Latest Updates
-
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು?
Fathers Day 2023: ಅಪ್ಪ-ಮಗನ ಬಾಂಧವ್ಯ ಗಟ್ಟಿಯಾಗಿರಬೇಕಂದ್ರೆ ಏನು ಮಾಡ್ಬೇಕು? ಇಲ್ಲಿದೆ ಟಿಪ್ಸ್!
ಹೆಚ್ಚಿನ ಮನೆಗಳಲ್ಲಿ ಅಪ್ಪ ಹಾಗೂ ಮಗ ಹೆಚ್ಚು ಆತ್ಮೀಯರಾಗಿ ಇರೋದಿಲ್ಲ. ಗಂಡು ಮಕ್ಕಳು ಯಾವಾಗಲೂ ಅಮ್ಮನಿಗೆ ಅಂಟಿಕೊಂಡು ಇರುತ್ತಾರೆ. ಅಪ್ಪನನ್ನು ಕಂಡರೆ ಅದೇನೋ ಒಂದು ರೀತಿ ಭಯ. ಹೀಗಾಗಿ ಅಪ್ಪ ಹಾಗೂ ಮಗನ ನಡುವೆ ಒಂದು ರೀತಿ ಅಂತರ ಇದ್ದೇ ಇರುತ್ತದೆ. ಒಂದು ಕಡೆಯಿಂದ ಅಪ್ಪನಿಗೆ ಮಗನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಕೂಡ ಅದನ್ನು ವ್ಯಕ್ತಪಡಿಸೋದಕ್ಕೆ ಸಾಧ್ಯವಾಗಿರೋದಿಲ್ಲ. ಅಷ್ಟಕ್ಕೂ ಅಪ್ಪ ಹಾಗೂ ಮಗನ ನಡುವಿನ ಬಾಂಧವ್ಯವನ್ನು ಉತ್ತಮಗೊಳಿಸೋದು ಹೇಗೆ ಅನ್ನೋದನ್ನು ತಿಳಿಯೋಣ.
1. ನಿಮ್ಮ ಎಲ್ಲಾ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ
ಸಾಮಾನ್ಯವಾಗಿ ಗಂಡು ಮಕ್ಕಳು ಚಿಕ್ಕಂದಿನಿಂದಲೇ ಆಕ್ಟೀವ್ ಆಗಿ ಇರ್ತಾರೆ. ಆಟ ಅಂದ್ರೆ ಅವರಿಗೆ ಪಂಚ ಪ್ರಾಣ. ಗಂಡು ಮಕ್ಕಳು ಚಿಕ್ಕಂದಿನಿಂಲೇ ರಫ್ ಆಂಡ್ ಟಫ್. ಯಾರ ಮಾತನ್ನು ಕೇಳೋದಕ್ಕೆ ರೆಡಿ ಇರೋದಿಲ್ಲ. ಆದ್ರೆ ಅಪ್ಪನನ್ನು ಕಂಡ್ರೆ ಮಾತ್ರ ಸ್ವಲ್ಪ ಭಯ. ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಪುಟ್ಟ ಮಗನನ್ನು ವಾಕಿಂಗ್, ಜಾಗಿಂಗ್ ಹೋಗುವಾಗ ಜೊತೆಗೆ ಕರೆದುಕೊಂಡು ಹೋಗಿ. ನೀವು ಮಾಡೋ ಪ್ರತಿಯೊಂದು ಚಟುವಟಿಕೆಯಲ್ಲೂ ಆತನನ್ನೂ ತೊಡಗಿಸಿಕೊಳ್ಳಿ. ಆಗ ತಂದೆ- ಮಗನ ಬಾಂಧವ್ಯ ಉತ್ತಮಗೊಳ್ಳುತ್ತದೆ.

