Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತ್ತೆ ಮನೆಯಲ್ಲಿ ಕಿರುಕುಳ: ಗಂಡನ ಮನೆಯಿಂದ ವಾದ್ಯದೊಂದಿಗೆ ಮರಳಿ ಕರೆದು ತಂದ ತಂದೆ, ವೀಡಿಯೋ ವೈರಲ್
ಗಂಡನ ಮನೆಯಿಂದ ವಾದ್ಯದೊಂದಿಗೆ ಮರಳಿ ಕರೆದು ತಂದ ತಂದೆ, ವೀಡಿಯೋ ವೈರಲ್
ಸಾಮಾಜಿಕ ತಾಣದಲ್ಲಿ ಅಪ್ಪ ಮಗಳನ್ನು ಅವಳ ಅತ್ತೆ ಮನೆಯಿಂದ ಬ್ಯಾಂಡ್ ವಾದ್ಯಗಳ ಮೂಲಕ ಮನೆಗೆ ಕರೆತರುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಹೆಣ್ಣನ್ನು ಮದುವೆ ಮಾಡಿ ಕೊಟ್ಟ ಮೇಲೆ ಅವಳಿಗೆ ಕೊಟ್ಟ ಮನೆಯಲ್ಲಿ ನೆಮ್ಮದಿ ಇಲ್ಲದಿದ್ದರೆ ಏನೇ ಆಗಲಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಹೋಗಮ್ಮಾ ಎಂದು ಹೇಳುವ ಪೋಷಕರ ನಡುವೆ ಈ ಅಪ್ಪ ತುಂಬಾನೇ ಭಿನ್ನವಾಗಿದ್ದಾರೆ. ಎಲ್ಲಾ ಅಪ್ಪ ಈ ರೀತಿ ಯೋಚಿಸಿದರೆ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ದೌರ್ಭಾಗ್ಯ ಹೆಣ್ಮಕ್ಕಳಿಗೆ ಬರುವುದಿಲ್ಲ.

ಈ ಅಪ್ಪ ಜಾರ್ಖಂಡ್‌ನ ನಿವಾಸಿ ಹೆಸರು ಪ್ರೇಮ್‌ಗುಪ್ತ್. ಮಗಳನ್ನು ತುಂಬಾ ಮುದ್ದಾಗಿ ಸಾಕಿ ಅದ್ಧೂರಿಯಾಗಿಯೇ ಮದುವೆ ಮಾಡಿ ಅಳಿಯನ ಜೊತೆ ಕಳುಹಿಸಿದ್ದರು. ನಮ್ಮ ಮಗಳ ಹೋದ ಮನೆಯಲ್ಲಿ ಸುಖವಾಗಿ ಬಾಳಲಿ ಎಂದು ಮನ ತುಂಬಿ ಹರಿಸಿದ್ದರು. ಆದರೆ ಮಗಳನ್ನು ಕೊಟ್ಟ ಮನೆಯಲ್ಲಿ ಆಕೆಗೆ ಕಿರುಕುಳ ಶುರುವಾಯ್ತು, ಗಂಡನ ಬೆಂಬಲವೂ ಸಿಗಲಿಲ್ಲ. ಆಕೆಯೂ ಹೊಂದಿಕೊಂಡು ಹೋಗಲು ಪ್ರಯತ್ನಿಸಿದಳು. ಆದರೆ ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ಬಂದಾಗ ತಂದೆಗೆ ವಿಷಯ ತಿಳಿಸುತ್ತಾಳೆ.
