Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
Fathers Day 2023 : ಗೃಹ ಪ್ರವೇಶಕ್ಕೆಂದು ಇಟ್ಟ ದುಡ್ಡಿನಲ್ಲಿ ನನ್ನನ್ನು ಕಾಲೇಜಿಗೆ ಸೇರಿಸಿದ್ರು ನನ್ನಪ್ಪ!
ನಮದೊಂದು ಪುಟ್ಟ ಸಂಸಾರ ಅಪ್ಪ- ಅಮ್ಮ, ನಾನು ಮತ್ತು ನನ್ನ ಪುಟ್ಟ ತಮ್ಮ. ನಮ್ಮಪ್ಪ ಅಂದ್ರೆ ನನಗೆ ಪಂಚಪ್ರಾಣ. ಅಮ್ಮಾ ಅಂದ್ರೇನೂ ಇಷ್ಟಾನೇ ಆಂದ್ರೆ ಅಪ್ಪನ ಜೊತೆಗೆ ಅದೇನೋ ಒಂದು ರೀತಿ ಬಿಡಿಸಲಾರದ ಬಂಧ. ಅಪ್ಪನಿಗೂ ಅಷ್ಟೇ ನಾನು ಅವರ ಕಣ್ಣೆದುರಲ್ಲೇ ಇರ್ಬೇಕು. ಅಪ್ಪ ಮನೆಯಲ್ಲಿ ಇದ್ರಂತೂ ಕೇಳೋದೇ ಬೇಡ ಇಡೀ ದಿನ ಪುಟ್ಟಿ ಎಲ್ಲಿದ್ಯಮ್ಮಾ ಅಂತ ನೂರು ಸಾರಿ ಕರೀತಾನೆ ಇರ್ತಾರೆ.
ಎಲ್ಲರಂತೆ ನಮ್ಮಪ್ಪನೂ ಶ್ರಮಜೀವಿ. ಕುಟುಂಬಕ್ಕಾಗಿ ಜೀವವನ್ನೇ ಮುಡಿಪಿಟ್ಟಿದ್ದಾರೆ. ಅಪ್ಪ ಒಬ್ಬ ಕೂಲಿ ಕಾರ್ಮಿಕ. ಅಮ್ಮಾ ಗೃಹಿಣಿ. ನಾನು ಚಿಕ್ಕವಳಿದ್ದಾಗಿನಿಂದ ಅಪ್ಪ ಒಂದೊಂದು ರೂಪಾಯಿ ಕೂಡಿ ಹಾಕೋದಕ್ಕೆ ಕಷ್ಟ ಪಡೋದನ್ನು ಕಣ್ಣಾರೆ ನೋಡಿದ್ದೀನಿ. ಅಪ್ಪ ಒಬ್ಬನೇ ದುಡಿದು ನಾಲ್ಕು ಜನರ ಹೊಟ್ಟೆ ತುಂಬಿಸಬೇಕು, ಅವರ ಬೇಕು ಬೇಡಗಳನ್ನು ವಿಚಾರಿಸೋದು ಸುಲಭದ ಮಾತಲ್ಲ. ನಾನು ನನ್ನ ತಮ್ಮ ನಮ್ಮ ಮನೆಯ ಹತ್ತಿರ ಇರೋ ಸರಕಾರಿ ಶಾಲೆ ಹೋಗುತ್ತಿದ್ದೆವು.

ಅಪ್ಪನ ಕಷ್ಟಕ್ಕೆ ಹೆಗಲಾಗೋದೇ ನನ್ನ ಆಸೆ
ನಾನು ಶಾಲೆಗೆ ಹೋಗುವಾಗಲೇ ಅಂದುಕೊಂಡಿದ್ದೆ ಏನಾದ್ರೂ ಆಗ್ಲಿ ಚೆನ್ನಾಗಿ ಓದಿ ದೊಡ್ಡ ಕೆಲಸ ತೆಗೆದುಕೊಂಡು ಅಪ್ಪನ ಕಷ್ಟಕ್ಕೆ ಹೆಗಲಾಗಬೇಕು ಎಂದು. ಹೀಗಾಗಿ ಓದೋ ವಿಚಾರದಲ್ಲಿ ಯಾವತ್ತೂ ನಾನು ಹಿಂದೆ ಸರಿದವಳೇ ಅಲ್ಲ. ಸಾಮಾನ್ಯವಾಗಿ ಏಳನೇ ತರಗತಿ ನಂತರ ಎಲ್ಲರಿಗೂ ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯೋ ಆಸೆ ಇರುತ್ತೆ.
