Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಅಪ್ಪಂದಿರ ದಿನ: ಅಪ್ಪನಿಗೆ ನೀಡುವ ಗಿಫ್ಟ್ ಇದೆಯೆಲ್ಲಾ ತುಂಬಾ ಸ್ಪೆಷಲ್ ಅನಿಸುವುದು ಇದೇ ಕಾರಣಕ್ಕೆ
ಜೂನ್ 18ಕ್ಕೆ ಅಪ್ಪಂದಿರ ದಿನ.. ಈ ದಿನ ಅಪ್ಪನಿಗೆ ಏನಾದರೂ ಗಿಫ್ಟ್ ಮಾಡು ಪ್ಲ್ಯಾನ್ ಮಾಡಿದ್ದೀರಾ? ಇಲ್ಲಾಂದ್ರೆ ಏನದರೂ ಸ್ಪೆಷಲ್ ಆಗಿ ಪ್ಲ್ಯಾನ್ ಮಾಡಿ, ಏಕೆಂದರೆ ಅಪ್ಪನಿಗೆ ನೀವು ನೀಡುವ ಗಿಫ್ಟ್ಸ್ ಇದೆಯೆಲ್ಲಾ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಈ ಲೇಖನದಲ್ಲಿ ಆಪ್ಪನಿಗೆ ಮಗ/ ಮಗಳ ನೀಡುವ ಗಿಫ್ಟ್ಸ್ ಏಕೆ ಸ್ಪೆಷಲ್ ಎಂದು ಹೇಳಿದ್ದೇವೆ ಅದನ್ನು ಓದಿದ ಮೇಲೆ ಖಂಡಿತ ನೀವು ನಿಮ್ಮ ಪ್ರೀತಿಯ ಅಪ್ಪನಿಗೆ ಗಿಫ್ಟ್ಸ್ ಕೊಡುವ ಬಗ್ಗೆ ಖಂಡಿತ ಪ್ಲ್ಯಾನ್ ಮಾಡುತ್ತೀರ.
ಅಪ್ಪನಿಗೆ ನೀವು ಕೊಡುವ ಗಿಫ್ಟ್ಸ್ ತುಂಬಾನೇ ಸ್ಪೆಷಲ್
ನೀವು ಉದ್ಯೋಗ ಮಾಡುತ್ತಿದ್ದೀರಾ? ಹಾಗಾದರೆ ನೀವು ನೀಡುವ ಈ ಗಿಫ್ಟ್ಸ್ ತುಂಬಾನೇ ಸ್ಪೆಷಲ್ ಆಗಿರುತ್ತದೆ. ಅಪ್ಪ ಇದುವರೆಗೆ ನಿಮ್ಮಿಂದ ಏನೂ ನಿರೀಕ್ಷೆ ಮಾಡದೆ ನಿಮಗಾಗಿ ಎಲ್ಲವನ್ನೂ ಮಾಡಿರುತ್ತಾರೆ. ಒಂದು ಕ್ಷಣ ಹಳೆಯ ವಿಚಾರಗಳನ್ನು ನೆನಪಿಸಿ ನೋಡಿ, ಕೆಲವೊಂದು ವಸ್ತುಗಳಿಗೆ ನೀವು ಬೇಡಿಕೆ ಇಟ್ಟಾಗ ಅವರ ಶಕ್ತಿ ಮೀರಿ ಕೊಡಿಸಿರುತ್ತಾರೆ.

ಅದರಲ್ಲೂ ಮಧ್ಯಮ ವರ್ಗದಲ್ಲಿ ಜನಿಸಿದ್ದರಂತೂ ಅಪ್ಪ ನಮ್ಮನ್ನು ಒಂದು ಹಂತಕ್ಕೆ ತಲುಪಿಸಲು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುವುದು ಕಣ್ಣಿನಲ್ಲಿ ಕಟ್ಟಿದಂತಿರುತ್ತದೆ. ಮಕ್ಕಳ ದುಬಾರಿ ಪೀಸ್ ತುಂಬುವುದೇ ದೊಡ್ಡ ವಿಷಯ, ಆದರೂ ಅವರು ಮಕ್ಕಳು... ಮಕ್ಕಳು ಅಂತ ತುಂಬಾನೇ ಕಷ್ಟಪಡುತ್ತಾರೆ. ಆದರೆ ಆ ಬಗ್ಗೆ ಒಂದಿಷ್ಟು ಬೇಸರ ಪಡುವುದಿಲ್ಲ, ಅಂಥ ಅಪ್ಪನಿಗೆ ನಾವು ಒಂದು ಹಂತಕ್ಕೆ ಬಂದ ಮೇಲೆ ಅವರಿಗೆ ಏನಾದರೂ ಒಂದು ಚಿಕ್ಕ ಉಡುಗೊರೆ ಕೊಟ್ಟರೆ ಇದೆಯೆಲ್ಲಾ ಅದು ಅವರಿಗೆ ಕೊಡುವ ಅಷ್ಟಿಟ್ಟಲ್ಲ.