ಸಾಮಾನ್ಯವಾಗಿ ತಮ್ಮ ಮಗಳು ಗಂಡನ ಮನೆಯಲ್ಲಿ ಕಿರುಕುಳ ಅನುಭವಿಸುತ್ತಿದ್ದರೆ ಕೆಲವರು ಹೊಂದಿಕೊಂಡು ಹೋಗಲು ಸಲಹೆ ನೀಡಿದರೆ ಇನ್ನು ಕೆಲವರು ಬಂದು ಬಿಡು ನಮಗೆ ನೀನು ಭಾರವಲ್ಲ ಎಂಬ ಮಾತು ಹೇಳುತ್ತಾರೆ. ಆದರೆ ಸಮಾಜ ಏನು ಹೇಳುತ್ತದೋ ಎಂಬ ಅಂಜಿಕೆ ಅವರನ್ನು ಕಾಡುವುದು. ಸಮಾಜವೂ ಅಷ್ಟೇ ಗಂಡ ಬಿಟ್ಟು ಬಂದ ಹೆಣ್ಣನ್ನು ಅವಳದ್ದೇ ತಪ್ಪು ಎಂಬಂತೆ ದೂಷಿಸುತ್ತದೆ. ಆದರೆ ಈ ತಂದೆ ತಮ್ಮ ಮಗಳನ್ನು ಕರೆದುಕೊಂಡ ಬಂದ ರೀತಿಗೆ ಇಡೀ ಸಮಾಜ ಭೇಷ್ ಎಂದಿದೆ. ಮಗಳನ್ನು ಮದುವೆ ಮಾಡಿಕೊಡುವಾಗ ವಾದ್ಯಗಳೊಂದಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಅತ್ತೆಮನೆಯಲ್ಲಿ ಅವಳಿಗೆ ಒಂದಿಷ್ಟು ಖುಷಿ, ನೆಮ್ಮದಿ ಕೊಡಲಿಲ್ಲ, ಅವಳು ಏನು ಮಾಡಿದರು ತಪ್ಪು ಎಂದು ದೂಷಿಸುತ್ತಿದ್ದರು, ಅವಳಿಗೆ ಆ ಮನೆಯಲ್ಲಿ ಬಾಳುವುದು ತುಂಬಾನೇ ಕಷ್ಟವಾದಾಗ ಅಪ್ಪ ಹೋಗಿ ತಮ್ಮ ಮಗಳನ್ನು ವಾದ್ಯ ಘೋಷದೊಂದಿಗೆ ಮನೆಗೆ ಕರೆತಂದಿದ್ದಾರೆ. ಮಗಳನ್ನು ಈ ರೀತಿ ಕರೆದುಕೊಂಡು ಬರುವುದನ್ನು ಇಡೀ ಊರೇ ನಿಂತು ನೋಡುತ್ತಿತ್ತು. ಆಕೆ ಮನೆ ಬಳಿ ಬರುವಾಗ ಪಟಾಕಿಗಳನ್ನು ಸಿಡಿಸಿ ಸ್ವಾಗತಿಸಲಾಯ್ತು.
ಆ ಹೆಣ್ಮಗಳು ಬಂದು ತಾಯಿಯ ಕಾಲು ಮುಟ್ಟಿ ನಮಸ್ಕರಿಸುವಾಗ ತಾಯಿ-ಮಗಳು ಇಬ್ಬರು ಅಳುವ ದೃಶ್ಯ ಆ ವೀಡಿಯೋದಲ್ಲಿ. ಕೊನೆಗೂ ನರಕದ ಬದುಕಿನಿಂದ ಹೊರ ಬಂದ ಅವಳನ್ನು ಅವಳಿಗೆ ಮಾನಸಿಕ ಆತ್ಮವಿಶ್ವಾಸ ತುಂಬುವಂತ ಸ್ವಾಗತಿಸಿದ್ದು ಮಾತ್ರ ತುಂಬಾನೇ ವಿಶೇಷ, ಇಂಥ ಸ್ಪಂದನೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಸಿಕ್ಕರೆ ಅವರು ಬದುಕಿನಲ್ಲಿ ಮತ್ತೆ ಮೇಲೇಳುವ ಶಕ್ತಿ ದೊರೆಯುವುದು.
ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ನೂರೆಂಟು ಕನಸು ಹೊತ್ತು ಹೋಗುತ್ತಾಳೆ. ಆದರೆ ಎಷ್ಟೋ ಹೆಣ್ಮಕ್ಕಳಿಗೆ ಮದುವೆಯ ನಂತರ ಬದುಕು ನರಕವಾಗುವುದು. ಗಂಡನ ಕಿರುಕುಳ ಅಥವಾ ಅತ್ತೆಯ ಕಿರುಕುಳ ಸಹಿಸಲು ಸಾಧ್ಯವಾಗದೆ ಕೆಲವರು ಬದುಕನ್ನು ಅಂತ್ಯಗೊಳಿಸಿರುವ ಎಷ್ಟೋ ಉದಾಹರಣೆಗಳಿವೆ. ಇನ್ನು ಮನೆಯವರು ಕೂಡ ಗಂಡನ ಬಿಟ್ಟು ಮಗಳು ಮನೆಗೆ ಬಂದರೆ ನೆರೆ ಹೊರೆಯವರು, ನೆಂಟರಿಷ್ಟರು ಏನು ಹೇಳುತ್ತಾರೋ ಎಂಬ ಅಂಜಿಕೆಯಿಂದ ಆಕೆಯ ಬೆಂಬಲಕ್ಕೆ ನಿಲ್ಲುವುದಿಲ್ಲ, ಇದರಿಂದ ಅವಳು ನೊಂದು ಏನಾದರು ಹೆಚ್ಚು ಕಡಿಮೆ ಮಾಡಿಕೊಂಡರೆ ಅಯ್ಯೋ.. ನಾವು ತಪ್ಪು ಮಾಡಿ ಬಿಟ್ವಿ ಎಂದು ಪಶ್ಚಾತಾಪ ಪಡುತ್ತಾರೆ. ಅದರ ಬದಲು ಅವಳ ಬಂಬಲಕ್ಕೆ ನಿಲ್ಲಿ, ಅವಳು ಮತ್ತೆ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು... ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದೂ ಭಾವಿಸಬೇಡಿ....



Click it and Unblock the Notifications