ್ರಿ ಕಷ್ಟಪಟ್ಟು ದುಡಿಯುತ್ತಾನೆ. ತನ್ನಿಡೀ ಜೀವನವನ್ನೇ ಮುಡಿಪಾಗಿ ಇಡುತ್ತಾನೆ. ಆದರೆ ತನ್ನ ಮಕ್ಕಳು ಯಾಕೆ ನನ್ನೊಂದಿಗೆ ಆತ್ಮೀಯರಾಗಿಲ್ಲ ಅನ್ನೋ ಗೊಂದಲದಲ್ಲೇ ಅಪ್ಪ ಬದುಕುತ್ತಿರುತ್ತಾನೆ. ಅಷ್ಟಕ್ಕು ಗಂಡು ಮಕ್ಕಳು ಅಪ್ಪನಿಂದ ಏನು ಬಯಸುತ್ತಾರೆ ಅನ್ನೋದನ್ನು ತಿಳಿಯೋಣ.

1. ನಿಮ್ಮ ಉಪಸ್ಥಿತಿಯನ್ನು ಬಯಸುತ್ತಾರೆ
ಅಪ್ಪ ಮನೆಯಲ್ಲಿ ಹೆಚ್ಚಿನ ಸಮಯದಲ್ಲಿ ಲಭ್ಯವಿರದೇ ಇರೋದ್ರಿಂದ ಗಂಡು ಮಕ್ಕಳಿಗೆ ಅಪ್ಪನೊಂದಿಗೆ ಆ ಬಾಂಧವ್ಯ ಕಡಿಮೆ ಇರುತ್ತದೆ. ನನ್ನ ಅಪ್ಪ ನನ್ನೊಂದಿಗೆ ಆಟವಾಡಬೇಕೆಂದು ಬಯಸುತ್ತಾನೆ. ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ ಇದ್ದಾಗ ಅಲ್ಲಿಗೆ ಅಪ್ಪನೂ ನನ್ನೊಂದಿಗೆ ಬರಬೇಕು. ಅಪ್ಪನೊಂದಿಗೆ ಟಿವಿ ನೋಡಬೇಕು, ಕಾಲ ಕಳೆಯಬೇಕು. ಅಪ್ಪನು ನನ್ನ ಪ್ರೀತಿಯ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದೆಲ್ಲಾ ಗಂಡು ಮಕ್ಕಳು ಬಯಸುತ್ತಾನೆ.
2. ಜವಾಬ್ದಾರಿ ವಹಿಸಿಕೊಳ್ಳಬೇಕು
ಕೆಲವೊಂದು ಮನೆಗಳಲ್ಲಿ ಅಪ್ಪನ ಹತ್ತಿರ ಬೇಕಾದಷ್ಟು ದುಡ್ಡಿರುತ್ತೆ ಆದ್ರೆ ಆತ ಸಿಕ್ಕಾಪಟ್ಟೆ ಬ್ಯುಸಿ. ಕೊನೆ ಪಕ್ಷ ಮಕ್ಕಳಿಗೆ ಮುಖ ನೋಡೋದಕ್ಕೂ ಆತ ಲಭ್ಯ ಇರೋದಿಲ್ಲ. ಹೀಗಾಗಿ ಮಕ್ಕಳ ಶಾಲೆಯಿಂದ ಹಿಡಿದು, ಆಟ, ಪಾಠ, ಇತರ ಚಟುವಟಿಕೆಗಳನ್ನು ಅಮ್ಮನೇ ನೋಡಿಕೊಳ್ಳುತ್ತಾರೆ.
ಹೀಗಿದ್ದಾಗ ಗಂಡು ಮಕ್ಕಳಿಗೆ ಅಪ್ಪ ಯಾಕೆ ಈ ಎಲ್ಲಾ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಿಲ್ಲ ಅನ್ನೋ ಕೊರಗು ಖಂಡಿತ ಕಾಡುತ್ತದೆ. ನಮ್ಮ ಬಗ್ಗೆ ಅವರಿಗೆ ಕಾಳಜಿಯೇ ಇಲ್ವಾ ಅನ್ನೋ ನೋವು ಕಾಡುತ್ತದೆ. ಹೀಗಾಗಿ ಸಾಧ್ಯವಾದಾಗಲೆಲ್ಲಾ ಮಕ್ಕಳ ಜವಾಬ್ದಾರಿಯನ್ನು ಅಪ್ಪನೂ ವಹಿಸಿಕೊಳ್ಳಬೇಕು.
3. ನಂಬಿಕೆ
ಅಪ್ಪ ತನ್ನ ಮಕ್ಕಳಿಗೆ ಕೊಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಅವರದ್ದೇ ಆದ ಆಸೆಗಳು ಇರುತ್ತದೆ. ಎಲ್ಲಾದರೂ ಸುತ್ತಾಡೋದಕ್ಕೆ ಹೋಗಬೇಕು, ಇಲ್ಲದಿದ್ದರೆ ಆಟದ ಸಾಮಾನು, ಸೈಕಲ್ ಬೇಕು. ಹೀಗೆ ಚಿಕ್ಕ-ಪುಟ್ಟ ಆಸೆಗಳು ಇರುತ್ತದೆ. ಅಪ್ಪ ಇದನ್ನೆಲ್ಲಾ ನೆರವೇರಿಸೋದಾಗಿ ಮಾತು ಕೊಟ್ಟಿರುತ್ತಾನೆ. ಆದರೆ ಸಮಯದ ಅಭಾವ ಅಥವಾ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿದ್ದಾಗ ಇದನ್ನೆಲ್ಲಾ ಈಡೇರಿಸೋದಕ್ಕೆ ಆಗೋದಿಲ್ಲ. ಹೀಗಾಗಿ ಅಪ್ಪಂದಿರು ಮಕ್ಕಳಿಗೆ ಕೊಟ್ಟ ಮಾತನ್ನು ನಡೆಸಿಕೊಟ್ಟು, ಅವರ ನಂಬಿಕೆ ಉಳಿಸಬೇಕು.