ಹಳ್ಳಿಯಲ್ಲೇ ಹುಟ್ಟಿ ಬೆಳೆದ ನನಗೂ ಆ ಆಸೆ ಇತ್ತು. ಆದ್ರೆ ಅಪ್ಪನ ಬಳಿ ಇದನ್ನು ಹೇಳಿಕೊಂಡಿರ್ಲಿಲ್ಲ. ನನಗೊತ್ತು ಅಪ್ಪನಿಗೆ ಹೇಳಿದ್ರೆ ಹೇಗಾದ್ರೂ ಸಾಲ ಸೋಲಾ ಮಾಡಿ ನನ್ನನ್ನು ಇಂಗ್ಲಿಷ್ ಮೀಡಿಯಂ ಗೆ ಸೇರಿಸ್ತಿದ್ರು. ಆದ್ರೆ ಅಪ್ಪನನ್ನು ಸಾಲಗಾರನನ್ನಾಗಿ ಮಾಡೋದಕ್ಕೆ ನನಗೆ ಇಷ್ಟ ಇರ್ಲಿಲ್ಲ.
ಕರ್ನಾಟಕ ಸರಕಾರಕ್ಕೆ ನನ್ನ ತುಂಬು ಹೃದಯದ ಧನ್ಯವಾದ
ಏಳನೇ ತರಗತಿ ಮುಗಿದ ಮೇಲೆ ನಾನು ಪಕ್ಕದೂರಿಗೆ ಅಪ್ಪನೊಂದಿಗೆ ಎಂಟನೇ ತರಗತಿ ಸೇರಿಕೊಳ್ಳೋದಕ್ಕೆ ಹೋದೆ. ಅದು ಕೂಡ ಒಂದು ಉತ್ತಮ ಸರಕಾರಿ ಶಾಲೆ. ಅಲ್ಲಿಗೆ ಹೋದ ಮೇಲೆ ಗೊತ್ತಾಯ್ತು ಆ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂನಲ್ಲಿ ಓದೋದಕ್ಕೂ ಅವಕಾಶ ಇದೆ ಎಂದು. ಹೀಗಾಗಿ ನನ್ನ ಖುಷಿಗೆ ಪಾರವೇ ಇರ್ಲಿಲ್ಲ. ಖುಷಿ ಖುಷಿಯಿಂದಲೇ ದಾಖಲಾತಿ ಮಾಡಿಕೊಂಡೆವು.
ನನಗೆ ಡಾಕ್ಟರ್ ಆಗುವ ಆಸೆ ಆದ್ರೆ ಅಪ್ಪನ ಕಷ್ಟ!
ಕರ್ನಾಟಕ ಸರಕಾರ ನಮ್ಮಂತಹ ಬಡ ಮಕ್ಕಳಿಗೂ ಇಂತಹದೊಂದು ಅವಕಾಶ ಕೊಟ್ಟಿದ್ದಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನನಗೆ ಚಿಕ್ಕ ವಯಸ್ಸಿನಿಂದಲೂ ಡಾಕ್ಟರ್ ಆಗ್ಬೇಕು ಅನ್ನೋ ಕನಸು. ಚಿಕ್ಕಂದಿನಲ್ಲಿ ಅಪ್ಪನಲ್ಲಿ ಈ ಮಾತನ್ನು ಹೇಳ್ತಿದ್ದೆ. ಆಗೆಲ್ಲಾ ಅಪ್ಪ ನಕ್ಕು ಸುಮ್ಮನಾಗೋರು. ಆಯ್ತಮ್ಮ ನಿನ್ನಿಷ್ಟ ಅನ್ನೋರು.
