Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
Fathers Day 2023: ಮಗು ಜನಿಸಿದಾಗ ಕೆಲ ತಂದೆಯರಿಗೂ ಕಾಡುವ ಖಿನ್ನತೆ, ಲಕ್ಷಣಗಳೇನು?
ಮನೆಗೆ ಮಗು ಆಗಮನವಾಗುತ್ತಿದೆ ಅಂದಾಗ ಸಹಜವಾಗಿ ಎಲ್ಲರಲ್ಲೂ ಒಂದು ರೀತಿ ಖುಷಿ ಇದ್ದೇ ಇರುತ್ತದೆ. ಅದ್ರಲ್ಲೂ ತಂದೆ ಹಾಗೂ ತಾಯಿಗೆ ಆ ಖುಷಿ ಹೇಳಲಾಗದು. ದಂಪತಿಗಳಿಬ್ಬರೂ ತಮ್ಮ ಸಂಪೂರ್ಣ ಗಮನವನ್ನು ಮಗುವಿನ ಮೇಲೆ ಹರಿಸುತ್ತಾರೆ. ಅದರ ಕಾಳಜಿ ಮಾಡೋದ್ರಲ್ಲಿ ಬ್ಯುಸಿಯಾಗುತ್ತಾರೆ. ಮತ್ತೊಂದು ಕಡೆಯಿಂದ ಹೆಚ್ಚಿನ ಸಂದರ್ಭದಲ್ಲಿ ತಾಯಿಯಂದಿರು ಪೋಸ್ಟ್ ಪರ್ಟಮ್ ಡಿಪ್ರೆಷನ್ (ಪ್ರಸವಾ ನಂತರದ ಖಿನ್ನತೆ) ಗೆ ಒಳಗಾಗುತ್ತಾರೆ. ಈ ಬಗ್ಗೆ ನಾವು ಕೇಳಿರ್ತೀವಿ.
ಆದರೆ ಮಗುವಿನ ತಂದೆಯೂ ಕೂಡ ಪೋಸ್ಟ್ ಪರ್ಟಮ್ ಡಿಪ್ರೆಷನ್ ಒಳಗಾಗುವ ಬಗ್ಗೆ ನೀವು ಕೇಳಿದ್ದೀರಾ? ಇತ್ತೀಚಿನ ದಿನಗಳಲ್ಲಿ ತಂದೆಯಂದಿರು ಇಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಷ್ಟಕ್ಕು ಪುರುಷರಲ್ಲಿ ಪೋಸ್ಟ್ ಪರ್ಟಮ್ ಡಿಪ್ರೆಷನ್ ಲಕ್ಷಣಗಳು ಹೇಗಿರುತ್ತೆ? ಇದಕ್ಕೆ ಕಾರಣಗಳೇನು? ಪರಿಹಾರವೇನು ಅನ್ನೋದನ್ನು ತಿಳಿಯೋಣ.

ಪೋಸ್ಟ್ ಪರ್ಟಮ್ ಡಿಪ್ರೆಷನ್ ಎಂದರೇನು?
ಪೋಸ್ಟ್ ಪರ್ಟಮ್ ಡಿಪ್ರೆಷನ್ ಮಗುವಿನ ಜನನದ ನಂತರ ತಂದೆ ಅಥವಾ ತಾಯಿ ಖಿನ್ನತೆಗೆ ಒಳಗಾಗುವುದು. ಅವರಲ್ಲಿ ಭಾವನಾತ್ಮಕ ಏರಿಳಿತಗಳು, ಆಗಾಗ್ಗೆ ಅಳುವುದು, ಬಳಲಿಕೆ, ತಪ್ಪಿತಸ್ಥ ಭಾವನೆ ಕಾಡುವುದು, ಆತಂಕ ಮತ್ತು ತಮ್ಮ ನವಜಾತ ಶಿಶುವನ್ನು ಪ್ರೀತಿಸಲು ಮತ್ತು ನೋಡಿಕೊಳ್ಳಲು ಕಷ್ಟವಾಗುವುದು.