ತಮಗೆ ಎಷ್ಟೋ ಆಸೆಗಳಿರುತ್ತದೆ ಅವುಗಳೆನ್ನೆಲ್ಲಾ ಬದಿಗೊತ್ತಿ ಅವರು ಅವರು ನಿಮ್ಮ ಆಸೆ, ಕನಸಿಗೆ ಆಸರೆಯಾಗಿರುತ್ತಾರೆ. ನಮಗೆ ಅಮ್ಮನ ಕಷ್ಟಗಳು ಕಣ್ಣೆದುರಿಗೆ ಕಾಣುವುದು, ಆದರೆ ಹೊರಗಡೆ ದುಡಿದು ಬರುವ ಅಪ್ಪನ ಕಷ್ಟಗಳು ಬಹುತೇಕ ಸಂದರ್ಭಗಳಲ್ಲಿ ಗೊತ್ತೇ ಆಗುವುದಿಲ್ಲ. ಅವರ ಸಿಡುಕುತನ, ಗಂಭೀರ ವ್ಯಕ್ತಿತ್ವ ನೋಡಿ ನಾವು ಅಪ್ಪ ತುಂಬಾ ಸ್ಟ್ರಿಕ್ಟ್ ಎಂದು ಭಾವಿಸುತ್ತೇವೆ. ಆದರೆ ಅವರು ಮನಸ್ಸಿನಿಂದ ತುಂಬಾ ಮೃದುವಿರುತ್ತಾರೆ. ತುಂಬಾ ಅಪ್ಪಂದಿರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಗೊತ್ತಿರುವುದಿಲ್ಲ. ಆದರೆ ಅವರಿಗೆ ಮನಸ್ಸಿನಲ್ಲಿ ಮಕ್ಕಳ ಮೇಲೆ ತುಂಬಾ ಪ್ರೀತಿ ಇರುತ್ತದೆ. ಅಮ್ಮನ್ನಷ್ಟೇ ಅಪ್ಪನೂ ನಮ್ಮನ್ನು ಸಾಕಿ ಬೆಳೆಸುವಲ್ಲಿ ತುಂಬಾನೇ ಕಷ್ಟಪಟ್ಟಿರುತ್ತಾರೆ.
ಮಕ್ಕಳು ನೀಡುವ ಗಿಫ್ಟ್ಸ್ ಅಪ್ಪನಿಗೆ ತುಂಬಾ ಸ್ಪೆಷಲ್ ಆಗಿರುತ್ತೆ
ನಿಮ್ಮ ಅಪ್ಪನ ಬಳಿ ಎಷ್ಟೇ ಆಸ್ತಿ ಇರಲಿ ಅಥವಾ ಅವರು ಸಂಪಾದಿಸಿ ಏನೇ ಮಾಡಿರಲಿ ನೀವು ದುಡಿದ ದುಡ್ಡಿನಲ್ಲಿ ಒಂದು ವಾಚ್ ಕೊಟ್ಟರೂ ಅವರಿಗೆ ನನ್ನ ಮಗ / ಮಗಳು ದುಡಿದ ದುಡ್ಡಿನಲ್ಲಿ ಕೊಟ್ಟದ್ದು ಎಂದು ತುಂಬಾನೇ ಖುಷಿ ಪಡುತ್ತಾರೆ. ಇದುವರೆಗೆ ನೀವು ಯಾವುದೇ ಗಿಫ್ಟ್ಸ್ ನೀಡಿಲ್ಲ ಎಂದರೆ ಈ ಬಾರಿ ಅಪ್ಪಂದಿರ ದಿನಕ್ಕೆ ಮಿಸ್ ಮಾಡದೆ ನೀಡಿ. ಅಪ್ಪ ನಿಮ್ಮಿಂದ ಯಾವುದೇ ದೊಡ್ಡ ಗಿಫ್ಟ್ಸ್ ನಿರೀಕ್ಷೆ ಮಾಡಲ್ಲ, ನಿಮ್ಮ ಶಕ್ತಿಗೆ ತಕ್ಕ ಹಾಗೆ ಒಂದು ಗಿಫ್ಟ್ಸ್ ನೀಡಿ, ಕನಿಷ್ಠ ಒಂದು ಶರ್ಟ್ ಗಿಫ್ಟ್ ನೀಡಿ, ಅವರಿಗಾಗುವ ಖುಷಿ ಇದೆಯೆಲ್ಲಾ ಅದನ್ನು ನೋಡಿದಾಗ ಅಪ್ಪಂದಿರ ದಿನವನ್ನು ಸಾರ್ಥಕವಾಗಿ ಆಚರಿಸಿದೆ ಎಂಬ ಭಾವನೆ ಮೂಡಿಸುತ್ತದೆ.
ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಂದ ಕ್ರಿಯೇಟಿವ್ ಆಗಿ ಏನಾದರೂ ಮಾಡಿಸಿ
ನಿಮ್ಮ ಗಂಡನಿಗೆ ಮುದ್ದಾದ ಮಕ್ಕಳಿಂದ ಈ ದಿನ ಸರ್‌ಪ್ರೈಸ್ ನೀಡಿ. ಏನಾದರೂ ಕೇಕ್ ತರಿಸಿ ಕತ್ತರಿಸುವುದು ಅಥವಾ ಮಕ್ಕಳು, ನೀವು ಸೇರಿ ನೀವೇ ಕೇಕ್ ತಯಾರಿಸುವುದು, ಚೆಂದದ ಪೇಂಟಿಂಗ್ ಮಾಡಿ ಅದನ್ನು ಗಿಫ್ಟ್ಸ್ ಆಗಿ ನೀಡುವುದು, ಅಥವಾ ಮಕ್ಕಲ ಜೊತೆಗಿನ ಸುಂದರ ಫೋಟೋಫ್ರೇಮ್ ನೀಡುವುದು ಹೀಗೆ ಏನಾದರೂ ಸರಿ, ನಿಮಗೆ ತೋಚಿರುವ ಐಡಿಯಾವನ್ನು ಕ್ರಿಯೇಟಿವ್ ಆಗಿ ಆಗಿ ಮಾಡಿ, ಸರ್‌ಪ್ರೈಸ್ ಮಾಡಿ, ಅವರಿಗೂ ತುಂಬಾನೇ ಖುಷಿ ಅನಿಸುವುದು.
ಮನೆಯಲ್ಲಿ, ಅಪ್ಪ-ಅಜ್ಜ ಇದ್ದರೆ
ಈ ರೀತಿಯಿದ್ದರೆ ಈ ಅಪ್ಪಂದಿರ ದಿನವನ್ನು ನೀವು ಪ್ಲ್ಯಾನ್ ಮಾಡಿದರೆ ಮತ್ತಷ್ಟು ಸ್ಪೆಷಲ್ ಆಗಿಸಿ. ನೀವು ಅಪ್ಪನಿಗೆ ಒಂದು ಗಿಫ್ಟ್ಸ್ ಖರೀದಿಸುವಾಗ , ತಾತನಿಗೂ ಒಂದು ಖರೀದಿಸಿ, ಅದನ್ನು ಅಪ್ಪನ ಕೈಯಿಂದ ಕೊಡಿಸಿ. ಏಕೆಂದರೆ ಅಪ್ಪನಿಗೆ ಈ ಸ್ಪೆಷಲ್ ದಿನ ನೆನಪಿನಲ್ಲಿ ಇರಲ್ಲ. ನೀವು ನಿಮ್ಮ ತಂದೆಗೆ ಕೊಡುವಾಗ ಅವರಿಗೆ ಅವರ ತಂದೆಗೆ ನಾನು ಏನು ಮಾಡಿಲ್ಲ ಎಂಬ ಫೀಲ್ ಆಗಬಾರದು ನೋಡಿ, ಆದ್ದರಿಂದ ಅಪ್ಪನೂ ಖುಷಿಯಾಗಬೇಕು, ಅಜ್ಜನೂ ಖಷಿಯಾಗಬೇಕು.



Click it and Unblock the Notifications