ಆದ್ರೆ ಬೆಳೆಯುತ್ತಾ ಇದ್ದಂತೆ ಆ ಕನಸು ಮತ್ತಷ್ಟು ಗಟ್ಟಿಯಾಗುತ್ತಾ ಹೋಯ್ತು. ಇನ್ನೂ ದೊಡ್ಡವಳಾದ ಮೇಲೆ ನನಗೆ ಗೊತ್ತಾಗಿದ್ದು ಏನಾದ್ರೆ ಡಾಕ್ಟರ್ ಓದ್ಬೇಕಂದ್ರೆ ಅದಕ್ಕೆ ಲಕ್ಷ ಲಕ್ಷ ದುಡ್ಡ ಕಟ್ಬೇಕು. ಆದ್ರೆ ದಿನಕೂಲಿಗಾಗಿ ದುಡಿಯೋ ಅಪ್ಪನಿಂದ ನನ್ನನ್ನು ಓದಿಸೋದಕ್ಕೆ ಸಾಧ್ಯ ಆಗುತ್ತಾ? ಪಾಪ ಅಪ್ಪ ಅಷ್ಟೊಂದು ದುಡ್ಡು ಎಲ್ಲಿಂದ ತರ್ತಾರೆ. ಆದ್ರೂ ಕೂಡ ಒಂದು ದಿನಾನೂ ನನ್ನ ಆಸೆಗೆ ಅಡ್ಡಿ ಬಂದವರಲ್ಲ ನನ್ನಪ್ಪ.
ನಾನು ಕೇಳೋ ಮುಂಚೆನೇ ಎಲ್ಲವನ್ನೂ ತಂದು ಕೊಡೋ ಕರುಣಾಮಯಿ ನನ್ನಪ್ಪ. ದುಡ್ಡು ಇದ್ಯೋ ಇಲ್ವೋ? ಗೊತ್ತಿಲ್ಲ. ಆದ್ರೆ ನನಗೆ ಯಾವ ವಿಚಾರಕ್ಕೂ ಕಮ್ಮಿ ಮಾಡಿಲ್ಲ. ನನಗೆ ಒಂದು ದಿನಾನೂ ಹೊಡೆಯೋದಿರಲಿ ಬೈದೂ ಇಲ್ಲ. ಅಷ್ಟೊಂದು ಪ್ರೀತಿ ನನ್ನಪ್ಪನಿಗೆ ನನ್ನ ಮೇಲೆ. ಅಪ್ಪ-ಅಮ್ಮಾ ಇಬ್ಬರೂ ಓದಿಲ್ಲ. ಆದ್ರೆ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಅನ್ನೋ ಮಹತ್ವಾಕಾಂಕ್ಷೆ ಇದೆ.
ನಿತ್ಯ ನನ್ನನ್ನು ಶಾಲೆಗೆ ಬಿಟ್ಟು ಹೋಗುತ್ತಾರೆ ಅಪ್ಪ!
ಅಪ್ಪನ ಬಳಿ ಒಂದು ಸ್ಕೂಟರ್ ಇದೆ. ಅದೇ ಸ್ಕೂಟರ್ ನಲ್ಲಿ ಅಪ್ಪ ನಿತ್ಯ ದೂರದೂರಿಗೆ ಕೆಲಸಕ್ಕೆ ಹೋಗ್ತಾರೆ. ನಾನು ಈಗ ಪಕ್ಕದೂರಿಗೆ ಶಾಲೆಗೆ ಹೋಗೋದ್ರಿಂದ ಶಾಲೆ ತುಂಬಾನೇ ದೂರ. ಹೀಗಾಗಿ ನಿತ್ಯ ಅಪ್ಪ ನನ್ನನ್ನು ಶಾಲೆಗೆ ಬಿಟ್ಟು ನಂತರ ಕೆಲಸಕ್ಕೆ ಹೋಗ್ತಾರೆ. ಅಪ್ಪನ ಕಷ್ಟ ನೋಡಿ ಬೆಳೆದ ನನಗೆ ಅಪ್ಪನ ಹೆಮ್ಮೆಯ ಮಗಳಾಗಿ ಬೆಳೆಯಬೇಕು ಅನ್ನೋ ಆಸೆ ಇದೆ.
SSLC ನಲ್ಲಿ 93% ಶೇಕಡಾ ಪಡೆದೆ!