ಈ ಎಲ್ಲಾ ಲಕ್ಷಣಗಳು ಪೋಷಕರಲ್ಲಿ ಕಾಣಿಸಿಕೊಳ್ಳುತ್ತದೆ. ಮಗುವಿನ ಜನನದ ನಂತರ ತಂದೆ ಅಥವಾ ತಾಯಿಯಲ್ಲಿ ದೈಹಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಉಂಟಾಗುವ ಬದಲಾವಣೆಗಳೇ ಪೋಸ್ಟ್ ಪರ್ಟಮ್ ಡಿಪ್ರೆಷನ್ ಗೆ ಕಾರಣವಾಗುತ್ತದೆ.
ಪುರುಷರಲ್ಲಿ ಪೋಸ್ಟ್ ಪರ್ಟಮ್ ಡಿಪ್ರೆಷನ್ ನ ಲಕ್ಷಣಗಳ್ಯಾವುದು?
- ಸಿಕ್ಕಾಪಟ್ಟೆ ಕೋಪ ಹಾಗೂ ಆಕ್ರಮಣಕಾರಿ ನಡವಳಿಕೆ
- ಕುಡಿತದ ಚಟ ಹೆಚ್ಚಾಗುತ್ತದೆ ಜೊತೆಗೆ ಆಗಾಗ್ಗೆ ಮಾತ್ರೆ ತೆಗೆದುಕೊಳ್ಳುತ್ತಾರೆ
- ಕಿರಿ ಕಿರಿ ಅನುಭವಿಸುತ್ತಾರೆ
- ಸ್ಪೂರ್ತಿಯೇ ಇಲ್ಲದಂತಾಗುತ್ತದೆ
- ಮಗುವಿನೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗೋದಿಲ್ಲ
- ಭವಿಷ್ಯದ ಬಗ್ಗೆ ಭಯ, ದಿಗ್ಭ್ರಮೆ, ಅಸಹಾಯಕತೆ ಮತ್ತು ಆತಂಕ ಉಂಟಾಗುತ್ತದೆ
- ದಾಂಪತ್ಯದಲ್ಲಿ ಸಮಸ್ಯೆ ಹೆಚ್ಚಾಗುತ್ತದೆ. ದಂಪತಿಗಳ ಮಧ್ಯೆ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತದೆ.
- ತಾಯಿ ಹಾಗೂ ಮಗುವಿನ ಅನ್ಯೋನ್ಯತೆ ಕಡಿಮೆಯಾಗುತ್ತದೆ. ಇಬ್ಬರ ನಡುವಿನ ಅಸಮಾಧಾನ ಹೆಚ್ಚಾಗುತ್ತದೆ.
ಪುರುಷರಲ್ಲಿ ಪೋಸ್ಟ್ ಪರ್ಟಮ್ ಡಿಪ್ರೆಷನ್ ಗೆ ಕಾರಣಗಳೇನು?
1. ಹಾರ್ಮೋನಿನಲ್ಲಿ ಬದಲಾವಣೆಗಳು ಆಗುತ್ತದೆ
ಗರ್ಭಿಣಿಯಾದ ನಂತರದಲ್ಲಿ ತಾಯಿಯಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗಿರೋದನ್ನು ನೀವು ನೋಡಿರ್ತೀರಿ. ಅದ್ರಲ್ಲೂ ತಾಯಂದಿರ ಹಾರ್ಮೋನಿನಲ್ಲಿ ವ್ಯತ್ಯಾಸಗಳು ಆಗುತ್ತದೆ. ಇನ್ನೂ ಮಗು ಜನಿಸಿದ ಮೇಲೆ ಟೆಸ್ಟೋಸ್ಟೆರಾನ್ ಮತ್ತು ವಾಸೊಪ್ರೆಸ್ಸಿನ್ ನಂತಹ ಹಾರ್ಮೋನುಗಳು ತಾಯಿಯಲ್ಲಿ ಬದಲಾದ ಹಾಗೆ ತಂದೆಯಲ್ಲೂ ಆಗುತ್ತದೆ.
