Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Fathers day 2023 : ಕೊಹ್ಲಿ, ಮೋದಿಯಂತೆ ನಿಮ್ಮ ಮಗನ್ನೂ ಉತ್ತಮ ನಾಯಕನನ್ನಾಗಿ ಬೆಳೆಸಬೇಕಾ?
ಮಕ್ಕಳನ್ನು ಬೆಳೆಸೋದು ಕೂಡ ಒಂದು ಕಲೆ. ಅದು ಅಷ್ಟು ಸುಲಭವಾಗಿ ಯಾರಿಗೂ ಒಲಿದು ಬರೋದಿಲ್ಲ. ಮಕ್ಕಳು ಚಿಕ್ಕ ವಯಸ್ಸಿನಲ್ಲಿರಬೇಕಾದರೆ ನಾವು ನೂರಾರು, ಆಸೆ ಕನಸುಗಳನ್ನು ಕಟ್ಟಿಕೊಂಡಿರ್ತೀವಿ. ನಾಳೆ ನಮ್ಮ ಮಕ್ಕಳು ಬೆಳೆದು ದೊಡ್ಡ ಮನುಷ್ಯರಾಗಬೇಕು ಎಂದು. ಹೀಗಾಗಿ ಅದಕ್ಕೆ ಚಿಕ್ಕ ವಯಸ್ಸಿನಿಂದಾನೇ ಎಲ್ಲಾ ರೀತಿಯ ತಯಾರಿ ಆಗಬೇಕು. ಉದಾಹರಣೆಗೆ ಮಕ್ಕಳಿಗೆ ನಾವು ಬೆಳೆದು ದೊಡ್ಡವರಾದ ಮೇಲೆ ವಿರಾಟ್ ಕೊಹ್ಲಿ ತರ ಆಗ್ಬೇಕು, ಶಾರುಖಾನ್ ತರ ದೊಡ್ಡ ನಟನಾಗ್ಬೇಕು. ಕೆಜಿಎಫ್ ರಾಕ್ ಬಾಯ್ ಹಾಗೆ ಹೆಸರು ಮಾಡ್ಬೇಕು ಅನ್ನೋ ಆಸೆ ಇರೋದು ಸಹಜ.
ಆದ್ರೆ ಮಕ್ಕಳಿಗೆ ನೀವು ಮನೆಯಲ್ಲಿ ಎಂತಹ ಶಿಕ್ಷಣ ಕೊಡ್ಬೇಕು ಅಂದ್ರೆ ಮೊದಲು ಆತನನ್ನು ನೀವು ನಾಯಕನಾಗಿ ರೂಪಿಸಬೇಕು. ಆತ ಬೇರೆಯವರನ್ನು ಅನುಕರಣೆ ಮಾಡೋದಲ್ಲ. ಆತನನ್ನು ಇತರರು ಅನುಕರಣೆ ಮಾಡೋ ಹಾಗೆ ನೀವು ಅವನನ್ನು ಬೆಳೆಸಿ. ಅಷ್ಟಕ್ಕು ನಿಮ್ಮ ಮಗನನ್ನು ಒರ್ವ ಉತ್ತಮ ನಾಯಕನಾಗಿ ರೂಪಿಸೋದು ಹೇಗೆ? ಇಲ್ಲಿದೆ ಟಿಪ್ಸ್.

1. ಒಬ್ಬನೇ ಎಲ್ಲವನ್ನೂ ಎದುರಿಸಲು ಸಜ್ಜಾಗಿರಬೇಕು
ಅಪ್ಪನು ಮಗನಿಗೆ ಮನೆಯಲ್ಲಿ ನಾಯಕತ್ವದ ಶಿಕ್ಷಣವನ್ನು ಚಿಕ್ಕಂದಿನಿಂದಲೇ ನೀಡಬೇಕು. ನಾಯಕನಾದವನಿಗೆ ಒಬ್ಬನೇ ನಿಂತು ಎಲ್ಲವನ್ನೂ ಎದುರಿಸುವ ಶಕ್ತಿ ಇರಬೇಕು. ಹಾಗೂ ತನ್ನನ್ನು ನಂಬಿ ಬಂದವರನ್ನೂ ಆತನಿಂದ ರಕ್ಷಣೆ ಮಾಡುವ ಸಾಮರ್ಥ್ಯ ಇರಬೇಕು. ಕೆಲವೊಂದು ಸಲ ಟೀಕೆಗಳನ್ನು ಆತ ಎದುರಿಸಬೇಕಾಗುತ್ತದೆ. ಎಂತಹ ಸಂಕಷ್ಟಗಳು ಬಂದರೂ ಆತ ಜಗ್ಗಬಾರದು.