ಏಳನೇ ತರಗತಿವರೆಗೆ ಕನ್ನಡ ಮೀಡಿಯಂನಲ್ಲಿ ಓದಿ ಏಕಾಏಕಿ ಇಂಗ್ಲೀಷ್ ಮೀಡಿಯಂನಲ್ಲಿ ಓದೋದು ಕೊಂಚ ಕಷ್ಟ ಆಯ್ತು. ಹೀಗಾಗಿ ಎಂಟನೇ ತರಗತಿಯಿಂದ ನಾನು ಮತ್ತಷ್ಟು ಶ್ರಮ ಪಟ್ಟು ಓದಿದೆ. ಸಮಯ ಸಿಕ್ಕಾಗಲೆಲ್ಲಾ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ. ಅದನ್ನು ಬಿಟ್ಟರೆ ಇಡೀ ದಿನ ಓದುತ್ತಾ ಕುಳಿತಿರುತ್ತಿದೆ. ಅಪ್ಪ ತುಂಬಾ ಸಲ ಹೇಳೋರು ಇಷ್ಟೆಲ್ಲಾ ಓದ್ಬೇಡ ಕಣ್ಮಗಾ ತಲೆ ನೋವು ಬತ್ತದೆ ಎಂದು. ಆದ್ರೆ ನನ್ನ ಓದಿನ ಓಟ ಮಾತ್ರ ನಿಂತೇ ಇಲ್ಲ.
ಈ ಮಧ್ಯೆ ಇವತ್ತಿಗೆ ಐದು ವರ್ಷದ ಹಿಂದೆ ನಾವು ಮನೆ ಕಟ್ಟೋದಕ್ಕೂ ಶುರು ಮಾಡಿದ್ವಿ. ಈಗ ಇರೋ ಮನೆ ದೊಡ್ಡ ಗಾಳಿ ಬಂದ್ರೆ ಬೀಳೋ ಹಾಗಿತ್ತು. ಹೀಗಾಗಿ ಮನೆ ಕಟ್ಟೋದು ನಮಗೆ ಅನಿವಾರ್ಯ ಅಂತಾಗಿತ್ತು. ಐದು ವರ್ಷದಿಂದ ಪುಟ್ಟ ಮನೆಯನ್ನು ಕಟ್ಟಿ ನಿಲ್ಲಿಸೋದಕ್ಕೆ ಅಪ್ಪ ತುಂಬಾನೇ ಕಷ್ಟ ಪಟ್ಟಿದ್ದಾರೆ. ಹಣ ಇದ್ದಾಗಲೆಲ್ಲಾ ಸ್ವಲ್ಪ ಸ್ವಲ್ಪಾನೇ ಮನೆ ಕೆಲಸ ಮಾಡಿಸಿದ್ದಾರೆ.
ನನ್ನ SSLC ಫಲಿತಾಂಶ ಹಾಗೂ ಮನೆನೂ ಕಟ್ಟಿ ಆಯ್ತು
ಮನೆ ಕಟ್ಟೋದು ಸುಲಭದ ವಿಚಾರ ಅಲ್ಲ. ಎಷ್ಟೋ ಸಲ ನಾವೇ ಖುದ್ದಾಗಿ ಮನೆಯ ಕೆಲಸ ಮಾಡಿದ್ದೂ ಇದೆ. ಅಪ್ಪ ಕೆಲಸದಿಂದ ಬಂದು ಸಂಜೆ ಅಮ್ಮನ ಜೊತೆ ಸೇರಿ ಮನೆಯ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ನಾನು ನನ್ನ ತಮ್ಮಾನು ಮಣ್ಣು, ಜಲ್ಲಿ ಕಲ್ಲು ತಂದು ಕೊಡ್ತಿದ್ವಿ. ಹಾಗೋ ಹೀಗೋ ಐದು ವರ್ಷದ ಬಳಿಕ ಮನೆ ಏನೋ ಪೂರ್ತಿ ಆಯ್ತು.
ಆ ದಿನ ನನ್ನ SSLC ಫಲಿತಾಂಶ ಬರಬೇಕಾದ ದಿನ. ನಾನು ತುಂಬಾನೇ ಕಾತುರಳಾಗಿದ್ದೆ. ಕೊನೆಗೂ ಫಲಿತಾಂಶ ಬಂದೇ ಬಿಡ್ತು. ನಾನು SSLC ಯಲ್ಲಿ 93% ಶೇಕಡಾ ಪಡೆದು ಉತ್ತೀರ್ಣಳಾಗಿದ್ದೆ. ನನ್ನ ಖುಷಿಗೆ ಪಾರವೇ ಇರ್ಲಿಲ್ಲ. ಅಮ್ಮನೂ ಖುಷಿ ಪಟ್ರು. ಅಪ್ಪ ಸಂಜೆ ಕೆಲಸದಿಂದ ಬರ್ತಿದ್ದಂತೆ ಈ ವಿಚಾರ ತಿಳಿಸಿದೆ. ಅಪ್ಪ ಕಣ್ಣೀರಿಟ್ರು. ನನ್ನನ್ನು ತಪ್ಪಿಕೊಂಡ್ರು ಅತ್ತು ಬಿಟ್ರು.