2. ಇಬ್ಬರ ಆಸಕ್ತಿ ಒಂದೇ ಆಗಿದ್ದಾಗ
ಸಾಮಾನ್ಯವಾಗಿ ಸಮಾನ ಆಸಕ್ತಿ ಹೊಂದಿರುವ ಜನ ಯಾವಾಗಲೂ ಒಟ್ಟಾಗಿ ಇರ್ತಾರೆ. ಹೆಚ್ಚಿನ ಅಪ್ಪ ಹಾಗೂ ಮಗನ ಆಸಕ್ತಿಗಳು ಒಂದೇ ಆಗಿರುತ್ತದೆ. ನೀವು ಆಸಕ್ತಿ ಹೊಂದಿರುವ ಕ್ಷೇತ್ರಗಳಲ್ಲಿ ಆತನಿಗೂ ಆಸಕ್ತಿ ಇದ್ದರೆ ಚಿಕ್ಕಂದಿನಿಂದಾನೇ ತಂದೆಯೂ ಮಗನ ಜೊತೆಗೆ ಬೆರೆಯಬೇಕು. ಅವನ ಜೊತೆಗೆ ನಿಂತು ನೀವು ಮಾರ್ಗದರ್ಶನ ನೀಡಬೇಕು. ಇದು ಕೂಡ ನಿಮ್ಮಿರ ಬಾಂಧವ್ಯ ಹೆಚ್ಚಾಗೋದಕ್ಕೆ ಕಾರಣವಾಗುತ್ತದೆ.
3. ಅಪ್ಪ ಕೆಲಸ ಮಾಡೋವಾಗ ಸಹಾಯ ಮಾಡೋದು
ಅಪ್ಪ ಹಾಗೂ ಮಗನ ಬಾಂಧವ್ಯ ಉತ್ತಮವಾಗಬೇಕಂದ್ರೆ ಇಬ್ಬರೂ ಜೊತೆಯಾಗಿ ಕೆಲಸ ಮಾಡಬೇಕು. ಅಡುಗೆ ಮಾಡುವಾಗ ನಿಮ್ಮ ಮಗನ ಸಹಾಯ ಪಡೆಯಿರಿ. ಇನ್ನೂ ಬೈಕ್ ಕಾರ್ ತೊಳೆಯೋವಾಗ್ಲೂ ಮಗನನ್ನ ನಿಮ್ಮ ಜೊತೆಗಿರಿಸಿ ಆತನಿಗೂ ಕಲಿಸಿ ಕೊಡಿ. ಚಿಕ್ಕಂದಿನಿಂದಲೇ ಇದೆಲ್ಲಾ ಅಭ್ಯಾಸವಾದರೆ ಖಂಡಿತ ಅವರು ದೊಡ್ಡವರಾದ ಮೇಲೆ ನಿಮಗೆ ಸಹಾಯ ಮಾಡುತ್ತಾರೆ. ಜೊತೆಗೆ ಅಪ್ಪ ಅನ್ನೋ ಭಯ ಇರೋದಿಲ್ಲ.
4. ಮಗನ ಮಾತನ್ನು ತಾಳ್ಮೆಯಿಂದ ಕೇಳಿ
ಮಕ್ಕಳು ಚಿಕ್ಕವರಿರಬೇಕಾದರೆ ಎಲ್ಲವನ್ನೂ ಬಂದು ಅಪ್ಪನ ಬಳಿ ವರದಿ ಒಪ್ಪಿಸುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಅಪ್ಪಂದಿರು ಮಗನ ಮಾತನ್ನು ಕೇಳೋದನ್ನು ಬಿಟ್ಟು ಅಮ್ಮನಿಗೆ ಹೇಳು ಅಂತ ಹೇಳ್ತಾರೆ. ಇದ್ರಿಂದ ಮಕ್ಕಳಿಗೂ ಅಭ್ಯಾಸ ಆಗುತ್ತೆ ಮುಂದೆ ಏನೇ ವಿಚಾರ ಇದ್ರು ಅವರು ಸೀದಾ ಹೋಗಿ ಅಮ್ಮನ ಹತ್ರಾನೇ ಹೇಳುತ್ತಾರೆ. ಅಪ್ಪ ಯಾವಾಗಲೂ ಮಗನ ಮಾತನ್ನು ತಾಳ್ಮೆಯಿಂದ ಆಲಿಸಬೇಕು. ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದು ಕೂಡ ಇಬ್ಬರ ನಡುವಿನ ಬಾಂಧವ್ಯ ಹೆಚ್ಚಿಸುತ್ತೆ.