4. ಲೆಕ್ಕಕ್ಕಿಂತ ಹೆಚ್ಚು ಕಟ್ಟುಪಾಡುಗಳನ್ನು ವಿಧಿಸಬಾರದು
ಕೆಲವೊಂದು ಮನೆಗಳಲ್ಲಿ ಅಪ್ಪ ತುಂಬಾನೇ ಸ್ಟ್ರಿಕ್ಟ್ ಆಗಿರುತ್ತಾರೆ. ಇದು ಮಕ್ಕಳಿಗೆ ಉಸಿರುಗಟ್ಟಿದಂತೆ ಆಗಿರುತ್ತದೆ. ಕೆಲವೊಂದು ಗಂಭೀರ ವಿಚಾರಗಳಿಗೆ ನಿರ್ಬಂಧ ವಿಧಿಸೋದು ಪರವಾಗಿಲ್ಲ. ಆದರೆ ಅಪ್ಪ ಚಿಕ್ಕ-ಪುಟ್ಟ ವಿಚಾರಗಳಿಗೆ ನಿರ್ಬಂಧ ವಿಧಿಸದೇ ಇರಲಿ ಎಂದು ಮಕ್ಕಳು ಬಯಸುತ್ತಾರೆ. ಹೀಗಾಗಿ ಮಕ್ಕಳು ದೊಡ್ಡವರಾದ ಮೇಲೆ ಇದು ಅವರಿಗೆ ಹಿಂಸೆ ಅನ್ನಿಸಬಹುದು. ಹೀಗಾಗಿ ಅಪ್ಪಂದಿರು ಸರಿಯಾದ ಸಮಯಕ್ಕೆ ಸರಿಯಾದ ಸನಿರ್ಧಾರ ತೆಗೆದುಕೊಳ್ಳೋದು ಮುಖ್ಯವಾಗುತ್ತದೆ.
5. ಪ್ರೀತಿ ತೋರಿಸಬೇಕು
ಅಪ್ಪಂದಿರಿಗೆ ಖಂಡಿತ ಮಕ್ಕಳ ಮೇಲೆ ಬೆಟ್ಟದಷ್ಟು ಆಸೆ ಇದ್ದೇ ಇರುತ್ತದೆ. ಆದರೆ ಹೆಚ್ಚಿನ ಅಪ್ಪಂದಿರು ಅದನ್ನು ತೋರ್ಪಡಿಸೋದಿಲ್ಲ. ಆದರೆ ಮಕ್ಕಳು ಅಪ್ಪನಿಂದ ಅತಿಯಾದ ಪ್ರೀತಿಯನ್ನು ಬಯಸುತ್ತಾನೆ. ಅಪ್ಪನ ಪ್ರೀತಿಯನ್ನು ನಾವು ಅನುಭವಿಸಬೇಕು. ಆತನ ಮನಸ್ಸಿನಲ್ಲಿರುವ ಪ್ರೀತಿಯನ್ನು ಅಪ್ಪ ತೋರ್ಪಡಿಸಬೇಕು ಎಂದು ಅವರು ಬಯಸೋದು ತಪ್ಪಲ್ಲ. ಹೀಗಾಗಿ ಅಪ್ಪಂದಿರೇ, ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ಅನುಭವಿಸೋದಕ್ಕೆ ಅವಕಾಶ ನೀಡಿ.
6. ಸೋತಾಗ ಹುರಿದುಂಬಿಸಬೇಕು
ಸಾಮಾನ್ಯವಾಗಿ ಗೆದ್ದಾಗ ಮಕ್ಕಳು ಮನೆಯಲ್ಲಿ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಆದರೆ ಸೋತಾಗ ಸಪ್ಪೆ ಮೋರೆ ಹಾಕಿ ಕುಳಿತುಕೊಳ್ಳುತ್ತಾರೆ. ಆ ಬಗ್ಗೆ ಮಾತನಾಡೋದಕ್ಕೂ ಇಷ್ಟ ಪಡೋದಿಲ್ಲ. ಯಾಕೆಂದರೆ ಮನೆಯಲ್ಲಿ ಏನು ಹೇಳುತ್ತಾರೋ ಅನ್ನೋ ಭಯ ಅವರನ್ನು ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಅಪ್ಪಂದಿರೇ ಅವರಿಗೆ ಶಕ್ತಿಯಾಗಿ ನಿಲ್ಲಬೇಕು. ಸೋತಾಗ ಅವರ ಬೆನ್ನು ತಟ್ಟಬೇಕು, ಪ್ರೋತ್ಸಾಹಿಸಬೇಕು ಎಂದು ಮಕ್ಕಳು ಬಯಸುತ್ತಾರೆ.
ಅಪ್ಪನೊಂದಿಗೂ ಕೂಡ ಗಂಡು ಮಕ್ಕಳು ಉತ್ತಮ ಭಾಂದವ್ಯ ಹೊಂದಬೇಕೆಂದರೆ ಈ ಮೇಲಿನ ವಿಚಾರಗಳನ್ನು ರೂಢಿಸಿಕೊಳ್ಳಲೇಬೇಕು. ಆಗ ಮಕ್ಕಳು ಅಪ್ಪ ಎನ್ನುವ ಭಯ ದೂರ ಮಾಡಿ ನಿಮ್ಮೊಂದಿಗೆ ಒಂದಾಗುತ್ತಾರೆ.



Click it and Unblock the Notifications