ಗೃಹ ಪ್ರವೇಶದ ದುಡ್ಡಲ್ಲಿ ನನ್ನನ್ನು ಕಾಲೇಜಿಗೆ ಸೇರಿಸಿದ್ರು!
ಅಪ್ಪ ಗೃಹ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ರು. ಅಲ್ಲೋ ಇಲ್ಲೋ ಸಾಲ ಮಾಡಿ ಕೊಂಚ ದುಡ್ಡು ಹೊಂದಿಸಿಟ್ಟಿದ್ರು. ಆದ್ರೆ ಈ ಸಮಯದಲ್ಲಿ ನನ್ನ SSLC ಫಲಿತಾಂಶ ಬಂದಿದ್ರಿಂದ ನನ್ನನ್ನು ಕಾಲೇಜಿಗೆ ಸೇರಿಸೋದು ಅನಿವಾರ್ಯವಾಗಿತ್ತು. ಉತ್ತಮ ಕಾಲೇಜಿಗೆ ಸೇರಿಸಿದ್ರೆ ಅಲ್ಲಿ ನೀಟ್ ಕೋಚಿಂಗ್ ಸಿಗುತ್ತೆ. ಇದ್ರಿಂದ ನನ್ನ ಮೆಡಿಕಲ್ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುತ್ತೆ ಅಂತ ಅಪ್ಪನಿಗೆ ಸ್ನೇಹಿತರೊಬ್ಬರು ತಿಳಿಸಿದ್ರಂತೆ.
ಹೀಗಾಗಿ ಅಪ್ಪ ನನ್ನನ್ನು ಒಳ್ಳೆಯ ಕಾಲೇಜಿಗೆ ನನ್ನನ್ನು ದಾಖಲಾತಿ ಮಾಡಿದ್ದಾರೆ. ನನ್ನ ಆಸೆಯಂತೆ ನಾನು ವಿಜ್ಞಾನ ವಿಭಾಗ ಆಯ್ದುಕೊಂಡಿದ್ದೇನೆ. ಹಾಗೂ ಅದರ ಜೊತೆಗೆ ನೀಟ್ ಕೋಚಿಂಗ್ ಗೂ ಸೇರಿಕೊಂಡಿದ್ದೇನೆ. ಆದ್ರೆ ನನ್ನಪ್ಪನ ಕನಸಿನ ಮನೆ ಇನ್ನೂ ಗೃಹ ಪ್ರವೇಶವೂ ಆಗದೆ ಅರ್ಧಕ್ಕೆ ನಿಂತು ಹೋಗಿದೆ. ಅಪ್ಪನಿಗೆ ಮಗಳ ವಿದ್ಯಾಭ್ಯಾಸ ಮುಂದೆ ಮನೆ ದೊಡ್ಡದು ಅಂತ ಅನ್ನಿಸಿಲ್ಲ.
ನನಗೆ ಕಾಲೇಜಿಗೆ ಸೇರಿಕೊಂಡ ಖುಷಿ ಒಂದು ಕಡೆಯಾದ್ರೆ ಅಪ್ಪನ ಕನಸಿನ ಮನೆಯನ್ನು ಪ್ರವೇಶ ಮಾಡೋದಿಕ್ಕಾಗಿಲ್ಲ ಅನ್ನೋ ಬೇಜಾರೂ ಇನ್ನೂ ನನ್ನನ್ನು ಕಾಡ್ತಿದೆ. ಆದ್ರೆ ನಾನು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡೋದಿಲ್ಲ. ಚೆನ್ನಾಗಿ ಓದಿ ಡಾಕ್ಟರ್ ಆಗಿ ಅಪ್ಪನ ಹೆಮ್ಮೆಯ ಮಗಳಾಗ್ಬೇಕು ಅನ್ನೋದೇ ನನ್ನಾಸೆ.



Click it and Unblock the Notifications