5. ಟೀನೇಜ್ ಹುಡುಗ್ರು ಅಪ್ಪನೊಂದಿಗೆ ಕೆಲವು ವಿಷಯವನ್ನು ಹೇಳೋದಿಲ್ಲ
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಮೈ ಹಾಗೂ ಮನಸ್ಸಿನಲ್ಲಿ ಹತ್ತು ಹಲವಾರು ಬದಲಾವಣೆಗಳು ಆಗುತ್ತದೆ. ಪ್ರೀತಿಯಲ್ಲಿ ಬೀಳಬಹುದು ಅಥವಾ ಬೇರ್ಯಾವುದೋ ಸಮಸ್ಯೆ ಬರಬಹುದು.
ಹೆಚ್ಚಿನ ಸಮಯದಲ್ಲಿ ಮಕ್ಕಳು ಇದನ್ನೆಲ್ಲಾ ಮನೆಯಲ್ಲಿ ಹೇಳೋದೇ ಇಲ್ಲ. ತಮ್ಮ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾರೆ. ನಿಮ್ಮ ವಯಸ್ಸಿನ ಸ್ನೇಹಿತರು ನಿಮಗೆ ಉತ್ತಮ ಮಾರ್ಗದರ್ಶನ ನೀಡೋದಕ್ಕೆ ಸಾಧ್ಯಾನಾ? ಅಪ್ಪ ಮಕ್ಕಳೊಂದಿಗೆ ಸ್ನೇಹಿತನಂತೆ ಇದ್ದರೆ ಖಂಡಿತ ಮಕ್ಕಳು ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಾಗೂ ಮಕ್ಕಳ ಸಮಸ್ಯೆಯೂ ಬಗೆ ಹರಿಯುತ್ತೆ.
6. ಧನಾತ್ಮಕ ವಿಚಾರಗಳ ಕಡೆಗೆ ಮಕ್ಕಳು ಫೋಕಸ್ ಮಾಡಲಿ
ಚಿಕ್ಕ ವಯಸ್ಸಿನಲ್ಲಿ ಕಾರ್ಟೂನ್ ನೋಡಿ ಬೆಳೆದ ಮಕ್ಕಳು ದೊಡ್ಡವರಾದ ಮೇಲೆ ಕೆಲವೊಂದು ಟಿವಿ ಶೋಗಳನ್ನು ನೋಡೋದಕ್ಕೆ ಶುರು ಮಾಡ್ತಾರೆ. ಇದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಋಣಾತ್ಮಕತೆ ಅವರ ತಲೆಯಲ್ಲಿ ಹೆಚ್ಚಾಗಿ ತುಂಬಿಕೊಳ್ಳಹುದು. ಇದಕ್ಕೆಲ್ಲಾ ಅವಕಾಶ ಕೊಡಬೇಡಿ. ಈ ವಯಸ್ಸಿನಲ್ಲಿ ಅಪ್ಪನು ಮಕ್ಕಳೊಂದಿಗೆ ಉತ್ತಮ ಸ್ನೇಹ ಬೆಳೆಸಿಕೊಳ್ಳಬೇಕು. ಹಾಗೂ ಅವರಿಗೆ ತಪ್ಪು ಯಾವುದು? ಸರಿ ಯಾವುದು? ಅನ್ನೋದನ್ನು ತಿದ್ದಿ ಹೇಳಬೇಕು.
ಈ ಮೇಲಿನ ವಿಚಾರಗಳು ಅಪ್ಪ ಹಾಗೂ ಮಗನ ನಡುವಿನ ಬಾಂಧವ್ಯ ಹೆಚ್ಚು ಮಾಡೋದಕ್ಕೆ ಸಹಾಯ ಮಾಡುತ್ತದೆ. ಅಪ್ಪಂದಿರೂ ಮಕ್ಕಳ ಮನಸ್ಸಿನಲ್ಲೇ ಭಯ ತುಂಬಿಕೊಳ್ಳೋದಕ್ಕೆ ಕಾರಣವಾಗಬಾರದು. ನೀವು ಅವರೊಂದಿಗೆ ಫ್ರೀಯಾಗಿ ಇದ್ದರೆ ಖಂಡಿತ ಮಕ್ಕಳು ದಾರಿ ತಪ್ಪೋದಿಲ್ಲ. ಇತ್ತ ಬಾಂಧವ್ಯವೂ ಉತ್ತಮ ಆಗುತ್ತದೆ.



Click it and Unblock the Notifications