2. ವೈವಾಹಿಕ ಜೀವನದಲ್ಲಿ ಬದಲಾವಣೆಯಾಗುತ್ತದೆ
ದಂಪತಿಗಳ ಬಾಳಿನಲ್ಲಿ ಮಗು ಬಂದ ಮೇಲೆ ಅವರ ಪ್ರಾಮುಖ್ಯತೆಗಳು ಬದಲಾಗುತ್ತದೆ. ಇಬ್ಬರ ಗಮನ ಮಗುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಹೀಗಾಗಿ ವೈವಾಹಿಕ ಜೀವನದ ಕಡೆಗೆ ಗಮನ ನೀಡೋದಕ್ಕೆ ಆಗೋದಿಲ್ಲ. ಇದು ಕೂಡ ಪುರುಷರಲ್ಲಿ ಖಿನ್ನತೆಗೆ ಕಾರಣವಾಗಬಹುದು.
3. ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ
ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಗಂಡ-ಹೆಂಡತಿ ಇಬ್ಬರೇ ಇದ್ದಾಗ ಇಬ್ಬರು ಹೇಗೋ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದರು. ಆದರೆ ಮಗು ಆದ ಮೇಲೆ ಖರ್ಚು ಹೆಚ್ಚಾಗುತ್ತದೆ. ಗಂಡ ಒಬ್ಬನ ದುಡಿಮೆಯಿಂದ ಸಂಸಾರ ಸಾಗಿಸೋದಕ್ಕೆ ಕೊಂಚ ಕಷ್ಟ ಆಗುತ್ತದೆ. ಹೀಗೆ ಆರ್ಥಿಕ ಸಮಸ್ಯೆ ಎದುರಾದಾಗಲೂ ಪುರುಷರು ಪೋಸ್ಟ್ ಪರ್ಟಮ್ ಡಿಪ್ರೆಷನ್ ಗೆ ಒಳಗಾಗುವ ಸಾಧ್ಯತೆಯಿದೆ.
ಪುರುಷರ ಪೋಸ್ಟ್ ಪರ್ಟಮ್ ಡಿಪ್ರೆಷನ್ ಗೆ ಚಿಕಿತ್ಸೆ ಹೇಗಿರಬೇಕು?
- ಮಾನಸಿಕ ಚಿಕಿತ್ಸೆಯನ್ನು ಪಡೆದುಕೊಳ್ಳಿ
- ಪತ್ನಿ ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲದಿದ್ದಾಗ ನಿಮ್ಮ ಆಪ್ತರ ಬಳಿ ನಮಗೆ ಆಗುತ್ತಿರುವ ನೋವಿನ ಬಗ್ಗೆ ಹಂಚಿಕೊಳ್ಳಿ
- ಮಾನಸಿಕ ನೆಮ್ಮದಿಗಾಗಿ ಯೋಗ, ಧ್ಯಾನ ಜೊತೆಗೆ ವ್ಯಾಯಾಮ ಮಾಡಿ
- ಪೋಸ್ಟ್ ಪರ್ಟಮ್ ಡಿಪ್ರೆಷನ್ ಅನ್ನು ನಿಯಂತ್ರಿಸಿಕೊಳ್ಳೋದಕ್ಕೆ ಆಗದೇ ಇರೋ ಹಂತಕ್ಕೆ ತಲುಪಿದಾಗ ವೈದ್ಯರನ್ನು ಸಂಪರ್ಕಿಸಿ
ಪೋಸ್ಟ್ ಪರ್ಟಮ್ ಡಿಪ್ರೆಷನ್ ನಂತಹ ಕಾಯಿಲೆಯಿಂದ ಪೋಷಕರು ಬಳಲೋದು ಸಹಜ. ಹೀಗಾಗಿ ಮಗುವಿನ ಆಗಮನಕ್ಕೂ ಮೊದಲೇ ಇದಕ್ಕೆಲ್ಲಾ ಮಾನಸಿಕವಾಗಿ ಸಿದ್ಧವಾಗಿರಬೇಕು.



Click it and Unblock the Notifications