2. ನಂಬಿಕೆಗೆ ಅರ್ಹನಾಗಿರಬೇಕು
ಒರ್ವ ಉತ್ತಮ ನಾಯಕನಾಗಬೇಕಾದರೆ ಮೊದಲು ನಾನು ನಮ್ಮ ಮೇಲೆ ನಂಬಿಕೆಯನ್ನು ಹೊಂದಿರಬೇಕು. ಆಗ ಬೇರೆಯವರು ನಮ್ಮ ಮೇಲೆ ನಂಬಿಕೆ ಇಡುತ್ತಾರೆ. ಹಾಗೂ ನಾಯಕನಾದವನೂ ಯಾವತ್ತೂ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ನಂಬಿಕೆದ್ರೋಹ ಮಾಡಬಾರದು. ಒಂದು ಸಲ ಜನ ನಿಮ್ಮನ್ನು ನಂಬಿದರೆ ಅವರು ಎಂದಿಗೂ ನಿಮ್ಮ ಕೈ ಬಿಡಲ್ಲ.
3. ಇತರರಿಗೆ ಪ್ರೇರಣೆ ನೀಡಬೇಕು
ನಾಯಕತ್ವವು ಇತರರನ್ನು ಪ್ರೇರೇಪಣೆ ಮಾಡುವಂತಿರಬೇಕು. ಅವರಲ್ಲಿ ಉತ್ಸಾಹ ತುಂಬಬೇಕು. ಆ ಕಲೆ ನಿಮ್ಮಲ್ಲಿದ್ದರೆ ನೀವು ಅಂದುಕೊಂಡ ಗುರಿಯನ್ನು ಖಂಡಿತ ಸಾಧಿಸಬಹುದು. ನೀವು ಒಬ್ಬ ಪ್ರಭಾವಶಾಲಿ ವ್ಯಕ್ತಿಯಾಗಬೇಕೆಂದರೆ ನಿಮ್ಮ ಬಳಿ ಹಣ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಜನ ಬಲ ಇರಲೇಬೇಕು. ಅಪ್ಪಂದಿರು ಮಕ್ಕಳಿಗೆ ಇದೇ ಪಾಠವನ್ನು ಹೇಳಿಕೊಡಬೇಕು.
4. ನಿರಂತರವಾಗಿ ಕಲಿಯುತ್ತಿರಬೇಕು
ನಾಯಕನಾದವನು ಕೆಲವೊಂದು ಗುಣಗಳನ್ನು ಮೈ ಗೂಡಿಸಿಕೊಳ್ಳಬೇಕು. ಜೊತೆಗೆ ಇನ್ನೂ ಕೆಲವು ಕೌಶಲ್ಯಗಳನ್ನು ಆತ ಹಿರಿಯ ನಾಯಕರನ್ನು ನೋಡಿ ಕಲಿಯಬಹುದು. ನಾವು ಬೇರೆಯವರಿಂದ ಕಲಿತರೆ ನಾವು ಯಾವತ್ತೂ ಚಿಕ್ಕವರಾಗೋದಿಲ್ಲ. ಆದರೆ ಸಂಪೂರ್ಣವಾಗಿ ಅವರನ್ನೇ ಹಿಂಬಾಲಿಸೋದು ತಪ್ಪು. ಹೀಗಾಗಿ ಕಲಿಕೆ ಅನ್ನೋದು ಮುಗಿಯೋದಿಲ್ಲ ಅಂದು ನಿರಂತರವಾಗಿರುತ್ತೆ ಎಂದು ಅಪ್ಪಂದಿರು ಮಕ್ಕಳಿಗೆ ಹೇಳಿ ಕೊಡಬೇಕು.
5. ಆತ್ಮವಿಶ್ವಾಸ ಇರಬೇಕು
ಒರ್ವ ಸಾಮಾನ್ಯ ವ್ಯಕ್ತಿಯಾದರೂ ಸರಿ ಯಾವತ್ತಿಗೂ ಆತ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಲೇಬಾರದು. ಹೀಗಿದ್ದಾಗ ಒಂದಿಡೀ ಸೈನ್ಯವನ್ನು ನಿಭಾಯಿಸುವ ನಾಯಕನಲ್ಲಿ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿರಬೇಕು. ಆತ್ಮವಿಶ್ವಾಸ ಒಂದಿದ್ದರೆ ಯಾರನ್ನೂ ಬೇಕಾದರೂ ಗೆಲ್ಲಬಹುದು. ಎಂತಹ ಸಂದರ್ಭ ಬಂದರೂ ಕೂಡ ಎದೆಗುಂದಬಾರದು ಜೊತೆಗೆ ಆತ್ಮವಿಶ್ವಾಸ ಕಳೆದು ಕೊಳ್ಳಬಾರದು.
ಮಗನಿಗೆ ಅಪ್ಪನೇ ಒಂದು ರೀತಿ ಶಕ್ತಿ ಇದ್ದ ಹಾಗೆ. ಚಿಕ್ಕ ವಯಸ್ಸಿನಲ್ಲಿಯೇ ಮಗನನ್ನು ತಿದ್ದಿ ತೀಡಿ ಉತ್ತಮ ವ್ಯಕ್ತಿಯನ್ನಾಗಿ ಮಾಡೋದು ಅಪ್ಪನ ಕರ್ತವ್ಯ.



Click it and Unblock the Notifications
